Horoscope: ದಿನಭವಿಷ್ಯ, ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರಲು ನಿಮಗೆ ಆಗದು

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರಲು ನಿಮಗೆ ಆಗದು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 20, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 20 ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶೋಭನ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:49 ರಿಂದ 12:17ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:13 ರಿಂದ 04:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ ಮಧ್ಯಾಹ್ನ 09:22ರ ವರೆಗೆ.

ಮೇಷ ರಾಶಿ: ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳುವಿರಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಅನಂತರದ ಹತಾಶೆಯಿಂದ ಕಷ್ಟವಾದೀತು. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು. ನೀವು ಸ್ವತಂತ್ರವಾಗಿದ್ದರೂ ಬರೆಯಲು ಮನಸ್ಸಾಗದು. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಇರಲಿದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಕಷ್ಟವಾದೀತು. ಕಲಾವಿದರಾಗುವ ದೃಢವಾದ ಮನಸ್ಸಿನಲ್ಲಿ ನೆಲೆಸುವುದು.

ವೃಷಭ ರಾಶಿ: ಇನ್ನೊಬ್ಬರ ವಸ್ತುವನ್ನು ನೀವು ಇಟ್ಟುಕೊಳ್ಳಲಿದ್ದೀರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಆಹಾರದಿಂದ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ಖರ್ಚಿನ ಬಗ್ಗೆ ನಿರ್ದಿಷ್ಟತೆ ಇರಲಿ. ಯಾವ ಸಹಾಯವನ್ನು ಕೇಳಿದರೂ ಇಲ್ಲ ಎನ್ನುವ ಮನಸ್ಸು ಬಾರದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಹೊಸ ಕಲಿಕೆಯತ್ತ ಗಮನ ಇರಲಿದೆ.

ಮಿಥುನ ರಾಶಿ: ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಲ್ಲಿ ಏಕಾಗ್ರತೆಯ ಕೊರತೆ ಇರಲಿದ್ದು ಧ್ಯಾನ, ಯೋಗಾಭ್ಯಾಸವನ್ನು ಮಾಡಬೇಕಾಗಬಹುದು. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಆಪ್ತರ ಸಲಹೆಯನ್ನು ಕೇಳಲು ನಿಮಗೆ ಮುಜುಗರವಾಗಲಿದೆ. ನೀವು ಸಂಬಂಧವಿಲ್ಲದ ವಿಚಾರಕ್ಲೆ ಗಮನವನ್ನು ಕೊಡುವಿರಿ. ಕಛೇರಿಯಲ್ಲಿ ನಿಮ್ಮ ಸ್ಥಾನಕ್ಕೆ ಇನ್ನೊಬ್ಬರು ಬರಲಿದ್ದು, ಪರಸ್ಪರ ವೈರುಧ್ಯ ಏರ್ಪಡಬಹುದು.

ಕರ್ಕ ರಾಶಿ: ಆರ್ಥಿಕ ಸಮಸ್ಯೆಯಿಂದ ಇಂದು ಮೇಲಧಿಕಾರಿಗಳ ಭೇಟಿಯನ್ನು ಮಾಡುವಿರಿ. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು‌ ಪ್ರಯತ್ನಶೀಲರಾಗುವಿರಿ. ನಿಮ್ಮ ಯೋಜನೆಯು ಅಂಬೆಗಾಲಿಕ್ಕಿತ್ತ ಸಾಗುವುದು ನಿಮಗೆ ಖುಷಿ ಕೊಡಲಿದೆ. ತಾಯಿಯ ಜೊತೆ ಒರಟಾಗಿ ಮಾತನಾಡುವಿರಿ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ