ಹಳೆಯ ಸಂಗಾತಿಯನ್ನು ಪುನಃ ಭೇಟಿಯಾಗಲು ಹೋಗುವಿರಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ ಭಾನುವಾರ ರಮ್ಯಸ್ಥಾನಕ್ಕೆ ಗಮನ, ವ್ಯಾಪಾರದಲ್ಲಿ ತುಷ್ಟಿ, ಆರೋಗ್ಯದಲ್ಲಿ ಪುಷ್ಟಿ, ನಿರ್ಧಾರದಲ್ಲಿ ಗೊಂದಲ ಇವೆಲ್ಲ ಈ ದಿನಸ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಸಿದ್ಧ, ಕರಣ: ಬವ, ಸೂರ್ಯೋದಯ – 06 : 04 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 17:24 – 19:02, ಯಮಘಂಡ ಕಾಲ 12:33 – 14:10, ಗುಳಿಕ ಕಾಲ 15:47 – 17:24
ಮೇಷ ರಾಶಿ: ಮುಖದಲ್ಲಿ ಮಂದಹಾಸ ಬರಲು ಜೇಬಿನಲ್ಲಿ ಹಣವಿರುವುದು ಕಾರಣ. ಮನೆಯವರು ನಿಮ್ಮ ಮಾತಿನಿಂದ ಕಟ್ಟಿಹಾಕಬಹುದು. ಉಳಿದೆಲ್ಲ ಸಮಸ್ಯೆಗಿಂತ ಗುರಿಯೇ ನಿಮಗೆ ಮುಖ್ಯವಾಗಿರಲಿ. ನಿಮ್ಮ ಕಾರ್ಯದ ಶಿಸ್ತಿಗೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಆತ್ಮವಂಚನೆಗೆ ಅವಕಾಶ ಕೊಡಬೇಡಿ. ಪ್ರಾಮಾಣಿಕವಾಗಿದ್ದರೆ ನೀವು ತೃಪ್ತರು. ನಿಮ್ಮ ಮೇಲೆ ವಿಶ್ವಾಸವು ಮೂಡುವ ದಿನವಾಗಿದೆ. ಸೋಮಾರಿತನ ಮೇಲುಗೈ ಸಾಧಿಸಬಹುದು, ಆದರೆ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಒಳ್ಳೆಯ ಸುದ್ದಿ ಸಿಗಬಹುದು. ಆದಾಯ ಚೆನ್ನಾಗಿರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕ ನಿಯಮಗಳನ್ನು ಬೇರೆಯವರ ಮೇಲೆ ಹೇರಬೇಡಿ. ಆಹಾರಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು. ನಿಮಗೆ ಸಹಕಾರ ನೀಡದವರೆಲ್ಲ ಕೆಟ್ಟವರಲ್ಲ. ಕ್ಷಮೆಯಿಂದ ನೀವು ದೊಡ್ಡವರಾಗುವಿರಿ. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು.
ವೃಷಭ ರಾಶಿ: ಹಳೆಯ ಸಂಗಾತಿಯನ್ನು ಪುನಃ ಭೇಟಿಯಾಗಲು ಹೋಗುವಿರಿ. ಗುಟ್ಟಾಗಿದ್ದಷ್ಟು ನಿಮಗೇ ಒಳ್ಳೆಯದು. ಅಂದುಕೊಂಡಂತೆ ವೇಗವಾಗಿ ಸಮಯಕ್ಕೆ ಸರಿಯಾಗಿ ಕೆಲಸ ಆಗಲಿದ್ದು, ಅನಂತರ ಸ್ವಲ್ಪ ವಿಶ್ರಾಂತಿಯನ್ನೂ ಪಡೆಯುವಿರಿ. ಸಾಲಕ್ಕೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಯಾವುದನ್ನೂ ಕಲಿಸುವ ಪ್ರಯತ್ನ ಮಾಡಬೇಡಿ. ಹಣಕಾಸಿನಲ್ಲಿ ಸ್ವಲ್ಪ ಚಿಂತೆ ಉಂಟಾಗಬಹುದು. ಸಂಬಂಧಿತ ವ್ಯಕ್ತಿಗಳೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಕೆಲಸದ ಒತ್ತಡ ಹೆಚ್ಚು ಇರುವುದು ಸಾಧ್ಯ. ವಿವಾದಗಳನ್ನು ಬದಿಗೊತ್ತುವುದು ಉತ್ತಮ. ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭವನ್ನು ಪಡೆಯಬೇಕಾಗಿದೆ. ಮಾಡಲು ಸಾಧ್ಯವಾಗುವ ಕೆಲಸಕ್ಕೆ ಕಾರಣವನ್ನು ಹುಡುಕುತ್ತ ಅವಕಾಶವಂಚಿತರಾಗಬೇಡಿ. ನೆಮ್ಮದಿಯು ಕೆಡಲು ಮಾರ್ಗಗಳು ಹಲವು ಇದ್ದರೂ ಅಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು.
ಮಿಥುನ ರಾಶಿ: ಅವಕಾಶವನ್ನು ತಪ್ಪಿಸಿದ ಮಿತ್ರನ ಮೇಲೆ ಅತಿಯಾದ ಬೇಸರವಾಗಲಿದೆ. ಆದರೆ ಅದರ ಫಲಿತಾಂಶದಿಂದ ನಿಮಗೆ ಸಮಾಧಾನವಾಗಬಹುದು. ಇಂದು ಹೊಸದಾಗಿ ವೃತ್ತಿಯನ್ನು ಆರಂಭಿಸಿದವರಿಗೆ ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲದಲ್ಲಿ ಇರುವರು. ಹೊಸ ಕೆಲಸವನ್ನು ತಯಾರಿಸಲು ಉತ್ತಮ ಸಮಯ. ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಹಿರಿಯರಿಂದ ಮೆಚ್ಚುಗೆ ಸಿಗಬಹುದು. ಹಣಕಾಸಿನ ವ್ಯವಹಾರದಲ್ಲಿ ಮುಂದಾಲೋಚನೆ ಅಗತ್ಯ. ಮನಸ್ಸು ಕೆಲವೊಮ್ಮೆ ಆಳವಾದ ಯೋಚನೆಗಳಲ್ಲಿ ಇಳಿಯಬಹುದು. ಅದನ್ನು ಯಾರದೋ ಸಮೀಪ ಸಲ್ಲದ ಮಾತುಗಳನ್ನು ಆಡಿ ಅವರ ಮಾನವನ್ನು ಕಳೆಯಬೇಡಿ. ನಿಮ್ಮ ಆಯ್ಕೆ ಗುಣಮಟ್ಟದ್ದೇ ಆಗಿರಲಿದೆ. ದಾಂಪತ್ಯದ ಕಲಹದಲ್ಲಿ ಮಕ್ಕಳು ನಿಮ್ಮ ಪರವಾಗಿ ಇರುವರು.ಕಣ್ಣಿನ ತೊಂದರೆಯು ಸ್ವಲ್ಪ ಕಡಿಮೆ ಆದಂತೆ ತೋರುತ್ತದೆ. ನಿಮ್ಮ ಹಣವು ಕರಗುವ ಬಗ್ಗೆ ಚಿಂತೆ ಆಗಲಿದೆ. ನಿಮ್ಮ ಬಗ್ಗೆ ಆಡಿಕೊಳ್ಳುತ್ತಿರುವವರು ಸುಮ್ಮನಾಗುವರು. ಹೃದಯವೈಶಾಲ್ಯದಿಂದ ಪ್ರಶಂಸೆ ಸಿಗುವುದು. ವಾಹನದ ಮೇಲಿನ ವ್ಯಾಮೋಹ ಕಡಿಮೆಯಾಗುವುದು. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು.
ಕರ್ಕಾಟಕ ರಾಶಿ: ನಿತ್ಯ ಬಳಸುವ ವಸ್ತುಗಳಿಂದ ಗಾಯ, ನೋವಾಗಲಿದೆ. ಇಂದು ನಿಮ್ಮ ಕಾರ್ಯಗಳು ಸುಲಭದಲ್ಲಿ ಪೂರ್ಣಗೊಳ್ಳುವುದು. ಪದೇ ಪದೇ ಆಗಿಹೋದುದರ ಬಗ್ಗೆ ಯೋಚಿಸಿ ಮಾನಸಿಕವಾಗಿ ಹಿಂಸೆ ಮಾಡಿಕೊಳ್ಳುವಿರಿ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ನಿಮ್ಮನ್ನು ಬೆರಳು ಮಾಡಿ ತೋರಿಸದಂತೆ ನೋಡಿಕೊಳ್ಳಿ. ದೀರ್ಘ ಪ್ರಯಾಣ ಉತ್ತಮ ದಿನವಲ್ಲ. ಕೆಲಸದ ಸ್ಥಳದಲ್ಲಿ ಒತ್ತಡ ಅಧಿಕವಾಗಬಹುದು. ಮನಸ್ಸಿನಲ್ಲಿ ಹೊಸ ಯೋಜನೆಗಳ ಬಗ್ಗೆ ಉತ್ಸಾಹ ಉಂಟಾಗಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಬಹುದು. ದೂರದ ಊರಿನ ಉದ್ಯೋಗವನ್ನು ಮಾಡಲು ಹಿಂಜರಿಯುವಿರಿ. ಆತ್ಮೀಯರ ಮಾತು ನಿಮಗೆ ಕಹಿ ಎನ್ನಿಸಲೂಬಹುದು. ದೇಹ ಆರೋಗ್ಯವಾಗಿದ್ದರೂ ಮನಸ್ಸು ನಿಮ್ಮನ್ನು ಕಟ್ಟಿಹಾಕುವುದು. ಪ್ರೇಮವು ಕಾಮವಾಗಿ ಮನಸ್ಸನ್ನು ಕೆಡಿಸುವುದು. ಸಂಬಂಧದಲ್ಲಿನ ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಯಾರಾದರೂ ಪ್ರಾಬಲ್ಯವನ್ನು ಸಾಧಿಸಬಹುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ.
ಸಿಂಹ ರಾಶಿ: ಅಪರಿಚಿತರಿಂದ ಭಯ ಕಾಡುವುದು. ಇಂದು ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಲು ಕಷ್ಟವಾಗುವುದು. ನೀವು ಆತ್ಮವಿಶ್ವಾಸವು ಶಕ್ತಿಯಿಂದ ತುಂಬಿರುವಿರಿ. ಬಹಳ ದಿನಗಳ ಅನಂತರ ಹೊರಗಿನ ಸುತ್ತಾಟವು ಹಿತವೆನಿಸುವುದು. ಗೊಂದಲ ಬರುವ ವಿಚಾರಕ್ಕೆ ಸಮಾಲೋಚನೆ ಅಗತ್ಯ. ಹಣದ ವಿಚಾರದಲ್ಲಿ ಗೆಲುವು ಇದೆ. ಸ್ನೇಹಿತರಿಂದ ಸಹಾಯ ಸಿಗುವ ಸಾಧ್ಯತೆ. ಸರ್ಕಾರದ ಕೆಲಸಕ್ಕೆ ನಿಯುಕ್ತರಾಗಬಹುದು. ಸದೃಢ ಭವಿಷ್ಯದ ನೆಲೆಗಾಗಿ ಸಣ್ಣ ಸಿದ್ಧತೆ ಆರಂಭವಾಗುತ್ತದೆ. ನೀವು ಭಾವನಾತ್ಮಕವಾಗಿ ಬಲಶಾಲಿಯಾಗಿರುತ್ತೀರಿ. ನಿಯಮಿತ ಕಾರ್ಯಗಳನ್ನು ಮಾಡುತ್ತ ಸಂತೋಷವಾಗಿ ಇರುವಿರಿ. ನಿಮ್ಮ ಮೇಲಿನ ಆರೋಪಕ್ಕೆ ಹುರುಳಿಲ್ಲದೇ ಸ್ತಬ್ಧವಾಗಲಿದೆ. ಅವಕಾಶಗಳನ್ನು ಬಿಟ್ಟುಕೊಡುವುದು ಔದಾರ್ಯವಲ್ಲ, ಆಲಸ್ಯವಾಗುವುದು. ಕೆಲ ದಿನಗಳಿಂದ ನಿಮ್ಮ ಆರೋಗ್ಯ ಹದಗೆಟ್ಟಿದ್ದು, ಮನಸ್ಸೂ ಸರಿಯಾಗಿರದು. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ಮಕ್ಕಳಿಂದ ಅನಾದರವಾಗಬಹುದು. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಬಹಳ ಕೆಲಸವಿದ್ದರೂ ಒತ್ತಡದಲ್ಲಿ ಇರುವಂತೆ ತೋರಸಲಾರಿರಿ.
ಕನ್ಯಾ ರಾಶಿ: ನಿಮ್ಮ ಕೆಲಸವನ್ನು ನೀವೇ ಹಾಳುಮಾಡಿಕೊಳ್ಳುಬಿರಿ. ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಂತೋಷಿಸುವಿರಿ. ಅವಶ್ಯಕ ವಸ್ತುವನ್ನು ಕಣ್ಮರೆ ಮಾಡಿಕೊಳ್ಳುವಿರಿ. ಇಂದು ಅನುಕೂಲಕರ ಸಮಯ. ಅನಗತ್ಯ ಮೋಜಿನಲ್ಲಿ ಸಮಯ ವ್ಯರ್ಥ ಮಾಡಬಾರದು. ಹಣಕಾಸು ಪರಿಸ್ಥಿತಿ ಬಲವಾಗಲಿದೆ. ಎಲ್ಲಿಯೂ ಪೂರ್ಣ ಬಲವನ್ನು ಹಾಕಲಾರಿರಿ. ಶಾಂತ ವಾತಾವರಣಕ್ಕಾಗಿ ಮನೆಯಲ್ಲಿ ಸಮಯ ಕಳೆಯಿರಿ. ವ್ಯವಹಾರಕ್ಕೆ ಸಮಯ ಒಳ್ಳೆಯದು. ಸಂಗಾತಿಯ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಲಾಗದು. ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ. ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ನಿಮ್ಮದನ್ನು ಕಳೆದುಕೊಳ್ಳುವ ಕೆಲಸಕ್ಕೆ ಕೈ ಹಾಕಬೇಡಿ. ಯಾರನ್ನೋ ಮೆಚ್ಚಿಸಲು ಕೆಲಸಮಾಡಬೇಕಾಗುವುದು. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಹಣಕಾಸಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇದ್ದಷ್ಟು ಉತ್ತಮ.




