Horoscope: ದಿನ ಭವಿಷ್ಯ; ಒಳ್ಳೆಯದೆಂದು ತಿಳಿದು ಮೋಸ ಹೋಗಲಿದ್ದೀರಿ
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಜೂ. 16 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜೂನ್. 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ವ್ಯತಿಪಾತ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಸಂಜೆ 05:25 ರಿಂದ 07:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:48 ರಿಂದ ಸಂಜೆ 05:25ರ ವರೆಗೆ.
ಧನು ರಾಶಿ: ಇಂದು ಸಮಾರಂಭಗಳಿಗೆ ಅತಿಥಿಯಾಗುವ ಅವಕಾಶ ಸಿಗುವುದು. ಮನೆಯಲ್ಲಿ ನಡೆಯುವ ಮಂಗಲಕಾರ್ಯಗಳಿಗೆ ಧನಸಹಾಯ ಮಾಡುವಿರಿ. ನಿಮ್ಮ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಸ್ವಂತ ನಿರ್ಧಾರ ಮತ್ತು ಆಲೋಚನೆಗಳಿಗಿಂತ ಕುಟುಂಬದ ಸದಸ್ಯರ ಸಲಹೆಯನ್ನು ತೆಗೆದುಕೊಂಡರೆ ಒಳ್ಳೆಯದು. ಆದಾಯ ಸ್ಥಿರವಾಗಿದ್ದರೂ ಖರ್ಚು ಹೆಚ್ಚಾಗುತ್ತದೆ. ಏನನ್ನಾದರೂ ದಾನ ಮಾಡುವ ಮನಸ್ಸಾಗುವುದು. ನಿಮ್ಮ ಚೈತನ್ಯವನ್ನು ಹೆಚ್ಚಿಸಲು ನಿಮ್ಮ ಮನಸ್ಸಿನಲ್ಲಿ ಒಂದು ಪ್ರಕಾಶಮಾನವಾದ ಸುಂದರವಾದ ಮತ್ತು ಅದ್ಭುತವಾದ ಚಿತ್ರವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಕಚೇರಿಯ ಸಹೋದ್ಯೋಗಿ ನಿಮ್ಮ ಅಮೂಲ್ಯವಾದ ವಸ್ತುವು ಕಳ್ಳತನವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಕಾಣಬಹುದು. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ.
ಮಕರ ರಾಶಿ: ಇಂದು ನಿಮ್ಮ ಬಳಿ ಆರೋಗ್ಯ ಸಲಹೆಯನ್ನು ಕೇಳಬಹುದು. ಸುಮ್ಮನೆ ಹಾರಿಕೆಯ ಉತ್ತರ ಕೊಟ್ಟ ಆರೋಗ್ಯವನ್ನು ಕೆಡಿಸುವುದು ಬೇಡ. ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆನ್ನಿ. ಗೃಹಬಳಕೆಯ ವಸ್ತುಗಳನ್ನು ಖರೀದಿಸಲು ಹೋಗುವಿರಿ. ಕಬ್ಬಿಣದ ವ್ಯಾಪಾರಗಳು ನಷ್ಟವನ್ನು ಅನುಭವಿಸುವಿರಿ. ಅದು ನಿಮ್ಮ ನಡುವಿನ ಸಂಬಂಧವನ್ನು ಬಲವಾಗಿಸುತ್ತದೆ. ಇಂದು ನೀವು ಸಾಲದಿಂದ ಮುಕ್ತರಾಗುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯೂ ಚೆನ್ನಾಗಿರಲಿದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುವುದು ಖುಷಿಯ ವಿಚಾರ. ಇಂದು ನೆರೆ-ಹೊರೆಯವರ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಿರಿಯ ಅಧಿಕಾರಿಗಳ ಸಹಾಯದಿಂದ ನಿಮ್ಮ ಸಂಕೀರ್ಣ ಕಾರ್ಯಗಳು ಸಹ ಇಂದು ಪೂರ್ಣವಾಗಲಿದೆ. ಹಿರಿಯರಿಂದ ಆಶೀರ್ವಾದ ಸಿಗಲಿದೆ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ.
ಕುಂಭ ರಾಶಿ: ಇಂದು ಒತ್ತಡದಿಂದ ಉದ್ವೇಗಗೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ಯಾರಾದರೂ ನಿಮ್ಮ ಜೊತೆ ಮಾತನಾಡಲು ಬಂದರೆ ಸಿಟ್ಟಗುವಿರಿ. ಎಲ್ಲರ ಮಾತೂ ಕಿರಿಕಿರಿ ಎನಿಸಿವುದು. ಸ್ನೇಹಿತರ ಭೇಟಿಯಿಂದ ಸಂತಸವಾಗಲಿದೆ. ನಕಾರಾತ್ಮಕ ಅಂಶಗಳೇ ಇಷ್ಟವಾಗುವುದು. ಇದಕ್ಕೆ ಕುಟುಂಬದಿಂದ ನಿಮಗೆ ಅನೇಕ ಮೆಚ್ಚುಗೆಯಾಗಲಿದೆ. ನಿಮ್ಮ ಸಹಾಯಕ್ಕೆಂದೂ ಹಿಂಜರಿಯದ ಸ್ನೇಹಿತರ ಸಮೂಹವು ನಿಮ್ಮದಾಗಿದೆ. ನಿಮ್ಮವರಿಂದ ನಿಮಗೆ ಪ್ರಶಂಸೆಯು ಸಿಗಲಿದೆ. ನೀವು ಸ್ನೇಹಿತರ ಜೊತೆ ಸಾಕಷ್ಟು ಮೋಜಿನ ಸಮಯವನ್ನು ಕಳೆಯಬಹುದು. ಹೊಸ ಜನರು ಭೇಟಿ ನೀಡುವಂತಹ ಸ್ಥಳಗಳಿಗೆ ಹೋಗುವಂತಹ ಸಾಧ್ಯತೆಯೂ ಇದೆ. ಆರೋಪ ಪ್ರತ್ಯಾರೋಪಗಳಿಂದ ಸಮಯ ವ್ಯರ್ಥವಾಗಲಿದೆ. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ಉದ್ವಿಗ್ನತೆಯು ಉಂಟಾಗ ಏನನ್ನಾದರೂ ಮಾಡಿಕೊಳ್ಳುವಿರಿ.
ಮೀನ ರಾಶಿ: ನೀವು ಯಾರನ್ನಾದರೂ ದ್ವೇಷಿಸುತ್ತಿದ್ದರೆ ತೋರಿಸಿಕೊಳ್ಳಬೇಡಿ. ಸಹಜವಾಗಿ ಅವರ ಜೊತೆ ವರ್ತಿಸಿ. ಕೆಲವು ನಿರ್ಧಾರಗಳಿಂದ ಆರ್ಥಿಕವಾಗಿ ನಷ್ಟವಾಗುವುದು. ಸಿಟ್ಟಿನ ಕೈಗೆ ಬುದ್ಧಿಯನ್ನು ಕೆಲಸವನ್ನು ಕೆಡಿಸಿಕೊಳ್ಳುವ ಅಗತ್ಯವು ಬರಬಹುದು. ನಿಮ್ಮನ್ನು ನಡತೆಯನ್ನು ಪ್ರಶ್ನಿಸಬಹುದು. ಇಂದಿನ ನಿಮ್ಮ ಕೆಲಸದ ಸುಲಭ ವೇಳಾಪಟ್ಟಿ ವಿಶ್ರಾಂತಿಗೆ ಸಾಕಷ್ಟು ಸಮಯ ಸಿಗಲಿದೆ. ಅವಿವಾಹಿತರಿಗೆ ಪತ್ನಿಯು ಸಿಗಲುದ್ದಾಳೆ. ನಿಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಿ. ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಸುಂದರವಾದ ಪ್ರದೇಶಕ್ಕೆ ಹೋಗಲಿದ್ದೀರಿ. ಒಬ್ಬ ಅಪರಿಚಿತ ವ್ಯಕ್ತಿಯ ಜೊತೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಒಳ್ಳೆಯದೆಂದು ತಿಳಿದು ಮೋಸಹೋಗಲಿದ್ದೀರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)