
ಹೂಡಿಕೆಯನ್ನು ಮಾಡಲು ಒತ್ತಡ ಬರಬಹುದು. ದುರಾಸೆ ಪಡದೆ ಬಂದಿದ್ದನ್ನು ಸುಮ್ಮನೇ ಸ್ವೀಕರಿಸಿ. ಜೀವನಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದವು ಆಗಬಹುದು. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡುವಿರಿ. ತಪ್ಪನ್ನು ಒಪ್ಪಿಕೊಂಡು ಮೆಚ್ಚುಗೆ ಪಡೆಯುವಿರಿ.
ಭೂಮಿಗೆ ಸಂಬಂಧಿತ ಕೆಲಸವನ್ನು ಪೂರ್ಣಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಕೊಡಿ. ಕಚೇರಿ ರಾಜಕೀಯದಿಂದ ದೂರವಿರುವಿರಿ ಹಾಗೂ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯಿರಿ. ಬಹಳ ದಿನದಿಂದ ಅಂದುಕೊಂಡ ಸ್ಥಳಕ್ಕೆ ಹೋಗುವಿರಿ. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ. ಸ್ನೇಹ ಸಂಬಂಧಗಳನ್ನು ದೂರ ಮಾಡಿಕೊಳ್ಳುವಿರಿ. ಸುಮ್ಮನೆ ಕಾಲಹರಣವಾಗುವುದು ನಿಮಗೆ ಗೊತ್ತಾಗದು.
ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳುವಿರಿ. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳನ್ನು ನೋಡಿ. ಹಣ ಸಂಪಾದಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿರಿ. ಇಂದು ವ್ಯವಹಾರದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಲಾಗುವುದು. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಇಂದಿನ ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ವಾಹನ ಸವಾರರು ಜಾಗರೂಕತೆ ಅವಶ್ಯಕ.
ಇಂದು ಅವಶ್ಯಕತೆಗಳ ಪೂರೈಕೆಯು ಕಷ್ಟ ಎನಿಸಬಹುದು. ಸಂತೋಷಕ್ಕಾಗಿ ನೀವು ಕೆಲವನ್ನು ತ್ಯಾಗಮಾಡಬೇಕಾದೀತು. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ಅನಿರೀಕ್ಷಿತವಾಗಿ ಸಿಗಬಹುದು.
ಹಳೆಯ ಸ್ನೇಹಿತರನ್ನು ಆಕಸ್ಮಿಕವಾಗಿ ಭೇಟಿ ಮಾಡುವ ಸಾಧ್ಯತೆಯಿದೆ. ಎಂದಿಗಿಂತ ವ್ಯಾಪಾರದಲ್ಲಿ ಹಿನ್ನಡೆ ಇರಲಿದೆ. ಚಿಂತೆಯು ಕಾಡಬಹುದು. ಏನೇ ಮಾಡಿದರೂ ಹೊಸ ಮಾದರಿಯಲ್ಲಿ ಅದು ಇರಲಿದೆ. ಪ್ರಯಾಣದಲ್ಲಿ ತೊಂದರೆಗಳು ಬಂದರೂ ತಲುಪಬೇಕಾದ ಸ್ಥಳಕ್ಕೆ ಹೋಗುವಿರಿ. ಸರ್ಕಾರಿ ನೌಕರರು ಅಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾದೀತು. ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಕಛೇರಿಯ ಕೆಲಸವನ್ನು ಹಂಚಿಕೊಂಡು ಮಾಡುವಿರಿ.
ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಅತಿಯಾದ ಚಿಂತೆಯು ನಿಮ್ಮ ಜೊತೆಗಿರುವವರ ಮನಸ್ಸನ್ನೂ ಕೆಡಿಸೀತು. ಅತಿಯಾದ ವಿಷಾದದಿಂದ ಯಾರ ಜೊತೆಯೂ ಬೆರೆಯುವ ಮನಸ್ಸಿರದು. ಉದ್ಯೋಗದ ಬದಲಾವಣೆ ಆಗಲಿದ್ದು ಸರಿಯಾದ ಪ್ರತ್ಯುತ್ತರ ಸಿಗದೇ ಬೇಸರವಾಗುವುದು. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗಮಾಡಬಹುದು. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆಯನ್ನು ತಿಳಿಯುವಿರಿ. ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು.
ಕೆಲವರಿಗೆ ಪೂರ್ವಿಕರ ಆಸ್ತಿಯಿಂದ ಆರ್ಥಿಕ ಲಾಭವಾಗಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗುವುದು. ಉದರಬಾಧೆಯಿಂದ ಕಷ್ಟಪಡುವಿರಿ. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ನಿಮ್ಮ ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು.
ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ನಿಮ್ಮ ಕೆಲಸಗಳಿಗೆ ಆತ್ಮಸಾಕ್ಷಿಯೇ ಮುಖ್ಯವಾಗಿರುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಆಪ್ತರ ಜೊತೆ ಮಾಡಿದ ಸಮಾಲೋಚನೆಯಿಂದ ಮನಸ್ಸಿಗೆ ಸಂತೋಷ ಸಿಗುವುದು. ವಾಸಸ್ಥಳದ ಬದಲಾವಣೆಯಿಂದ ಹೊಂದಿಕೊಳ್ಳುವುದು ಕಷ್ಟವಾದೀತು.
ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಮಿತ್ರರ ಮನಸ್ತಾಪವನ್ನು ನೀವು ಬಗೆಹರಿಸಿಕೊಳ್ಳುವಿರಿ. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುಬಿರಿ. ಮಕ್ಕಳ ಬಗ್ಗೆ ನಿಮ್ಮ ಭಾವನೆ ತಪ್ಪಾಗಬಹುದು.
ಸಂಬಂಧಗಳಲ್ಲಿ ಉತ್ತಮ ಪರಸ್ಪರ ತಿಳುವಳಿಕೆ ಇರುತ್ತದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳ ನಡುವೆಯೂ ಯಶಸ್ಸನ್ನು ಪಡೆಯುತ್ತಾರೆ. ಸ್ನೇಹಿತರು ನಿಮ್ಮನ್ನು ಅಪಮಾನ ಮಾಡಬಹುದು. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಬಹುದು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ. ನಿಮ್ಮ ವರ್ತನೆಯನ್ನು ಇತರರು ಅನುಕರಿಸಿಯಾರು.
ಯಾವುದೇ ಅಡೆತಡೆಯಿಲ್ಲದೆ ಎಲ್ಲಾ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಮನೆಯ ಬಗ್ಗೆಯೆರ ಹೆಚ್ಚು ಯೋಚಿಸುವಿರಿ. ಅನಾರೋಗ್ಯವು ಉತ್ಸಾಹವನ್ನು ಕಡಿಮೆ ಮಾಡುವುದು. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವರು. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಆಪ್ತರ ಮಾತಿನ ಮೇಲೆ ಭರವಸೆ ಇಡಿ.
ಎಲ್ಲರ ಜೊತೆಗೂ ವಾಗ್ವಾದಕ್ಕೆ ಹೋಗುವುದು ಬೇಡ. ಯಾರಿಗೂ ದೊಡ್ಡ ಮೊತ್ತದ ಸಾಲ ನೀಡಬೇಡಿ. ಹಿಂದಿರುಗಿಸಲು ನೀವು ತೊಂದರೆಗಳನ್ನು ಎದುರಿಸಬಹುದು. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು. ಯಾರಿಂದಲಾದರೂ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಇಂದು ಸಹಾಯವನ್ನು ಪಡೆಯುವಿರಿ. ಹಣದ ವಿಚಾರದಲ್ಲಿ ನಿಮಗೆ ಸರಿಯಾದ ಮಾರ್ಗದರ್ಶನ ಬೇಕಾಗುವುದು.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯಾಘಾತ, ಕರಣ : ವಣಿಜ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:07 – 09:36, ಯಮಗಂಡ ಕಾಲ 11:06 – 12:35, ಗುಳಿಕ ಕಾಲ 14:04 – 15:34
-ಲೋಹಿತ ಹೆಬ್ಬಾರ್ – 8762924271 (what’s app only)