
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ಬುಧವಾರದಂದು ಅಮೂಲ್ಯ ವಸ್ತು ಖರೀದಿ, ಅವಿಶ್ರಾಂತ ಸೇವೆ, ಆಲಸ್ಯ, ಆಯುಧದಿಂದ ಗಾಯ, ವಿದೇಶಪ್ರಯಾಣ, ಮನೋ ನಿಯಂತ್ರಣ, ಹೊಂದಾಣಿಕೆ, ಔದಾರ್ಯಭಾವ, ಉದ್ಯೋಗದ ತ್ಯಾಗ ಇವೆಲ್ಲ ಇಂದಿನ ಭವಿಷ್ಯ.
ಮೇಷ ರಾಶಿ : ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ನೆಲೆಸುವುದು. ಆಸ್ತಿಯನ್ನು ಖರೀದಿಸುವ ಕುರಿತು ಚರ್ಚೋಪಚರ್ಚೆಗಳನ್ನು ಮಾಡುವಿರಿ. ಆರ್ಥಿಕ ಒತ್ತಡದಿಂದ ನೀವು ಹೊರಬರಲು ದಾರಿಯನ್ನು ಹುಡುಕುವಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಸೂಚನೆ ಬರಬಹುದು.
ವೃಷಭ ರಾಶಿ : ಸಂಗಾತಿಯ ಮಾತಿನಂತೆ ನಡೆದುಕೊಳ್ಳುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ಯಾರದೋ ಮಾತನ್ನು ಕೇಳಿ ನಿಮ್ಮವರ ಬಗ್ಗೆ ತೀರ್ಮಾನ ಮಾಡಬೇಡಿ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.
ಮಿಥುನ ರಾಶಿ : ಕಾರ್ಯದ ಸ್ಥಳದಲ್ಲಿ ನಿಮಗೆ ಕಹಿಯಾದ ಅನುಭವವಾಗಲಿದೆ. ಹಿತಶತ್ರುಗಳು ಸಕಾಲಕ್ಕೆ ಕಾರ್ಯದಲ್ಲಿ ತೊಂದರೆಯನ್ನು ಕೊಡುವರು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಒತ್ತಡದ ನಿವಾರಣಡಗೆ ಸಭೆ-ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ. ಅನಿರೀಕ್ಷಿತ ರಾಜಕಾರಿಣಿಗಳ ಭೇಟಿಯಿಂದ ಕೆಲವು ಬದಲಾವಣೆಯನ್ನು ಕಾಣುವಿರಿ. ಇಂದು ದೂರ ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ.
ಕರ್ಕಾಟಕ ರಾಶಿ : ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಅಧಿಕಾರದಿಂದ ಕೆಲವು ತೊಂದರೆಯನ್ನು ಎದುರಿಸಬೇಕಾದೀತು. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ನಿಮಗೆ ಇಂದು ಪ್ರೀತಿ ಪಾತ್ರರಿಂದ ಉಡುಗೊರೆ ಬರಲಿದೆ. ವಿದ್ಯಾಭ್ಯಾಸವನ್ನು ಯೋಗ್ಯರೀತಿಯಲ್ಲಿ ನಡೆಸಲು ಕಷ್ಟವಾದೀತು. ತಾಯಿಯ ಆಸೆಯನ್ನು ಸ್ವಲ್ಪವಾದರೂ ತೀರಿಸುವಿರಿ.
ಸಿಂಹ ರಾಶಿ : ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ ಮೇಲೆ ಬರಲಿದೆ. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ.
ಕನ್ಯಾ ರಾಶಿ : ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವರು. ನಿಮ್ಮ ಬಗ್ಗೆ ಬೇರೆಯವರಿಗೆ ಔದಾರ್ಯಭಾವವು ಇರಲಿದೆ. ಹಿರಿಯರ ಭಾವನೆಯನ್ನು ನೀವು ಪೂರ್ಣ ಮಾಡುವಿರಿ. ನಿಮ್ಮ ಅಸಾಮಾನ್ಯ ಚಿಂತನೆಯು ನಿಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದು.
ತುಲಾ ರಾಶಿ : ಸಹೋದರನ ಮಾತಗಳನ್ನು ನೀವು ಜೀರ್ಣಮಾಡಿಕೊಳ್ಳುವುದು ಕಷ್ಟವಾಗಿ ಸಿಟ್ಟಾಗುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ಚಿಕ್ಕ ತಪ್ಪು ದೊಡ್ಡದಾಗಿ ಕಾಣಬಹುದು. ಹೊಸದಾಗಿ ಸಾರ್ವಜನಿಕ ಕೆಲಸದಲ್ಲಿ ಕಾರ್ಯ ಮಾಡುವವರಿಗೆ ಮುಜುಗರವಿರಲಿದೆ. ಉದ್ಯೋಗದಲ್ಲಿ ಗಾಂಭೀರ್ಯವಿರಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಸರಿಯಾದ ದಿಕ್ಕು ಕಾಣಿಸದು.
ವೃಶ್ಚಿಕ ರಾಶಿ : ಉದ್ಯೋಗಕ್ಕೆ ಅನೇಕ ಮಾರ್ಗಗಳು ತೆರೆದುಕೊಳ್ಳಲಿವೆ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನು ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ನಿಮ್ಮ ಮೇಲೆ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ ಹಾಕುವುದು ಬೇಡ. ಸತ್ಯಾಸತ್ಯತೆಯನ್ನು ಸಾಬೀತು ಮಾಡಿ. ಪ್ರಾಣಿಗಳ ಜೊತೆ ಒಡನಾಡಲಿದ್ದೀರಿ.
ಧನು ರಾಶಿ : ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ಕಣ್ಣಿಗೆ ಪರಮಸ್ವಾರ್ಥಿ ಎನಿಸಿಕೊಳ್ಳುವಿರಿ. ಆರೋಗ್ಯ ಕಡೆ ಸ್ವಲ್ಪ ಜಾಗರೂಕತೆ ಅಗತ್ಯ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡುವುದು ನಿಮಗೆ ಇಷ್ಟವಾಗದು. ಸ್ತ್ರೀಯರ ವಿಚಾರದಲ್ಲಿ ನಿಮಗೆ ಬುದ್ಧಿಯು ಸರಿಯಾಗಿ ಸೂಚಿಸದು.
ಮಕರ ರಾಶಿ : ಹಿರಿಯರಿಗೆ ಅಗೌರವದ ಮಾತುಗಳನ್ನು ಆಡುವಿರಿ. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಪ್ರಯಾಣದ ಯೋಗ ಇದೆ. ಕಿರು ಪ್ರಯಾಣ ನಿಮಗೆ ಒಳ್ಳೆಯ ಅನುಭವ ನೀಡುತ್ತದೆ. ಓದುವಿಕೆ, ಸಂಶೋಧನೆ, ಬರಹ ಹೀಗೆ ಬುದ್ಧಿವಂತಿಕೆ ಕೆಲಸಗಳಲ್ಲಿ ಆಸಕ್ತಿ. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ.
ಕುಂಭ ರಾಶಿ : ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಆಸ್ತಿಯ ವಿಚಾರವಾಗಿ ಮನೆಯಲ್ಲಿ ವಾಗ್ವಾದ ಆಗಬಹುದು. ಜೊತೆಗಿರುವವರಿಂದ ಏನನ್ನಾದರೂ ನಿರೀಕ್ಷಿಸುವಿರಿ. ವ್ಯಾಪಾರವು ಸಾಧಾರಣವಾಗಿ ಇರಲಿದೆ.
ಮೀನ ರಾಶಿ : ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ನಿರೀಕ್ಷಿಸುವಿರಿ. ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಯಾವ ಫಲಾಪೇಕ್ಷೆಯನ್ನೂ ಇಂದು ಇಟ್ಟುಕೊಳ್ಳಲಾರಿರಿ. ಕೆಲವು ನಿರ್ಧಾರಗಳಿಗೆ ಮನಶ್ಶಾಂತಿ ಅಗತ್ಯ. ಆತುರ ಬೇಡ. ಸಂಗಾತಿಯನ್ನು ಭೇಟಿಯಾಗಲು ನಾನಾ ಕಾರಣವನ್ನು ಹುಡುಕುವಿರಿ. ನಿಮ್ಮ ಮಾತಿನಿಂದ ತಾಯಿಗೆ ನೋವಾಗಬಹುದು. ವೃತ್ತಿಯಲ್ಲಿ ನಿಮ್ಮ ಸೇವೆಯು ಗಣನೀಯವಾಗಿ ಕಾಣಿಸುವುದು.
-ಲೋಹಿತ್ ಹೆಬ್ಬಾರ್-8762924271 (what’s app only)