Nithya bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಇಂದಿನ (2023 ಏಪ್ರಿಲ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ವೃಷಭ: ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ಕಲಹವು ಅನೂಹ್ಯಸ್ಥಿತಿಗೆ ಹೋಗಬಹುದು. ಅರಿವಿಲ್ಲದೇ ನಿಮಗಾಗದವರನ್ನು ನಿಂದಿಸಿ ಅವರಿಂದ ಅಪಮಾನಕ್ಕೆ ಒಳಗಾಗುವಿರಿ. ಆರ್ಥಿಕವಾಗಿ ಸ್ಥಿರತೆ ಇದ್ಷರೂ ಚರ್ಚನ್ನು ನಿಭಾಯಿಸುವ ಚಾಣಾಕ್ಷತನ ಬೇಕಿದೆ. ನಿಮ್ಮ ಉತ್ತಮ ಹವ್ಯಾಸಕ್ಕೆ ನೀರೆರೆದು ಪೋಷಿಸಿ. ಯಾರ ಸಹವಾಸಕ್ಕೂ ಹೋಗದೇ ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿಕೊಳ್ಳಿ. ನಿಮ್ಮ ವ್ಯಕ್ತಿತ್ವಕ್ಕೆ ಸರಿಸಾಟಿಯಾದ ವ್ಯಕ್ತಿಯ ಗೆಳೆತನವಾಗಲಿದೆ. ಅಹಂಕಾರ ಪಡದೇ ವಿನೀತರಾಗಿರಬೇಕಾಗಿರುವುದು ಇಂದಿನ ಅವಶ್ಯಕತೆಗಷ್ಟೇ ಆಶಾವಾದಿಗಳಾಗಿರಿ. ಶುಭಗ್ರಹರು ದ್ವಾದಶದಲ್ಲಿರುವರು. ಎಲ್ಲದರಲ್ಲಿಯೂ ಎಚ್ಚರಿಕೆ ಇರಲಿ.
ಮಿಥುನ: ಅಪರಿಚಿತವ್ಯಕ್ತಿಯಿಂದ ನಿಮಗೆ ಸಹಾಯ ದೊರೆಯಲಿದೆ. ವ್ಯಾಪಾರಿಗಳಿಗೆ ತೃಪ್ತಿಕರವಾದ ಆದಾಯ ಸಿಗುವ ಸಂದರ್ಭವಿದೆ. ತಾಯಿಯ ಆಶೀರ್ವಾದವನ್ನು ಪಡೆದು ಇಂದಿನ ಶುಭಕಾರ್ಯಕ್ಕೆ ತೆರಳಿ. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದಲೇ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಅಧಿಕ ಕೋಪದಿಂದ ಸುಂದರ ಕ್ಷಣಗಳು ನಷ್ಟವಾಗಬಹುದು. ಮಕ್ಕಳ ಏಳಿಗೆಯಲ್ಲಿ ಮಂದಗತಿಯಲ್ಲಿ ಇರಲಿದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ.
ಕರ್ಕ: ಔದಾರ್ಯವನ್ನು ನೀವು ನಿಮ್ಮವರಲ್ಲಿ ತೋರಿಸಲು ಹೋಗಿ ಅಪಮಾನಕ್ಕೆ ಸಿಲುಕುವಿರಿ. ಮನಸ್ಸು ಬಿಚ್ಚಿ ಮಾತನಾಡಿ ನಿಮ್ಮ ಇಂಗಿತವನ್ನು ಪ್ರಕಾಶಪಡಿಸುವಿರಿ ಉದ್ಯಮಿಗಳು ಹಳೆಯ ವಸ್ತುವಿಗೆ ಹೊಸರೂಪಕೊಟ್ಟು ಮಾರಾಟವನ್ನು ಮಾಡುವಿರಿ. ಕೆಲಸಗಾರರಜೊತೆ ಅತಿ ಕೋಪವನ್ನು ಮಾಡಿಕೊಳ್ಳಬೇಡಿ. ಅವರಿಂದಲೇ ಎಲ್ಲವೂ ಹಾಳಾಗಬಹುದು. ಹಿತವಚನದಿಂದ ಕೆಲಸವನ್ನು ಮಾಡಿಕೊಳ್ಳಿ. ಇಂದಿನ ಆರ್ಥಿಕಲಾಭವು ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಬಹುದು. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ವಯಸ್ಕರಿಗೆ ವಿವಾಹ ಸಂಬಂಧವು ಒದಗಿ ಬರಬಹುದು. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಯ ಕೆಲಸದಲ್ಲಿ ಯಶಸ್ಸು ಸಿಗಲಿದೆ.