AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರು ಆತುರದ ಪ್ರಯಾಣವನ್ನು ಮಾಡುವುದು ಬೇಡ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರು ಆತುರದ ಪ್ರಯಾಣವನ್ನು ಮಾಡುವುದು ಬೇಡ
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Nov 10, 2023 | 12:45 AM

Share

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆಗೆ, ರಾಹು ಕಾಲ ಬೆಳಗ್ಗೆ 10:50 ರಿಂದ ಮಧ್ಯಾಹ್ನ 12:16ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:58 ರಿಂದ 09:24ರ ವರೆಗೆ.

ಧನು ರಾಶಿ : ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಮೋಜಿಗಾಗಿ ಹಣವನ್ನು ಖರ್ಚು ಮಾಡುತ್ತೀರಿ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಬಂಧುಗಳ ವಿಯೋಗವೂ ಆಗಬಹುದು. ಸ್ನೇಹಿತರು ಕೇಳಿದರೂ ಸಹಾಯ ಮಾಡದೇ ಇರುವುದು ನಿಮಗೆ ಸಂದೇಹ ಬರುವುದು. ಪ್ರೇಮವು ನೀವಂದುಕೊಂಡಂತೆ ಮುಕ್ತಾಯವಾದುದ್ದು ನಿಮಗೆ ಖುಷಿಕೊಡುವುದು. ಅಂದುಕೊಂಡಂತೆ ಆಗಿದ್ದಕ್ಕೆ ಸಂತೋಷವು ಇರಲಿದೆ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಗೌಪ್ಯವಾಗಿ ವ್ಯವಹಾರವನ್ನು ನಡೆಸುವಿರಿ.

ಮಕರ ರಾಶಿ : ಇಂದು ವ್ಯರ್ಥವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ಸ್ತ್ರೀಯರು ತಾಳ್ಮೆಯನ್ನು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು. ಮಕ್ಕಳ ಶುಭವಾರ್ತೆಯು ಸಂತಸಕೊಡಬಹುದು. ಬಂಗಾರದ ಮೇಲೆ‌ ಹೂಡಿಕೆ ಮಾಡುವಿರಿ. ಆತುರದ ಪ್ರಯಾಣವನ್ನು ಮಾಡುವುದು ಬೇಡ. ಯಂತ್ರೋಪಕರಣಗಳ ಮಾರಾಟದಿಂದ ನಷ್ಟವಾಗುವ ಸಾಧ್ಯತೆ ಇದೆ. ಬಂದ ಅವಕಾಶಗಳನ್ನು ಕೈ ಬಿಡುವಿರಿ. ನಿಮ್ಮ ಮಾತಿಗೆ ಯಾರೂ ಬೆಲೆ ಕೊಡದೇ ಇರುವುದು ಬೇಸರವಾದೀತು. ಇಂದು ಯಾವ ಕಾರ್ಯಕ್ಕೂ ನಿಮಗೆ ಶ್ರದ್ಧೆಯು ಇಲ್ಲವಾಗುವುದು.

ಕುಂಭ ರಾಶಿ : ಇಂದು ಕಾರ್ಯದಲ್ಲಿ ನಿರತರಾಗುತ್ತಾರೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಇಂದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಸ್ಥಗಿತಗೊಂಡ ಕೆಲಸವನ್ನು ಪೂರ್ಣ ಮಾಡುವಿರಿ. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು. ಕಳೆದುದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ. ಮನೆಯ ಕೆಲಸದಲ್ಲಿ ಸಮಯವನ್ನು ಕಳೆಯುವಿರಿ. ಮಕ್ಕಳಿಗೆ ಉದ್ಯೋಗವನ್ನು ಕೊಡಿಸಲು ಕೆಲವರನ್ನು ಭೇಟಿಯಾಗುವಿರಿ. ಕಣ್ಣಿನ ತೊಂದರೆಯಿಂದ ಕಷ್ಟವಾದೀತು. ನಿರುದ್ಯೋಗದಿಂದ‌ ಮನೆಯಲ್ಲಿಯೇ ಕುಳಿತು ಬೇಸರವಾಗುವುದು. ನಿಮ್ಮ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಆಡುವರು.

ಮೀನ ರಾಶಿ : ಇಂದು ಯಾವುದೋ ಸಂಸ್ಥೆಯಿಂದ ಸಾಲ ತೆಗೆದುಕೊಳ್ಳಲು ಬಯಸುತ್ತಾರೆ. ಇಂದು ನೀವು ಸರ್ಕಾರದಿಂದ ಗೌರವ ಸಿಗಬಹುದು. ಹಳೆಯ ಸ್ನೇಹಿತರು ಬೆಂಬಲಕ್ಕೆ ನಿಲ್ಲುವರು. ನಿಮ್ಮ ಸಂಗಾತಿಯಿಂದ ಕೆಲವು ಕಾರ್ಯಗಳಿಗೆ ಬೆಂಬಲವನ್ನು ಪಡೆಯಬಹುದು. ಇಂದಿನ ಕಾರ್ಯವನ್ನು ಸಾಧನೆ ಮಾಡಲು ಹೆಚ್ಚಿನ ಓಡಾಟವು ಬರಬಹುದು. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ರಾಜಕಾರಣಿಗಳು ಸಮಾರಂಭಗಳಿಗೆ ಭಾಗವಹಿಸುವರು. ಗೌರವವೂ ಸಿಗಲಿದೆ. ಸರ್ಕಾರದ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ. ಆರೋಗ್ಯವೂ ಕೆಡಬಹುದು. ನಿಮಗೆ ಬರುವ ಆಸ್ತಿಯಲ್ಲಿ ಹೆಚ್ಚಿನ ಲಾಭವನ್ನು ಅಪೇಕ್ಷಿಸುವಿರಿ. ಮಾತಿನಿಂದ ನಿಮಗೆ ಕಷ್ಟವಾದೀತು. ಖರ್ಚಿನ ವಿಚಾರದಲ್ಲಿ ಗೊಂದಲವಾಗಬಹುದು.

-ಲೋಹಿತಶರ್ಮಾ 8762924271 (what’s app only)

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು