AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 01) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 01, 2023 | 5:30 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ 07:46 ರಿಂದ 09:20ರ ವರೆಗೆ, ಯಮಘಂಡ ಕಾಲ 10:55 ರಿಂದ 12:30 ವರೆಗೆ, ಗುಳಿಕ ಕಾಲ 02:04 ರಿಂದ 03:39 ರ ವರೆಗೆ.

ಮೇಷ: ಒಂಟಿತನವು ನಿಮಗೆ ಬಹಳ ಬೇಸರವಾಗಬಹುದು. ಸಂಗಾತಿಯನ್ನು ಮುಚ್ಚಿಡಲು ಹೋಗಿ ಸೋಲುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಹಾಗೆ ದಿನವನ್ನು ರೂಪಿಸಿಕೊಳ್ಳಿ. ದುಸ್ಸಾಹಸವು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಟ್ಟರೂ ತಲೆಯ ಒಳಗೆ ಹೋಗದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಪತ್ತು ವ್ಯಯವಾಗುವ ಸಾಧ್ಯತೆ ಇದೆ. ಹೆಚ್ಚಿನ ಕಡೆ ಗಮನಕೊಡಲು ಸಾಧ್ಯವಾಗದು. ಒಂದೇ ಕಡೆಯಲ್ಲಿ ಗಮನಹರಿಸಿದ ಕೆಲಸವು ಸರಿಯಾಗಿ ಹೋಗುವುದು.‌ ಸಮಯ ಮಿತಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿ.

ವೃಷಭ: ನಿಮ್ಮ ಸಾಮರ್ಥ್ಯದ ಬಗ್ಗೆ ಅಪನಂಬಿಕೆ ಇರಲಿದೆ. ನಿಮ್ಮ ಬಗ್ಗೆ ಋಣಾತ್ಮಕವಾದ ಮಾತುಗಳು ಕೇಳಿ ಬರಬಹುದು. ಅದನ್ನು ಧನಾತ್ಮಕವಾಗಿ ಮಾಡುವ ಛಲವು ನಿಮಗೆ ಇರಬೇಕಿದೆ. ನೀವು ಭವಿಷ್ಯಕ್ಕೆಂದು ರೂಪಿಸಿಕೊಂಡ ಯೋಜನೆಗೆ ಇನ್ನಷ್ಟು ಸ್ಪಷ್ಟತೆ ಬೇಕಿದೆ. ನೀವು ಸ್ನೇಹಿತರ ಸಲಹೆಯನ್ನೂ ಪಡೆದರೆ ಒಳ್ಳೆಯದು‌. ಜ್ವರ ಬರುವ ಹಾಗಿದ್ದು ಬೇಕಾದ ಔಷಧವನ್ನು ಸ್ವೀಕರಿಸಿ. ಸುತ್ತಾಡುವ ಮನಃಸ್ಥಿತಿ ಇದ್ದರೂ ದೇಹವು ಸಹಕರಿಸದೇ ಹೋಗಬಹುದು. ವಾಹನವನ್ನು ನಿಧಾನವಾಗಿ ಚಲಾಯಿಸಿ. ಮನೆಯವರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.

ಮಿಥುನ: ನಿಮ್ಮ ಮಾತಿಗೆ ವಿರೋಧ ಉಂಟಾಗಬಹುದು. ಹೇಳಬೇಕಾದುದನ್ನು ಸ್ಪಷ್ಟವಾಗಿ ಹೇಳಿ. ಕೆಲಸಗಳಿಂದ ಒತ್ತಡವು ಅತಿಯಾಗಬಹುದು, ಸಮಾಧಾನಚಿತ್ತದಿಂದ ಸ್ವೀಕರಿಸಿರಿ. ತಪ್ಪುಗಳಿಂದ ಪಶ್ಚಾತ್ತಾಪ ಆಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಕೆಲಸವು ಕಷ್ಟವೆಂದು ಕೈಬಿಡಬಹುದು. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕೆಲಸವನ್ನು ಮಾಡಿ. ಅತಿಥಿ ಸತ್ಕಾರವನ್ನು ನೀವಿಂದು ಮಾಡುವಿರಿ. ಎದೆಯ ಭಾಗದಲ್ಲಿ‌ ನೋವು ನೋವು ಕಾಣಿಸಿಕೊಂಡೀತು. ಸಮಯಕ್ಕೆ ಗೌರವ ಕೊಡಿ.‌ ಅದನ್ನು ಹಾಗೇ ಸುಮ್ಮನೇ ಕಳೆಯಬೇಡಿ.

ಕಟಕ: ನೀವಿಂದು ಸುಳ್ಳಾಡುವಿರೆಂದು ಅನ್ನಿಸಬಹುದು. ನಿಮ್ಮ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವವರಿದ್ದಾರೆ. ಮಕ್ಕಳಿಂದ ಧನಸಹಾಯವನ್ನು ಪಡೆಯುವಿರಿ. ದೇವರಲ್ಲಿ ದೃಢವಾದ ಭಕ್ತಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಆಲೋಚನೆಗಳು ಕಾರ್ಯರೂಪಕ್ಕೆ ಬರಬಹುದು. ವಾಹನ ಖರೀದಿಯನ್ನು ಮಾಡಲೇಬೇಕು ಎಂಬ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳುವಿರಿ. ಮನಸ್ಸು ಸಂಕೋಚಗೊಂಡಿದ್ದು ಅದರ ವಿಕಾಸಕ್ಕೆ ಹೊರಗಡೆ ಸುತ್ತಾಟ ಮಾಡುವಿರಿ. ಖರ್ಚಿನ ಕಾರಣಕ್ಕೆ ಪತಿಯ ಜೊತೆ ಕಲಹವೂ ಆಗಬಹುದು. ಮೇಲಿಂದ‌ ಮೇಲೆ ಆರೋಗ್ಯವು ಹದ ತಪ್ಪುತ್ತಿರುವುದು ಬೇಸರದ ವಿಚಾರವಾಗಲಿದೆ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ.