ಮೇ ತಿಂಗಳು ಯಾವ ರಾಶಿಯವರಿಗೆ ಅನುಕೂಲ? ಯಾರಿಗೆ ಅಶುಭ? ಮಾಸ ಭವಿಷ್ಯ ಇಲ್ಲಿದೆ

Monthly Horoscope: 2025ರ ಮೇ ತಿಂಗಳಲ್ಲಿ ಹಲವು ಗ್ರಹಗಳ ಬದಲಾವಣೆ ಆಗಲಿದೆ. ಗುರುವು ವೃಷಭದಿಂದ ಮಿಥುನಕ್ಕೆ, ಬುಧನು ಮೀನದಿಂದ ವೃಷಭಕ್ಕೆ, ಸೂರ್ಯನು ಮೇಷದಿಂದ ವೃಷಭಕ್ಕೆ ಹಾಗೂ ರಾಹು ಮತ್ತು ಕೇತುಗಳು ಹಿಮ್ಮುಖ ಚಲನೆಯ ಕಾರಣ ಕುಂಭಕ್ಕೂ ಸಿಂಹ ರಾಶಿಗೂ ಬರಲಿವೆ. ಈ ತಿಂಗಳಲ್ಲಿ ಈ ಎಲ್ಲ ಗ್ರಹಗಳ ಬದಲಾವಣೆ ಎಲ್ಲರಿಗೂ ಶುಭವಲ್ಲದೇ ಇರುವುದರಿಂದ ಪ್ರತಿಕೂಲ ಗ್ರಹಗಳ ದೋಷವನ್ನು ಪರಿಹರಿಸಿಕೊಳ್ಳಲು ಆಯಾ ಗ್ರಹಗಳ ಅಥವಾ ಅಧಿದೇವತೆಗಳ ಉಪಾಸನೆ ಅಗತ್ಯ. ಎಲ್ಲ ಗ್ರಹಗಳೂ ಏಕಾದಶ ಸ್ಥಾನದ ಫಲವನ್ನು ಕೊಡಲಿ.

ಮೇ ತಿಂಗಳು ಯಾವ ರಾಶಿಯವರಿಗೆ ಅನುಕೂಲ? ಯಾರಿಗೆ ಅಶುಭ? ಮಾಸ ಭವಿಷ್ಯ ಇಲ್ಲಿದೆ
Horoscope
Edited By:

Updated on: Apr 29, 2025 | 6:43 AM

2025ರ ಮೇ ತಿಂಗಳಲ್ಲಿ ಹಲವು ಗ್ರಹಗಳ ಬದಲಾವಣೆ ಆಗಲಿದೆ. ಗುರುವು ವೃಷಭದಿಂದ ಮಿಥುನಕ್ಕೆ, ಬುಧನು ಮೀನದಿಂದ ವೃಷಭಕ್ಕೆ, ಸೂರ್ಯನು ಮೇಷದಿಂದ ವೃಷಭಕ್ಕೆ ಹಾಗೂ ರಾಹು ಮತ್ತು ಕೇತುಗಳು ಹಿಮ್ಮುಖ ಚಲನೆಯ ಕಾರಣ ಕುಂಭಕ್ಕೂ ಸಿಂಹ ರಾಶಿಗೂ ಬರಲಿವೆ. ಈ ತಿಂಗಳಲ್ಲಿ ಈ ಎಲ್ಲ ಗ್ರಹಗಳ ಬದಲಾವಣೆ ಎಲ್ಲರಿಗೂ ಶುಭವಲ್ಲದೇ ಇರುವುದರಿಂದ ಪ್ರತಿಕೂಲ ಗ್ರಹಗಳ ದೋಷವನ್ನು ಪರಿಹರಿಸಿಕೊಳ್ಳಲು ಆಯಾ ಗ್ರಹಗಳ ಅಥವಾ ಅಧಿದೇವತೆಗಳ ಉಪಾಸನೆ ಅಗತ್ಯ. ಎಲ್ಲ ಗ್ರಹಗಳೂ ಏಕಾದಶ ಸ್ಥಾನದ ಫಲವನ್ನು ಕೊಡಲಿ.

ಮೇಷ ರಾಶಿ :

ರಾಶಿ ಚಕ್ರದ ಮೊದಲ ರಾಶಿಗೆ ಈ ತಿಂಗಳು ಮಿಶ್ರಫಲ. ಸಾಡೇಸಾಥ್ ನ‌ ಆರಂಭ ಒಂದು ಕಡೆಗಾದರೆ ಗುರುವಿನ ಸ್ಥಾನ ಪರಿವರ್ತನೆಯಿಂದ ಸಹೋದರ ನಡುವೆ ಐಕಮತ್ಯ. ವಿವಾಹಕ್ಕೆ ಅನುಕೂಲತೆ ಬಿದ್ದರೂ ಉಳಿದ ಎಲ್ಲವೂ ಸರಿಯಾಗಿ ಕೂಡಿಬರದು. ಉದ್ಯೋಗದಿಂದ ಬರುವ ಹಣವು ವಿಳಂಬವಾಗುವುದು. ಅನಾರೋಗ್ಯಕ್ಕೆ ಹಣದ ಅಭಾವ ಕಾಣಿಸುವುದು. ತಾಯಿಯ ಆರೋಗ್ಯವು ಹದ ತಪ್ಪಬಹುದು. ಕಾರ್ತಿಕೇಯನ ಉಪಾಸನೆಯಿಂದ ಶುಭ.

ವೃಷಭ ರಾಶಿ :

ಮೇ‌ ತಿಂಗಳಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಏಕಾದಶದಲ್ಲಿ ಇದ್ದು ಬರಬೇಕಾದ ಹಣವು ನಿಮ್ಮ ಕೈ ಸೇರಲಿದೆ. ಉದ್ಯೋಗದಲ್ಲಿ ಪ್ರಗತಿ ಅಥವಾ ಭಡ್ತಿಯಿಂದ ಸಂತೋಷ. ಪ್ರೇಮದಲ್ಲಿ ವಾಗ್ವಾದದ ಕಾರಣ ಸುಮ್ಮನಿದ್ದಷ್ಟು ಉತ್ತಮ. ವಿದೇಶ ಪ್ರವಾಸದ ಯೋಗ ಬರಲಿದೆ. ಸ್ನೇಹದಲ್ಲಿ ಕೆಟ್ಟ ಭಾವ ಬರಬಹುದು. ಕೆಟ್ಟವರೇ ಸ್ನೇಹಿತರಾಗಲೂಬಹುದು. ಕಣ್ಣಿನ‌ ದೋಷವು ದೂರಾಗಿ ಸ್ಪಷ್ಟತೆ ಬರಲಿದೆ. ಲಕ್ಷ್ಮೀನಾರಾಯಣರನ್ನು ಸ್ತುತಿಸಿ.

ಮಿಥುನ ರಾಶಿ :

ಈ ರಾಶಿಯವರಿಗೆ ಮೇ ತಿಂಗಳಲ್ಲಿ ಮಿಶ್ರಫಲ. ರಾಶಿಯ ಅಧಿಪತಿ ದ್ವಾದಶದಲ್ಲಿ ಇದ್ದ ಕಾರಣ ಬಾಂಧವ್ಯದ ಮನಸ್ತಾಪ ಖಿನ್ನತೆ ಬರಬಹುದು. ತಾಯಿ ಜೊತೆ ಶೀತಲ ಸಮರವಾಗುವುದು. ಪ್ರಯತ್ನದ ಫಲವಾಗಿ ವಿವಾಹ ಸಿದ್ಧಿಸುವುದು. ಉತ್ಪನ್ನದ ಉದ್ಯಮದಿಂದ ಲಾಭವಿದೆ. ನಟರು ಹಾಗೂ ಕಲಾವಿದರಿಗೂ ಒಳ್ಳೆಯ ಅವಕಾಶ ಸಿಗಲಿದೆ. ಔಷಧಿ ವ್ಯಾಪಾರಕ್ಕೆ ಹಿನ್ನಡೆಯಾಗಲಿದೆ. ಸಾಮರ್ಥ್ಯದಲ್ಲಿ ಕೃತಕತೆಯನ್ನು ಬಳಸಬೇಕಾಗುವುದು. ವೃದ್ಧರಿಗೆ ಸಮ್ಮಾನ ಪ್ರಾಪ್ತಿ. ಗಣಪತಿಯು ಸ್ತೋತ್ರ ಮಾಡಿ.

ಕರ್ಕಾಟಕ ರಾಶಿ :

ಈ ತಿಂಗಳಲ್ಲಿ ನಿಮಗೆ ಅಶುಭ. ಏಕಾದಶದಲ್ಲಿ ಗುರುವಿನ ಅನುಗ್ರಹವಿದ್ದ ಕಾರಣ ಉದ್ಯಮವು ವಿಘ್ನಗಳಿಲ್ಲದೇ ಅಥವಾ ಇದ್ದರೂ ಅದಕ್ಕೆ ಸೂಕ್ತ ಮಾರ್ಗಗಳು ದೊರೆತು ಸಾಗಿತ್ತು. ಆದರೆ ಈಗ ಅದು ವಿಪರೀತವಾಗಲಿದೆ. ಆರಂಭದಲ್ಲಿ ತಾಳ್ಮೆ ಅವಶ್ಯಕ. ಉದ್ಯೋಗದಲ್ಲಿ ಸಣ್ಣ ವಿಚಾರಕ್ಕೂ ಕಲಹ, ಅಸಮಾಧಾನ ಆಗಲಿದೆ. ವಿವಾಹವು ಹಿರಿಯರ ನೇತೃತ್ವದಲ್ಲಿ ನೆರವೇರಲಿದೆ. ಗುರುದರ್ಶನದಿಂದ ಮಾನಸಿಕ ನೆಮ್ಮದಿ. ಹೊಸ ಮಾರ್ಗ ಸಿಗುವ ಸೂಚನೆ ಇದೆ.

ಸಿಂಹ ರಾಶಿ :

ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ತಿಂಗಳು ಶುಭ. ಗುರುವಿನ ಅನುಗ್ರಹಕ್ಕೆ ಕಾಯುತ್ತಿರುವ ನಿಮಗೆ ಈ ತಿಂಗಳಿನಿಂದ ಅದು ಪ್ರಾಪ್ತವಾಗಲಿದೆ. ಏಕಾದಶದ ಗುರುವು ನಿಮ್ಮ ಸಾತ್ತ್ವಿಕವಾದ ಸಕಲ ಇಷ್ಟಾರ್ಥವನ್ನು ಈಡೇರಿಸವನು. ಉದ್ಯೋಗವೂ ಅಂದುಕೊಂಡಂತೆ ಚೆನ್ನಾಗಿ ಆಗಲಿದೆ. ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲು ಶುಭಕಾಲ. ಅಷ್ಟಮದಲ್ಲಿ ಶನಿಯ ಆಗಮನದಿಂದ ದಾಂಪತ್ಯದಲ್ಲಿ ಕಲಹ. ಪರಸ್ಪರ ಹೊಂದಾಣಿಕೆ ಕಷ್ಟವೆನಿಸಬಹುದು. ಮೌನವೂ ಪ್ರಯೋಜನಕ್ಕೆ ಬರುವ ತಂತ್ರವೇ ಆಗಿದೆ. ಆದಿತ್ಯ ಹೃದಯವನ್ನು ಪಠಿಸಿ.

ಕನ್ಯಾ ರಾಶಿ :

ಈ ರಾಶಿಯವರಿಗೆ ಮೇ ತಿಂಗಳು ಶುಭ ಫಲ. ರಾಶಿಯ ಅಧಿಪತಿ ನವಮದಲ್ಲಿ ಇದ್ದು ಬಂಧುಗಳ ವಿಚಾರದಲ್ಲಿ ನಂಬಿಕೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಇದೆ. ವಿವಾಹಕ್ಕೆ ಎಲ್ಲ ಸಿದ್ಧತೆ ಇದ್ದರೂ ಕಾರಣಾಂತರಗಳಿಂದ ಅಡ್ಡಿ ಎದುರಾಗುವುದು. ಸಂಗಾತಿಯ ಜೊತೆ ವೈಮನಸ್ಯ ಉಂಟಾಗಿ ಹೊಂದಾಣಿಕೆಯಿಂದ ಅಂತ್ಯವಾಗಲಿದೆ. ರಾಮಭುಜಂಗಸ್ತೋತ್ರವನ್ನು ಪಠಿಸಿ.

ತುಲಾ ರಾಶಿ :

ರಾಶಿ ಚಕ್ರದ ಏಳನೇ ರಾಶಿಗೆ ಈ ತಿಂಗಳು ಶುಭಾಶುಭ ಫಲವಿದೆ. ರಾಶಿಯ ಅಧಿಪತಿ ಹಾಗೂ ಅಷ್ಟಮಾಧಿಪತಿ ಷಷ್ಠದಲ್ಲಿ ಇದ್ದು ಸ್ತ್ರೀಯರಿಂದ ಅಪಮಾನವಾಗಲಿದೆ. ಶುಕ್ರದಶೆಯವರಿಗೆ ಈ ತಿಂಗಳು ಕಷ್ಟದ್ದಾಗುವುದು. ಉದ್ಯೋಗದಲ್ಲಿ ಪ್ರೇಮವಾಗಿ ವಿವಾಹ ನಿಶ್ಚಯವಾಗುವುದು. ವಿದೇಶದಲ್ಲಿ ಇರುವವರಿಗೆ ಆತಂಕ ಕಾಡುವುದು. ಭೂಮಿಯ ಉದ್ಯಮ ನಡೆಸುವವರಿಗೆ ಶುಭ. ಮಹಾಲಕ್ಷ್ಮಿಯಲ್ಲಿ ಭಕ್ತಿಯನ್ನು ಮಾಡಿ.

ವೃಶ್ಚಿಕ ರಾಶಿ :

ಇದು ಈ ವರ್ಷದ ಐದನೇ ತಿಂಗಳು. ರಾಶಿಯ ಅಧಿಪತಿ ಹಾಗೂ ಷಷ್ಠಸ್ಥಾನಾಧಿಪತಿಯೂ ಆದ ಕುಜನು ನವಮದಲ್ಲಿ ಇರುವನು. ಹಿರಿಯ ಮೇಲಿನ ಗೌರವ ಕಡಿಮೆಯಾಗಲಿದೆ. ಸಂಗಾತಿಯ ಮೇಲೆ ಪ್ರೀತಿ ಇರದು. ವಿವಾಹಕ್ಕೆ ಸಮಯ ಶುಭವಿಲ್ಲ. ಉದ್ಯೋಗವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸುವಿರಿ. ಪಂಚಮದ ಶನಿಯಿಂದ ಸಂಕಲ್ಪಿಸಿದ ಕಾರ್ಯಗಳು ಆರಂಭವಾಗದು. ಶನೈಶ್ಚರನ ಸ್ತೋತ್ರ ಮಾಡಿ.

ಧನು ರಾಶಿ :

ಮೇ ತಿಂಗಳಲ್ಲಿ ನಿಮಗೆ ಶುಭವಿದೆ. ರಾಶಿಯ ಅಧಿಪತಿ ಸಪ್ತಮಸ್ಥಾನಕ್ಕೆ ಹೋಗಲಿದ್ದಾನೆ. ಒಂದು ವರ್ಷದಿಂದ ಗುರುವು ನಿಮಗೆ ಪ್ರತಿಕೂಲನಾಗಿದ್ದು ಈಗ ಅನುಕೂಲನಾಗುವನು. ವಿವಾಹಕ್ಕೆ ಸೂಕ್ತ ಸಮಯವಿದಾಗಿದ್ದು ಪ್ರೇಮ ವಿವಾಹ ಸಿದ್ಧಿಸುವುದು. ಕುಟುಂಬದ ಭಿನ್ನಾಭಿಪ್ರಾಯವನ್ನು ಚರ್ಚಿಸಿ ಬಗೆಹರಿಸುವಿರಿ. ನಿರುದ್ಯೋಗದಿಂದ ನಿಮ್ಮ ಮನಸ್ಸು ನಿರಾಳವಾಗಲಿದೆ. ತಾಯಿಯ ಕಾರಣದಿಂದ ತಂದೆಯ ಬಗ್ಗೆ ಪ್ರೀತಿ ಕಡಿಮೆಯಾಗುವುದು. ಗುರುಚರಿತ್ರೆಯನ್ನು ಪಠಿಸಿ.

ಮಕರ ರಾಶಿ :

ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ತಿಂಗಳು ಶುಭ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಸಹೋದರರ ನಡುವೆ ವೈಮನಸ್ಯ ಉಂಟಾಗುವುದು. ಗುರುಬಲದಿಂದ ಗೌರವ, ಆರೋಗ್ಯ, ಸಂಪತ್ತಿನ ಸುಖವನ್ನು ಕಂಡ ನಿಮಗೆ ಇನ್ನು ಅದು ಸುಲಭವಾಗಿ ಸಿಗದು. ಶತ್ರು ಬಾಧೆಯಿಂದ ಕಿರಿಕಿರಿ. ಅನಾರೋಗ್ಯದ ಭೀತಿ ಕಾಡಲಿದೆ. ವಿವಾಹಕ್ಕೆ ಎಲ್ಲ ರೀತಿಯಿಂದ ತೊಂದರೆ. ವಿವಾಹ ಯೋಚನೆ ಬೇಡ. ಕಲಾತ್ಮಕ ಉದ್ಯೋಗದಲ್ಲಿ ಪ್ರಗತಿ ಇರುವುದು. ಹನುಮಾನ್ ಚಾಲೀಸ್ ಪಠಣದಿಂದ ಸ್ಥೈರ್ಯ ಹೆಚ್ಚಾಗುವುದು.

ಕುಂಭ ರಾಶಿ :

ಈ ತಿಂಗಳಲ್ಲಿ ನಿಮಗೆ ಶುಭ. ಸಾಡೇಸಾಥ್ ನ ಕೊನೆಯ ಭಾಗ ಅರಂಭವಾಗಿದೆ. ಅಷ್ಟೇ ಅಲ್ಲದೇ ಇಷ್ಟು ತಿಂಗಳ ಕಾಲ ಗುರುಬಲದಿಂದ ಪೂರ್ಣ ಅನುಗ್ರಹ ಇರದೇ ಕಷ್ಟವಾಗಿದ್ದು ಈಗ ಅದು ಸರಿಯಾಗಲಿದೆ. ಗುರುಬಲದಿಂದ ವಿದ್ಯಾಭ್ಯಾಸಕ್ಕೆ ಆಸಕ್ತಿ ಇರಲಿದ್ದು, ಉನ್ನತ ಸ್ಥಾನವನ್ನೂ ಗಳಿಸುವಿರಿ. ವಿವಾಹಕ್ಕೆ ಈ ತಿಂಗಳು ಯೋಚಿಸಿದರೆ ಮುಂದುವರಿಯುವುದು ಬೇಡ. ಸದ್ಯ ಯಥಾಸ್ಥಿತಿಯಲ್ಲಿ ಇರುವುದು ಉತ್ತಮ. ತಂತ್ರಜ್ಞಾನದ ಉದ್ಯೋಗದಲ್ಲಿ ಹಿನ್ನಡೆಯಾಗಲಿದೆ. ಕಾರ್ತಿಕೇಯನ ಸ್ಮರಣೆ ಮಾಡಿ.

ಮೀನ ರಾಶಿ :

ಮೇ ತಿಂಗಳಲ್ಲಿ ನಿಮಗೆ ಮಿಶ್ರಫಲ. ರಾಶಿಯ ಅಧಿಪತಿ ಚತುರ್ಥ ಸ್ಥಾನಕ್ಕೆ ಹೋಗಲಿದ್ದೆ. ಕುಟುಂಬದಲ್ಲಿ ಸೌಖ್ಯ ಇಲ್ಲದೇ ಕಷ್ಟಪಡುತ್ತಿದ್ದ ನಿಮಗೆ ತಂದೆ, ತಾಯಿಯಿಂದ ಸುಖ, ವಾಹನ ಲಾಭವನ್ನು ಇಚ್ಛಿಸಿದರೆ ಅದೂ ಲಭ್ಯ. ವಿವಾಹಕ್ಕೆ ಒಪ್ಪಿಗೆ ಸಿಗದೇ ಕಷ್ಟವಾಗಿದ್ದು ಪ್ರೇಮವನ್ನು ಗೌಪ್ಯವಾಗಿ ಮುಂದುವರಿಸುವಿರಿ. ಉದ್ಯೋಗದ ಅಡಚಣೆ ದೂರವಾಗಿದ್ದು ನೆಮ್ಮದಿಯಿಂದ ಕಾರ್ಯ ಮಾಡಲು ಸಾಧ್ಯ. ಸಾಡೇಸಾಥ್ ನಿಂದ ತೊಂದರೆ ತಪ್ಪಿಸಿಕೊಳ್ಳಲು ಶಿವಸಹಸ್ರನಾಮವನ್ನು ಪಠಿಸಿ.

ಲೋಹಿತ ಹೆಬ್ಬಾರ್ – 8762924271 (what’s app only)