Horoscope: ಈ ರಾಶಿಯ ರಾಜಕೀಯ ವ್ಯಕ್ತಿಗಳು ಬೆಂಬಲಿಗರನ್ನು ಕಳೆದುಕೊಳ್ಳುವ ಸಾಧ್ಯತೆ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯ ರಾಜಕೀಯ ವ್ಯಕ್ತಿಗಳು ಬೆಂಬಲಿಗರನ್ನು ಕಳೆದುಕೊಳ್ಳುವ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 03 ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಐಂದ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:16 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:36 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:56 ರಿಂದ 09:23ರ ವರೆಗೆ.

ಮೇಷ ರಾಶಿ: ಸ್ನೇಹಿತರ ಜೊತೆ ಪಾಲುದಾರಿಕೆಯಲ್ಲಿ ಸೇರಿಕೊಳ್ಳುವಿರಿ. ನಿಮ್ಮ ಕಾರ್ಯವನ್ನು ಮಿತ್ರರ ಮೂಲಕ ಮಾಡಿಕೊಳ್ಳುವಿರಿ. ನಿರ್ದಿಷ್ಟ ಸಮಯಕ್ಕೆ ಆಗುವ ಕೆಲಸವು ಸಮಯದ ಮಿತಿಯನ್ನು ಮೀರಬಹುದು. ಅಪರಿತ ಕರೆಗಳಿಂದ ನಿಮಗೆ ಸಂಕಟವಾಗಬಹುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಉತ್ಸಾಹವೇ ಇರದು. ಶತ್ರುಗಳ ಭಯವು ಕಾರ್ಯವನ್ನು ನಿಧಾನ ಮಾಡಿಸುವುದು. ನಿಮ್ಮ ಒತ್ತಡಗಳನ್ನು ಮರೆತು ನಿಶ್ಚಿಂತೆಯಿಂದ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ಇಂದಿನ‌ ಕೆಲವು ಜವಾಬ್ದಾರಿಯನ್ನು ಕೊಡುವಿರಿ. ಸಂಗಾತಿಯು ಕಡೆಗಣನೆಗೆ ನಿಮ್ಮ ಮೇಲೆ ಬೇಸರವಾಗಬಹುದು. ತಂದೆ ತಾಯಿಗಳನ್ನು ಪುಣ್ಯಕ್ಷೇತ್ರಗಳಿಗೆ ಕಳುಹಿಸುವಿರಿ.

ವೃಷಭ ರಾಶಿ: ದೂರ ಪ್ರಯಾಣದಿಂದ ಆರೋಗ್ಯವು ಕೆಡಬಹುದು. ಪುಣ್ಯಸ್ಥಳಗಳ ಭೇಟಿಯಿಂದ ಖುಷಿಯಾಗುವುದು. ಸಾಹಿತ್ಯ ಆಸಕ್ತರಿಗೆ ಉತ್ತಮ ಅವಕಾಶಗಳು ಸಿಗುವುದು. ಸ್ವಂತ ವಾಹನದ ದುರಸ್ತಿಯಿಂದ ಧನ ನಷ್ಟ. ನಿಮ್ಮ ಸಲಹೆಯನ್ನು ಕೇಳದಿರುವುದು ಇಷ್ಟವಾಗದು. ನೌಕರರು ನಿಮ್ಮ ಮೇಲೆ‌ ಸಿಟ್ಟಾಗಬಹುದು. ಸೌಕರ್ಯಕ್ಕೆ ತಕ್ಕ ಹಾಗೆ ದಿನಚರಿಯನ್ನು ಬದಲಿಸಿ. ಪ್ರಭಾವೀ ವ್ಯಕ್ತಿಗಳಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಇಂದು ನಿಮ್ಮ ಸಂಗಾತಿಯಿಂದ ಭವಿಷ್ಯಕ್ಕೆ ಸಲಹೆಯು ಸಿಗಬಹುದು.‌ ನಿಮ್ಮ ಮನೆ ನಿರ್ಮಾಣದ ಕೆಲಸವು ಅರ್ಧಕ್ಕೆ ನಿಲ್ಲಬಹುದು. ಸತ್ಕಾರ್ಯಕ್ಕೆ ನಿಮ್ಮಿಂದ ಕೊಡುಗೆ ಇರುವುದು.

ಮಿಥುನ ರಾಶಿ: ಕೆಲಸಗಳು ಪೂರ್ಣವಾಗದೇ ಇರುವುದು ನಿಮಗೆ ಆಂತಕವಾಗಬಹುದು. ಜವಾಬ್ದಾರಿಯ ಕೆಲಸವನ್ನು ಜಾಗರೂಕತೆಯಿಂದ ಮಾಡಿ. ದಾಂಪತ್ಯದ ಕಲಹವು ಮುಕ್ತಾಯವಾಗುವುದು. ಹೊಸ ಕೆಲಸಗಳನ್ನು ನಿರ್ವಹಿಸಲು ಧೈರ್ಯ ಸಾಲದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ‌ಫಲಿತಾಂಶವನ್ನು ಪಡೆಯುವರು. ಆಕಸ್ಮಿಕ ಧನಲಾಭದಿಂದ ನಿಮಗೆ ಖುಷಿಯಾಗುವುದು. ಹಿರಿಯರ ಬಗ್ಗೆ ನಿಮಗೆ ಪೂಜ್ಯ ಭಾವವು ಬರಬಹುದು. ನಿಮ್ಮವರ ಧನ ಸಹಾಯವನ್ನು ಕೇಳಲು ಮುಜುಗರವಾದೀತು. ಅನ್ಯ ಚಿಂತೆಯಿಂದ ನಿದ್ರೆಗೆ ಭಂಗ. ಅನವಶ್ಯಕ ಮಾತುಗಳಿಂದ ವಿವಾದವಾಗುವುದು. ಹಂಚಿಕೊಂಡು ಮಾಡುವ ಕೆಲಸವು ವೇಗವಾಗಿ ಮುಗಿಯುವುದು.

ಕಟಕ ರಾಶಿ: ಅಧಿಕಾರಿಗಳ ವರ್ಗದವರು ನಿಮ್ಮ‌ ವ್ಯವಹಾರದ ಮೇಲೆ‌ ಕಣ್ಣಿಡುವರು. ರಾಜಕೀಯ ವ್ಯಕ್ತಿಗಳು ಬೆಂಬಲಿಗರನ್ನು ಕಳೆದುಕೊಳ್ಳಬಹುದು. ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ನಿದ್ರೆಯಿಂದ ಆಲಸ್ಯವು ಹೆಚ್ಚಾಗುವುದು. ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವಿರಿ. ಸ್ತ್ರೀಯರಿಗೆ ಇಂದು ಸಂತೋಷದ ದಿನ. ಎಲ್ಲರೆದುರೂ ಸಿಟ್ಟಿನಿಂದ ಕೂಗಾಡುವುದು ಬೇಡ.‌ ಪೋಷಕರು ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅವಶ್ಯ. ನೆರಮನೆಯರ ಜೊತೆ ಮಾತಿಗೆ ಮಾತು ಬೆಳೆದು ಕಲಹವಾಗಬಹುದು. ನಿಮ್ಮ ವಸ್ತುವಿನ ಮೇಲೆ‌ ವ್ಯಾಮೋಹವು ಅಧಿಕವಾಗಬಹುದು. ಚಿತ್ತವು ಚಾಂಚಲ್ಯದಿಂದ ಇರುವುದು. ಅಪರಿಚಿತರ ಜೊತೆ ವ್ಯವಹಾರವನ್ನು ಹಂಚಿಕೊಳ್ಳುವಿರಿ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ