Horoscope: ಸಾಲದಿಂದ ಮುಕ್ತರಾಗುವಿರಿ, ಉದ್ಯೋಗಿಗಳಿಗೆ ಒತ್ತಡದ ದಿನವಗಲಿದೆ

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 16 ಜೂನ್​​ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ಸಾಲದಿಂದ ಮುಕ್ತರಾಗುವಿರಿ, ಉದ್ಯೋಗಿಗಳಿಗೆ ಒತ್ತಡದ ದಿನವಗಲಿದೆ
ಸಾಲದಿಂದ ಮುಕ್ತರಾಗುವಿರಿ, ಉದ್ಯೋಗಿಗಳಿಗೆ ಒತ್ತಡದ ದಿನವಗಲಿದೆ
Follow us
|

Updated on: Jun 16, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜೂನ್. 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ವ್ಯತಿಪಾತ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಸಂಜೆ 05:25 ರಿಂದ 07:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:48 ರಿಂದ ಸಂಜೆ 05:25ರ ವರೆಗೆ.

ಮೇಷ ರಾಶಿ: ಇಂದು ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಅದನ್ನು ಮತ್ತೇನೋ ಮಾಡಲು ಹೋಗಿ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮ ಉನ್ನತಸ್ಥಾನಕ್ಕೆ ಕಾರಣರಾದ ಎಲ್ಲರನ್ನೂ ಇಂದು ಸ್ಮರಿಸಿಕೊಳ್ಳುವಿರಿ. ಸಂತಾನದ ವಾರ್ತೆ ನಿಮಗೆ ಒಂದಿನ ಶುಭವಾರ್ತೆಯಾಗಲಿದೆ. ವಹಿವಾಟು ಅಧಿಕವಾಗಿದ್ದರೂ ಸಹ, ಪ್ರಮುಖ ಕಾರ್ಯಗಳನ್ನು ಹೆಚ್ಚಿನ ಪರಿಶ್ರಮದಿಂದ ಪೂರ್ಣಗೊಳಿಸಲಾಗುತ್ತದೆ. ಉದ್ಯೋಗದ ವಿಷಯದಲ್ಲಿ ಇಲ್ಲಿಯವರೆಗೆ ಎದುರಿಸಿದ ಕೆಲವು ಸಮಸ್ಯೆಗಳಿಂದ ಮುಕ್ತಿ ಸಿಗುವ ಸಮಯ. ಕೆಲಸದಲ್ಲಿ ಬರುವ ಯಾವುದೇ ಸಮಸ್ಯೆಯನ್ನು ಸರಿಯಾದ ಕ್ರಮದಿಂದ ಬಗೆಹರಿಸಿಕೊಳ್ಳುವಿರಿ. ಇಂದು ತಕ್ಕಮಟ್ಟಿನ ನೆಮ್ಮದಿ ಇರುತ್ತದೆ. ಆರೋಗ್ಯ ಮತ್ತು ಆದಾಯದ ವಿಚಾರದಲ್ಲಿ ಕೊರತೆಯಾಗದು. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು.

ವೃಷಭ ರಾಶಿ: ಇಂದು ಸ್ಪರ್ಧಾತ್ಮಕ ವಿಷಯಗಳಲ್ಲಿ ಸೋಲಾಗುವುದು. ಶತ್ರುಗಳು ನಿಮ್ಮ ಹಿಂದೇ ಇದ್ದು ನಿಮ್ಮನ್ನು ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸಿ ಕೈ ಬಿಡವರು.‌ ಗೊತ್ತಿಲ್ಲದ ಕೆಲಸವನ್ನು ಮಾಡಲು ಸ್ವಲ್ಪ ಒತ್ತಡ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಮೇಲೆ ಒತ್ತಡವನ್ನು ತರುವ ವ್ಯವಸ್ಥೆಯು ತಯಾರಾಗಿದೆ. ಆದಾಯ ಮತ್ತು ಆರೋಗ್ಯದಲ್ಲಿ ಕೊರತೆ ಇರುವುದಿಲ್ಲ. ಆದರೆ ವೆಚ್ಚಗಳು ತೀವ್ರವಾಗಿ ಹೆಚ್ಚಾಗುತ್ತವೆ. ಬಾಕಿ ಉಳಿದಿರುವ ಬಹುತೇಕ ಕಾಮಗಾರಿಗಳು ಪೂರ್ಣಮಾಡಿಕೊಳ್ಳಿ. ಸಣ್ಣ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಏನೋ ಮಾತನಾಡಿ ಸಿಕ್ಕಿಬೀಳುವಿರಿ. ಸತ್ಯವಿದ್ದಾಗ ಮಾತ್ರ ಯಾರ ಜೊತೆಯಾದರೂ ಚರ್ಚಿಸಿ. ಸಹೋದರರ ನಡುವೆ ಕಲಹಗಳು ಆಗುವ ಸಾಧ್ಯತೆ ಇದೆ, ಎಚ್ಚರ. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ. ಉದ್ಯಮವು ಸಕ್ರಿಯವಾಗಿದ್ದು ಇದನ್ನು ವಿಸ್ತರಿಸುವಿರಿ.

ಮಿಥುನ ರಾಶಿ: ಇಂದು ಹಣಕಾಸಿನ ಉದ್ಯೋಗಿಗಳಿಗೆ ಒತ್ತಡದ ದಿನವಗಲಿದೆ. ಕಾಲಕ್ಕೆ ಕಾಯಬೇಕಾಗಿರುವುದರಿಂದ ನಿಮ್ಮ ಪ್ರಯತ್ನಗಳು ಸದಾ ನಡೆಯಲಿ. ದೈವಾನುಕೂಲ ಬಂದಾಗ ಅದಕ್ಕೆ ಹೊಳಪು ಬರಲಿದೆ. ಸಂಗಾತಿಯೊಡನೆ ಸಮಾರಂಭಕ್ಕೆ ಹೋಗಲಿದ್ದೀರಿ. ನಿಮ್ಮ ಮಾತುಗಳು ಸಭೆಯನ್ನು ಮೂಕವಿಸ್ಮಿತಗೊಳಿಸಲಿದೆ. ಆರ್ಥಿಕ ಲಾಭ, ಸಾಲದಿಂದ ಮುಕ್ತರಾಗಿ ನಿಮಗೆ ನೆಮ್ಮಸಿಯು ಸಿಗಲಿದೆ. ಆದಾಯ ಬರುವ ಕೆಲವು ಬಾಕಿ ಕೆಲಸಗಳನ್ನು ಪೂರ್ಣಮಾಡಿಕೊಳ್ಳುವಿರಿ. ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ಮಾಡಲೇಬೇಕು. ಕಛೇರಿಯಲ್ಲಿ ನಿಮ್ಮ ಮೇಲೆ ಒತ್ತಡ ಹೆಚ್ಚಾಗುವುದು.‌ ಯಾವುದೇ ಕಾರ್ಯವಾದರೂ ನಿರಂತರತೆ ಇರಲಿ. ತಿಳಿವಳಿಕೆ ಇಲ್ಲದೇ ಕಾರ್ಯವನ್ನು ಮಾಡಿ ಕೈ ಸುಟ್ಟುಕೊಳ್ಳಬೇಡಿ. ದೂರದ ಪ್ರಯಾಣಕ್ಕೆ ನೀವು ಮೊದಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಇಂದಿನ ದಿನವನ್ನು ಆನಂದಿಸಲು, ಜವಾಬ್ದಾರಿಯ ಕೆಲಸಗಳನ್ನು ಪೂರೈಸುವತ್ತ ಗಮನವಿರಲಿ. ವೈಯುಕ್ತಿಕ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಿ.

ಕಟಕ ರಾಶಿ: ನಿಮ್ಮ ಮೇಲೆ ಬಿದ್ದ ಕಲ್ಲನ್ನು ತಪ್ಪಿಸಿಕೊಳ್ಳುವ ಸಮಯದಲ್ಲಿ ಮತ್ತೊಂದು ಬಂದು ಬೀಳಬಹುದು. ಅತಿಯಾದ ಬುದ್ಧಿಯನ್ನು ಬಳಸಲು ಹೋಗಿ ಹಳ್ಳಕ್ಕೆ ಬೀಳುವ ಅವಕಾಶವನ್ನು ಇಟ್ಟುಕೊಳ್ಳುವುದು ಬೇಡ. ಮಾಡಲು ಏನೂ ಕೆಲಸವಿಲ್ಲವೆಂದು ಹೇಳಿ ನಿಮ್ಮರ ಬಾಯಿಗೆ ಸಿಗಬೇಡಿ. ನಿಮ್ಮ‌ಇಂದಿನ ಸಹಾನುಭೂತಿ ಮತ್ತು ತಿಳುವಳಿಕೆಗೆ ಪ್ರತಿಫಲ ದೊರಕುವುದು. ನಿಮ್ಮನ್ನೇ ನೀವು ಪ್ರಶಂಸಿಸುವುದು ಕೇಳುಗರಿಗೆ ಸರಿ ಎನಿಸದು. ಆದಾಯವು ಸ್ಥಿರವಾಗಿದ್ದರೂ ಖರ್ಚುಗಳು ತುಂಬಾ ಅಧಿಕವಾಗಲಿದೆ. ವ್ಯಾಪಾರದಲ್ಲಿ ಲಾಭವಾಗಲು ಹೆಚ್ಚು ಪ್ರಯತ್ನವನ್ನು ಮಾಡಲೇಬೇಕಾಗಿದೆ. ಆತುರದ ತೀರ್ಮಾನ ಒತ್ತಡ ಉಂಟುಮಾಡಬಹುದಾದ್ದರಿಂದ ಎಚ್ಚರಿಕೆಯಿಂದ ತೀರ್ಮಾನ ಮಾಡಿ. ವಿಭಿನ್ನ ರೀತಿಯಲ್ಲಿ ಪ್ರೇಮವನ್ನು ಅನುಭವಿಸುವಿರಿ‌. ಆರ್ಥಿಕವಾದ ಬಲಿಷ್ಠತೆ ಬೇಕಾಗುವುದು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಸಂಗಾತಿಯ ಜೊತೆ ಹೊಂದಾಣಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಕಷ್ಟವಾದೀತು.

ತಾಜಾ ಸುದ್ದಿ
Daily Devotional: ಪಂಚಮುಖ ರುದ್ರಾಕ್ಷಿ ಧಾರಣೆಯ ಮಹತ್ವ ತಿಳಿಯಿರಿ
Daily Devotional: ಪಂಚಮುಖ ರುದ್ರಾಕ್ಷಿ ಧಾರಣೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ನಿಶ್ಚಯವಾಗಲಿದೆ
Daily Horoscope: ಈ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ನಿಶ್ಚಯವಾಗಲಿದೆ
International Yoga Day: ಶ್ರೀನಗರದ ದಾಲ್​ ಸರೋವರದ ತಟದಲ್ಲಿ ಮೋದಿ ಯೋಗ
International Yoga Day: ಶ್ರೀನಗರದ ದಾಲ್​ ಸರೋವರದ ತಟದಲ್ಲಿ ಮೋದಿ ಯೋಗ
ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ
ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ
ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು
ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು
ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ
ಜೈಲಿಗೆ ಹೋದ ಪವಿತ್ರಾ ಗೌಡ; ಅಮ್ಮನಿಗಾಗಿ ಪೊಲೀಸ್ ವ್ಯಾನ್ ಹೊರಗೆ ಕಾದ ಮಗಳು
ಜೈಲಿಗೆ ಹೋದ ಪವಿತ್ರಾ ಗೌಡ; ಅಮ್ಮನಿಗಾಗಿ ಪೊಲೀಸ್ ವ್ಯಾನ್ ಹೊರಗೆ ಕಾದ ಮಗಳು
ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಪರ ವಕೀಲರ ಆಕ್ರೋಶದ ಪ್ರತಿಕ್ರಿಯೆ
ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಪರ ವಕೀಲರ ಆಕ್ರೋಶದ ಪ್ರತಿಕ್ರಿಯೆ
ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..
ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..
ಕಟ್ಟಡ ದಿಢೀರ್ ಕುಸಿತ; ಅವಶೇಷಗಳಡಿ ಸಿಲುಕಿದ್ದ 8 ಕಾರ್ಮಿಕರ ಪೈಕಿ 2 ರಕ್ಷಣೆ
ಕಟ್ಟಡ ದಿಢೀರ್ ಕುಸಿತ; ಅವಶೇಷಗಳಡಿ ಸಿಲುಕಿದ್ದ 8 ಕಾರ್ಮಿಕರ ಪೈಕಿ 2 ರಕ್ಷಣೆ