ನಿಮ್ಮ ಅವಕಾಶವನ್ನು ಬೇರೆಯವರು ಉಪಯೋಗಸಿಕೊಳ್ಳುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ಪ್ರತಿಪತ್/ ದ್ಚಿತೀಯಾ ತಿಥಿ, ಬುಧವಾರ ವಿದ್ಯಾಭ್ಯಾಸದಲ್ಲಿ ಉತ್ತಮ ಗತಿ, ಭವಿಷ್ಯದ ಚಿಂತನೆ, ಬಿಟ್ಟ ಕಾರ್ಯದ ಮುಂದುವರಿಕೆ ಇವು ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್ / ದ್ವಿತೀಯಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಸುಕರ್ಮ, ಕರಣ: ಕಿಂಸ್ತುಘ್ನ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 55 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:30 – 14:07, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:54 – 12:30
ತುಲಾ ರಾಶಿ: ದ್ವೇಷ ಸಾಧಿಸುವ ಕಾರ್ಯ ಸಕ್ರಿಯವಾಗಿದ್ದು, ಇಂದು ಅದು ಗೊತ್ತಾಗಲಿದೆ. ಕಾನೂನಾತ್ಮಕ ಪ್ರತಿ ತಂತ್ರದಿಂದ ಜಯ ಸಾಧ್ಯ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಎಲ್ಲರೂ ಕುಳಿತು ಚರ್ಚಿಸುವರು. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಇರಲಾಗದು. ನಿಮಗೆ ಇಂದು ಆದರ್ಶ ವ್ಯಕ್ತಿತ್ವವು ಸಿಗಲಿದ್ದು ಅವರನ್ನು ಅನುಸರಿಸುವ ಸಾಧ್ಯತೆ ಇದೆ. ನಿಮ್ಮ ಅವಕಾಶವನ್ನು ಬೇರೆಯವರು ಉಪಯೋಗಸಿಕೊಳ್ಳುವರು. ವ್ಯವಸ್ಥಿತವಾಗಿ ದಿನಚರಿಯನ್ನು ನಿರ್ವಹಿಸಿ. ಅಧ್ಯಾತ್ಮದಲ್ಲಿ ಮನಸ್ಸು ತೊಡಗಿಸಬಹುದು. ಮೌಲ್ಯಯುತ ಮಾತುಗಳಿಂದ ಜನರ ಮನ ಗೆಲ್ಲಬಹುದು. ವಿದ್ಯುತ್ ಅಥವಾ ಯಂತ್ರೋಪಕರಣಗಳಲ್ಲಿ ನಷ್ಟವಿದೆ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ಪ್ರೀತಿಯಿಂದ ನೀವು ಮೋಸಹೋಗುವ ಸಾಧ್ಯತೆ ಇದೆ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು.
ವೃಶ್ಚಿಕ ರಾಶಿ: ಹೊಸ ಮನೆಯ ವಾಸದಿಂದ ಆರೋಗ್ಯ ಹಾಳು. ಬದಲಾವಣೆ ಮಾಡುವ ಸ್ಥಿತಿ ಬಂದೀತು. ಸಂಗಾತಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದು. ಇಂದು ಅಪರಿಚಿತ ಕರೆಗಳು ನಿಮ್ಮನ್ನು ಕೆಲಸಕ್ಕೆ ತೊಂದರೆಕೊಡಬಹುದು. ಯಾರದೋ ಕಾರಣಕ್ಕೆ ನಿಮಗೆ ಅಪಮಾನ. ಸಂಪೂರ್ಣ ಮಾಹಿತಿಯ ಜೊತೆ ಅನ್ವೇಷಣೆಗೆ ಮುಂದುವರಿಯಿರಿ. ವ್ಯಕ್ತಿಗಳ ನಿಂದನೆಯನ್ನು ಮಾಡುವ ಕೆಲಸಕ್ಕೆ ವಿರಾಮವನ್ನು ಹೇಳಿ. ಇಲ್ಲವಾದರೆ ನಿಮಗೇ ಕಂಟಕವಾದೀತು. ನಿರಂತರವಾದ ಶ್ರಮದಿಂದ ಬಳಲಲಿದ್ದೀರಿ. ಮಿತ್ರರೊಂದಿಗೆ ವಿರೋಧ ನಡೆಯಬಹುದು, ತಾಳ್ಮೆಯಿಂದ ವರ್ತಿಸಿ. ಮಿತಭಾಷಿಯಾಗಿ ಸಮಸ್ಯೆ ತಪ್ಪಿಸಬಹುದು. ದೂರದ ಪ್ರಯಾಣ ಸಾಧ್ಯತೆ ಇದೆ. ಹಣಕಾಸು ಲಾಭದೊರೆಯಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ತೃಪ್ತಿ ಕಾಣುವಿರಿ. ನಿಮ್ಮ ಬಂಧುಗಳಿಗೆ ನಿಮ್ಮ ಬಗ್ಗೆ ಕೆಲವು ವಿಚಾರಗಳು ತಿಳಿಯಲಿವೆ. ಮಹಿಳೆಯ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು.
ಧನು ರಾಶಿ: ಬೌದ್ಧಿಕ ಚಟುವಟಿಕೆಯಲ್ಲಿ ಸೋಲಾದರೆ ನಿಮಗೆ ಕೋಪ ಬರುವುದು. ಸೋಲಿಸುವ ತನಕ ನಿಮಗೆ ನೆಮ್ಮದಿ ಇರದು. ಇಂದು ನೀವು ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬೇಕು ಎಂದುಕೊಳ್ಳುವಿರಿ. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಅವಸರದ ನಿರ್ಧಾರದಿಂದ ಅನಂತರ ನಿಮಗೆ ಕಷ್ಟವಾಗಲಿದೆ. ನಿಮ್ಮ ಶ್ರಮದ ಫಲ ಇಂದು ಸಿಗಬಹುದು. ಪೋಷಕರ ಆರೋಗ್ಯದ ಬಗ್ಗೆ ಚಿಂತೆಯಿರಬಹುದು. ಹೊಸ ಕೆಲಸಕ್ಕೆ ಅವಕಾಶಗಳು ಲಭ್ಯವಾಗುತ್ತವೆ. ಕುಟುಂಬದೊಂದಿಗೆ ಪ್ರಯಾಣಿಸಲು ನಿಮಗೆ ಅವಕಾಶ ಸಿಗುತ್ತದೆ. ಭವಿಷ್ಯದ ಕುರಿತು ಯೋಚನೆಯನ್ನು ಮಾಡಲಿದ್ದೀರಿ. ನಿಮಗೆ ಇಷ್ಟವಾದ ಭೂಮಿಯ ಖರೀದಿಗೆ ಅನ್ಯಮಾರ್ಗವನ್ನು ಬಳಸಿಕೊಳ್ಳುವಿರಿ.ನಿಮ್ಮ ಸಿಟ್ಟಿನ ಸ್ವಭಾವದಿಂದ ಏನನ್ನೂ ಸಾಧಿಸಲಾಗದು. ಸಾಮಾಜಿಕ ಕಾರ್ಯಗಳಿಗೆ ಬೇಕಾದ ತಂಡವನ್ನು ಕಟ್ಟುವ ಆಸೆ ಇರುವುದು. ಯಾರನ್ನೋ ನೋಡಿ ನೀವು ಅಸೂಯೆ ಪಡೆಯುವುದು ಬೇಡ. ಯಾವ ಸಂದರ್ಭದಲ್ಲೊಯೂ ಉದ್ವೇಗಕ್ಕೆ ಒಳಗಾಗುವುದು ಬೇಡ.
ಮಕರ ರಾಶಿ: ಕುಶಲತೆಯ ವಿಚಾರದಲ್ಲಿ ಪೈಪೋಟಿ ನಡೆಯಬಹುದು. ನಿಮಗೆ ಆಲೋಚನೆಯ ಕಾರಣದಿಂದ ಸರಿಯಾಗಿ ನಿದ್ರೆ ಬಾರದೇ ಎಲ್ಲವೂ ಅಸ್ತವ್ಯಸ್ತವಾಗಬಹುದು. ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ನಿಮ್ಮ ಹಳೆಯ ಸಮಸ್ಯೆಗೆ ಸಹಚರರಿಂದ ಪರಿಹಾರ ಸಿಗುತ್ತದೆ. ಪ್ರಸ್ತುತ ಕೆಲಸಗಳ ಮೇಲೆ ಮಾತ್ರ ಗಮನಹರಿಸಿ. ಹಣಕಾಸಿನ ಹೂಡಿಕೆಗೆ ಅನುಕೂಲಕರ ಸಮಯ, ಆದರೆ ಆತುರಪಡುವುದನ್ನು ತಪ್ಪಿಸಿ. ಇಲ್ಲ ಸಲ್ಲದ ಆಲೋಚನೆಗಳನ್ನು ಬಿಡಿ. ನಿಮ್ಮ ಕಾರ್ಯಕ್ಕೆ ಸಾರ್ವಜನಿಕಾಗಿ ಗೌರವಗಳು ಸಿಗಲಿವೆ. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಶಿಸ್ತನ್ನು ಕಾಪಾಡಿಕೊಳ್ಳಲು ಬಯಸುವಿರಿ. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. .
ಕುಂಭ ರಾಶಿ: ಹಿರಿಯರಿಗೆ ಹಿಂದೆ ಮುಂದೆ ಅಗೌರವದ ಮಾತನಾಡುವುದು ಬೇಡ. ನೊಂದರೆ ಅದೇ ಶಾಪವಾಗಬಹುದು. ತಪ್ಪುಗಳಿದ್ದರೆ ಅದನ್ನು ಹೇಳುವುದು ಬೇಡ. ಇಂದು ಸಹೋದ್ಯೋಗಿಗಳು ನಿಮಗೆ ಸಿಗುವ ಜವಾಬ್ದಾರಿಯನ್ನು ಸಿಗದಂತೆ ಮಾಡುವರು. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ಆದಾಯದ ಜೊತೆ ಖರ್ಚುಗಳ ಮೇಲೆ ನಿಯಂತ್ರಣ ಅಗತ್ಯ. ಸಹೋದ್ಯೋಗಿಗಳೊಂದಿಗೆ ಸಮನ್ವಯ ಸಾಧಿಸುವಿರಿ. ಮಾತಿನಲ್ಲಿ ಮೃದುತ್ವ ಇರಲಿ, ನಷ್ಟ ತಪ್ಪಿಸಬಹುದು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒಳಿತು. ಪರಿವಾರದೊಂದಿಗೆ ಸಮಯ ಕಳೆಯಿರಿ. ಬಹಳ ದಿನಗಳಿಂದ ಬಾರದೇ ಇರುವ ಹಣಕ್ಕೆ ಚಿಂತೆ ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಪ್ರಶಂಸೆಯು ನಿಮಗೆ ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಿಸುವುದು. ನ್ಯಾಯ ಸಮ್ಮತವಾಗಿ ಇರಿ. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ.
ಮೀನ ರಾಶಿ: ನಿಮಗಾದ ಅವಮಾನವನ್ನು ಅನ್ಯರು ಒಂದು ಸರಿಮಾಡಲಾಗದು. ನೀವೇ ಧೈರ್ಯದಿಂದ ಎದುರಿಸಿದರೆ ಶ್ರೇಯಸ್ಸು. ನೀವು ಮಕ್ಕಳ ಜೀವನವನ್ನು ಕಂಡು ಸಂಕಟಪಡುವಿರಿ. ಅದಕ್ಕಾಗಿ ಏನಾದರೂ ಮಾಡಲು ಯೋಚಿಸುವಿರಿ. ಸಂತೋಷದಲ್ಲಿ ಇರುವಾಗಲೇ ಒತ್ತಡವನ್ನು ಸೃಷ್ಟಿಮಾಡಬಹುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಮಾತಿಗೆ ಮಹತ್ತ್ವ ಸಿಗಲಿದೆ. ಹಳೆಯ ಸ್ನೇಹಿತರಿಂದ ಪರಿಹಾರ ಬರುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭದ ದಿನವಾಗಬಹುದು. ಮಕ್ಕಳಿಂದ ಸಂತೋಷ ಮತ್ತು ಪ್ರೋತ್ಸಾಹ ಸಿಗಲಿದೆ. ಎಲ್ಲ ಕಡೆಗಳಿಂದ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುವಿರಿ. ಇಂದು ಬಿಡುವಿಲ್ಲದ ದಿನವಾಗಿರುವುದು. ಕೆಲವು ವಿಚಾರಕ್ಕೆ ತುಂಬಾ ಭಾವುಕರಾಗಬಹುದು. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿರದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ.




