AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 26, 2023 | 12:10 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಸುಕರ್ಮ, ಕರಣ: ಗರಜ , ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ 10:53 ರಿಂದ 12:29ರ ವರೆಗೆ, ಯಮಘಂಡ ಕಾಲ 03:42 ರಿಂದ 05:17ರ ವರೆಗೆ, ಗುಳಿಕ ಕಾಲ 07:40 ರಿಂದ 09:17ರ ವರೆಗೆ.

ಮೇಷ: ನಿಮ್ಮದೇ ಮನಸ್ಸಾದರೂ ನಿಮ್ಮ ಮಾತನ್ನು ಕೇಳದೇ ಇದ್ದೀತು. ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಲಕ್ಷ್ಯವನ್ನು ವಹಿಸುವಿರಿ. ನೀವು ಅಂದು ಕೊಂಡ ವಿಚಾರಗಳು ನಿಮ್ಮಿಂದ ಆಗಿಲ್ಲ ಎಂಬ ಬೇಸರವು ಉಂಟಾದೀತು. ‌ಹಣಕಾಸಿನ ವಿಚಾರದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಇದ್ದು ಸಂತಸವಿರಲಿದೆ. ಯಂತ್ರಾಗಾರದಲ್ಲಿ ಕೆಲಸವು ಇಂದು ಅತಿಯಾಗಬಹುದು. ಲಲಿತಕಲೆಯಲ್ಲಿ ಆಸಕ್ತಿಯನ್ನು ಹೆಚ್ಚು ಬೆಳೆಸಿಕೊಂಡಿದ್ದರೆ ಸರಿಯಾದ ಮಾರ್ಗವು ಇಂದು ಸಿಗಬಹುದು. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆಯಬಹುದು. ಅನೇಕ ದಿನಗಳ ಅನಂತರ ಸಂತೋಷದಿಂದ ಇರುವ ದಿನವಾಗಿದೆ.

ವೃಷಭ: ಬಯಕೆಯನ್ನು ಬಹಳ ಬಲವಾಗಿ ಹಿಡಿದಿಟ್ಟುಕೊಳ್ಳುವಿರಿ. ತೊಂದರೆಯನ್ನು ತೆಗೆದುಕೊಳ್ಳದೇ ಕೆಲಸವನ್ನು ಮುಗಿಸುವ ಮಾನಸಿಕ ಸ್ಥಿತಿಯನ್ನು ಹೊಂದಿದ್ದೀರಿ ಇಂದು. ಇಂದು ನಿಮ್ಮ ಪರೀಕ್ಷೆಯ ಕಾಲವಾಗಿದ್ದು ಬಹಳ ಅಸ್ಥೈರ್ಯವು ಕಾಡುವುದು. ಮನೆಯ ಬಗ್ಗೆ ಚಿಂತೆಯೂ ಕಾಡಬಹುದು. ನಿಮ್ಮ ಜೀವನದ ಬಗ್ಗೆ ನಿಮಗೆ ವಿಧವಾದ ಕನಸುಗಳು ಇರಬಹುದು. ಒಂಟಿಯಾಗಿದ್ದಷ್ಟೂ ಬೇರೆ ಬೇರೆ ಯೋಚನೆಗಳು ಬರಬಹುದು. ಯಾರನ್ನಾದರೂ ಜೊತೆ ಮಾಡಿಕೊಳ್ಳುವುದು ಉತ್ತಮ. ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬಹುದು.

ಮಿಥುನ: ಮಕ್ಕಳ ಜೊತೆ ಸಂತೋಷವನ್ನು ಅನುಭವಿಸುವಿರಿ. ಅರ್ಥವಿಲ್ಲದ ವ್ಯರ್ಥ ಮಾತುಗಳನ್ನು ನಿಲ್ಲಿಸುವುದು ಉತ್ತಮ‌. ನೀವು ಬಯಸಿದ ವಸ್ತುವು ಅನಾಯಾಸವಾಗಿ ದೊರೆಯುವುದು. ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಕಡಿಮೆ‌ ಆದೀತು. ವಿದ್ಯಾರ್ಥಿಗಳು ಆಗಿ ಹೋದರ ಬಗ್ಗೆ ಹೆಮ್ಮೆಯಿಂದ‌ ಬೀಗುವ ಅವಶ್ಯಕತೆಯಿಲ್ಲ. ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ತ್ವವನ್ನು ಕೊಡಿ. ಒಬ್ಬರೇ ಎಲ್ಲಿಯಾದರೂ ಸುತ್ತಾಟ ಮಾಡಬಹುದು. ಎಲ್ಲವನ್ನೂ ಪರೀಕ್ಷಿಸಿ ಪಡೆದುಕೊಳ್ಳುವಿರಿ. ಸಾಧರಣಕ್ಕೆ ಒಪ್ಪುದಿಲ್ಲ. ನೀವು ಮಾಡುವ ತಮಾಷೆಯಿಂದ ನಿಮ್ಮನ್ನೇ ನೋಡಿ ನಕ್ಕಾರು. ಅಪಮಾನದಂತೆ ಅನ್ನಿಸೀತು ನಿಮಗೆ.

ಕಟಕ: ಸಂಗಾತಿಯ ಜೊತೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ. ಸ್ನೇಹಿತರಿಂದ ಹಣವನ್ನು ಸಾಲವಾಗಿಯೂ ಒಡೆಯಬಹುದು. ಸುವ್ಯವಸ್ಥಿತ ಭವಿಷ್ಯದ ಕನಸು ಕಾಣುವಿರಿ. ಮಕ್ಕಳಿಲ್ಲ ಎಂಬ ಕೊರಗು ಅತಿಯಾಗಬಹುದು. ನಿಮ್ಮನ್ನು ಸಮ್ಮಾನಿಸಲು ಆಹ್ವಾನ ಬರಬಹುದು. ಅಸ್ಥಿರವಾದ ವ್ಯವಸ್ಥೆಯು ಕಿರಿಕಿರಿಯನ್ನು ಉಂಟುಮಾಡಬಹುದು. ಕೋಪಗೊಳ್ಳಬೇಕಾದ ಪರಿಸ್ಥಿತಿ ಇದ್ದರೂ ಅದನ್ನು ನಿಯಂತ್ರಿಸಿಕೊಳ್ಳಬೇಕಾಗಿದೆ. ಸಹೋದರನ ಬಗ್ಗೆ ಪ್ರೀತಿ ಅತಿಯಾದೀತು. ನೀವು ಭರವಸೆ ಕೊಡಲು ಪ್ರಸಿದ್ಧರು ಎಂಬ ಬಿರುದು ಬರದಂತೆ ನೋಡಿಕೊಳ್ಳಿ.

ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ