Horoscope: ರಾಶಿಭವಿಷ್ಯ, ಹೆಚ್ಚಿನ ಆದಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವಿರಿ, ಅಪಾಯ ಹೆಚ್ಚಿರಬಹುದು ಎಚ್ಚರ!

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಸೆಪ್ಟೆಂಬರ್ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಹೆಚ್ಚಿನ ಆದಾಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವಿರಿ, ಅಪಾಯ ಹೆಚ್ಚಿರಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 15 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಹಸ್ತಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 33 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:57 ರಿಂದ 12:28 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:31 ರಿಂದ ಸಂಜೆ 05:02ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54 ರಿಂದ 09:25ರ ವರೆಗೆ.

ಮೇಷ ರಾಶಿ: ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಹೆಚ್ಚಿನ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ರಿಸ್ಕ್ ಗಳು ಹೆಚ್ಚಿರಬಹುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ನೀವು ಇರುವಿರಿ. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಯಾರ ಮಾತನ್ನೂ ಕೇಳದ ಚಿತ್ತಚಾಂಚಲ್ಯವು ಇರಲಿದೆ. ಶರೀರ ಪೀಡೆಯು ಕಾಣಿಸಿಕೊಂಡೀತು.

ವೃಷಭ ರಾಶಿ: ನಿಮ್ಮ ಜನಪ್ರಿಯತೆಯು ನಿಮಗೆ ಖುಷಿ ಕೊಟ್ಟೀತು. ನಿಮ್ಮ ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುತ್ತಿರುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ. ಆಲಸ್ಯದಿಂದ ಉತ್ತಮ ವಿಚಾರಗಳನ್ನು ಕಳೆದುಕೊಳ್ಳಬೇಕಾದೀತು. ಅಸಂಬದ್ಧ ಚರ್ಚೆಗಳಿಂದ ದೂರ ಇರುವಿರಿ. ಅಧಿಕಾರಿಗಳ ನಿಕಟ ಸಂಪರ್ಕವೇ ನಿಮಗೆ ಮುಳುವಾಗಬಹುದು.

ಮಿಥುನ ರಾಶಿ: ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ಉದ್ಯೋಗ ವೃದ್ಧಿಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಆರೋಗ್ಯವನ್ನು ಸರಿ‌ಮಾಡಿಕೊಳ್ಳುವುದು ಪ್ರಾಮುಖ್ಯವಾಗಿರಲಿ. ಸಂಗಾತಿಗೆ ನಿಮ್ಮ ಪ್ರೀತಿಯು ಕಡಿಮೆಯಾಗಿರುವುದು. ಪ್ರಶಂಸೆಯಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಮನೆಯವರಿಗೆ ಹೆಚ್ಚು ಸಮಯವನ್ನು ಕೊಡುವಿರಿ. ನಂಬಿಕೆಯನ್ನು ಕಳೆದುಕೊಂಡವರ ಜೊತೆ ಪುನಃ ವ್ಯವಹಾರವು ಕಷ್ಟವಾದೀತು.

ಕಟಕ ರಾಶಿ: ವಿವಾಹ ಜೀವನವು ಕಷ್ಟ ಎನಿಸಬಹುದು. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಆದಂತೆ ಎಂಬ ಭಾವನೆಯು ಬರುವ ಸಾಧ್ಯತೆ ಇದೆ. ಗುಣಾತ್ಮಕ ಚಿಂತನೆಯನ್ನು ಮಾಡಿ. ಏನೇ ಬಂದರೂ ಎಲ್ಲವೂ ವಿಧಿ ನಿಯಮ ಎಂಬ ನಿರ್ಧಾರಕ್ಕೆ‌ ಬರುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ಜೊತೆಗಾರರಿಗೆ ಕಷ್ಟವಾದೀತು. ಇನ್ನೊಬ್ಬರ ವಸ್ತುವಿನ ಬಗ್ಗೆ ಮೋಹವು ಇರುವುದು‌. ಆತ್ಮಪ್ರಶಂಸೆಯು ಅಧಿಕಾವಾಗಿ ತೋರುವುದು. ಸಾಧಿಸಬೇಕು ಎಂಬ ಮಹದಾಸೆ ಇದ್ದರೂ ಅದು ಕ್ಷಣಿಕವಾಗುವುದು. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗುವಿರಿ.

ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ