June 2024 Monthly Horoscope: ಜೂನ್ ಮಾಸ ಭವಿಷ್ಯ, ಈ ರಾಶಿಗಳಿಗೆ ಉತ್ತಮ ಫಲ, ಕೆಲವರಿಗೆ ಮಧ್ಯಮ, ಅಧಮ ಫಲವು ಪ್ರಾಪ್ತವಾಗಲಿದೆ

ಜೂನ್​ 2024 ಮಾಸ ಭವಿಷ್ಯ: ಕುಜ, ಶುಕ್ರ, ಬುಧ, ಸೂರ್ಯರ ಪರಿವರ್ತನೆಯು ಈ ತಿಂಗಳಲ್ಲಿ ಆಗಲಿದೆ. ಇದು ಹಲವುವೇಳೆ ರಾಶಿಗಳಿಗೆ ಉತ್ತಮ ಫಲ, ಕೆಲವರಿಗೆ ಮಧ್ಯಮ, ಅಧಮ ಫಲವು ಪ್ರಾಪ್ತವಾಗಲಿದೆ. ಯಾರೂ ತಾಳ್ಮೆಯನ್ನು ಕಳೆದುಕೊಳ್ಳ, ಉತ್ತಮ ಕಾಲದ ನಿರೀಕ್ಷೆಯಲ್ಲಿ ಇರುವುದು ಸೂಕ್ತ. ಇನ್ನು ಜೂನ್​​​ನಲ್ಲಿ ಯಾವೆಲ್ಲ ರಾಶಿ ಶುಭಫಲ ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

June 2024 Monthly Horoscope: ಜೂನ್ ಮಾಸ ಭವಿಷ್ಯ, ಈ ರಾಶಿಗಳಿಗೆ ಉತ್ತಮ ಫಲ, ಕೆಲವರಿಗೆ ಮಧ್ಯಮ, ಅಧಮ ಫಲವು ಪ್ರಾಪ್ತವಾಗಲಿದೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on:May 29, 2024 | 11:34 AM

ಈ ತಿಂಗಳಲ್ಲಿ ವಿಶೇಷವಾದ ಗ್ರಹಗಳ ಬದಲಾವಣೆ ಆಗಲಿದೆ. ಕುಜ, ಶುಕ್ರ, ಬುಧ, ಸೂರ್ಯರ ಪರಿವರ್ತನೆಯು ಈ ತಿಂಗಳಲ್ಲಿ ಆಗಲಿದೆ. ಇದು ಹಲವುವೇಳೆ ರಾಶಿಗಳಿಗೆ ಉತ್ತಮ ಫಲ, ಕೆಲವರಿಗೆ ಮಧ್ಯಮ, ಅಧಮ ಫಲವು ಪ್ರಾಪ್ತವಾಗಲಿದೆ. ಯಾರೂ ತಾಳ್ಮೆಯನ್ನು ಕಳೆದುಕೊಳ್ಳ, ಉತ್ತಮ ಕಾಲದ ನಿರೀಕ್ಷೆಯಲ್ಲಿ ಇರುವುದು ಸೂಕ್ತ.

ಮೇಷ ರಾಶಿ :

ಜೂನ್ ತಿಂಗಳಲ್ಲಿ ರಾಶಿ ಚಕ್ರದ ಮೊದಲ ರಾಶಿಗೆ ಶುಭಫಲವು ಇರಲಿದೆ. ದ್ವಾದಶದಲ್ಲಿ ಇರುವ ಕುಜನು ಸ್ವಕ್ಷೇತ್ರಕ್ಕೆ ಆಗಮಿಸುವನು. ಸೂರ್ಯ ಮತ್ತು ಶುಕ್ರರು ತೃತೀಯ ಸ್ಥಾನಕ್ಕೆ ಹಾಗೂ ಬುಧನು ಚತುರ್ಥಕ್ಕೆ ಹೋಗುವನು. ಎಲ್ಲ ಮಾರ್ಗದ ಧೈರ್ಯವಿರಿವುದು. ಸಾಹಸ ಕಾರ್ಯದಲ್ಲಿ ತೊಡಗಿಕೊಳ್ಳುವ ಅವಕಾಶ ಬರುವುದು. ಸಹೋದರ ನಡುವಣ ಸಂಬಂಧವನ್ನು ತಪ್ಪಿದ್ದರೆ ಬೆಸೆಯುವ ಸೂಚನೆ ಕಾಣಿಸುವುದು. ಬಾಂಧವರ ಜೊತೆ ಸಮಯ ಕಳೆಯುವಿರಿ.

ವೃಷಭ ರಾಶಿ :

ಎರಡನೇ ರಾಶಿಯವರಿಗೆ ಈ ತಿಂಗಳ ಮಿಶ್ರ ಮಾಸ. ಸ್ವ ರಾಶಿಯಲ್ಲಿ ಗುರು, ದ್ವಾದಶದಲ್ಲಿ ಕುಜ, ದ್ವಿತೀಯದಲ್ಲಿ ಸೂರ್ಯ, ಶುಕ್ರ, ತೃತೀಯದಲ್ಲಿ ಬುಧನ ಸಂಚಾರವು ಬರಲಿದೆ. ಚಂಚಲ ಮನಸ್ಸು ಸ್ಥಿರಾಗುವುದು. ಅನವಶ್ಯಕ ಹಣವನ್ನು ಅಪವ್ಯಯ ಮಾಡಬೇಕಾಗುವುದು. ನಿಮ್ಮ ಮಾತಿಗೆ ಮರುಳಾಗುವರು. ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಸಿಗುವುದು. ಆದಾಯದ ಮಾರ್ಗವು ಋಜುವಾಗಿ ಇರದು. ಯಾವುದೋ ರೀತಿಯಲ್ಲಿ ಸಂಪಾದಿಸುವಿರಿ ಅಥವಾ ಅನೇಕ ಆದಾಯದ ಮೂಲವಿರುವುದು.

ಮಿಥುನ ರಾಶಿ:

ಜೂನ್ ತಿಂಗಳಲ್ಲಿ ಮೂರನೇ ರಾಶಿಯವರಿಗೆ ಅಶುಭಫಲವೇ ಅಧಿಕವಾಗಿರುತ್ತದೆ. ಸ್ವರಾಶಿಯಲ್ಲಿ ಸೂರ್ಯ ಹಾಗೂ ಶುಕ್ರ, ವ್ಯಯದಲ್ಲಿ ಗುರು, ಏಕಾದಶದಲ್ಲಿ ಕುಜ, ದ್ವಿತೀಯದಲ್ಲಿ ಬುಧರ ಸಂಚಾರ ಇರಲಿದೆ. ಯಂತ್ರೋಪಕರಣಗಳಿಂದ ಲಾಭವಾಗುವುದು. ಆರೋಗ್ಯವು ವ್ಯತ್ಯಾಸವಾಗಿ ಸಂಕಟಪಡಬೇಕಾಗುವುದು. ಬಂಧುಗಳಿಂದ ಏನನ್ನಾದರೂ ನಿರೀಕ್ಷಿಸಿದರೆ ಸಾಧ್ಯವಾಗುವುದು. ಆಲಂಕಾರಿಕ ವಿಚಾರಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ರಾಹುವಿನಿಂದ ಕಾಲಿಗೆ ಗಾಯಗಳು ಆಗುವುದು.

ಕರ್ಕಾಟಕ ರಾಶಿ:

ಈ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಮಿಶ್ರಫಲವೇ ಇರುವುದು. ನಿಮ್ಮ ರಾಶಿಗೆ ಬುಧನ ಆಗಮನವಾಗುವುದು. ದ್ವಾದಶದಲ್ಲಿ ಸೂರ್ಯ ಹಾಗೂ ಶುಕ್ರರು, ದಶಮದಲ್ಲಿ ಕುಜ, ಏಕಾದಶದಲ್ಲಿ ಗುರು. ಉದ್ಯೋಗದಲ್ಲಿ ದುಡುಕುವ ಸಾಧ್ಯತೆ ಇದೆ. ಏನನ್ನಾದರೂ ಹೇಳುವ ಮಾಡುವ ಸಂದರ್ಭವು ಬಂದರೆ ವಿವೇಚನೆಯಿಂದ ಮಾಡಿ. ಧನನಷ್ಟವನ್ನು ಮಾಡಿಕೊಳ್ಳುವಿರಿ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅವಶ್ಯಕ. ಬೌದ್ಧಿಕ ಕಸರತ್ತು ಮಾಡಬೇಕಾಗುವುದು. ವೈವಾಹಿಕ ಜೀವನವನ್ನು ಬಹಳ ಜೋಪಾನದಿಂದ ನಡೆಸಬೇಕಾಗುವುದು.

ಸಿಂಹ ರಾಶಿ :

ರಾಶಿ ಚಕ್ರದ ಐದ‌ನೇ ರಾಶಿಯವರಿಗೆ ಈ ತಿಂಗಳು ಉತ್ತಮ ತಿಂಗಳೇ ಆಗಿದೆ. ಕುಜನು ನವಮದಲ್ಲಿ ಇರುವುದರಿಂದ ಅದೃಷ್ಟ ಕೈ ಕೊಡಬಹುದು. ಆದರೆ ಮನುಷ್ಯ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು. ಏಕಾದಶದಲ್ಲಿ ಶುಕ್ರ ಹಾಗೂ ಸೂರ್ಯರಿರುವುದು ವಾಹನದಿಂದ ಲಾಭ, ಕೃಷಿಕರಿಗೆ ಉತ್ತಮ ಬೆಲೆಯು ಸಿಕ್ಕಿ‌ ಸಂತೋಷಪಡುವರು. ದ್ವಾದಶದಲ್ಲಿ ಬುಧನು ನಿಮ್ಮ ಮಾತಿಗೆ ಬೆಲೆ ಬರದೇ ತೆರಬೇಕಾದ ಸ್ಥಿತಿಯನ್ನು ಸೃಷ್ಟಿಸಿಯಾನು. ಶನಿಯು ಸಪ್ತಮದಲ್ಲಿ ಇರುವುದು ಸಂಗಾತಿಯ ಮೇಲಿನ ಪ್ರೀತಿಯನ್ನು ಕಡಿತ ಮಾಡಿಸುವನು. ರಾಹುವು ಅನಾರೋಗ್ಯವನ್ನು ಸರಿ ಮಾಡುವ ದಾರಿ ತೋರಿಸುವನು.

ಕನ್ಯಾ ರಾಶಿ :

ಇದು ರಾಶಿ ಚಕ್ರದ ಆರನೇ ರಾಶಿಯಾಗಿದೆ. ಈ‌ ತಿಂಗಳು ಶುಭಫಲವು ನಿಮ್ಮ ನಮ್ಮ ಇಮ್ಮಡಿ ಮಾಡುವುದು.‌ ಕೈ ಹಾಕಿದ ಕಾರ್ಯವು ಕೈಗೂಡುವುದು. ಅಷ್ಟೇ ಅಲ್ಲದೇ ಲಾಭವನ್ನು ಬಯಸಿ ಮಾಡುವ ಕಾರ್ಯಕ್ಕೂ ಉತ್ತಮ ಆದಾಯವು ಸಿಗುವುದು. ನವಮದಲ್ಲಿ ಗುರುವು ತಮ್ಮ ಇಷ್ಟಾರ್ಥವನ್ನು ಕೊಡಿಸುವನು. ಬುಧನು ಏಕಾದಶದಲ್ಲಿ ಇರುವುದು ಬಂಧುವರ್ಗದಿಂದ ಸಹಕಾರ ಸಂಪತ್ತು ಸಿಗುವುದು. ದಾಂಪತ್ಯದಲ್ಲಿ ಕೆಲವು ಸಂದರ್ಭವನ್ನು ನೀವು ಜೋಪಾನವಾಗಿ ಎದುರಿಸಬೇಕಾಗಬಹುದು. ಸಂಗಾತಿಯಿಂದ ನಿರೀಕ್ಷಿತ ಸಹಕಾರವೂ ಸಿಗದೇಹೋಗಬಹುದು.

ತುಲಾ ರಾಶಿ :

ಈ ತಿಂಗಳು ರಾಶಿ ಚಕ್ರದ ಏಳನೇ ರಾಶಿಯವರಿಗೆ ಮಿಶ್ರಫಲ. ಸಪ್ತಮದ ಕುಜನು ಸಂಗಾತಿಯ ವಿಚಾರದಲ್ಲಿ ಋಣಾತ್ಮಕ ಆಲೋಚನೆ ಬರುವಂತೆ ಮಾಡುವನು. ನವಮದಲ್ಲಿ ಸೂರ್ಯ ಹಾಗೂ ಶುಕ್ರನು ಇರುವುದು ಸರ್ಕಾರದ ವಿಚಾರಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಬದಲಾವಣೆ ಆಗುವುದು.‌ ಸ್ಥಾನಮಾನಕ್ಕಾಗಿ ಪ್ರಯತ್ನಿಸಿದರೆ ಸಿಗುವುದು. ವಾಹನ‌ಲಾಭ ಅಥವಾ ವಾಹನದಿಂದ ಸುಖವು ಇದೆ. ಭೋಗಜೀವನಕ್ಕೆ ಹೆಚ್ಚು ಒತ್ತು ಕೊಡುವಿರಿ. ದಶಮದಲ್ಲಿ ಬುಧನು ಸಹೋದರನಿಂದ ಸಹಾಯವಾಗುವಂತೆ ಮಾಡುವನು. ಶಿಕ್ಷಣದ ವೃತ್ತಿಯಲ್ಲಿ ಪ್ರಗತಿ ಇರುವುದು.

ವೃಶ್ಚಿಕ ರಾಶಿ :

ಜೂನ್‌ ತಿಂಗಳಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಶುಭವೇ ಅಧಿಕವಾಗಿ ಇರುವುದು. ಶತ್ರುಗಳೂ ಕೂಡ ಶಾಂತರಾಗುವರು ಅಥವಾ ಮಿತ್ರರಾಗಲು ಬರುವರು. ಪರೋಪಕಾರದ ಬುದ್ಧಿ ಉಂಟಾಗುವುದು. ಅಷ್ಟಮದಲ್ಲಿ ಸೂರ್ಯ ಹಾಗೂ ಶುಕ್ರರಿಂದ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಭಯಗಳು ಉಂಟಾಗುವುದು. ನವಮದಲ್ಲಿ ಬುಧನು ಬಂಧುಗಳಿಂದ ಅನುಕೂಲ ಮಾಡಿಕೊಡುವನು. ಅನಿರೀಕ್ಷಿತ ಸಮ್ಮಾನವು ನಿಮಗೆ ಖುಷಿ ಕೊಡುವುದು. ಮಕ್ಕಳಿಂದ‌ ಕಿರಿಕಿರಿ‌ ಅಧಿಕವಾಗಿ ಬರಬಹುದು. ಅದನ್ನು ಗಂಭೀರವಾಗಿ ಪರಿಗಣಿಸದೇ ಸ್ತಬ್ಧವಾಗಿ ಇರಿ. ತಾನಾಗಿಯೇ ನಿವಾರಣೆಯಾಗುವುದು.

ಇದನ್ನೂ ಓದಿ: ನಿಮ್ಮ ಕಾರ್ಯಕ್ಕೆ ಪ್ರೀತಿ ಪಾತ್ರರು ಸಹಕಾರ ನೀಡುವರು, ಸಂಗಾತಿಯ ಜೊತೆ ಚರ್ಚಿಸಿ

ಧನು ರಾಶಿ :

ರಾಶಿ ಚಕ್ರದ ಒಂಭತ್ತನೆ ರಾಶಿಯವರಿಗೆ ಈ ತಿಂಗಳು ಮಿಶ್ರಮಾಸವಾಗಿರಲಿದೆ. ಮೊದಲನೆಯದಾಗಿ ಗುರುಬಲವು ಇಲ್ಲದೇ ಇರುವುದು ಋಣಾತ್ಮಕ ಅಂಶವಾಗಲಿದೆ. ಪಂಚಮದಲ್ಲಿ ಕುಜನ ಸಂಚಾರವು ವಿದ್ಯಾಭ್ಯಾಸಕ್ಕೆ ಪೂರಕವಾದುದಲ್ಲ. ಸಪ್ತಮದಲ್ಲಿ ಸೂರ್ಯ ಹಾಗು ಶುಕ್ರರ ಸಂಯೋಗವು ವಿವಾಹಕ್ಕೆ ಅನುವುಮಾಡಿಕೊಡುತ್ತದೆ. ವಿವಾಹಕ್ಕೆ ಒತ್ತಡವೂ ಇರುವುದು. ಅಷ್ಟಮದಲ್ಲಿ ಬುಧನು ನಿಮಗೆ ನರಕ್ಕೆ ಸಂಬಂಧಿಸಿ ತೊಂದರೆಯಾಗಯವುದು. ಹಿರಿಯರ ದ್ವೇಷ ಮಾಡುವಿರಿ. ಕುಟುಂಬದಲ್ಲಿ ಅನಾದರವೂ ಇರುವುದು. ತಾಳ್ಮೆಯಿಂದ ವ್ಯವಹರಿಸುವುದು ಮುಖ್ಯವಾಗುವುದು.

ಮಕರ ರಾಶಿ :

ಜೂನ್ ತಿಂಗಳಲ್ಲಿ ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಶುಭಾಶುಭ ಮಿಶ್ರಫಲವು ಇರುವುದು. ಚತುರ್ಥದಲ್ಲಿ ಕುಜ, ಷಷ್ಠದಲ್ಲಿ ಶುಕ್ರ ಹಾಗೂ ಸೂರ್ಯ, ಸಪ್ತಮದಲ್ಲಿ ಬುಧನ ಸಂಚಾರವು ಇರುವ ಕಾರಣ ಭೂಮಿಯ ಲಾಭದಿಂದ ಸುಖವಿದ್ದರೂ ಕಿರಿಕಿರಿಯ ಸಂದರ್ಭವು ಬರುವುದು. ಕುಟುಂಬದಲ್ಲಿ ಹೊಂದಾಣಿಕೆ ಕೊರತೆ ಕಾಣಿಸುವುದು. ತಂದೆಯಿಂದಲೂ ಬೇಸರವುಂಟಾಗುವುದು. ಸಂಗಾತಿಯ ವಿಚಾರದಲ್ಲಿ ಸಮಾಧಾನ ಸಿಗುವುದು. ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರುವುದು. ಸಂಪತ್ತಿನ‌ ಕಡೆ ಗಮನವು ಕಡಿಮೆಯಾಗುವುದು. ಗುರುಬಲವು ನಿಮ್ಮ ನೋವನ್ನು ಕುಗ್ಗುವಂತೆ ಮಾಡುವುದು.

ಕುಂಭ ರಾಶಿ :

ಈ ಮಾಸದಲ್ಲಿ ರಾಶಿ ಚಕ್ರದ ಹನ್ನೆರಡನೇ ರಾಶಿಯಲ್ಲಿ ಜನ್ಮ ತಳೆದವರಿಗೆ ಮಿಶ್ರಫಲವು ಇರಲಿದೆ. ತೃತೀಯಕ್ಕೆ ಕುಜನ ಸಂಚಾರವಾಗಲಿದೆ. ಪಂಚಮದಲ್ಲಿ ಸೂರ್ಯ ಮತ್ತು ಶುಕ್ರರಿದ್ದರೆ, ಬುಧನು ಷಷ್ಠದಲ್ಲಿ ಇರುವನು. ಬಂಧುಗಳಿಂದ ಪೀಡೆಯು ನಾನಾ ಪ್ರಕಾರಗಳಲ್ಲಿ ಇರುವುದು. ಮಕ್ಕಳು ಮತ್ತು ತಾಯಿಯ ನಡುವೆ ಕಲಹವಾಗುವುದು. ಹೆಣ್ಣು ಮಕ್ಕಳ ಪ್ರೀತಿಯು ಸಿಗಲಿದೆ. ನಿಮ್ಮ ಪ್ರತಿಭೆಯನ್ನು ಹೊರ ಹಾಕಲು ಅವಕಾಶವಿರಬಹುದು. ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ಜಯ ಸಿಗುವುದು. ಸಂಪತ್ತು ಗಳಿಸಲು ಶ್ರಮವು ಅಧಿಕವಾಗಿರುವುದು. ಯೋಜನೆಗಳನ್ನು ಸಿದ್ಧ ಮಾಡಿಕೊಳ್ಳಲು ಕಷ್ಟವಾಗುವುದು.

ಮೀನ ರಾಶಿ :

ವರ್ಷದ ಆರನೇ ತಿಂಗಳಾದ ಜೂನ್ ನಲ್ಲಿ ಗ್ರಹಗತಿಗಳ ಬದಲಾವಣೆ ಹೆಚ್ಚಾಗಲಿದೆ. ಕುಜನು ಸ್ವಕ್ಷೇತ್ರಕ್ಕೆ ಅಂದರೆ ಮೇಷಕ್ಕೆ ಬರುವನು. ಸೂರ್ಯ ಹಾಗು ಶುಕ್ರನು ಚತುರ್ಥ ಸ್ಥಾನಕ್ಕೆ ಹೋಗುವರು. ಬುಧನೂ ಪಂಚಮಸ್ಥಾನಕ್ಕೆ ಹೋಗುವನು. ಕುಜನ ಕಾರಣದಿಂದ ನಿಮಗೆ ಸಂಪತ್ತು ಬರುವುದು ವಿಳಂಬವಾಗುವುದು. ಅದಕ್ಕೆ ಮುಖ್ಯ ಕಾರಣ ನೀವೇ ಆಗಿರುತ್ತೀರಿ. ನಿಮ್ಮ ಮಾತು ನಿಯಂತ್ರಣ ತಪ್ಪಿದ ಕಾರಣ ಅದು ಬೇರೆ ಪರಿಣಾಮವನ್ನು ಉಂಟುಮಾಡುತ್ತದೆ. ಸಂಗಾತಿಯಿಂದ ಮತ್ತು ಸಂಗಾತಿಯ ಕಡೆಯಿಂದ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ಮಕ್ಕಳಿಂದ ಕಿರಿಕಿರಿ ಆಗಲಿದೆ. ಮಾನಸಿಕವಾಗಿ ಚಾಂಚಲ್ಯವು ಇರಲಿದ್ದು ಯಾವ ನಿರ್ಧಾರವನ್ನು ಸ್ವಂತ್ರವಾಗಿ ಮಾಡಲಾರಿರಿ.

-ಲೋಹಿತಶರ್ಮಾ, ಇಡುವಾಣಿ – 8762924271 (what’s app only)

Published On - 11:30 am, Wed, 29 May 24

ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ