Horoscope 15 Jan: ಗುರಿಯ ಬಗ್ಗೆ ಸ್ಪಷ್ಟ ನಿರ್ಧಾರ, ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯುವ ಹಂಬಲ
ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಜನವರಿ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ವರೀಯಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 21 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:27 ರಿಂದ 09:52ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:17 ರಿಂದ 12:42ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:07 ರಿಂದ 03:32ರ ವರೆಗೆ.
ಉತ್ತರಾಯಣದ ಪುಣ್ಯಕಾಲಕ್ಕೆ ಸಮಸ್ತ ಜನತೆಗೂ ಶುಭಾಶಯಗಳು. ಸೂರ್ಯನು ತನ್ನ ದಿಕ್ಕನ್ನು ಬದಲಿಸುವ ಸಮಯ. ಇನ್ನು ಹಗಲು ಹೆಚ್ಚಿರುವ ಕಾಲವು ಇಲ್ಲಿರುವುದರಿಂದ, ಎಲ್ಲರ ಬಾಳಿನಲ್ಲಿ ಸುಖ, ನೆಮ್ಮದಿಗಳು ಸಿಗಲಿ. ಸೂರ್ಯನು ಮಕರ ರಾಶಿಗೆ ಪ್ರವೇಶವನ್ನೂ ಮಾಡಲಿದ್ದಾನೆ. ಆರೋಗ್ಯ, ಭಾಗ್ಯ, ಸಂಪತ್ತನ್ನು ಕೊಟ್ಟು ಇಷ್ಟಾರ್ಥವನ್ನು ಕರುಳಿಸಲಿ. ಸೂರ್ಯಾಷ್ಟಕ, ಆದಿತ್ಯಹೃದಯ ಸ್ತೋತ್ರವನ್ನು ಪಠಿಸಿ ಹಾಗೂ ಹನ್ನೆರಡು ಸೂರ್ಯ ಮಂತ್ರವನ್ನು ಪಠಿಸಿ ಸೂರ್ಯ ನಮಸ್ಕಾರವನ್ನು ಸೂರ್ಯೋದಯಕ್ಕಿಂತ ಮೊದಲೇ ಮಾಡಿ. ಸೂರ್ಯನ ಅಥವಾ ಶಿವನ ದೇಗುಲಕ್ಕೆ ತೆರಳಿ ಧ್ಯಾನವನ್ನು ಮಾಡಿ.
ಮೇಷ ರಾಶಿ: ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸುವ ಆಸಕ್ತಿಯು ಹೆಚ್ಚಿರುವುದು. ನಿರೋದ್ಯೋಗಿಗಳಿಗೆ ಮುಜುಗರದ ಸಂದರ್ಭವು ಬರಬಹುದು. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ಕೆಲವು ರಿಸ್ಕ್ ಗಳನ್ನೂ ಎದುರಿಸಬೇಕಾಗುವುದು. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಕಲಾವಿದರು ಖ್ಯಾತ ಕಲಾವಿದರನ್ನು ಅನಿರೀಕ್ಷಿತವಾಗಿ ಭೇಟಿ ಮಾಡುವರು. ಹಲವು ದಿನದ ಮನಸ್ತಾಪವು ದೂರವಾಗಬಹುದು.
ವೃಷಭ ರಾಶಿ: ಒಡಕನ್ನು ಸರಿಮಾಡಿಕೊಳ್ಳುವ ಆಸೆ ಇರುವುದು. ಕಳೆದ ಕಾಲವು ನಿಮಗೆ ಸಿಗದು. ಚಿಂತಿಸಿ ಪ್ರಯೋಜನವೂ ಇರದು. ಭವಿಷ್ಯದ ಚಿಂತೆಯೂ ಇರಲಿದೆ. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಆದರೆ ಅವರಿಂದ ಅದು ಸಿಗದು. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಸ್ವಾಭಿಮಾನದಿಂದ ನಿಮಗೆ ಅವಶ್ಯಕವಿರುವುದನ್ನು ಕಳೆದುಕೊಳ್ಳುವಿರಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ಒಂಟಿಯಾದಂತೆ ನಿಮಗೆ ಅನ್ನಿಸಬಹುದು. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ. ಅದು ನಿಮ್ಮ ನಿಯಂತ್ರಣದಲ್ಲಿ ಇರಲಿ. ಆಲಸ್ಯದಿಂದ ಉತ್ತಮ ವಿಚಾರಗಳನ್ನು ಕಳೆದುಕೊಳ್ಳಬೇಕಾದೀತು.
ಮಿಥುನ ರಾಶಿ: ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ನೀವೇ ಅವಕಾಶವನ್ನು ತಂದುಕೊಳ್ಳುವಿರಿ. ಸಂತೋಷದ ವಾತಾವರಣವು ಮನೆಯಲ್ಲಿ ಇರಲಿದೆ. ರಾಜಕೀಯದ ನೇತಾರರು ಮಾತನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಹೂಡಿಕೆಯಿಂದ ನಿಮಗೆ ಲಾಭವು ಸಿಗಬಹುದು. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಸಂಗಾತಿಗೆ ನಿಮ್ಮ ಪ್ರೀತಿಯು ಕಡಿಮೆಯಾಗಿರುವುದು. ಪ್ರಶಂಸೆಯಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ದಾನವನ್ನು ಮಾಡಿ ಸಂತೋಷಪಡುವಿರಿ.
ಕಟಕ ರಾಶಿ: ಇಂದು ಹಣಕಾಸಿನ ಬಗ್ಗೆ, ಸಾಲವನ್ನು ತೀರಿಸುವ ಬಗ್ಗೆ ಯೋಚನೆ ಇರಲಿದೆ. ಪಕ್ಷಪಾತ ನೀತಿಯನ್ನು ಬಿಟ್ಟು ಎಲ್ಲರನ್ನೂ ಉದ್ಯಮದಲ್ಲಿ ಸಮಾನವಾಗಿ ನೋಡಿ. ಬೇಕೆಂದುಕೊಂಡಿದ್ದನ್ನು ಪಡೆಯುವುದು ಕಷ್ಟವಾಗುವುದು. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಎಂಬ ಭಾವನೆಯು ನಿಮ್ಮ ತಲೆಯಲ್ಲಿ ಇರುವುರು. ದೇವತೋಪಾಸನೆಯಿಂದ ಸಕಾರಾತ್ಮಕ ಮಾರ್ಗದಲ್ಲಿ ನೀವು ಇರುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ನಿಮ್ಮ ಜೊತೆಗಾರರಿಗೆ ಕಷ್ಟವಾದೀತು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ಇನ್ನೊಬ್ಬರ ವಸ್ತುವಿನ ಬಗ್ಗೆ ಮೋಹವು ಇರುವುದು. ಆತ್ಮಪ್ರಶಂಸೆಯು ಅಧಿಕಾವಾಗಿ ತೋರುವುದು. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಮೇಲುಗೈ ಸಾಧಿಸುವ ಅವಕಾಶವಿರಲಿದೆ.
ಸಿಂಹ ರಾಶಿ: ಇಂದು ಪವಿತ್ರ ಸ್ಥಳಕ್ಕೆ ಭೇಟಿ ಕೊಡಲಿದ್ದೀರಿ. ವಿವಾಹಕ್ಕೆ ಸಂಬಂಧಿಸಿದ ಚಿಂತೆಯು ನಿಮ್ಮನ್ನು ಕಾಡಬಹುದು. ಆಲಂಕಾರಿಕ ವಸ್ತುಗಳ ಬಗ್ಗೆ ಆಸಕ್ತಿಯು ಹೆಚ್ಚುವುದು. ಸಹನೆಯನ್ನು ಮೀರಿ ನೀವು ಇಂದು ವರ್ತಿಸುವಿರಿ. ಅಪರಿಚಿತರ ಜೊತೆ ಮಾತನಾಡಲು ನೀವು ಹಿಂಜರಿಯಬಹುದು. ಸ್ಮರಣಶಕ್ತಿಯ ದೋಷವು ಸ್ವಲ್ಪವೇ ಬರಲಿದೆ. ಅವಕಾಶಗಳು ತಪ್ಪಿಹೋಗಿ, ನಿಮ್ಮನ್ನೇ ನೀವು ಬೂದುಕೊಳ್ಳುವಿರಿ. ಎಲ್ಲರನ್ನೂ ದೂರುವುದು ನಿಮಗೆ ಇಷ್ಟವಾಗದು. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಗೊತ್ತಿಲ್ಲದ ಕಾರ್ಯವನ್ನು ಮಾಡಲು ನಿಮಗೆ ಉತ್ಸಾಹ ಇರಲಿದೆ. ಸಹೋದ್ಯೋಗಿಗಳು ಅಹಂಕಾರವನ್ನು ತೋರಿಸುವರು. ನಿಮ್ಮ ನಿಲುವಲ್ಲಿ ನೀವಿರುವುದು ಉತ್ತಮ.
ಕನ್ಯಾ ರಾಶಿ: ವೃತ್ತಿಯಲ್ಲಿ ನಿಮಗೆ ನೆಮ್ಮದಿಯನ್ನು ಪಡೆಯಲು ಕಷ್ಟವಾಗುವುದು. ಒಂದಿಲ್ಲೊಂದು ಕಿರಿಕಿರಿಗಳು ನಿಮಗೆ ನೆಮ್ಮದಿಯಿಂದ ಇರಲು ಬಿಡದು. ಗೊಂದಲವೂ ನಿಮ್ಮನ್ನು ಜೋಕಾಲಿಯ ಮೇಲೆ ಕುಳಿತಂತೆ ಅನ್ನಿಸಬಹುದು. ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ಅಧಿಕ ಸಾಲವು ನಿಮ್ಮ ಮಾನಸಿಕಸ್ಥಿತಿಯನ್ನೇ ಬದಲಿಸೀತು. ಸಹೋದರರು ಮರೆತ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳುವರು. ಬಂಧುಗಳು ನಿಮ್ಮನ್ನು ಬಹಳವಾಗಿ ದೂರುವರು. ಯಾರ ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ನೂತನ ವಾಹನದ ಖರೀದಿಗೆ ಪರ ಊರಿಗೆ ಹೋಗುವಿರಿ. ಮೊದಲೇ ನಿಶ್ಚಯಪಡಿಸಿದ ಕಾರ್ಯವನ್ನು ಬಿಟ್ಟು ಬೇರೆ ಯೋಚನೆ ಮಾಡುವುದು ಬೇಡ.
ತುಲಾ ರಾಶಿ: ಸಂಗಾತಿಯ ಮಾತನ್ನು ಅಲ್ಪವಾದರೂ ಪಾಲಿಸಿ. ಇಲ್ಲವಾದರೆ ಮುನಿಸಿಕೊಂಡಾರು. ಮನಸ್ಸಿನಲ್ಲಿರುವ ಸಂಕಟವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ವಾಹನ ಚಾಲನೆಯಲ್ಲಿ ಅವಸರ ಬೇಡ. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ಸರ್ಕಾರದ ಕಾರ್ಯಗಳನ್ನು ಬೇಗ ಮುಗಿಸಿಕೊಳ್ಳಲಿದ್ದೀರಿ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರಲು ಯತ್ನಿಸುವಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯದಲ್ಲಿ ಪರಸ್ಪರರ ಹೊಂದಾಣಿಕೆಯು ಕಾಣಿಸುವುದು. ಮಕ್ಕಳನ್ನು ಪಡೆದುಕೊಳ್ಳುವ ಚಿಂತೆಯು ಕಾಡುವುದು. ಪ್ರೇಮದಲ್ಲಿ ಸಿಕ್ಕಿಕೊಂಡು ಕಷ್ಟಪಡುವಿರಿ. ನಿಮ್ಮ ತೀರ್ಮಾನವನ್ನು ಒಪ್ಪುವುದು ಕಷ್ಟವಾದೀತು. ಮಕ್ಕಳ ವಿಚಾರವಾಗಿ ನಿಮಗೆ ದೂರು ಬರಬಹುದು.
ವೃಶ್ಚಿಕ ರಾಶಿ: ಉದ್ಯೋದ ಸ್ಥಳದಲ್ಲಿ ನಿಮ್ಮನ್ನು ಸ್ಥಾನಭ್ರಷ್ಟರಾಗುವ ಭೀತಿಯು ಇರಲಿದೆ. ವಿದ್ಯಾರ್ಥಿಗಳು ಓದಿನ ಕಡೆ ವಿಶೇಷ ಗಮನವನ್ನು ಕೊಡುವುದು ಕಷ್ಟವಾದೀತು. ಬಂಧುಗಳ ಕುಹಕಕ್ಕೆ ಸಿಲುಕುವಿರಿ. ನ್ಯಾಯಾಲಯದ ಹೋರಾಟವು ಅಪಯಶಸ್ಸನ್ನು ಕೊಡಬಹುದು. ಆಸ್ತಿಯಲ್ಲಿ ಸಮ ಪಾಲು ಸಿಗದೇ ನಿಮಗೆ ವಾದಕ್ಕಿಳಿಯುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸಣ್ಣ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಭೂಮಿಯ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಆರ್ಥಿಕ ಸಹಾಯವು ಸಿಗುವುದು. ಮಕ್ಕಳ ವಿವಾಹದ ಬಗ್ಗೆ ಬಂಧುಗಳ ಜೊತೆ ಗಂಭೀರವಾಗಿ ಚರ್ಚಿಸುವಿರಿ. ವಿದೇಶಕ್ಕೆ ತೆರಳುವ ನಿರೀಕ್ಷೆಯಲ್ಲಿ ಇರುವಿರಿ. ಮನಸ್ಸಿಗೆ ಹಿಡಿಸಿದ ಕೆಲಸವನ್ನು ಮಾತ್ರ ಬೇಗ ಮಾಡಿ ಮುಗಿಸುವಿರಿ.
ಧನು ರಾಶಿ: ಪ್ರಸಿದ್ಧಿಯನ್ನು ಪಡೆಯುವ ಹಂಬಲವು ಅತಿಯಾಗಬಹುದು. ಎಲ್ಲ ಕೆಲಸವನ್ನೂ ಅದೇ ದೃಷ್ಟಿಯಿಂದ ನೋಡುವಿರಿ. ಮಾನಸಿಕವಾದ ಅಸ್ಥಿರತೆಯಿಂದ ನಿಮಗೆ ಕಷ್ಟವಾದೀತು. ವೃತ್ತಿಯಲ್ಲಿ ನಿಮಗೆ ತೃಪ್ತಿಯು ಸಿಗಲಿದೆ. ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ರಾಜಕೀಯದಲ್ಲಿ ಕೈಜೋಡಿಸುವ ಬಗ್ಗೆ ಕುತೂಹಲವಿರುವುದು. ಸಾಮಾಜಿಕ ಕಾರ್ಯವು ನಿಮ್ಮನ್ನು ಸೆಳೆಯುವುದು. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುವುದು. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದು ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ನಿಮ್ಮವರ ಬಗ್ಗೆ ತಿಳಿದು ಸಂತೋಷ ಪಡುವಿರಿ. ಉತ್ಸಾಹವು ಅಧಿಕವಾಗಲಿದೆ.
ಮಕರ ರಾಶಿ: ನಿಮ್ಮ ಸಂಪತ್ತನ್ನು ಕಂಡು ಪ್ರೀತಿ ಹುಟ್ಟಿಕೊಳ್ಳಬಹುದು. ಆರ್ಥಿಕತೆಯಲ್ಲಿ ನೀವು ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುವುದು. ನಿನ್ನ ಬಾಗುವ ಸ್ವಭಾವವು ನಿಮ್ಮನ್ನು ಮೇಲಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ನಿಮ್ಮ ಮೌನವನ್ನು ಅನ್ಯರೀತಿಯಲ್ಲಿ ಅರ್ಥೈಸಿಕೊಳ್ಳಬಹುದು.
ಕುಂಭ ರಾಶಿ: ಇಂದು ತುರ್ತು ಸ್ಥಿತಿಯು ಬರಲಿದ್ದು ಅದನ್ನು ಎದುರಿಸುವುದು ಕಷ್ಟವಾದೀತು. ಬಂಧುಗಳ ಸಹಾಯದ ಅಪೇಕ್ಷೆ ಇದ್ದರೂ ಅದನ್ನು ಪಡೆಯಲು ಇಷ್ಟಪಡುವುದಿಲ್ಲ. ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ಮುಕ್ತವಾಗಿರುವುದು ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮಗೆ ಕಾರ್ಯಗಳು ನಿಮಗೆ ತೃಪ್ತಿಯನ್ನು ಕೊಡುವಂತಿರಲಿ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವು ಆಗಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು. ನಿಮ್ಮ ಕೆಲಸವನ್ನು ಪೂರ್ಣವಾಗಿ ಇನ್ನೊಬ್ಬರಿಗೆ ವಹಿಸುವುದು ಬೇಡ.
ಮೀನ ರಾಶಿ: ಇಂದು ಮಿತ್ರರ ಕುಟುಂಬದ ಜೊತೆ ಕಾಲ ಕಳೆಯುವಿರಿ. ಆಪ್ತರ ಜೊತೆ ಗೌಪ್ಯ ಮಾತುಕತೆಯನ್ನು ನಡೆಸುವಿರಿ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ತಾಯಿ ಮೇಲೆ ಪ್ರೀತಿ ಹೆಚ್ಚಾಗುವುದು. ಅವರಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಸದುಪಯೋಗ ಆಗಬಹುದು. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯವಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)