Horoscope Today May 30, 2024: ಗುರುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ತಿಳಿದುಕೊಳ್ಳಿ

2024 ಮೇ 30ರ ದಿನ ಭವಿಷ್ಯ: ಗುರುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today May 30, 2024: ಗುರುವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ತಿಳಿದುಕೊಳ್ಳಿ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: May 29, 2024 | 8:00 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಗುರುವಾರ (ಮೇ​​​​​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವೈಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ 14:07ರಿಂದ 15:44ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:04 ರಿಂದ ಬೆಳಿಗ್ಗೆ 07:41ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:17 ರಿಂದ ಬೆಳಿಗ್ಗೆ 10:540ರ ವರೆಗೆ.

ಮೇಷ ರಾಶಿ :ಭೂಮಿಯ ಉತ್ಪನ್ನವನ್ನು ತಯಾರಿಸುತ್ತಿದ್ದರೆ ಉತ್ತಮ‌ ಲಾಭವಿದೆ. ಸಾಲಬಾಧೆಯಿಂದ ಕೆಟ್ಟ ಕೆಲಸವನ್ನು ಮಾಡಲು ಪ್ರೇರಣೆಯಾಗಬಹುದು. ಇದರಿಂದ ಇನ್ನಷ್ಟು ತೊಂದರೆ ಸಿಕ್ಕಿಹಾಕಿಕೊಳ್ಳುವ ಸ್ಥಿತಿ ಎದುರಾದೀತು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಅಜ್ಞಾನವನ್ನು ತೋರಿಸಿ, ಅಪಮಾನಗೊಳ್ಳಬೇಡಿ. ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆಯಿದೆ. ನಿಮ್ಮ ಆದಾಯ ಮತ್ತು ಖರ್ಚಿಗೆ ನೀವು ಯೋಜನೆ ಸಿದ್ಧಪಡಿಸಿದರೆ ಅದು ನಿಮಗೆ ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಪ್ರಯತ್ನಗಳಲ್ಲಿ ನೀವು ತೊಡಗಿರುವಿರಿ. ಇದರಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದ್ದಾದರೂ ಪ್ರಲೋಭನೆಗೆ ಒಳಗಾಗುವ ಸಾಧ್ಯತೆ ಇದೆ. ಯಾರದೋ ಕೆಲಸವನ್ನು ಮಾಡಿಕೊಡಬೇಕಾಗುವುದು. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ.

ವೃಷಭ ರಾಶಿ :ಇಂದು ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವುದು. ಹಣಕಾಸನ್ನು ಭದ್ರವಾಗಿ ಇಟ್ಟುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ. ಆತುರದ ತೀರ್ಮಾನ ಹಾಗೂ ಒತ್ತಡಗಳಿಗೆ ಸಿಲಿಕದೇ ಎಚ್ಚರಿಕೆಯಿಂದಿರಿ. ಕೊಟ್ಟ ಸಾಲ ಮರಳಿಬರಹುದು. ಸ್ನೇಹಿತರ ಒತ್ತಾಯ ಮೇರಗೆ ಸುತ್ತಾಟ ನಡೆಸುವಿರಿ. ಆಯಾಸವಾಗಿ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮ ವಿರುದ್ಧ ಸಲ್ಲದ ಮಾತುಗಳು ಕೇಳಿಬರಬಹುದು. ಅಸಮರ್ಪಕ ಸಮಯದ ಹೊಂದಾಣಿಕೆಯಿಂದ ಕಷ್ಟವಾಗುವುದು. ಸಮರ್ಥನೆಯನ್ನು ಕೊಟ್ಟು ಸಮಯವನ್ನು ವ್ಯರ್ಥಮಾಡಬೇಡಿ. ಸ್ವಲ್ಪ‌ಕಾಲದಲ್ಲಿ ಎಲ್ಲವೂ ಸ್ಪಷ್ಟವಾಗಿ ಗೋಚರವಾಗುವುದು. ಆರ್ಥಿಕ ಯೋಜನೆಗಳಿಗೆ ಉತ್ತೇಜನ ದೊರೆಯಲಿದೆ. ನಿಮ್ಮ ಕೆಲವು ಹೊಸ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು. ಸಾಲದ ಬಾಧೆಯು ನಿಮ್ಮ ಮನಸ್ಸನ್ನು ಚುಚ್ಚುವುದು. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ.

ಮಿಥುನ ರಾಶಿ :ಇಂದು ನಿಮಗೆ ಕುಟುಂಬ ಜೊತೆ ಸಲುಗೆಯಿಂದ ಕಾಲವನ್ನು ಕಳೆಯುವ ಮನಸ್ಸಿರುವುದು. ಕಾರ್ಯದ ಒತ್ತಡದಿಂದ ಪೂರ್ತಿಯಾಗಿ ಆಗದೇ ಹೋಗಬಹುದು. ಸಹೋದರರಿಂದ ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಸಿಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣದ ಅಭಾವವಾಗಲಿದೆ. ಜವಾಬ್ದಾರಿಯ ಸ್ಥಾನವನ್ನು ಸರಿಯಾಗಿ ನಿರ್ವಹಿಸಬೇಕಾಗುವುದು. ಇದೇ ನಿಮಗೆ ಛಲವಾಗಿಯೂ ಪರಿಣಾಮ ಬೀರಿ ಉತ್ತಮವಾದ ಯೋಜನೆಗಳನ್ನು ರೂಪಿಸಿ. ಪ್ರೇಮವು ಅಂಕುರಿಸಬಹುದು. ಸ್ಪರ್ಧಾಮನೋಭಾವವಿಲ್ಲದೇ ಎಲ್ಲರ ಜೊತೆ ಖುಷಿಯಿಂದ ಭಾಗವಹಿಸಿ. ಉದಾಸೀನತೆಯೇ ನಿಮ್ಮ ಉದ್ಯೋಗಕ್ಕೆ ಮುಳುವಾಗಬಹುದು. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು.

ಕಟಕ ರಾಶಿ :ನೀವು ಹಣವನ್ನು ಯಾವುದಕ್ಕೂ ಖರ್ಚು ಮಾಡದೇ ಜಿಪುಣ ಎನಿಸಬಹುದು. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವ ಒಂದು ದಿನ – ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ಒತ್ತಡಗಳಿಂದ ನಿಮಗೆ ಸಂಕಟವಾಗಬಹುದು. ಮಕ್ಕಳ ಆರೋಗ್ಯದ ಮೇಲೆ ಗಮನಬೇಕಿದೆ. ಎಲ್ಲ ಹತಾಶೆ, ನೋವು, ಸಂಕಟ, ತುಮುಲಗಳನ್ನು ನಿವಾರಿಸಿಕೊಳ್ಳಲು ಒಳ್ಳೆಯ ಸಮಯವಾಗಿದೆ. ಆಪ್ತರು ಎನಿಸಿದ ಸ್ನೇಹಿತರ ಜೊತೆ ಆಗಿದ್ದ ನೋವನ್ನು ಹೇಳಿಕೊಂಡು ಹಗುರಾಗಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ. ಬೇಕಾದವರನ್ನು ಮಾತಿನಿಂದ ದೂರ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು.

ಸಿಂಹ ರಾಶಿ :ನಿಮ್ಮ ಮುಂಗೋಪವು ನಿಮ್ಮವರಿಗೆ ಮುಜುಗರವಾಗಬಹುದು. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ನೆಮ್ಮದಿಯನ್ನು ಕಾಣುವಾಗಲೇ ಈ ಘಟನೆ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಪ್ರೇಮಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡುವಿರಿ. ನಿಮ್ಮ ಬುದ್ಧಿವಂತಿಕೆಯಿಂದ ಸುಲಭವಾಗಿ ಸೋಲಿಸಲು ಸಾಧ್ಯವಾಗುತ್ತದೆ. ಶತ್ರುಗಳ ಬಗ್ಗೆ ಆತಂಕ ಇರವುದು. ದೊಡ್ಡ ಮೊತ್ತದ ವ್ಯವಹಾರವನ್ನು ಮಾಡುವಾಗ ಭಯವಿರುವುದು. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರಿಚಿತ ಸ್ಥಳದಿಂದ ಭೀತಿಯಾಗಬಹುದು. ಈಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳನ್ನು ತಂದುಕೊಡುವುದು.

ಕನ್ಯಾ ರಾಶಿ :ಇಂದು ಸ್ನೇಹಿತರ ಒತ್ತಾಯಕ್ಕೆ ಮೋಜಿಗಾಗಿ ಹಣವನ್ನು ಹಾಕಿ ಕಳೆದುಕೊಳ್ಳುವಿರಿ. ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಹೆಚ್ಚಿನ ವಿಷಯಗಳ ಮೇಲೆ ನೀವು ಹಿಡಿತ ಸಾಧಿಸಲು ಸಾಧ್ಯವಿದೆ. ಸಂಗಾತಿಯ ಒತ್ತಡದಿಂದ ಕೆಲವು ತೀರ್ಮಾನವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುವುದು. ನಿಮಗೆ ನಿಶ್ಚಯವಿಲ್ಲದೇ ಯಾವುದನ್ನೂ ಮಾಡಲು ಹೋಗುವುದು ಬೇಡ. ಕೆಲಸದ ವೇಗವು ನಿರೀಕ್ಷೆಯಂತೆ ಇರುತ್ತದೆ. ಕಾನೂನಾತ್ಮಕ ವಿಷಯಕ್ಕೆ ಸರಿಯಾದ ಸಲಹೆಯನ್ನು ಪಡೆಯುವಿರಿ. ನೀವು ಸ್ನೇಹಿತನೊಂದಿಗೆ ಯಾವುದೇ ವಿವಾದವನ್ನು ಹೊಂದಿದ್ದರೆ, ಅವರು ನಿಮ್ಮನ್ನು ಸಮಾಧಾನಪಡಿಸಲು ಬರಬಹುದು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡಿ. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಆಗುವುದು. ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ.

ತುಲಾ ರಾಶಿ :ಇಂದು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ವಿದ್ಯಾರ್ಥಿಗಳ ಚಂಚಲ‌ಮನಸ್ಸು ಸಲ್ಲದನ್ನು ಮಾಡಿಸಬಹುದು. ಹತ್ತಿರದವರನ್ನು ಯಾರನ್ನಾದರೂ ಕಳೆದುಕೊಳ್ಳುವ ಸಾಧ್ಯತೆ ಇದೆ.‌ ಎಂದೋ‌ ಮಾಡಿದ ಸಹಾಯ ಇಂದು ನಿಮ್ಮ ಕೈ ಹಿಡಿಯುವುದು. ನೀವು ಆಗದಿರುವ ಕೆಲಸಗಳಿಂದ ನಿರಾಸೆಯನ್ನು ಅನುಭವಿಸುವುದು ಬೇಡ. ಅದು ದೈವೇಚ್ಛೆ ಎಂದು ಬಿಟ್ಟು ಮುಂದಿನ ಕೆಲಸಕ್ಕೆ ತೆರಳಿ. ಕುಟುಂಬದ ಸದಸ್ಯರಿಂದ ನೀವು ಆಶ್ಚರ್ಯಕರ ಉಡುಗೊರೆಯನ್ನು ಪಡೆಯಬಹುದು. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ಕೃತಜ್ಞತೆಯನ್ನು ಸ್ಮರಿಸಿಕೊಳ್ಳುವಿರಿ. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ನಿಮ್ಮ ನಿರ್ಧಾರವನ್ನು ಮತ್ತೊಬ್ಬರಿಗೆ ಹೇರಿ ಖುಷಿಪಡುವಿರಿ.

ವೃಶ್ಚಿಕ ರಾಶಿ :ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟೂ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ವಿಳಂಬವಾಯಿತು ಎಂದು ಬೇಸರಿಸದೇ ಖುಷಿಯಿರಿ. ಯಾವುದನ್ನು ಯಾವಾಗಾ ಮಾಡಿಸಬೇಕು ಎನ್ನುವುದು ಗೊತ್ತಿದೆ ವಿಧಿಗೆ. ಸ್ನೇಹವನ್ನು ಬಲಪ್ರಯೋಗದಿಂದ ಮಾಡಲಾಗದು.‌ ಮನಸ್ಸಿನಲ್ಲಿ ಉಂಟಾಗಬೇಕು. ಸ್ನೇಹಿತರ ಸಾಲವು ತೀರುವುದು. ಪ್ರೇಯಸಿ ಜೊತೆಯಲ್ಲಿ ಹೊರಗೆ ವಾಯುವಿಹಾರಕ್ಕೆ ಹೋಗುವಿರಿ. ನೀವು ವ್ಯವಹಾರದಲ್ಲಿ ಪಾಲುದಾರರಾಗುವುದು ಉತ್ತಮ, ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು.

ಧನು ರಾಶಿ :ಇಂದು ಅನಿರೀಕ್ಷಿತವಾಗಿ ವೈವಾಹಿಕ ಸಂಬಂಧವು ಕೂಡಿ ಬರಬಹುದು. ಬಂದ ಯೋಗವನ್ನು ಬಿಡುವುದು ಬೇಡ. ಇಂದು ಏನನ್ನೂ ಸಾಲವಾಗಿ ಕೊಡುವುದು ಬೇಡ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ನಿಮ್ಮ ಸಹಾಯಕ್ಕೆ ಸಹೋದ್ಯೋಗಿಗಳು ಬರುವರು. ಯಾವುದನ್ನೂ ನೀವು ಸುಮ್ಮನೇ ಹೇಳುವುದು ಬೇಡ. ಗಾಂಭೀರ್ಯವನ್ನು ಬಿಟ್ಟು ನಗುಮೊಗದಲ್ಲಿ ಇರಿ. ನೀವು ಯಾರಿಗಾದರೂ ಮಾತುಕೊಟ್ಟರೆ, ಅದನ್ನು ಪೂರೈಸಲು ಪ್ರಯತ್ನಿಸುವಿರಿ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ. ನಿಮ್ಮ ಸಂಗಾತಿಯ ಜೊತೆ ಚರ್ಚಿಸಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ವ್ಯಾಪಾರಕ್ಕೆ ಯೋಗ್ಯವಾದ ಮಾತು ಇರಲಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗುವುದು. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು.

ಮಕರ ರಾಶಿ :ನಿಮ್ಮ ಅತ್ಯುತ್ಸಾಹಕ್ಕೆ ದೇಹವು ಸಹಕರಿಸದೇ ಇರಬಹುದು. ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ.ದಾಂಪತ್ಯದಲ್ಲಿ ಆಪ್ತಭಾವವಿರಲಿದೆ. ಕಛೇರಿಯಲ್ಲಿ ಆದ ಒತ್ತಡವನ್ನು ಮನೆಗೆ ತರಬೇಡಿ. ವ್ಯವಹಾರದ ವಿಚಾರದಲ್ಲಿ ಶುದ್ಧತೆ ಮುಖ್ಯವಾಗಿ ಬೇಕಿದೆ. ನಿಮ್ಮ‌ ಮೇಲೆ ನಿಮಗಾಗದವರು ಅಪವಾದವನ್ನು ತರಬಹುದು. ಪ್ರೀತಿಯಲ್ಲಿ ದುಃಖವಾಗಬಹುದು. ದೂರದಲ್ಲಿರುವ ನಿಮಗೆ ಮನೆಯ ವಾತಾವರಣ ಹಿತವೆನಿಸಬಹುದು. ಮನಸ್ಸು ಸ್ಥಿರವಾಗಿರಲಿ. ನಿಮ್ಮ ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಿರುವಿರಿ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನಿಮಗೆ ಶುಭ ಸುದ್ದಿಯು ಬರುವುದು. ರಾಜಕೀಯವಾಗಿ ಒತ್ತಡಗಳು ಬರಬಹುದು. ಅದನ್ನು ತಾಳ್ಮೆಯಿಂದ ಎದುರಿಸಬೇಕು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು.

ಕುಂಭ ರಾಶಿ :ನೀವು ಎಂತಹ ವಿಚಾರದಲ್ಲಿ ಪ್ರಸ್ತಾಪಿಸಿದರೂ ವಿವಾದವಾಗುವುದು. ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಜೀವನದ ತೊಂದರೆಗಳನ್ನು ಸಂಬಂಧಿಕರೊಂದಿಗೆ ಹಂಚಿಕೊಳ್ಳಬೇಡಿ. ಸಣ್ಣ ಹುಣ್ಣನ್ನು ದೊಡ್ಡ ಗಾಯ‌ ಮಾಡುವರು. ಗೃಹನಿರ್ಮಾಣ ಅಥವಾ ಗೃಹವನ್ನು ಖರೀದಿಸುವ ಯೋಚನೆ ಮಾಡಲಿದ್ದೀರಿ. ಹೆಚ್ಚು ಕೆಲಸಗಳು ಇರುವುದರಿಂದ ಗೊಂದಲವು ಹೆಚ್ಚಾಗುವುದು. ಸಣ್ಣ ಮೊತ್ತವನ್ನೂ ಹಣವೆಂದೇ ಭಾವಿಸಿ. ಇದೇ ನಿಮಗೆ ಮುಂದಿನ ಸಂಪತ್ತನ್ನು ಕೊಡಿಸುವುದು. ನೀವು ನಿಮ್ಮ ಹಿರಿಯರ ಸಲಹೆಯನ್ನು ಅನುಸರಿಸಿದರೆ ಉತ್ತಮವಾದುದನ್ನು ಪಡೆಯುವಿರಿ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ನಿಮ್ಮ ವಿರೋಧಿಗಳಲ್ಲಿ ಒಬ್ಬರು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ.

ಮೀನ ರಾಶಿ :ಇಂದು ನೀವು ಏಕಾಂತವಾಗಿ ಇರಲು ಆಗದು. ಏನಾದರೂ ಅಡಚಣೆ ಇರುವುದು. ನಿಮ್ಮೊಳಗೆ ಅತೃಪ್ತಭಾವವು ಇರಲಿದೆ‌. ಯಾರದೋ ಕೆಲಸದಲ್ಲಿ ಮಗ್ನರಾಗುವಿರಿ. ಆಲಸ್ಯವು ಮೈತುಂಬಿಕೊಂಡು ನಿದ್ರೆಯನ್ನು ಮಾಡುವ ಮನಃಸ್ಥಿತಿಯಲ್ಲಿ ಇರುವಿರಿ. ಹೊಸ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಯೋಚನೆ ದಟ್ಟವಾಗಿ ಮನದಲ್ಲಿ ಬೇರೂರಲಿದೆ‌. ಆಪ್ತರ ಜೊತೆ ಹೊಸ ಉದ್ಯೋಗದತ್ತ ಗಮನಹರಿಸುವಿರಿ. ಬೆನ್ನು‌ನೋವು ಕಾಣಿಸಿಕೊಂಡೀತು. ಇಂದು ಯಾರನ್ನೂ ಒಪ್ಪಿಕೊಳ್ಳಲಾರಿರಿ.‌ ನೀವು ಇಂದು ಹೊರಗಿನವರಿಗೆ ಯಾವುದೇ ಆಂತರಿಕ ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಬಾರದು. ಸಂಬಂಧಗಳು ಮೊದಲಿಗಿಂತ ಉತ್ತಮವಾಗಿರುತ್ತವೆ. ನಿಮ್ಮ ಯೋಜನೆಗಳನ್ನು ನೀವು ವೇಗಗೊಳಿಸುತ್ತೀರಿ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ನಿಮ್ಮ ಬಗ್ಗೆ ಸರಿಯಾದ ತಿಳಿವಳಿಕೆ ಇರದು.

-ಲೋಹಿತ ಹೆಬ್ಬಾರ್-8762924271 (what’s app only)

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ