Horoscope: ರಾಶಿಭವಿಷ್ಯ, ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ, ಕೆಲ ವಿಚಾರಗಳಲ್ಲಿ ಎಚ್ಚರಿಕೆ ಇರಲಿ
ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 12 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:48 ರಿಂದ 03:16ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:24 ರಿಂದ 07:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:50ರ ವರೆಗೆ.
ಮೇಷ ರಾಶಿ: ಉದ್ಯೋಗದಲ್ಲಿ ತಾರತಮ್ಯ ಭಾವವನ್ನು ತೋರಿಸಬೇಡಿ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಪ್ರಾಪ್ತವಾಗುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ದೂರವಾಣಿಯ ಬಳಕೆಯನ್ನು ಕಡಿಮೆ ಮಾಡಬೇಕು ಎಂದೆನಿಸುವುದು. ಸಂಗಾತಿಯ ಮಾನಸಿಕತೆಯು ನಿಮಗೆ ಗೊತ್ತಾಗದು. ಬಂಧುಗಳನ್ನು ಭೇಟಿಯಾಗಿ ಸ್ವಲ್ಪ ಹಗುರಾಗುವಿರಿ. ವರ್ತಮಾನದ ಘಟನೆಗಳು ತಿಳಿದಿದ್ದರೂ ಗೊತ್ತಿಲ್ಲದವರಂತೆ ಇರುವಿರಿ.
ವೃಷಭ ರಾಶಿ: ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ. ಮನೋವ್ಯಥೆಯಿಂದ ನಿಮಗೆ ಬಹಳಷ್ಟು ತೊಂದರೆಗಳು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ. ಸಂಗಾತಿಯ ಮಾತಿನಲ್ಲಿ ನಿಮಗೆ ನಂಬಿಕೆ ಬರದು. ನಿಮ್ಮೊಳಗೇ ಇಟ್ಟುಕೊಂಡ ಅಸಮಾಧಾನವನ್ನು ಹೊರಹಾಕುವಿರಿ. ಕಳೆದು ಹೋದುದರ ಬಗ್ಗೆ ಅತಿಯಾಗಿ ಆಲೋಚಿಸಿ ಫಲವಿಲ್ಲ. ಹಠಮಾರಿ ಸ್ವಭಾವದಿಂದ ಮನೆಯಲ್ಲಿ ತೊಂದರೆ ಆದೀತು. ಕೆಲವು ಸಂಗತಿಗಳನ್ನು ನೀವು ಬಿಡಬೇಕು ಎಂದುಕೊಂಡರೂ ಅದು ಆಗದು. ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಿ.
ಮಿಥುನ ರಾಶಿ: ಅತಿಯಾದ ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ಎಡವುವಿರಿ. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ಸಾಲ ಕೊಟ್ಟವರು ಏನೂ ಹೇಳದೇ ಇರುವುದರಿಂದ ನಿಮಗೆ ಸ್ವಲ್ಪ ನೆಮ್ಮದಿ ಸಿಗಲಿದೆ. ನೀವು ಇಂದು ಪಕ್ಷಪಾತಕ್ಕೆ ಹೆಸರಾಗಬಹುದು. ದೂರ ಪ್ರಯಾಣವು ನಿಮಗೆ ನೋವನ್ನು ತರಬಹುದು. ಅನಿರೀಕ್ಷಿತ ಸಂಪತ್ತನ್ನು ತಂದೆಯಿಂದ ಪಡೆಯುವಿರಿ. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸಬೇಕಾಗುವುದು. ನಿಮಗೆ ಉಂಟಾದ ಅನುಕೂಲ ಸ್ಥಿತಿಯನ್ನು ನೀವು ಪುಣ್ಯವೆಂದು ತಿಳಿಯುವಿರಿ. ಬೇರೆಯವರನ್ನು ಆಶ್ರಯಿಸುವುದು ನಿಮಗೆ ಇಷ್ಟವಾಗದ ವಿಚಾರವಾಗಿದೆ. ನಿಮ್ಮವರ ಸ್ವಭಾವವು ಗೊತ್ತಿದ್ದೂ ಅದರ ಬಗ್ಗೆ ಬೇಸರಪಡಬೇಕಿಲ್ಲ.
ಕಟಕ ರಾಶಿ: ನಿಮ್ಮ ಕಾರ್ಯವು ವಿಳಂಬವಾಗಲು ಕಾರ್ಮಿಕರು ಕಾರಣವಾಗುವರು. ಅವರ ಮೇಲೆ ಸಿಟ್ಟಗುವಿರಿ. ಮಾತಿನ ಮಿತಿಯನ್ನೂ ಮೀರಬಹುದು. ಹೂಡಿಕೆಯ ಚಿಂತನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಪಕ್ಷಪಾತ ಮನಃಸ್ಥಿತಿಯು ನಿಮಗೆ ಶೋಭೆ ತರದು. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಒಂಟಿತನವು ನಿಮಗೆ ಇಷ್ಟವಾಗದು. ಇನ್ನೊಬ್ಬರ ನೋವನ್ನು ಕಂಡೂ ನೀವು ಸುಮ್ಮನಿರುವುದು ಬೇಡ. ಸೇವಾ ಮನೋಭಾವವು ನಿಮ್ಮಲ್ಲಿ ಕಡಿಮೆ ಇರುವುದು. ಮನೆಯ ಜವಾಬ್ದಾರಿಯನ್ನೂ ನಿವು ತೆಗೆದುಕೊಳ್ಳಲು ಇಷ್ಟಪಡಲಾರಿರಿ. ಸ್ನೇಹಿತರು ಹಳೆಯ ಹಣಕಾಸಿನ ವಿಚಾರಕ್ಕೆ ಜಗಳವಾಡುವರು. ಆದಾಯದ ಮೂಲವನ್ನು ನೀವು ಗಟ್ಟಿ ಮಾಡಿಕೊಳ್ಳಿ. ಮನಸ್ಸು ಇಂದು ಪ್ರಕ್ಷುಬ್ಧವಾಗಿ ಇರಲಿದೆ.