ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯ ನಕ್ಷತ್ರ: ಭರಣೀ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ09:24 ರಿಂದ 10:55, ಯಮಘಂಡ ಕಾಲ ಮಧ್ಯಾಹ್ನ 01:56 ರಿಂದ 03:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:23 ರಿಂದ 07:53ರ ವರೆಗೆ.
ಮೇಷ ರಾಶಿ: ಇಂದು ನೀವು ಸಂಗಾತಿಯ ವಿಚಾರಕ್ಕೆ ಖರ್ಚು ಮಾಡಬೇಕಾಗುವುದು. ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ದಾಂಪತ್ಯದಲ್ಲಿ ಮಾತುಕತೆಗಳು ವಿವಾದವಾಗಿ ಬದಲಾಗಬಹುದು. ವಿದ್ಯುತ್ ಉಪಕರಣಗಳ ಉದ್ಯಮವನ್ನು ಮಾಡುತ್ತಿದ್ದರೆ ಲಾಭವನ್ನು ಪಡೆಯಲಿದ್ದೀರಿ. ಕೊರತೆಗಳನ್ನು ಅತಿಯಾಗಿ ಆಲೋಚಿಸಿದರೆ ಇಂದಿನ ದಿನ ಕಷ್ಟವಾಗುವುದು. ನಿಮ್ಮ ಉಪಕ್ರಮವು ಸರಿಯಾಗಿರದೇ ಇರುವುದರಿಂದ ಗುರಿಯೂ ತಪ್ಪಬಹುದು. ಪ್ರವಾಸ ಮಾಡುವುದು ನಿಮಗೆ ಇಷ್ಟವಾಗುವುದು. ಮನೆಯ ವಾತಾವರಣವೂ ನಿಮಗೆ ಇಷ್ಟವಾಗಲಿದೆ. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ಯಾರಾದರೂ ನಿಮ್ಮ ಜೊತೆ ವಾದಕ್ಕೆ ಬಂದರೆ ನಿಮ್ಮ ನಿಲುವನ್ನು ಸ್ಪಷ್ಟವಾಗಿಸುವಿರಿ. ನೀವು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಇಂದು ಆಗದು.
ವೃಷಭ ರಾಶಿ: ನಿಮ್ಮ ಯಶಸ್ಸಿಗೆ ಯಾರಾದರೂ ಕಪ್ಪುಚುಕ್ಕೆ ಇಡಬಹುದು. ಇಂದು ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ವಿದ್ಯಾರ್ಥಿಗಳು ಪರೀಕ್ಷೆಗೆ ಹೆಚ್ಚು ತಯಾರಿ ಮಾಡುವಿರಿ. ಬಂಧುಗಳು ನಿಮಗೆ ಕಿರಿಕಿರಿ ಆಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡಲಿದ್ದೀರಿ. ಸಂಗಾತಿಯ ಜೊತೆ ವಿರಸವು ಇರಲಿದೆ. ಸಜ್ಜನರ ಸಹವಾಸವನ್ನು ಬಯಸುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುವಿರಿ. ನಿಮ್ಮ ಹೇಳಿಕೆಯನ್ನು ನೀವೇ ಒಪ್ಪಿಕೊಳ್ಳಲಾರಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಲಿದೆ. ಅಸ್ಥಿರ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಬೇಸರವನ್ನು ಹೇಗಾದರೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳು ಗೊತ್ತಾಗಲಿದೆ. ಎಲ್ಲರೆದುರು ಮಾತನಾಡಲು ನಿಮಗೆ ಭಯವಾಗಲಿದೆ. ಆಪ್ತರನ್ನು ಕಳೆದುಕೊಳ್ಳಲು ಕಷ್ಟವಾದೀತು. ಆಸ್ತಿಯನ್ನು ಮಾರಾಟ ಮಾಡಲು ಇಚ್ಛಿಸುವಿರಿ. ಇಂದು ನಿಮ್ಮ ಸ್ನೇಹಿತರು ಮನೆಗೆ ಬರಬಹುದು. ಕೆಲವು ಪೆಟ್ಟುಗಳು ನಿಮ್ಮನ್ನು ರೂಪಿಸುವುದು.
ಮಿಥುನ ರಾಶಿ: ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗವುದು. ನಿಮ್ಮ ಕಾರ್ಯಗಳು ನಿಮ್ಮನ್ನೇ ಸುತ್ತಿಕೊಂಡೀತು. ಆರ್ಥಿಕದಿಂದ ನೀವು ಬಲವಾಗುವಿರಿ. ಸಹೋದರಿಯ ಜೊತೆ ಸಂತೋಷದಿಂದ ನೀವು ಮಾತನಾಡಿ ಸಂತೋಷಗೊಳಿಸುವಿರಿ. ಹಿತಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಆಕಸ್ಮಿಕ ಒತ್ತಡವನ್ನು ಸುಲಭವಾಗಿ ಸ್ವೀಕರಿಸಲಾರಿರಿ. ಸ್ಥಿರಾಸ್ತಿಯ ವಿಷಯದಲ್ಲಿರುವ ಗೊಂದಲು ನಿವಾರಣೆ ಆಗಬಹುದು. ಪ್ರತ್ಯೇಕವಾಗಿ ಇರಲು ಬಯಸುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ತಿಳಿಯದಾಗಿದೆ. ರಾಜಕಾರಿಣಿಗಳ ಒಡನಾಟವು ನಿಮಗೆ ಹೊಸ ಮಾರ್ಗವನ್ನು ತೋರಿಸಬಹುದು. ಕಾರ್ಯದಲ್ಲಿ ಕ್ರಮಬದ್ಧ ಇದ್ದರೆ ಬೇಗ ಮುಕ್ತಾಯವಾಗುವುದು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು. ಪ್ರಯಾಣದಲ್ಲಿ ನಿಮಗೆ ಸುರಕ್ಷತೆಯ ಅವಶ್ಯಕತೆ ಇರಲಿದೆ. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ಭೋಗ್ಯದ ಮನೆಯನ್ನು ಬದಲಾಯಿಸುವಿರಿ.
ಕರ್ಕಾಟಕ ರಾಶಿ; ಯಾರಾದರೂ ಸರಿಯಾದ ಮಾರ್ಗವನ್ನು ತೋರಿಸಿದರೆ ಮಾತ್ರ ಮುನ್ನಡೆಯುವಿರಿ. ನೂತನ ಉದ್ಯೋಗವು ನಿಮಗೆ ಪ್ರಾಪ್ತವಾಗಲಿದೆ. ಅಧಿಕಾರಿಯ ಜೊತೆ ನಿಮ್ಮ ಮಾತುಕತೆಗಳು ಮಿತಿಮೀರಲಿದೆ. ದಿನಬಳಕೆಯ ವಸ್ತುವನ್ನು ಮಾರಾಟ ಮಾಡುವವರು ಲಾಭವನ್ನು ಗಳಿಸುವರು. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಅದನ್ನು ಕೈ ಬಿಡುವಿರಿ. ಅಧಿಕ ವೆಚ್ಚವನ್ನು ನೀವು ಮಾಡಲಿದ್ದೀರಿ. ಮೇಲಧಿಕಾರಿಗಳಾಗಿದ್ದರೆ ಪಕ್ಷಪಾತ ತೋರದೇ ನೌಕರರಿಗೆ ಕಾರ್ಯವನ್ನು ಹಂಚುವಿರಿ. ನಟರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಸಂಬಂಧಗಳು ನಿಮಗೆ ಸಹಕಾರವಾಗಲಿದೆ. ಸಾಹಸಕ್ಕೆ ಹೋಗುವಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ದುರಾಲೋಚನೆಯು ನಿಮ್ಮ ಸಮಯವನ್ನೂ ಮಾರ್ಗವನ್ನೂ ಬದಲಾಯಿಸಬಹುದು. ಉನ್ನತ ಹುದ್ದೆಗೆ ಏರುವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು. ಮಕ್ಕಳ ಮೇಲೆ ನಿಮ್ಮ ಅನುಕಂಪವು ಹೆಚ್ಚಾಗುವುದು.