Daily Horoscope: ಹಣದ ವಿಚಾರದಲ್ಲಿ ಆತುರಪಡುವುದು ಒಳ್ಳೆಯದಲ್ಲ
21 ಮಾರ್ಚ್ 2025: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಹಣದ ವಿಚಾರದಲ್ಲಿ ಆತುರಪಡುವುದು ಒಳ್ಳೆಯದಲ್ಲ. ವ್ಯಾಪಾರಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಯಾರನ್ನೂ ನಿಮ್ಮ ದೃಷ್ಟಿಯಿಂದ ಅಳೆಯಲು ಆಗದು. ಮಾರ್ಚ್ 21ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಬೆಂಗಳೂರು, ಮಾರ್ಚ್ 21, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೂಲಾ, ಯೋಗ : ಸಿದ್ಧಿ, ಕರಣ : ಭದ್ರ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:09 – 12:40, ಯಮಘಂಡ ಕಾಲ 15:41 – 17:12, ಗುಳಿಕ ಕಾಲ 08:08 – 09:39.
ಮೇಷ ರಾಶಿ: ಇಂದು ನಿಮ್ಮ ಸಂಗಾತಿಯು ನಿಮಗೆ ಅಚ್ಚರಿಯ ಉಡಯಗೊರೆಯನ್ನು ಕೊಡಬಹುದು. ಇಂದು ಹೂಡಿಕೆ ಮಾಡಲು ಉತ್ತಮ ದಿನವಲ್ಲ. ಸಣ್ಣ ಮೊತ್ತವನ್ನು ಬೇಕಿದ್ದರೆ ಹಾಕಿ. ಮನೆಯಲ್ಲಿ ವಾತಾವರಣ ಸ್ವಲ್ಪ ಉದ್ವಿಗ್ನವಾಗಿರುತ್ತದೆ. ಕುಟುಂಬ ಸದಸ್ಯರ ಜೊತೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಹಣದ ವಿಚಾರದಲ್ಲಿ ಆತುರಪಡುವುದು ಒಳ್ಳೆಯದಲ್ಲ. ವ್ಯಾಪಾರಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಯಾರನ್ನೂ ನಿಮ್ಮ ದೃಷ್ಟಿಯಿಂದ ಅಳೆಯಲು ಆಗದು. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಪ್ರೇಯಸಿಯ ನೆನಪನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೆಲವು ಸಂಗತಿಯನ್ನು ಅನುಭವಿಸದೇ ಇರಲಾಗದು. ಕಾರಣವಿಲ್ಲದೇ ಕೋಪವು ಬರುವುದು. ಅತಿಯಾದ ಮೋಹದಿಂದ ಹೊರಬರುವಿರಿ. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು.
ವೃಷಭ ರಾಶಿ: ಇಂದು ನೀವು ತುಂಬಾ ಸಮತೋಲನದಲ್ಲಿ ಇರಬೇಕಾದೀತು. ತಂದೆಯ ಆರೋಗ್ಯದ ಕುಸಿತದಿಂದಾಗಿ ಚಿಂತೆ ಮಾಡುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ಇಂದಿನ ಕಾರ್ಯಗಳಲ್ಲಿ ವಿಳಂಬವಾದರೂ ಪೂರ್ಣಗೊಳಿಸುವಿರಿ. ಪ್ರಮುಖ ವಿಚಾರಗಳಲ್ಲಿ ಸಹೋದರರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಭೂಮಿಯ ವ್ಯವಹಾರದಲ್ಲಿ ಅಧಿಕ ಒತ್ತಡ. ಹೆಚ್ಚು ಕೆಲಸ ಮಾಡುವುದನ್ನು ಬಿಟ್ಟು ವಿಶ್ರಾಂತಿ ಪಡೆಯುವಿರಿ. ಕೆಲಸದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಎಲ್ಲರ ಮೇಲೂ ಸಿಟ್ಟಾಗುವಿರಿ. ಮನಸ್ಸು ಸ್ತಿಮಿತವನ್ನು ತಪ್ಪಬಹುದು. ಸಹನೆಯು ನಿಮ್ಮ ಅಸ್ತ್ರವಾಗಬೇಕಾಗಬಹುದು. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ತೊಂದರೆಯಾಗುವುದು. ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು.
ಮಿಥುನ ರಾಶಿ: ಇಂದು ನೀವು ಯಾರ ಸಂಗಡವೂ ವಾದವನ್ನು ಮಾಡುವ ಸಂದರ್ಭವು ಬರಲಿದ್ದು, ಮಿತಿಮೀರಿದಾಗ ಹಿಂದಿರುಗುವುದು ಉತ್ತಮ. ಕೆಲಸದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಬಂಧು ಮಿತ್ರರ ಭೇಟಿಯಿಂದ ಸಂತಸ. ನಿಮ್ಮ ಮಾತುಗಳಿಂದ ಹಿತಶತ್ರುಗಳ ನಿರ್ಮಾಣವಾಗಲಿದೆ. ಉದ್ಯೋಗಗಳಲ್ಲಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಿರಿ. ದೂರದ ಪ್ರಯಾಣದ ಸೂಚನೆಗಳು. ಇಂದು ಹಿರಿಯರಿಂದ ಯಾವುದೇ ವಿಶೇಷ ಬೆಂಬಲವನ್ನು ಪಡೆಯುವುದಿಲ್ಲ. ಈ ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ವಿವಾಹದಲ್ಲಿ ನಿರಾಸಕ್ತಿಯನ್ನು ತೋರಿಸುವಿರಿ. ಹಿರಿಯರ ಕೋಪಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಇಂದು ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ.
ಕರ್ಕಾಟಕ ರಾಶಿ: ಇಂದು ವೈಯಕ್ತಿಕ ಸಂಬಂಧಗಳು ಉತ್ತಮವಾಗಿಸಿಕೊಳ್ಳುವಿರಿ. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಇರುತ್ತದೆ. ಇಂದುಬನಿಮ್ಮ ಸಂಗಾತಿ ಕೂಡ ಉತ್ತಮ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ನಿಮ್ಮ ಆಲೋಚನೆಯನ್ನು ಬದಲಾಯಿಸುವುದು ಉತ್ತಮ. ನಿಗದಿತ ಸಮಯದಲ್ಲಿ ಕೆಲಸಗಳು ಪೂರ್ಣಗೊಳ್ಳಲಾರದು. ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ತಾಯಿಯ ಅನಾರೋಗ್ಯದ ಚಿಕಿತ್ಸೆಗೆ ಓಡಾಡಬೇಕಾಗಬಹುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಕುಟುಂಬದ ಕೆಲವು ವಿಚಾರವು ನಿಮಗೆ ಹಿಡಿಸದೇಹೋದೀತು. ಸಂಬಂಧವನ್ನು ಆತ್ಮೀಯಗೊಳಿಸಿಕೊಳ್ಳಲು ಪ್ರಯತ್ನಪಡುವಿರಿ.
ಸಿಂಹ ರಾಶಿ; ಇಂದು ಅವಿವಾಹಿತರಿಗೆ ವಿವಾಹ ಪ್ರಸ್ತಾಪದ ಸಾಧ್ಯತೆಯಿದೆ. ಬುದ್ಧಿವಂತಿಕೆಯಿಂದ ಇಂದು ಉತ್ತಮ ಯಶಸ್ಸನ್ನು ಸಾಧಿಸಬಹುದು. ಶತ್ರುಗಳಿಗೆ ನೀವು ಸೂಕ್ತವಾದ ಉತ್ತರವನ್ನು ನೀಡುತ್ತೀರಿ. ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ವಿಶೇಷವಾಗಿ ತಮ್ಮ ಕುಟುಂಬದ ಸದಸ್ಯರ ಜೊತೆ ಧಾರ್ಮಿಕ ಸೇವಯಲ್ಲಿ ಭಾಗವಹಿಸುವಿರಿ. ನಿಮ್ಮ ಮಾತಿನಿಂದ ಹಿತಶತ್ರುಗಳ ಉತ್ಪಾದನೆ ಆಗಲಿದೆ. ಇಂದು ಸಂಪತ್ತಿನ ಹೆಚ್ಚಳವಾಗಲಿದೆ. ಇತ್ತೀಚಿನ ಹೂಡಿಕೆಯಿಂದ ಅಧಿಕ ಲಾಭವನ್ನು ಪಡೆಯಬಹುದು. ಇಂದು ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ದೂರದ ಬಂಧುಗಳ ಆಗಮನವು ಆಗಲಿದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ನಿಮಗೆ ಗೊತ್ತಿಲ್ಲದೇ ಚರಾಸ್ತಿಯು ಇಲ್ಲವಾಗಬಹುದು. ಇಷ್ಟವಿಲ್ಲದಿದ್ದರೂ ಕೆಲಸವನ್ನು ಮಾಡಬೇಕಾದೀತು. ಉದ್ವಿಗ್ನತೆಗೆ ದಾರಿ ಮಾಡಿಕೊಡದೇ ಸಮಚಿತ್ತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಇರುವಿಕೆಯನ್ನು ತೋರಿಸುವ ಪ್ರಯತ್ನ ಮಾಡುವಿರಿ.
ಕನ್ಯಾ ರಾಶಿ; ಇಂದು ಅತಿಯಾದ ಆತ್ಮವಿಶ್ವಾಸದಿಂದ ಆಗುವ ತೊಂದರೆಯನ್ನು ನೀವೇ ನೋಡುವಿರಿ. ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ ಉತ್ತಮ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಲಿದೆ. ಸ್ನೇಹಿತರ ಸಹಾಯದಿಂದ ಹಣಕಾಸಿನ ತೊಂದರೆಗಳನ್ನು ನಿವಾರಿಸುವಿರಿ. ದೀರ್ಘಾವಧಿಯ ಸಾಲಗಳನ್ನು ಇತ್ಯರ್ಥಗೊಳಿಸಿ ನೆಮ್ಮದಿ ಕಾಣುವಿರಿ. ಕುಟುಂಬ ಸದಸ್ಯರ ಜೊತೆಗಿನ ಸಂಬಂಧವು ಸಾಮರಸ್ಯದಿಂದ ಉಳಿಯುತ್ತದೆ. ದೂರದ ಕನಸನ್ನು ನನಸಾಗಿಸಲು ಪ್ರಯತ್ನ ಆರಂಭ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ಪರೀಕ್ಷೆಯ ವಿದ್ಯಾರ್ಥಿಗಳು ನಿರ್ಧರಿಸಿ. ಭೂಮಿಯ ವ್ಯವಹಾರವು ಗೊಂದಲಮಯ ಆಗಬಹುದು.