Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಉದ್ಯೋಗಿಗಳ ಆದಾಯದಲ್ಲಿ ಏರಿಕೆ, ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ!

22 ಮಾರ್ಚ್​​​ 2025: ಶನಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮದಲ್ಲದ ವೃತ್ತಿಯಲ್ಲಿ ಸೇರಿಕೊಂಡು ತೊಳಲಾಟ ನಡೆಸುವಿರಿ. ಸತತ ಪ್ರಯತ್ನದಿಂದ ಆದಾಯ ಹಾಗೂ ಖರ್ಚನ್ನು ಸರಿಯಾಗಿ ತೂಗಿಸಲು ತಿಳಿಯುವಿರಿ. ಮಾರ್ಚ್​​​ 22ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಉದ್ಯೋಗಿಗಳ ಆದಾಯದಲ್ಲಿ ಏರಿಕೆ, ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ!
ಉದ್ಯೋಗಿಗಳ ಆದಾಯದಲ್ಲಿ ಏರಿಕೆ, ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ!
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 22, 2025 | 12:10 AM

ಬೆಂಗಳೂರು, ಮಾರ್ಚ್​ 22, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ಬಾಲವ, ಸೂರ್ಯೋದಯ – 06 – 36 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:38 – 11:09, ಯಮಘಂಡ ಕಾಲ 14:10 – 15:41, ಗುಳಿಕ ಕಾಲ 06:37 – 08:07.

ಮೇಷ ರಾಶಿ: ಯಾವ ಅಹಿತಕರ ಘಟನೆಯೂ ನಿಮ್ಮ ಮನಸ್ಸನ್ನು ಕೆಡಿಸದು. ನಿಮ್ಮ ಕಠಿಣ ಪರಿಶ್ರಮವು ನೆನಪಿಗೆ ಬರಬಹುದು. ಭಡ್ತಿಯ ನಿರೀಕ್ಷೆಯಲ್ಲಿಯೇ ಇರುವಿರಿ. ಸ್ವತಂತ್ರವಾದ ನಿರ್ಧಾರವು ನಿಮಗೆ ಪೂರಕವೂ ಆಗಿ, ನೆಮ್ಮದಿಯನ್ನು ಕೊಡುವುದು‌. ಆದಾಯದ ಮೂಲವು ಗೌಪ್ಯವಾಗಿ ಇಟ್ಟುಕೊಳ್ಳಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಏರಿಕೆ. ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆಚಾತುರ್ಯದಿಂದ ಏನನ್ನೂ ಮಾಡಲು ಹೋಗುವುದು ಬೇಡ. ದಿನದ ಕಾರ್ಯವನ್ನು ನೀವು ಅವಲೋಕಿಸಿಕೊಂಡು ಹೆಜ್ಜೆ ಇಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗದು. ನಿಮ್ಮ ಅಭಿಮಾನಕ್ಕೆ ಘಾಸಿಯಾದೀತು. ಅದನ್ನು ಪ್ರಕಟಿಸಲು ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ಆಪ್ತರ ಜೊತೆ ಕೆಲವು ರಹಸ್ಯವನ್ನು ಹೇಳಿಕೊಳ್ಳುವಿರಿ. ಅಗಬೇಕಾದ ಕಾರ್ಯಕ್ಕೆ ಒತ್ತಡವನ್ನು ಹೇರಿ ಮಾಡಿಸಿಕೊಳ್ಳುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯ ಬೇಕು.

ವೃಷಭ ರಾಶಿ: ತಾಯಿಗೆ ಸಂತೋಷವಾಗುವ ಉಡುಗೊರೆ ನಿಮ್ಮಿಂದ ಸಿಗಲಿದೆ. ಇಂದು ಕಿರಿಕಿರಿಯ ವಾತಾವರಣವು ಇರಲಿದ್ದು, ಎಲ್ಲವೂ ಸಮಸ್ಯೆಯಂತೆ ತೋರೀತು. ಆರ್ಥಿಕತೆಯ ಬಗ್ಗೆ ಅತಿಯಾದ ಚಿಂತನೆಯನ್ನು ಮಾಡುವಿರಿ. ನಿಮ್ಮದಾದ ಸ್ವಂತ ಉದ್ಯೋಗವನ್ನು ಬೆಳೆಸುವ ಕಡೆ ನಿಮ್ಮ ಗಮನವಿರಲಿ. ಇಂದಿನ ಗುರಿಯನ್ನು ಬೇಗ ತಲುಪುವಿರಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮನ್ನು ವೈಭವೀಕರಿಸಿವುದರಲ್ಲಿ ಅರ್ಥವಿಲ್ಲ. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಕೋಪವನ್ನು ಸಣ್ಣ ಸಾಧನವಾಗಿಸಿಕೊಂಡು ಕೆಲಸವನ್ನು ಸಾಧಿಸುವಿರಿ. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು.‌ ನಿಮ್ಮರ ಬಗ್ಗೆ ನಿಮಗೆ ಸಕಾರಾತ್ಮ‌ಕ‌ ಭಾವವು ಇರದು. ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ. ನಿಶ್ಚಯಾತ್ಮಕ ಬುದ್ಧಿಯು ಇರದು.

ಮಿಥುನ ರಾಶಿ: ಶಕ್ತಿಯನ್ನು ಮೀರಿ ಯಾವ ಕಾರ್ಯಕ್ಕೂ ಕೈಹಾಕುವುದು ಬೇಡ. ನಿಮ್ಮ ಮಕ್ಕಳ ಬಗೆಯ ವ್ಯಾಮೋಹವು ಅವರನ್ನು ಕೆಟ್ಟದ್ದಕ್ಕೆ ತಳ್ಳಬಹುದು. ಇಂದು ನೀವು ಸಾತ್ತ್ವಿಕರಂತೆ ತೋರುವಿರಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ಬಾಯಿ ಚಪಲದ ಅಧಿಕವಾಗಿ ಏನನ್ನಾದರೂ ತಿಂದು, ಆರೋಗ್ಯ ಕೆಡುವುದು. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ. ಕಳೆದುಕೊಂಡಿದ್ದನ್ನು ಮರಳಿ ಪಡೆಯುವ ಬಗ್ಗೆ ಯತ್ನವು ಪ್ರಬಲವಾಗಿ ಇರುವುದು. ವ್ಯಯದಷ್ಟೇ ಆದಾಯ ಸಿಕ್ಕರೆ ಖರ್ಚು ಮಾಡಿ. ಮನೆಯವರನ್ನು ಕರೆದುಕೊಂಡು ಪ್ರಯಾಣ ಮಾಡುವಿರಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು.

ಕರ್ಕಾಟಕ ರಾಶಿ: ದೈವದ ಕೃಪಯೊಂದೇ ನಿಮ್ಮ ಛಿದ್ರವಾದ ಮನಸ್ಸನ್ನು ಸರಿಮಾಡುವುದು. ನಿಮ್ಮ ವ್ಯಾಪಾರಕ್ಕೆ ಹೊಸ ದಿಕ್ಕನ್ನು ಕೊಡಬೇಕಾದೀತು. ತಂತ್ರಜ್ಞರು ತಮ್ಮ ಕಾರ್ಯವನ್ನು ವಿಸ್ತರಿಸಲು ಹಂಬಲಿಸಬಹುದು. ಉನ್ನತ ಮಟ್ಟದವರ ಜೊತೆ ಸಭೆಯಲ್ಲಿ ಭಾಗವಹಿಸುವಿರಿ. ಗೆಲುವಿಗಾಗಿ ಮಾಡುವ ಹೋರಾಟದ ಫಲ ನಿಮಗೆ ಆರಂಭದಲ್ಲಿಯೇ ಗೊತ್ತಾಗಲಿದೆ. ನಿಮ್ಮ ಅವ್ಯಕ್ತ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ನಿಮ್ಮ ಬಗ್ಗೆ ಹಗುರಾದ ಭಾವವು ಬರಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಮಕ್ಕಳ ಬಗ್ಗೆ ಅನವಶ್ಯಕ ಅನುಮಾನ ಹಾಗೂ ಅಪವಾದವನ್ನು ಮಾಡುವ ಸನ್ನಿವೇಶವು ಬರಬಹುದು. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಿರಿ. ಬೇಸರದ ಮಾತುಗಳು ಆಪ್ತರ ಮೇಲೆ ಪರಿಣಾಮ ಬೀರುವುದು. ಸಂಬಂಧದಲ್ಲಿ ಮಿತವಾದ ಬಂಧವಿರಲಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ.

ಸಿಂಹ ರಾಶಿ: ಉಚಿತವಾಗಿ ಬಂದಿರುವುದೆಲ್ಲ ಯೋಗ್ಯವಲ್ಲ. ಪರಿಶೀಲಿಸಿ ನಿಮ್ಮದಾಗಿಸಿಕೊಳ್ಳಿ.‌ ಇಂದು ನಿಮ್ಮ ಸಂಗಾತಿಗೆ ಸಹಕಾರವನ್ನು ನೀಡುವಿರಿ. ಸಾಮಾಜಿಕ ಕಾರ್ಯವು ನಿಮಗೆ ಪ್ರಶಂಸೆಯನ್ನು ಕೊಟ್ಟೀತು. ಉತ್ತಮ ಆರ್ಥಿಕತೆಗಾಗಿ ನೀವು ವಿದೇಶದ ವ್ಯಾಪಾರದಲ್ಲಿ ಆಸಕ್ತಿ ಬರಬಹುದು. ನಿಮ್ಮದಲ್ಲದ ವೃತ್ತಿಯಲ್ಲಿ ಸೇರಿಕೊಂಡು ತೊಳಲಾಟ ನಡೆಸುವಿರಿ. ಸತತ ಪ್ರಯತ್ನದಿಂದ ಆದಾಯ ಹಾಗೂ ಖರ್ಚನ್ನು ಸರಿಯಾಗಿ ತೂಗಿಸಲು ತಿಳಿಯುವಿರಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ಆದಾಯದ ಭಾಗವನ್ನು ದಾನ ಮಾಡುವ ಆಸೆ ಬರಬಹುದು. ಅಪರಿಚಿತ ಪತ್ರದಿಂದ ಆತಂಕಗೊಳ್ಳುವಿರಿ. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಬಂಧುಗಳು ನಿಮ್ಮ ಹತ್ತಿರ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು. ಹಿರಿಯರ ಸೇವೆಯಿಂದ ಸಂತೋಷಪಡುವಿರಿ. ಮನಸ್ಸಿನ ಕಿರಿಕಿರಿಯಿಂದ ಕೋಪವು ಬರಬಹುದು.

ಕನ್ಯಾ ರಾಶಿ: ನಿಮ್ಮ ತಪ್ಪಿಗೆ ಕೇವಲ ಪಶ್ಚಾತ್ತಾಪ ಒಂದೇ ಸಾಲದು. ಸರಿಯಾಗಲು ಬೇಕಾದ ವ್ಯವಸ್ಥೆಯನ್ನೂ ಮಾಡುವುದು ಸೂಕ್ತ. ಇಂದಿನ ದಿನ ವಾದ, ವಿವಾದಗಳಿಂದಲೇ ಇರುವುದು. ಕಛೇರಿಯಲ್ಲಿ ನಿಮಗೆ ಅಸಂಬದ್ಧ ಆಲೋಚನೆಗಳು ಬರಬಹುದು. ಸಹೋದರಿಯ ಜೊತೆ ಮನಸ್ತಾಪ ಮಾಡಿಕೊಳ್ಳುವಿರಿ. ಗೃಹನಿರ್ಮಾಣವು ನೀವಂದುಕೊಂಡಷ್ಟು ಸರಳವಾಗಿ ಇರದು. ತಂದೆ ತಾಯಿಯರ ಸೇವೆಯ ಬಗ್ಗೆ ಅಭಿಮಾನ ಬರುವುದು. ಉತ್ತಮ‌ ದಿನದ ನಿರೀಕ್ಷೆಯಲ್ಲಿ ಇರುವ ನಿಮಗೆ ಬೇಸರವಾದೀತು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಉದ್ಯೊಇಗದ ಸ್ಥಳದಲ್ಲಿ ವಸ್ತುವನ್ನು ಕಳೆದುಕೊಳ್ಳುವಿರಿ. ಹೇಳದೇ ಮೌನದಿಂದ ಇರುವಿರಿ. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡುವುದು. ಯಾರ ಮಾತನ್ನೂ ಕೇಳುವ ತಾಳ್ಮೆ ಇರದು. ನಿಮ್ಮ ಮಾತನ್ನು ಕೇಳಲು ಆಸಕ್ತಿ ಇರದು. ಇಂದು ಮೇಲೆ ಆರ್ಥಿಕ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡಿ.