Horoscope: ಆಪ್ತರ ಮೇಲಿನ ನಂಬಿಕೆ ಹುಸಿ, ಬಂಧುಗಳ ಅನಿರೀಕ್ಷಿತ ಭೇಟಿ ಸಂತೋಷ ತರುವುದು
ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 15, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.
ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 15) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ವರೀಯಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:27 ರಿಂದ 09:52ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:17 ರಿಂದ 12:42ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:07 ರಿಂದ 03:32ರ ವರೆಗೆ.
ಮೇಷ ರಾಶಿ: ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸುವ ಆಸಕ್ತಿಯು ಹೆಚ್ಚಿರುವುದು. ನಿರೋದ್ಯೋಗಿಗಳಿಗೆ ಮುಜುಗರದ ಸಂದರ್ಭವು ಬರಬಹುದು. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ಕೆಲವು ರಿಸ್ಕ್ ಗಳನ್ನೂ ಎದುರಿಸಬೇಕಾಗುವುದು. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಕಲಾವಿದರು ಖ್ಯಾತ ಕಲಾವಿದರನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವರು. ಹಲವು ದಿನದ ಮನಸ್ತಾಪವು ದೂರವಾಗಬಹುದು.
ವೃಷಭ ರಾಶಿ: ಒಡಕನ್ನು ಸರಿಮಾಡಿಕೊಳ್ಳುವ ಆಸೆ ಇರುವುದು. ಕಳೆದ ಕಾಲವು ನಿಮಗೆ ಸಿಗದು. ಚಿಂತಿಸಿ ಪ್ರಯೋಜನವೂ ಇರದು. ಭವಿಷ್ಯದ ಚಿಂತೆಯೂ ಇರಲಿದೆ. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಆದರೆ ಅವರಿಂದ ಅದು ಸಿಗದು. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಸ್ವಾಭಿಮಾನದಿಂದ ನಿಮಗೆ ಅವಶ್ಯಕವಿರುವುದನ್ನು ಕಳೆದುಕೊಳ್ಳುವಿರಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾದಂತೆ ನಿಮಗೆ ಅನ್ನಿಸಬಹುದು. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ. ಅದು ನಿಮ್ಮ ನಿಯಂತ್ರಣದಲ್ಲಿ ಇರಲಿ. ಆಲಸ್ಯದಿಂದ ಉತ್ತಮ ವಿಚಾರಗಳನ್ನು ಕಳೆದುಕೊಳ್ಳಬೇಕಾದೀತು.
ಮಿಥುನ ರಾಶಿ: ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ನೀವೇ ಅವಕಾಶವನ್ನು ತಂದುಕೊಳ್ಳುವಿರಿ. ಸಂತೋಷದ ವಾತಾವರಣವು ಮನೆಯಲ್ಲಿ ಇರಲಿದೆ. ರಾಜಕೀಯದ ನೇತಾರರು ಮಾತನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಹೂಡಿಕೆಯಿಂದ ನಿಮಗೆ ಲಾಭವು ಸಿಗಬಹುದು. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಸಂಗಾತಿಗೆ ನಿಮ್ಮ ಪ್ರೀತಿಯು ಕಡಿಮೆಯಾಗಿರುವುದು. ಪ್ರಶಂಸೆಯಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ದಾನವನ್ನು ಮಾಡಿ ಸಂತೋಷಪಡುವಿರಿ.
ಕಟಕ ರಾಶಿ: ಇಂದು ಹಣಕಾಸಿನ ಬಗ್ಗೆ, ಸಾಲವನ್ನು ತೀರಿಸುವ ಬಗ್ಗೆ ಯೋಚನೆ ಇರಲಿದೆ. ಪಕ್ಷಪಾತ ನೀತಿಯನ್ನು ಬಿಟ್ಟು ಎಲ್ಲರನ್ನೂ ಉದ್ಯಮದಲ್ಲಿ ಸಮಾನವಾಗಿ ನೋಡಿ. ಬೇಕೆಂದುಕೊಂಡಿದ್ದನ್ನು ಪಡೆಯುವುದು ಕಷ್ಟವಾಗುವುದು. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಎಂಬ ಭಾವನೆಯು ನಿಮ್ಮ ತಲೆಯಲ್ಲಿ ಇರುವುರು. ದೇವತೋಪಾಸನೆಯಿಂದ ಸಕಾರಾತ್ಮಕ ಮಾರ್ಗದಲ್ಲಿ ನೀವು ಇರುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ನಿಮ್ಮ ಜೊತೆಗಾರರಿಗೆ ಕಷ್ಟವಾದೀತು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ಇನ್ನೊಬ್ಬರ ವಸ್ತುವಿನ ಬಗ್ಗೆ ಮೋಹವು ಇರುವುದು. ಆತ್ಮಪ್ರಶಂಸೆಯು ಅಧಿಕಾವಾಗಿ ತೋರುವುದು. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಮೇಲುಗೈ ಸಾಧಿಸುವ ಅವಕಾಶವಿರಲಿದೆ.