AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿ ಭವಿಷ್ಯ; ಆರ್ಥಿಕಸ್ಥಿತಿ ಸುಧಾರಣೆ, ನೆಚ್ಚಿನ ವ್ಯಕ್ತಿಯ ಭೇಟಿ ಮಾಡುವಿರಿ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 07 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಆರ್ಥಿಕಸ್ಥಿತಿ ಸುಧಾರಣೆ, ನೆಚ್ಚಿನ ವ್ಯಕ್ತಿಯ ಭೇಟಿ ಮಾಡುವಿರಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 07, 2024 | 12:10 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 15:40 ರಿಂದ 17:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:19 ರಿಂದ 10:54 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:04ರ ವರೆಗೆ.

ಸಿಂಹ ರಾಶಿ: ಇಂದು ಹಿತಶತ್ರುಗಳಿಂದ ತೊಂದರೆಯಾಗುವುದು. ಹೊಸ ಉದ್ಯೋಗವನ್ನು ಆರಂಭಿಸುವುದಿದ್ದರೆ ಒಳ್ಳೆಯದು. ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ವ್ಯಾಪಾರದ ಕಾರಣದಿಂದ ದೂರ ಸಂಚಾರವನ್ನು ಮಾಡಲಿದ್ದೀರಿ. ನೀಮ್ಮ ವಾಹನವನ್ನು ನೀವೇ ಮಾಡುವುದು ಬೇಡ. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಅಸೂಯೆಪಡಲಿದ್ದಾರೆ. ನಿಮ್ಮ ಸೋಲನ್ನು ಪಾಠವಾಗಿ ಸ್ವೀಕರಿಸಿ. ಸಾಧಿಸುವ ಛಲವಿರುವವಗೆ ಯಾವುದು ಸಾಧ್ಯವಿಲ್ಲವಾಗುತ್ತದೆ? ನಿಮ್ಮನ್ನು ಮೆಚ್ಚಿಸಿ ಕೆಲಸಗಳನ್ನು ಇಂದು ಮಾಡಿಸಿಕೊಳ್ಳುವರು. ಗುರಿಯನ್ನು ಯಾರಾದರೂ ತಪದಪಿಸಬಹಿದಿ. ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ಖರೀದಿಯನ್ನು ನೀವು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ನಿಮ್ಮದಾದ ಜೀವನಕ್ರಮವು ನಿಮಗೆ ಹಿಡಿಸದೇ ಇರಬಹುದು.

ಕನ್ಯಾ ರಾಶಿ: ತುಂಬಾ ದಿನಗಳಿಂದ ಮನೆಗೆ ಅಗತ್ಯವಿರುವ ಹೊಸ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಮನೆಯ ಹಿರಿಯರ ವಿರುದ್ಧ ಮಾತನಾಡುವಿರಿ. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳ ಮಾರಾಟದಿಂದ ಹೆಚ್ಚು ಲಾಭವಾಗಲಿದೆ. ಯಾವ ಮಾತನ್ನೂ ಯೋಚಿಸದೇ ಆಡಬೇಡಿ. ಮುಂದೆ ಇದೇ ತಪ್ಪಾದೀತು. ಸಂಗಾತಿಯ ಸೌಂದರ್ಯಕ್ಕೆ ಮರುಳಾಗಿ ಹೋಗುವಿರಿ. ವಕೀಲವೃತ್ತಿಯಲ್ಲಿ ಇರುವವರಿಗೆ ಜಯವು ಸಿಗಲಿದೆ. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವುದು ಸರಿಯಾಗದು. ನೂತನ ಗೃಹ ನಿರ್ಮಾಣದ ಬಗ್ಗೆ ನುರಿತವರ ಜೊತೆ ಚರ್ಚೆಯನ್ನು ನಡೆಸುವು ಯೋಚನೆ ಇರುವುದು. ವಾಹನ ಓಡಾಟದಿಂದ ನಿಮಗೆ ಸುಖವಿರದು. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗಬಹುದು.

ತುಲಾ ರಾಶಿ: ಇಂದು ನಿಮ್ಮ ಸರ್ಕಾರದ ಕಾರ್ಯಗಳು ನಿಧಾನವಾಗುವುದು. ಮನಸ್ಸು ಅತಿಯಾದ ಗೊಂದಲದಿಂದ ಇರುವುದು. ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ಸಂಗಾತಿಯ ಜೊತೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯವು ಕಳೆದುಹೋಗುವುದು. ಇಂದು ಭೂಮಿಯನ್ನು ಮಾರುವುದಿದ್ದರೆ ಉತ್ಯಮ ಬೆಲೆಗೆ ಖರೀದಿಯಾಗುವುದು. ಅತಿಯಾದ ಸಿಹಿಯನ್ನು ತಿಂದು ದೇಹವನ್ನು ಕೆಡಿಸಿಕೊಳ್ಳಬೇಡಿ. ವ್ಯಾಪಾರದಲ್ಲಿ ತೊಡಕು ಬರಬಹುದು. ಆದರೆ ಇದನ್ನು ನಿವಾರಿಸಿಕೊಳ್ಳುವ ತಂತ್ರವು ನಿಮಗೆ ಅನುಭವದಿಂದ ಸಿದ್ಧವಾಗಿರುವುದು. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ತಪ್ಪಿದ ಯೋಚನೆಯಿಂದ ನೀವು ಸರಿಯಾಗಬೆರಕಾಗುವುದು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು.

ವೃಶ್ಚಿಕ ರಾಶಿ: ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆಗಳನ್ನು ತಿರಸ್ಕರಿಸಬೇಡಿ. ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆದು ನೋವನ್ನು ಹಂಚಿಕೊಳ್ಳುವರು. ಬಹಳ ದಿನಗಳಿಂದ ಹೋಗಬೇಕೆಂದುಕೊಂಡ ಸ್ಥಳಕ್ಕೆ ಹೋಗುವಿರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ‌ ಇಟ್ಟುಕೊಂಡವರಿಗೆ ನಿಜಸ್ಥಿತಿಯನ್ನು ತಿಳಿಸುವಿರಿ. ಆರ್ಥಿಕಸ್ಥಿತಿಯು ಸುಧಾರಿಸುವುದು. ನಿಮ್ಮ ನೆಚ್ಚಿನ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಸೋಮಾರಿತನ ಬಿಟ್ಟು ಕೆಲಸಕ್ಕೆ ಪ್ರಯತ್ನಿಸಿ. ನಿಮ್ಮವರ ಆರೋಗ್ಯದ ವ್ಯತ್ಯಾಸದಿಂದ ಹಣವನ್ನು ಖರ್ಚು ಮಾಡಬೇಕಾಗುವುದು. ತೊಂದರೆಗೆ ಸಿಕ್ಕಿಕೊಳ್ಳಲು ನೀವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಇನ್ನೊಬ್ಬರಿಗೆ ನಿಮ್ಮನ್ನು ಹೋಲಿಸಿಕೊಂಡು ಬೇಸರಿಸುವಿರಿ. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು.

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು