Horoscope: ರಾಶಿಭವಿಷ್ಯ, ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುವಿರಿ
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್ 09) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:42 ರಿಂದ 03:09 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:32 ರಿಂದ 07:58 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:24 ರಿಂದ 10:50ರ ವರೆಗೆ.
ಧನು ರಾಶಿ : ನೀವು ಇಂದು ಎಲ್ಲರಿಂದ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ ಇರುಬುದು. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುಬಿರಿ. ಮಕ್ಕಳ ಬಗ್ಗೆ ನಿಮ್ಮ ಭಾವನೆ ತಪ್ಪಾಗಬಹುದು. ಯಥಾರ್ಥವಾಗಿ ಎಲ್ಲವನ್ನೂ ತಿಳಿದುಕೊಳ್ಳುವುದು ಒಳ್ಳೆಯದು. ಏಕಾಂತವು ಹೆಚ್ಚು ರುಚಿಸುವುದು.
ಮಕರ ರಾಶಿ : ಆದಾಯವು ಕಡಿಮೆ ಆಗಿ ಅನಿವಾರ್ಯದ ಖರ್ಚು ಹೆಚ್ಚಾಗಬಹುದು. ಸ್ನೇಹಿತರು ನಿಮ್ಮನ್ನು ಅಪಮಾನ ಮಾಡಬಹುದು. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಇಂದಿನ ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಬಹುದು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ. ಇಂದು ನಿಮಗೆ ಜೊತೆಗೆ ಯಾರೂ ಇಲ್ಲ ಎಂಬ ಅನಾಥಪ್ರಜ್ಞೆಯು ಕಾಡುವುದು. ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಬಹುದು.
ಕುಂಭ ರಾಶಿ : ಪ್ರವಾಸದಲ್ಲಿ ಇರುವ ನಿಮಗೆ ಮಾನಸಿಕ ಚಿಂತೆ ಕಾಡಬಹುದು. ಮನೆಯ ಬಗ್ಗೆಯೆರ ಹೆಚ್ಚು ಯೋಚಿಸುವಿರಿ. ಅನಾರೋಗ್ಯವು ಉತ್ಸಾಹವನ್ನು ಕಡಿಮೆ ಮಾಡುವುದು. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವರು. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮನಸ್ಸಿನ ಚಾಂಚಲ್ಯವನ್ನು ನಿಶ್ಚಲ ಮಾಡಿಕೊಳ್ಳುವಿರಿ.
ಮೀನ ರಾಶಿ : ವ್ಯಾಪಾರದಲ್ಲಿ ಲಾಭ ಮಾಡಲು ಛಲ ಬಿಡದ ಪ್ರಯತ್ನವು ನಡೆಯುವುದು. ಧಾರ್ಮಿಕ ಕಾರ್ಯದಲ್ಲಿ ಅಧಿಕ ಆಸಕ್ತಿಯು ಇರಲಿದೆ. ಇಂದು ನಿಮಗೆ ಮಾತಿನಿಂದಾಗಿ ತೊಂದರೆಗಳು ಬರಬಹುದು. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು. ಯಾರಿಂದಲಾದರೂ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಇಂದು ಸಹಾಯವನ್ನು ಪಡೆಯುವಿರಿ. ಬರಬೇಕಾದ ಹಣವನ್ನು ನೀವೇ ಖುದ್ದಾಗಿ ಹೋಗಿ ಪಡೆಯಬೇಕಾಗಬಹುದು. ಸುಮ್ಮನೇ ಯಾರ ಮೇಲೋ ಸಿಟ್ಟಾಗುವುದು ಬೇಡ.
-ಲೋಹಿತಶರ್ಮಾ 8762924271 (what’s app only)