Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರು ಉದ್ಯೋಗದ ಒತ್ತಡದಿಂದ ಅನಾರೋಗ್ಯದಿಂದ ಬಳಲುವಿರಿ

21 ಮಾರ್ಚ್​​​ 2025: ಶುಕ್ರವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ವ್ಯಾಪಾರಸ್ಥರಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಹಾಗಾದರೆ ಮಾರ್ಚ್ 21ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ಉದ್ಯೋಗದ ಒತ್ತಡದಿಂದ ಅನಾರೋಗ್ಯದಿಂದ ಬಳಲುವಿರಿ
ಈ ರಾಶಿಯವರು ಉದ್ಯೋಗದ ಒತ್ತಡದಿಂದ ಅನಾರೋಗ್ಯದಿಂದ ಬಳಲುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 21, 2025 | 12:12 AM

ಬೆಂಗಳೂರು, ಮಾರ್ಚ್​ 21, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೂಲಾ, ಯೋಗ : ಸಿದ್ಧಿ, ಕರಣ : ಭದ್ರ, ಸೂರ್ಯೋದಯ – 06 – 37 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 11:09 – 12:40, ಯಮಘಂಡ ಕಾಲ 15:41 – 17:12, ಗುಳಿಕ ಕಾಲ 08:08 – 09:39.

ತುಲಾ ರಾಶಿ: ಇಂದು ಸಂಗಾತಿಯನ್ನು ಹುಡುಕುತ್ತಿದ್ದರೆ ನಿಮಗೆ ನಿರಾಶೆಯಾಗುತ್ತದೆ. ವಿವಾಹಿತರಾಗಿದ್ದರೆ ಇಂದು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೆರವಿನಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತೀರಿ. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಹಣವನ್ನೂ ಖರ್ಚು ಮಾಡಬೇಕಾದೀತು. ಸಂಗಾತಿಯ ಒರಟು ಮಾತಿನಿಂದ ಬೇಸರವಾಗಲಿದೆ. ನಿಮಗೆ ಯಾವ ಸಂಬಂಧವೇ ಇಲ್ಲದಿದ್ದರೂ ಅಪವಾದವು ಬರಲಿದೆ. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿ ಉಂಟಾಗುವುದು. ವಾಹನದ ಮೇಲಿನ ಪ್ರೀತಿ ವ್ಯಾಮೋಹವಾದೀತು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು. ವೃತ್ತಿಯನ್ನು ಉತ್ಸಾಹದಿಂದ ಮಾಡುವಿರಿ. ಸಂಗಾತಿಯು ನಿಮಗೆ ಕೆಲವು ಉಪಯುಕ್ತ ಮಾತುಗಳನ್ನು ಹೇಳಬಹುದು.

ವೃಶ್ಚಿಕ ರಾಶಿ: ಇಂದು ಸ್ವಲ್ಪ ಸಮಯದವರೆಗೆ, ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಸರಿಯಾಗಿ ಆಗುತ್ತಿಲ್ಲ. ಅವರ ಆಕ್ರಮಣಕಾರಿ ಸ್ವಭಾವದಿಂದಾಗಿ ನಿಮ್ಮಿಬ್ಬರ ನಡುವಿನ ಅಂತರವು ಗಣನೀಯವಾಗಿ ಹೆಚ್ಚಾಗಿದೆ. ಆದರೆ ಇಂದು ಅವರ ಮನಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗಿದೆ. ಶ್ರಮಕ್ಕೆ ಸರಿಯಾದ ಮನ್ನಣೆ ಸಿಗುವುದಿಲ್ಲ. ಹಣಕಾಸಿನ ವ್ಯವಹಾರಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಪಾಲುದಾರಿಕೆ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ನೀವು ಇಂದು ಹಣಕ್ಕೆ ಸಂಬಂಧಿಸಿದ ಕಾಳಜಿಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ಏಕೆಂದರೆ ನಿಮ್ಮ ಪ್ರಯತ್ನದಿಂದಾಗಿ ಹೊಸ ಆದಾಯದ ಮೂಲವಿರುತ್ತದೆ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾದೀತು. ಆಸ್ತಿಯ ಕಲಹವನ್ನು ಮನೆಯಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ.

ಧನು ರಾಶಿ: ಇಂದು ನೀವು ಸಕ್ರಿಯರಾಗಿ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಉದ್ಯೋಗಿಗಳಿಗೆ ಇದು ಶುಭ ದಿನವಾಗಿರುತ್ತದೆ. ನೀವು ದೀರ್ಘಕಾಲ ಆಶಿಸುತ್ತಿದ್ದ ಬಡ್ತಿಯು ನಿಮ್ಮ ಹಾದಿಗೆ ಬರಬಹುದು. ವ್ಯಾಪಾರಿಗಳಿಗೆ ಅಧಿಕ ಲಾಭವನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ನಿರೀಕ್ಷೆಯಂತೆ ಇರುತ್ತದೆ. ವೃತ್ತಿಪರ ವ್ಯವಹಾರದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಹಣಕಾಸಿನ ವಿಷಯದಲ್ಲಿ ಇಂದು ಉತ್ತಮ ದಿನವಾಗಲಿದೆ. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ಸ್ವಲ್ಪ ನಿಮ್ಮ ಧೈರ್ಯವು ಕುಂದಬಹುದು. ಸ್ವಂತ ಉದ್ಯಮದ ಕಾರಣಕ್ಕೆ ಹೊರಗೆ ಹೋಗಬೇಕಾಗುವುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಹಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಉದ್ಯೋಗದ ಕಿರಿಕಿರಿಯನ್ನು ನೀವು ಸಹಿಸಲಾರಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ.

ಮಕರ ರಾಶಿ; ಇಂದು ನಿಮ್ಮ ವೈಯಕ್ತಿಕ ಕಾರ್ಯಕ್ಕೆ ಮುಖ್ಯವಾದ ದಿನವಾಗಿರುತ್ತದೆ. ವಿಶೇಷವಾಗಿ ವ್ಯಾಪಾರಸ್ಥರು ಇಂದು ತಮ್ಮ ಸಂಪರ್ಕಗಳನ್ನು ಹೆಚ್ಚಿಸಲು ಅವಕಾಶವನ್ನು ಪಡೆಯಬಹುದು. ಕೆಲಸದಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಕೆಲವೊಮ್ಮೆ ಆತುರದ ಆಲೋಚನೆಗಳಿಂದ ತೊಂದರೆ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಇತರರೊಂದಿಗೆ ವಿವಾದಗಳಿಂದ ದೂರವುದು ಉತ್ತಮ. ವ್ಯರ್ಥವಾಗಲಿರುವ ಖರ್ಚುಗಳೇ ಹೆಚ್ಚಾಗುತ್ತವೆ. ನಿಮ್ಮ ವೃತ್ತಿಜೀವನವು ಹೊಸ ತಿರುವು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದೆ. ಕುಟುಂಬ ಸದಸ್ಯರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು. ಸಹೋದರಿಯರಿಗೆ ಉಡುಗೊರೆ ನೀಡಿ ಸಂತೋಷಪಡಿಸುವಿರಿ. ಹಿತಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಒಳಗೊಳಗೇ ಸಂತೋಷಪಡುವರು.

ಕುಂಭ ರಾಶಿ: ಇಂದು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವರು. ಪರೀಕ್ಷೆಯನ್ನು ಏಕಾಗ್ರತೆಯಿಂದ ಎದುರಿಸಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ. ಇಂದು ನೀವು ಭಾವನಾತ್ಮಕ ವಿಚಾರಕ್ಕೆ ಕಟ್ಟುಬೀಳುವಿರಿ. ಮಕ್ಕಳು ಶಿಕ್ಷಣ ಮತ್ತು ಉದ್ಯೋಗ ವಿಷಯಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಎಲ್ಲಾ ಕಡೆಯಿಂದ ಆದಾಯ ಬರುತ್ತದೆ. ವೃತ್ತಿಪರ ಉದ್ಯೋಗಗಳು ತೃಪ್ತಿಕರವಾಗಿ ಸಾಗುತ್ತವೆ. ಸಣ್ಣ ವಿಷಯವೂ ನಿಮ್ಮನ್ನು ನೋಯಿಸಬಹುದು. ನೀವು ತುಂಬಾ ಅಸಮಾಧಾನಗೊಂಡಿದ್ದರೂ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳನ್ನು ಕೇಳಿ ಪಡೆಯುವಿರಿ.

ಮೀನ ರಾಶಿ; ಇಂದು ನಿಮ್ಮ ಮನಃಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಇಂದಿನ ಪ್ರಮುಖ ಕೆಲಸವನ್ನು ನಾಳೆ ಮುಂದೂಡುವುದು ನಿಮಗೆ ಸರಿಹೊಂದದು. ವ್ಯಾಪಾರಸ್ಥರಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ನಿರುದ್ಯೋಗಿಗಳಿಗೆ ಸಿಗಬೇಕಾದ ಅವಕಾಶಗಳು ಸಿಗದೇ ಹತಾಶೆ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ವಿದ್ಯುತ್ ಉಪಕರಣಗಳ ಉದ್ಯಮದಿಂದ ಲಾಭವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದ ತೀರ್ಮಾನವು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಕಾರ್ಯದ ಆರಂಭವೇ ಸರಿಯಾಗಿ ಇರುವುದರಿಂದ ಗುರಿಯೂ ತಪ್ಪಬಹುದು.