
ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ, ಅದು ಕೊನೆಗೊಳ್ಳುತ್ತದೆ. ಬಂದ ಕಳಂಕವನ್ನು ಯಾವುದಾರೂ ರೀತಿಯಲ್ಲಿ ತೊಳೆಯುವ ಪ್ರಯತ್ನ ಮಾಡುವಿರಿ. ಕೆಲಸದಲ್ಲಿ ಒತ್ತಡ ತಕ್ಷಣ ಉಂಟಾಗಬಹುದು ಆದರೆ ನಿರ್ವಹಿಸಬಹುದಾದ ಮಟ್ಟದಲ್ಲಿದೆ. ಹೆಚ್ಚು ನಿರುಪಯುಕ್ತ ಮಾತುಗಳು ನಿಮ್ಮಿಂದ ಬರಬಹುದು. ಅನಿರೀಕ್ಷಿತ ಅಶುಭವಾರ್ತೆಯನ್ನು ನೀವು ಕೇಳಬೇಕಾದೀತು. ತನ್ನವರ ಬಗ್ಗೆ ನಂಬಿಕೆ ಇರದು. ನಂಬಿಕೆಯಲ್ಲಿ ಪಕ್ವತೆ ಇರಲಿದೆ.
ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಎಲ್ಲ ವಿಷಯಗಳಲ್ಲಿ ಸ್ಪಷ್ಟತೆಯೊಂದಿಗೆ ನಡೆದುಕೊಳ್ಳಿ. ಹಣಕಾಸಿನಲ್ಲಿ ಉತ್ತಮ ಸ್ಥಿತಿ ಕಾಣಬಹುದು. ಆದರೂ ಕೆಲವು ಕೆಲಸಗಳಲ್ಲಿ ವಿಳಂಬ ಸಂಭವಿಸಬಹುದು. ಉತ್ಸಾಹವಿಲ್ಲದಂತೆ ಇದ್ದರೂ ಕೆಲಸಗಳು ಒಂದರಹಿಂದೆ ಬರುತ್ತಲೇ ಇರುವುದು. ಹಿರಿಯರಿಂದ ಮಾರ್ಗದರ್ಶನ ಒಳಿತು. ಮಿತ್ರರೊಂದಿಗೆ ಮನೋರಂಜನೆಯ ಕಾಲ ಕಳೆಯಬಹುದು. ಸಣ್ಣ ವ್ಯಾಪಾರವು ಹೆಚ್ಚುವರಿಯಾಗಿ ಲಾಭವನ್ನು ಕೊಡುವುದು. ಉದ್ಯೋಗದ ಕನಸನ್ನು ಕಾಣುತ್ತಾ ಇರುವಿರಿ. ಉತ್ತಮ ವಸ್ತುಗಳ ಖರೀದಿ ಮಾಡುವಿರಿ.
ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಪ್ರಾಮಾಣಿಕ ಪ್ರಯತ್ನ ಯಶಸ್ಸಿಗೆ ದಾರಿ ಮಾಡಿಕೊಡಲಿದೆ. ಲಘು ಆರೋಗ್ಯ ಸಮಸ್ಯೆ ತೊಂದರೆ ಮಾಡಬಹುದು. ಮನೆಯಲ್ಲಿನ ಜವಾಬ್ದಾರಿಗಳು ಹೆಚ್ಚಾಗಲಿವೆ. ಹಣಕಾಸಿನಲ್ಲಿ ನಿರ್ವಹಣಾ ಜಾಣ್ಮೆ ಅಗತ್ಯ. ಸಹೋದರರೊಂದಿಗೆ ಮಾತುಕತೆ ಎಚ್ಚರಿಕೆಯಿಂದ ಇರಲಿ. ರಾಜಕೀಯದಲ್ಲಿ ಕೆಲಸ ಮಾಡುವ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳನ್ನು ಇಟ್ಟುಕೊಳ್ಳುವಿರಿ.
ಕರ್ಮದ ನಡುವೆ ಸಮತೋಲನ ಅಗತ್ಯ. ಕೆಲಸದಲ್ಲಿ ಹೊಸ ಅವಕಾಶಗಳು ಬರಬಹುದು. ಧೈರ್ಯದಿಂದ ಮಾತಾಡುವುದು ಉತ್ತಮ. ಸುಳ್ಳು ಸುದ್ದಿಗಳಿಗೆ ಮಾರುಹೋಗುವಿರಿ.ತ ದೂರದ ಸಂಬಂಧಿಕರಿಂದ ಒಳ್ಳೆಯ ಸುದ್ದಿ. ಹಣಕಾಸಿನಲ್ಲಿ ತಾತ್ಕಾಲಿಕ ಒತ್ತಡ. ಮಕ್ಕಳು ನಿಮ್ಮನ್ನು ಪ್ರೇರೇಪಿಸುತ್ತಾರೆ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ.
ಹಳೆಯ ಸಮಸ್ಯೆ ಮತ್ತೆ ಎದುರಾಗಬಹುದು. ಧೈರ್ಯದಿಂದ ನಿಭಾಯಿಸಿದರೆ ಪ್ರಯೋಜನ ಸ್ನೇಹಿತರ ಸಲಹೆ ಉಪಯುಕ್ತ. ಮಾತಿನ ಸೌಮ್ಯತೆಯು ನಿಮಗೆ ಗೌರವವನ್ನು ಕೊಡುವುದು. ನಿಮಗೆ ಹಿಡಿಸದ ವ್ಯವಹಾರವನ್ನು ಕಠೋರವಾಗಿ ಠೀಕಿಸುವಿರಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಯಾವುದೂ ಅಂತ್ಯವಲ್ಲ.
ನಿಮ್ಮ ಬಾಯಿಯ ಚಪಲಕ್ಕೆ ಅಸಂಬದ್ಧವನ್ನು ಹೇಳುವಿರಿ. ಸದಾ ನಗುಮುಖದಿಂದ ಇರಿ. ಮನಸ್ತಾಪವು ಆಸ್ತಿ ವಿಭಜನೆಯವರೆಗೆ ಹೋಗಬಹುದು. ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಬಗೆಯನ್ನು ಚಿಂತಿಸಿ. ಸಹೋದ್ಯೋಗಿಗಳಿಂದ ಮೆಚ್ಚುಗೆ. ನಿಮ್ಮ ಅಂತಸ್ತಿನ ಬಗ್ಗೆ ನಿಮಗೆ ಬಿಮ್ಮು ಇರುವುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ.
ಊಹೆಗೂ ನಿಲುಕದ ವಿಷಯವು ನಿಮ್ಮೆದುರು ಪ್ರಸ್ತಾಪಗೊಂಡೀತು. ನಡವಳಿಕೆಯಲ್ಲಿ ಶಿಸ್ತು ಅಗತ್ಯ. ಹಣಕಾಸಿನಲ್ಲಿ ಸ್ವಲ್ಪ ಚಿಂತೆಗಳು ಎದುರಾಗಬಹುದು. ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಧೈರ್ಯದಿಂದ ನಿರ್ಧಾರ ಕೈಗೊಳ್ಳಿ. ಕೆಲವರಿಂದ ಅನಿರೀಕ್ಷಿತ ಸಹಾಯ ದೊರೆಯುತ್ತದೆ. ಯಾವುದೇ ವಿಚಾರಕ್ಕೆ ಮಿತವಾಗಿ ಮಾತನಾಡುವುದು ಒಳಿತು. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ.
ನಿಮ್ಮ ಆಲಸ್ಯ ಕ್ಷಣಾರ್ಧದಲ್ಲಿ ಮಾಯವಾಗುವುದು. ಮಾಜಿ ಪ್ರೇಯಸಿ ಕಂಡಳೆಂದು ಹಿಗ್ಗುವುದು ಬೇಡ. ಕೆಲಸದಲ್ಲಿ ನಿಖರತೆ ಅಗತ್ಯ. ಇಂದಿನ ಆದಾಯವನ್ನು ಹೆಚ್ಚು ಮಾಡಿಕೊಳ್ಳಬಹುದು. ಹಣಕಾಸಿನಲ್ಲಿ ಲಘು ವ್ಯತ್ಯಾಸವು ಚಿಂತೆಗಿಳಿಸುವುದು. ಪ್ರಬಲ ವೈರಿಗಳನ್ನು ನೀವು ಮೆಟ್ಟಿನಿಲ್ಲುವ ಛಾತಿ ಇರಲಿದೆ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆ ಮಾತನಾಡಬಹುದು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ.
ಸಮಯವನ್ನು ಬಳಸಿಕೊಳ್ಳುವುದನ್ನು ಕಲಿಯುವಿರಿ. ನಿಮ್ಮ ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ, ಏಕೆಂದರೆ ಅನಂತರ ಆರೋಗ್ಯ ಸ್ವಲ್ಪ ಹದಗೆಡಬಹುದು. ಕುಟುಂಬ ಸಂಬಂಧಿ ವಿಚಾರದಲ್ಲಿ ಕೆಲಚರ್ಚೆಗಳು ನಡೆಯಬಹುದು. ಸೌಕರ್ಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು.
ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ಆತ್ಮವಿಶ್ವಾಸ ಕಾಪಾಡಿಕೊಳ್ಳಿ. ನಿಮ್ಮ ಲೆಕ್ಕಾಚಾರವನ್ನು ವ್ಯತ್ಯಾಸ ಆಗಬಹುದು. ಕುಟುಂಬದ ಸದಸ್ಯರೊಂದಿಗೆ ಸಂತೋಷಕರ ಕ್ಷಣಗಳು ಕಳೆಯಬಹುದು. ಮೇಲಧಿಕಾರಿಗಳ ಅಸಮಾಧಾನವನ್ನು ದೂರ ಮಾಡಿ. ಹಣಕಾಸು ಯೋಜನೆ ಹೊಸ ರೂಪ ಪಡೆಯಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು.
ಇಂದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ಇತರರು ಅಚ್ಚರಿ ಪಡುವಂತೆ ಮಾಡುತ್ತದೆ. ನಿಮ್ಮ ಉತ್ಸಾಹ ಉಳಿದಂತೆ ನೋಡಿಕೊಳ್ಳಿ. ಯತ್ನಿಸಿದ ಕೆಲಸಗಳಲ್ಲಿ ಹೆಚ್ಚಿನ ಪ್ರಯೋಜನ ದೊರೆಯಬಹುದು. ಸ್ನೇಹಿತರಿಂದ ಸಹಾಯ ಲಭ್ಯವಿರುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಗಮನ ಸೆಳೆಯುವಿರಿ. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ.
ನಿಮ್ಮ ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಸಮಾರಂಭಗಳಿಗೆ ತೆರಳಲಿದ್ದೀರಿ. ಸಿಟ್ಟಿನಿಂದ ಇನ್ನಷ್ಟು ಪರಿಹಾಸ್ಯಕ್ಕೆ ಒಳಗಾಗಬೇಡಿ. ಮುಂದಾಳುತ್ವ ವಹಿಸಿದರೆ, ನೀವೊಬ್ಬರೇ ಕೊನೆಗೆ ಉಳಿಯುವುದು. ತಾತ್ಕಾಲಿಕ ತೀರ್ಮಾನಗಳು ದೀರ್ಘಾವಧಿಯಲ್ಲಿ ಲಾಭಕಾರಿಯಾಗಬಹುದು. ನವೀನ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಬೇಸರಗೊಳ್ಳದೇ ಖುಷಿಯಿಂದ ಮಾಡಿ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಉತ್ತರಾಷಾಢಾ, ಯೋಗ : ಶುಭ, ಕರಣ : ಬಾಲವ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:59 – 15:36, ಯಮಗಂಡ ಕಾಲ 05:56 – 07:33, ಗುಳಿಕ ಕಾಲ 09:09 – 10:46
– ಲೋಹಿತ್ ಹೆಬ್ಬಾರ್-8762924271 (what’s app only)