Horoscope Today 25 November : ಇಂದು ಈ ರಾಶಿಯವರಿಗೆ ಕುಟುಂಬದ ಮೇಲೆ ಕಾಳಜಿ ಇರದು
ಶಾಲಿವಾಹನ ಶಕ 1948, ದಕ್ಷಿಣಾಯನ ಹೇಮಂತ ಋತುವಿನ ಮಾರ್ಗಶೀರ್ಷ ಶುಕ್ಲ ಪಕ್ಷದ ಪಂಚಮೀ ಮಂಗಳವಾರದ ರಾಶಿ ಭವಿಷ್ಯ. ಅತಿಯಾದ ಆಸೆ, ವಾಗ್ವಾದ, ವೃತ್ತಿಯಲ್ಲಿ ಕಿರಿಕಿರಿ, ಸೋಲು, ಆಸ್ತಿ ರಕ್ಷಣೆ ಹಾಗೂ ವಾಸ ಬದಲಾವಣೆಯಂತಹ ಸವಾಲುಗಳನ್ನು ಕೆಲವು ರಾಶಿಗಳು ಎದುರಿಸಲಿವೆ. ಆದರೆ ಪರಿಶ್ರಮ, ಸೃಜನಶೀಲತೆ ಮತ್ತು ಆರ್ಥಿಕ ಸುಧಾರಣೆಯ ಅವಕಾಶಗಳೂ ಇವೆ. ನಿಮ್ಮ ದೈನಂದಿನ ಜೀವನದಲ್ಲಿ ಎದುರಾಗಬಹುದಾದ ಶುಭ-ಅಶುಭ ಫಲಗಳನ್ನು ಅರಿತು ಜಾಗರೂಕತೆಯಿಂದ ಮುನ್ನಡೆಯಿರಿ.

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಪಂಚಮೀ (Margashirsha Panchami) ತಿಥಿ ಮಂಗಳವಾರ ಅತಿಯಾದ ಆಸೆ, ಎಲ್ಲರ ವಿರೋಧ, ವಾಗ್ವಾದ, ವೃತ್ತಿಯಲ್ಲಿ ಕಿರಿಕಿರಿ, ಸೋಲು, ಆಸ್ತಿಯ ರಕ್ಷಣೆ, ವಾಸ ಬದಲಾವಣೆ ಇವೆಲ್ಲ ಇಂದಿನ ಭವಿಷ್ಯ.
ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶೂಲಿ, ಕರಣ : ಬಾಲವ, ಸೂರ್ಯೋದಯ – 06 – 24 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:58 – 16:23, ಗುಳಿಕ ಕಾಲ 12:07 – 13:32, ಯಮಗಂಡ ಕಾಲ 09:15 – 10:41
ಮೇಷ ರಾಶಿ :
ಕೆಲಸದ ಸ್ಥಳದಲ್ಲಿ ಗಮನದ ಕೊರತೆ ಸಾಧ್ಯ, ಜಾಗ್ರತೆಯಿಂದ ಇರಿ. ಸಿಟ್ಟು ಮಾತ್ರ ತೋರಿಸಿದರೆ ನಿಮ್ಮ ಕೆಲಸವಾಗದು. ನಿಮ್ಮ ಹಲವು ದಿನಗಳ ಮನಸ್ಸಿನ ಗೊಂದಲವು ಪರಿಹಾರವಾಗುವುದು. ದುಡುಕಿನ ಕೆಲವು ಸಂದರ್ಭಗಳನ್ನು ನಿಭಾಯಿಸುವುದು ನಿಮಗೆ ಕಷ್ಟವಾದೀತು. ವ್ಯವಹಾರಕ್ಕೆ ದೂರ ಪ್ರಯಾಣ ಬರುವುದು. ಇಂದು ನಿಮ್ಮ ಅನೇಕ ದಿನಗಳ ಬಯಕೆಯನ್ನು ಪೂರ್ಣ ಮಾಡಿಕೊಳ್ಳುವ ಸಂದರ್ಭವು ಬರಬಹುದು. ರಕ್ಷಣೆಯ ವ್ಯವಸ್ಥೆಯಲ್ಲಿ ಇರುವವರಿಗೆ ಉನ್ನತ ಸ್ಥಾನವು ಸಿಗುವ ಸಾಧ್ಯತೆ ಇದೆ. ತಪ್ಪುಗಳಿಂದ ನಿಮಗೆ ಸರಿಯಾದ ತಿಳಿವಳಿಕೆ ಬರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿಗಾಗಿ ಮನೆಯಿಂದ ದೂರವಿರಬೇಕಾಗಿ ಬರಬಹುದು. ಕುಟುಂಬದವರು ನಿಮ್ಮ ಮಾತಿಗೆ ಬೆಂಬಲ ನೀಡುತ್ತಾರೆ. ಆತ್ಮೀಯರೊಂದಿಗೆ ಸಮಯ ಕಳೆಯಿರಿ. ಆರ್ಥಿಕತೆಯ ಕಾರಣದಿಂದ ಕಾರ್ಯಗಳು ಹಿಂದುಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಆಪ್ತರಿಂದ ಧನಸಹಾಯವನ್ನೂ ಬಯಸುವಿರಿ. ವಿವಾಹಕ್ಕೆ ತೊಂದರೆಯಾದ ವಿಷಯವನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉತ್ತಮ.
ವೃಷಭ ರಾಶಿ :
ಸೃಜನಶೀಲತೆ ಹರಿದು ಬರುತ್ತವೆ. ಕೆಲಸದಲ್ಲಿ ವಿಶೇಷ ಪರಿಹಾರ ಮಾರ್ಗ ಕಂಡುಹಿಡಿಯುವಿರಿ. ಯಾರದೋ ಒತ್ತಾಯಕ್ಕಾಗಿ ಮಾಡುವ ಕಾರ್ಯಗಳು ಹಾಳಾಗುವುದು. ಇಂದು ಮಹಿಳೆಯರ ಸಂಘವು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ಆದಾಯದ ಮೂಲವು ತಪ್ಪಬಹುದು. ಇನ್ನೊಬ್ಬರ ಅಪ್ರಯೋಜಕ ಸಲಹೆಗೆ ಕಿವಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುವಿರಿ. ಸ್ತ್ರೀಯರ ಬಳಿ ವಿನಂತಿ ಮಾಡಿಕೊಂಡು ಸಹಾಯವನ್ನು ಪಡೆದಯುವಿರಿ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಒಂಟಿಯಾಗಿ ಸುತ್ತಾಡುವಿರಿ. ತಂದೆ ಹಾಗೂ ಮಕ್ಕಳ ಮಧ್ಯ ಕೆಲವು ವಿಚಾರಗಳಿವೆ ಭಿನ್ನಾಭಿಪ್ರಾಯಗಳು ಬಂದು ವಾಗ್ವಾದವೂ ಆಗಬಹುದು. ಉನ್ನತಮಟ್ಟದಲ್ಲಿ ಅಧಿಕಾರಿಗಳ ಸಂಪರ್ಕವನ್ನು ಬೆಳೆಸಿಕೊಳ್ಳುವಿರಿ. ಸಂಬಂಧಗಳಲ್ಲಿ ಮಾತಿನ ಮೃದುತ್ವ ಅಗತ್ಯ. ಮಾನಸಿಕ ಶಾಂತಿ ಹೆಚ್ಚುತ್ತದೆ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಹೊಸಬರ ಗೆಳೆತನವಾಗುವುದು. ಕೃತಜ್ಞತೆಯಿಂದ ವ್ಯವಹರಿಸಿದರೆ ವಿಶ್ವಾಸ ಉಳೊಯುವುದು.
ಮಿಥುನ ರಾಶಿ :
ಪರಿಶ್ರಮ ಮತ್ತು ಶಿಸ್ತು ಫಲ ತರುತ್ತವೆ. ಕೆಲಸದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಸಾಧ್ಯ. ಹಣಕಾಸಿನಲ್ಲಿ ಸಂಗ್ರಹದ ಚಿಂತನೆ ಬರುತ್ತದೆ. ಅಕಾರಣ ಸಂತೋಷದಿಂದ ನಿಮಗೆ ಉತ್ಸಾಹದಿಂದ ಇರುವಿರಿ. ಇಂದು ನಿಮಗೆ ಯಾರಿಂದಲಾದರೂ ಹೊಗಳಿಕೆ ಸಿಗಲಿದೆ. ಸಂಗಾತಿಯ ಸ್ಪಂದನೆಯಿಂದ ಉತ್ಸಾಹವು ಅಧಿಕವಾಗುವುದು. ಹಲವು ಅವಕಾಶಗಳಲ್ಲಿ ನಿಮಗೆ ಎಲ್ಲ ರೀತಿಯಿಂದ ಉಪಯೋಗವಾಗುವುದನ್ನು ಆರಿಸಿಕೊಳ್ಳಿ. ಯಾರನ್ನಾದರೂ ದ್ವೇಷಿಸುವ ಮನೋಭಾವವು ಬರುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಇಂದು ಮಾಡಿಕೊಳ್ಳಲಾಗದು. ಆರ್ಥಿಕ ಹಾಗೂ ಸಮಯದ ನಷ್ಟದಿಂದಾಗಿ ಬೇಸರಿಸುವಿರಿ. ಆಪ್ತರು ನೀಡುವ ಹಣಕ್ಕಾಗಿ ನೀವು ಕಾಯುತ್ತಿರಬೇಕಾದೀತು. ಕುಟುಂಬದ ಕೆಲವು ವಿಷಯಗಳು ನಿಮ್ಮ ಗಮನ ಬೇಡುತ್ತವೆ. ಆರೋಗ್ಯದಲ್ಲಿ ನಿರೋಗಧಕಶಕ್ತಿ ಕಡಿಮೆ ವಿಶ್ರಾಂತಿ ಅಗತ್ಯ. ಸಾಮಾಜಿಕ ಗೌರವವನ್ನು ನೀವಿಂದು ಹೇಳಿಸಿಕೊಂಡು ಪಡೆಯುವಿರಿ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು.
ಕರ್ಕಾಟಕ ರಾಶಿ :
ಉತ್ಸಾಹ ಮತ್ತು ಪ್ರೇರಣೆಯ ದಿನ. ಹೊಸ ಯೋಜನೆಗಳಿಗೆ ಶುಭ. ಕೆಲಸದಲ್ಲಿ ವೇಗವಾಗಿ ಮುನ್ನಡೆಯಬಲ್ಲಿರಿ. ನಿಮ್ಮ ಕಛೇರಿಯ ಕಾರ್ಯಗಳು ಬೇಗನೆ ಮುಕ್ತಾಯವಾಗುವುದು. ಸಮಾರಂಭಗಳಿಗೆ ಭೇಟಿ ಕೊಡುವ ಸಂದರ್ಭವು ಬರಬಹುದು. ನಿಮ್ಮ ದಿನಚರಿಯು ಬದಲಾಗಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮವು ಉಂಟಾಗಬಹುದು. ವಿದೇಶದ ಸ್ನೇಹಿತರ ಬಾಂಧವ್ಯ ಬೆಳೆಯುವುದು. ನೀವು ಇಂದು ಅಸರಂಭಿಸಿದ ಕೆಲಸವು ಪೂರ್ಣ ಆಗುವವರೆಗೂ ವಿಶ್ರಾಂತಿಯನ್ನು ಪಡೆಯುವುದಿಲ್ಲ. ಸಂಗಾತಿಯ ಜೊತೆ ಸ್ವಲ್ಪ ಹೊತ್ತು ಕಳೆಯಬೇಕು ಎಂಬ ಮನಸ್ಸಾದೀತು. ಮಕ್ಕಳಿಂದ ಶುಭ ವಾರ್ತೆಯನ್ನು ನಿರೀಕ್ಷಿಸುವಿರಿ. ಯಾರ ಮೇಲೂ ದೋಷಾರೋಪವನ್ನು ಮಾಡುವಿರಿ. ಸಂಬಂಧಗಳಲ್ಲಿ ಮುಕ್ತತೆ, ಮುಗ್ಧತೆ ಎರಡೂ ಇರಲಿ. ಗುರುವಿನ ಕೃಪೆಯಿಂದ ಬೆಳವಣಿಗೆ ಕಾಣಬಹುದು. ನಿಮ್ಮ ಗೆಳೆತನದಿಂದ ಸಂಗಾತಿಗೆ ಅಸೂಯೆ ಉಂಟಾಗುವುದು. ಅಲ್ಪ ಸಾಲವನ್ನು ಇಟ್ಟುಕೊಳ್ಳದೇ ಪೂರ್ಣ ಮರುಪಾವತಿಸುವಿರಿ. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ದುರ್ಬಲವಾಗಿರುವುದು.
ಸಿಂಹ ರಾಶಿ :
ಗಾಢ ಚಿಂತನೆ ಹಾಗು ಬದಲಾವಣೆಯ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಕೆಲಸದಲ್ಲಿ ಹಳೆಯ ಸಮಸ್ಯೆಗೆ ಪರಿಹಾರ ಸಿಗುವುದು. ವಿದ್ಯಾರ್ಥಿಗಳ ಕನಸು ನನಸಾಗುವುದು. ಯಾರ ವ್ಯಕ್ತಿತ್ವವನ್ನೂ ನೋಡಿದ ಮಾತ್ರಕ್ಕೆ ಅಳೆಯುವಲ್ಲಿ ಸೋಲುವಿರಿ. ಇನ್ನೊಬ್ಬರ ವಿಚಾರಗಳಿಗೆ ಮೂಗುತೂರಿಸಲಿದ್ದೀರಿ. ನಿಮ್ಮ ಬಳಿ ಇರುವುದು ಮಾತ್ರ ಶ್ರೇಷ್ಠ ಎಂಬ ಭಾವನೆ ಬೇಡ. ಯಾರನ್ನೋ ಉತ್ತೇಜಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮನಸ್ಸು ಚಂಚಲವಾದ್ದರಿಂದ ಕ್ಷಣಕ್ಕೊಂದು ಆಲೋಚನೆ ಬರಬಹುದು. ನೂತನ ವಸ್ತುವಿನ ಖರೀದಿಯಿಂದ ಮೋಸ ಹೋಗುವಿರಿ. ಅನಗತ್ಯ ವಸ್ತುಗಳನ್ನು ಖರೀದಿಸಿ ಧನವ್ಯಯವಾಗುವುದು. ಮಕ್ಕಳಿಗೆ ಬೇಕಾದುದನ್ನು ಕೊಡಿಸಬೇಕಾದೀತು. ರಾಜಕಾರಣದಲ್ಲಿ ಅನಿರೀಕ್ಷಿತ ತಿರುವು ಕಾಣಿಸುವುದು. ಮನೆಯ ಬಗ್ಗೆಯೇ ಆಲೋಚನೆ ಇರುವ ಕಾರಣ ಕಛೇರಿಯಲ್ಲಿ ಕೆಲಸದ ಮನಃಸ್ಥಿತಿ ಇರದು. ಸಂಬಂಧಗಳಲ್ಲಿ ಸ್ಪಷ್ಟ ಸಂವಾದದಿಂದ ಗೊಂದಲ ನಿವಾರಣೆ. ಆತ್ಮಶೋಧನೆಗೆ ಅವಕಾಶ ಸಿಗಲಿದೆ. ವಿವಾಹವಾಗಲು ನಿಮಗೆ ಮನಸ್ಸು ಬಾರದು. ಬೇರೆಯವರ ಕಾರ್ಯಕ್ಕಾಗಿ ಓಡಾಟಮಾಡುವಿರಿ.
ಕನ್ಯಾ ರಾಶಿ :
ಹೊಸ ವ್ಯಕ್ತಿಗಳನ್ನು ಭೇಟಿಯಾಗಿ ಉಪಯುಕ್ತ ಮಾಹಿತಿಗಳು ದೊರೆಯಬಹುದು. ಹಣಕಾಸಿನಲ್ಲಿ ಸಣ್ಣ ಲಾಭಗಳ ಸೂಚನೆ. ಕಲ್ಪನಾಲೋಕದಿಂದ ಕೆಳಗಿಳಿದು ವಾಸ್ತವದಲ್ಲಿ ಇರುವುದು ಮುಖ್ಯ. ಇದ್ದಕ್ಕಿದ್ದಂತೆ ಇನ್ನೊಬ್ಬರ ಹಂಗಿನಲ್ಲಿ ಬದುಕಿದಂತೆ ಭಾಸವಾಗುವುದು. ನೆರೆಯರ ಜೊತೆ ನಿಮ್ಮ ಭಾವನೆಗಳನ್ನು ಹೇಳಿಕೊಳ್ಳುವಿರಿ. ಬರಬೇಕಾದ ಹಣವು ಸಕಾಲಕ್ಕೆ ಸಿಗದೇ ವ್ಯವಹಾರದಲ್ಲಿ ಅಡೆತಡೆಯಾಗಬಹುದು. ನೂತನ ಮನೆಯಲ್ಲಿ ಹಲವು ದಿನಗಳ ಅನಂತರ ವಾಸ ಮಾಡುವಿರಿ. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಅವಲೋಕಿಸಿ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ನಿಂದನೆಯ ಮಾತುಗಳು ಕೇಳಿಸಬಹುದು. ಬಾಲಿಶ ಮಾತುಗಳನ್ನು ಕಡಿಮೆ ಮಾಡಿಕೊಳ್ಳಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ವೃದ್ಧಿಯಾಗುವುದು. ಕೆಲಸದಲ್ಲಿ ನಿಮ್ಮ ತಂಡದ ಸಹಕಾರ ಅಗತ್ಯ. ಭಾವನಾತ್ಮಕ ವಿಷಯಗಳಲ್ಲಿ ತಾಳ್ಮೆ ಇರಲಿ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ಕಾರ್ಯಭಾರವನ್ನು ವರ್ಗಾಯಿಸಲು ಪ್ರಯತ್ನಿಸುವಿರಿ. ನಿಮ್ಮ ನೇರ ಮಾತುಗಳು ಆಪ್ತರಿಗೂ ಇಂದು ಇಷ್ಟವಾಗದು.
ತುಲಾ ರಾಶಿ :
ನಿಮ್ಮ ಯೋಜನೆಗಳ ಸಂವಾದ ಮಾಡಿ ಸ್ಪಷ್ಟವಾಗಿಸಿಕೊಳ್ಳಿ. ಕೆಲಸದಲ್ಲಿ ನಿಧಾನವಾದರೂ ದೃಢವಾದ ಫಲಗಳು. ಅಧಿಕಾರದಲ್ಲಿ ಇದ್ದರೂ ಅದನ್ನು ನಿರ್ವಹಿಸುವ ಕ್ರಮವೂ ಗೊತ್ತಿರಬೇಕು. ಅಸೂಯೆಯಿಂದ ಏನನ್ನೋ ಸಾಧಿಸಲು ಹೋಗುವಿರಿ. ಅತಿಯಾದ ಆತ್ಮವಿಶ್ವಾಸವೇ ನಿಮ್ಮನ್ನು ಕೆಳಗಿಳಿಸಬಹುದು. ಸಾಮನ್ಯ ವಿಷಯವನ್ನು ಅಸಾಮಾನ್ಯವೆನ್ನುವಂತೆ ಮಾಡುವಿರಿ. ಮಕ್ಕಳ ಕಾರಣದಿಂದ ನಿಮಗೆ ಯಾವಕಡೆಯೂ ಹೋಗಲಾಗದು. ಇನ್ನೊಬ್ಬರ ಚಿಂತನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗಿ. ನಿಮಗೆ ಗೊತ್ತಿರುವ ಕಾರ್ಯಕುಶಲತೆಯನ್ನು ಮೆಚ್ಚುಬರಲಿದೆ. ಆರೋಗ್ಯದಲ್ಲಿ ವಿಶ್ರಾಂತಿ ಅಗತ್ಯ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯವಿಲ್ಲದ ಖರೀದಿ ತಪ್ಪಿಸಿ. ಸಂಬಂಧಗಳಲ್ಲಿ ನಿಖರವಾದ ಮಾತು ಒಳ್ಳೆಯದು. ಸಂಗಾತಿಗೆ ನಿಮ್ಮಿಂದ ಅಪರೂಪದ ಉಡುಗೊರೆಯು ಸಿಗಲಿದೆ. ಬಿಟ್ಟ ಅಭ್ಯಾಸವನ್ನು ಪುನಃ ಬೆಳೆಸಿಕೊಳ್ಳುವಿರಿ. ನಿಮ್ಮ ಸರಳತೆಯು ನಿಮಗೆ ಅಲ್ಪ ಯಶಸ್ಸನ್ನು ಕೊಡುವುದು.
ವೃಶ್ಚಿಕ ರಾಶಿ :
ಕೆಲಸದಲ್ಲಿ ನಿಮ್ಮ ಶಕ್ತಿ ಮತ್ತು ಗಮನ ಉತ್ತಮ. ಹೊಸ ಸಂಪರ್ಕಗಳು ಲಾಭಕಾರಕ. ಹಣಕಾಸಿನಲ್ಲಿ ಪುನರ್ವ್ಯವಸ್ಥೆ ಮಾಡುವ ದಿನ. ನಿಮ್ಮ ಪ್ರತಿಭೆಯ ಪರಿಚಯು ನಿಮಗೂ ಇತರರಿಗೂ ಆಗುವುದು. ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ಮನಸ್ಸಿನ ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳಲು ಅಗತ್ಯ ವಿಧಾನವನ್ನು ರೂಪಿಸಿಕೊಳ್ಳುವಿರಿ. ಜಾಗರೂಕತೆಯಿಂದ ಮಾಡುವ ಕಾರ್ಯಕ್ಕೆ ತೊಂದರೆ ಬರುವುದು. ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸಾಧ್ಯವಾಗಬಹುದು. ನಿಮ್ಮ ಅಸಹಜ ವರ್ತನೆಯಿಂದ ಸಂಗಾತಿಗೆ ಸಿಟ್ಟು ಬರಬಹುದು. ನಾಯಕತ್ವ ಗುಣ ಬೆಳಕಿಗೆ ಬರಲಿದೆ. ಸಂಬಂಧಗಳಲ್ಲಿ ಹಳೆಯ ಅಸಮಾಧಾನ ಪರಿಹಾರವಾಗುವ ಸಾಧ್ಯತೆ. ಆತ್ಮವಿಶ್ವಾಸದಿಂದ ಮುಂದೆ ನಡೆಯಿರಿ. ನಿಮ್ಮ ನಕಾರಾತ್ಮಕ ವರ್ತನೆಯ ಬಗ್ಗೆ ಯಾರಾದರೂ ಹೇಳಿಯಾರು. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗಿರುವಿರಿ. ಹಂಚಿಕೊಳ್ಳುವ ಸ್ವಭಾವ ಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸಿ ಅವಕಾಶದಿಂದ ವಂಚಿತರಾಗುವಿರಿ.
ಧನು ರಾಶಿ :
ಭಾವನಾತ್ಮಕವಾದ ಸ್ಪಂದನೆ ಹೆಚ್ಚುವುದು. ಕುಟುಂಬದ ವಿಷಯಗಳಲ್ಲಿ ಸಮಯ ಕಳೆಯುವುದು ಶ್ರೇಷ್ಠ. ಹಣಕಾಸಿನಲ್ಲಿ ಪ್ರಗತಿ ನಿಧಾನವೂ ಸ್ಥಿರವೂ ಆಗಿರುತ್ತದೆ. ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಇಲ್ಲದಿದ್ದರೂ ಒತ್ತಾಯಕ್ಕೆ ಮಾಡಬೇಕಾದೀತು. ಸಂಗಾತಿಯ ನಡುವಿನ ಕಿತ್ತಾಟವು ತಾರಕಕ್ಕೆ ಹೋಗಬಹುದು. ಇಂದು ನಿಮಗೆ ಬಿಚ್ಚು ಮನಸ್ಸಿನಿಂದ ಮಾತನಾಡಲು ಇಷ್ಟವಾಗದು. ಆದಷ್ಟು ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ ಮೌನವಾಗಿ ಇರುವಿರಿ. ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚಾಗಿದರೂ ಫಲ ಉತ್ತಮ. ಭಾವನೆಗಳನ್ನು ಹಂಚಿಕೊಳ್ಳುವಲ್ಲಿ ಜಾಗ್ರತೆ ಮುಖ್ಯ. ರೈತರು ಲಾಭದಾಯಕ ಕಾರ್ಯದಲ್ಲಿ ಮಗ್ನರಾಗುವರು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ವಿಧವಾದ ಪ್ರಯತ್ನವನ್ನು ಮಾಡುವಿರಿ. ಮಕ್ಕಳ ಜೊತೆ ಸಮಯ ಕಳೆಯಲು ಸಮಯದ ಅಭಾವ ಇರುವುದು. ನಷ್ಟವಾದುದನ್ನೇ ಇಂದು ಹೆಚ್ಚು ಚಿಂತಿಸುವಿರಿ.
ಮಕರ ರಾಶಿ :
ಸಂಚಾರ, ಸಂವಹನ, ಮಾತುಕತೆಗಳಲ್ಲಿ ತಪ್ಪು ಅರ್ಥಗಳ ಸಂಭವ ಇದೆ. ಕೆಲಸದಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ. ಹಳೆಯ ವಸ್ತುಗಳನ್ನು ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗುವುದು. ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ಅಧಿಕಾರಿಗಳಿಂದ ನಿಮಗೆ ಒತ್ತಡ ಬರಬಹುದು. ಕಛೇರಿಯ ಕಾರ್ಯವು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳನ್ನು ನೀವು ಮರೆಯುವಿರಿ. ನಿಮ್ಮವರೇ ಆದರೂ ಕಳೆದುಕೊಂಡ ನಂಬಿಕೆಯನ್ನು ಮತ್ತೆ ತೋರಿಸಲಾರಿರಿ. ವಿದ್ಯುತ್ ಉಪಕರಣದ ಖರೀದಿ ಮಾಡುವಿರಿ. ಹೊಸತನ್ನು ಕಲಿಯುವ ಆಸೆಯು ಇಲ್ಲವಾಗುವುದು. ನಿಮ್ಮದೇ ಚಿಂತನೆಯನ್ನು ಕೆಲಸದಲ್ಲಿ ಯೋಜಿಸಲಿದ್ದೀರಿ. ಸಂಬಂಧಗಳಲ್ಲಿ ಸತ್ಯತ್ವ ಕಾಪಾಡಿದರೆ ದಿನ ಸುಗಮವಾಗುವುದು. ಮಾತನ್ನೂ ಕೇಳುವ ಸಹನೆಯು ಬೇಕಾದೀತು. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬಾರದಿರುವುದು ಹಠದವನ್ನು ಉಂಟುಮಾಡೀತು. ಇಂದಿನ ಕೆಲಸವು ಸಮಯದ ಅಭಾವದಿಂದ ಪೂರ್ಣವಾಗದು.
ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?
ಕುಂಭ ರಾಶಿ :
ಕೌಟುಂಬಿಕ ವಿಷಯಗಳಲ್ಲಿ ಸ್ಪಷ್ಟತೆ ಬರುತ್ತದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲಿಕ ಯೋಜನೆಗಳಿಗೆ ಉತ್ತಮ ಸಮಯ. ನಿಮ್ಮನ್ನು ಯಾರಾದರೂ ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ವಾಹನ ದುರಸ್ತಿಯು ತುರ್ತಾಗಿ ಬರಬಹುದು. ನಿಮ್ಮದಲ್ಲದ್ದನ್ನು ಬಯಸುವಿರಿ. ಅತಿಯಾದ ಮೋಹದಿಂದ ತಪ್ಪು ಗ್ರಹಿಕೆ ಬರುವುದು. ಸಂಗಾತಿಗೆ ಹೇಳಬೇಕಾದುದನ್ನು ಹೇಳಲಾಗದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ವಿಜಯ ಪ್ರಾಪ್ತಿ. ಗೆಳೆಯರ ಸಹವಾಸವನ್ನು ಬಿಡುವುದು ಅನಿವಾರ್ಯವಾದೀತು. ಮುಖ್ಯಸ್ಥರಾಗಿದ್ದು ಯಾರ ವಿಚಾರದಲ್ಲಿಯೂ ಪಕ್ಷಪಾತವನ್ನು ಮಾಡುವುದು ಯೋಗ್ಯವಲ್ಲ. ಖರ್ಚುಗಳಲ್ಲಿ ನಿಯಂತ್ರಣ ಅಗತ್ಯ. ಆರೋಗ್ಯದಲ್ಲಿ ಚಿಕ್ಕ ತೊಂದರೆಗಳಿದ್ದರೂ ಶೀಘ್ರ ಸುಧಾರಣೆ ಕಂಡುಬರುತ್ತದೆ. ಮನೆಯಿಂದ ದೂರವಿರಲು ಇಷ್ಟಪಡುವಿರಿ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು.
ಮೀನ ರಾಶಿ :
ಆತ್ಮವಿಶ್ವಾಸ ಹೆಚ್ಚಾಗಿ ಕೆಲಸದಲ್ಲಿ ಅಡಕವಾಗಿದ್ದ ವಿಷಯಗಳು ನಿಧಾನವಾಗಿ ಮುನ್ನೆಲೆಗೆ ಬರಲಿವೆ. ಸ್ನೇಹಿತರಿಂದ ಸಲಹೆ ಸಿಗುವುದು ಸಹಾಯಕರ. ಬೇಸರದಲ್ಲಿ ಇರುವ ನಿಮಗೆ ಮತ್ತೆ ಬೇಸರ ತರಿಸುವ ಕೆಲಸವನ್ನು ಮಾಡಿಸಬಹುದು. ಮನೋವಿಕಾರದ ಕಾರಣ ಎಲ್ಲರಿಂದ ನಿಂದನೆ ಬರಬಹುದು. ನಿಮ್ಮ ನಿರೀಕ್ಷೆಯು ಹುಸಿಯಾಗಿ ಬೇಸರವು ಬರಬಹುದು. ಹಳೆಯ ಪ್ರೀತಿಯು ನಿಮ್ಮನ್ನು ಕಾಡಬಹುದು. ವಿನಯಶೀಲತೆಯು ಇಂದು ದುಃಖ ಕೊಡಬಹುದು. ಸಂಗಾತಿಯನ್ನು ನೀವೇ ಬೇಸರಿಸಿ ಬೆಣ್ಣೆ ಹಚ್ಚುವಿರಿ. ಇಂದು ನಿದ್ರೆಯನ್ನು ಅಧಿಕವಾಗಿ ಮಾಡುವಿರಿ. ಸಹೋದರರ ಜೊತೆಗಿನ ಮಾತುಕತೆ ಸಂತಸವನ್ನು ನೀಡುವುದು. ನೌಕರರಿಂದ ನಿಮ್ಮ ಕೆಲಸವು ಅನಾಯಾಸವಾಗಿ ಮುಗಿಯುವುದು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ಸ್ನೇಹಿತರ ಜೊತೆ ಸುತ್ತಾಟ ಮಾಡುವಿರಿ. ನಿಮ್ಮ ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಸಂಬಂಧಗಳಲ್ಲಿ ಮಾತಿನ ನಿಯಂತ್ರಣ ಇರಲಿ. ಮನಸ್ಸು ಶಾಂತವಾಗಿಡುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ.
-ಲೋಹಿತ ಹೆಬ್ಬಾರ್-8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




