Horoscope: ರಾಶಿಭವಿಷ್ಯ, ಇನ್ನೊಬ್ಬರ ವಿಚಾರಕ್ಕೆ ಈ ರಾಶಿಯವರು ಮೂಗು ತೂರಿಸುವುದು ಬೇಡ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಇನ್ನೊಬ್ಬರ ವಿಚಾರಕ್ಕೆ ಈ ರಾಶಿಯವರು ಮೂಗು ತೂರಿಸುವುದು ಬೇಡ
ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Oct 10, 2023 | 12:45 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 10 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮಘಾ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:17 ರಿಂದ 04:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:22 ರಿಂದ 10:51ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:20 ರಿಂದ 01:48ರ ವರೆಗೆ.

ಧನು ರಾಶಿ: ನಿಮ್ಮ ಗುಟ್ಟನ್ನು ಬಿಟ್ಟುಕೊಡಲು ನೀವು ತಯಾರಿರುವುದಿಲ್ಲ. ಸಾಮಾಜಿಕ ವಲಯದಲ್ಲಿ ನಿಮ್ಮ ಹೆಸರು ಕೇಳಿ ಬರಬಹುದು. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಚರಾಸ್ತಿಯ ವ್ಯವಹಾರವನ್ನು ನೀವು ಜಾಣ್ಮೆಯಿಂದ ಮಾಡುವಿರಿ. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಮೇಲಧಿಕಾರಿಗಳ ಜೊತೆ ದಕ್ಷತೆಯಿಂದ ವ್ಯವಹರಿಸುವಿರಿ ಉದ್ಯಮವನ್ನು ಬೆಳೆಸುವ ಚಿಮಯನೆ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ನಡೆಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂದೆ ಹೆಜ್ಜೆ ಹಾಕುವಿರಿ. ಬಂಧುಗಳ ವಿಯೋಗವು ಅಚ್ಚರಿ ಎನಿಸೀತು. ನಿಮ್ಮ ಜೀವನದ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಸರಿಮಾಡಿಕೊಳ್ಳುವಿರಿ. ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಇರಲಿದೆ.

ಮಕರ ರಾಶಿ: ಹಣದ ಹೂಡಿಕೆಗೆ ನಿಮಗೆ ಆಸಕ್ತಿಯು ಹೆಚ್ಚಿರಲಿದೆ. ಕುಟುಂಬದ ಮನಸ್ತಾಪವನ್ನು ಶಾಂತ ರೀತಿಯಿಂದ ಬಗೆಹರಿಸುವಿರಿ.‌ ಯಂತ್ರೋಪಕರಣಗಳ ಮಾರಾಟದಿಂದ ಲಾಭವಿರಲಿದೆ. ಸಾಮಾಜಿಕ ಕಾರ್ಯದಲ್ಲಿ ಪ್ರಶಂಸೆ ಸಿಗುವುದು. ಇಂದು, ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಅನಾರೋಗ್ಯದಿಂದ ಇಂದಿನ ಕಾರ್ಯಕ್ಕೆ ತಡೆಯುಂಟಾದೀತು. ನಿಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಯನ್ನು ನಗಣ್ಯ ಮಾಡುವುದು ಬೇಡ. ಅಧಿಕಾರಿಗಳ ಜೊತೆ ವ್ಯವಹರಿಸುವಾಗ ನೀವು ಜಾಗರೂಕತೆ ಇರಲಿ.‌ ದೂರ ಪ್ರಯಾಣವನ್ನು ನೀವು ಇಂದು ಮಾಡುವುದು ಬೇಡ. ನಿಮ್ಮ ಸಾಮರ್ಥ್ಯವನ್ನು ಕಛೇರಿಯ ಜನರು ತಿಳಿದುಕೊಳ್ಳುವರು. ಹಿರಿಯರಿಂದ ಆಶೀರ್ವಾದವು ಸಿಗಲಿದೆ.

ಕುಂಭ ರಾಶಿ: ಇಂದಿನ ನಿಮ್ಮ‌ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಆಹಾರವೂ ನಿಮಗೆ ಸರಿಯಾಗಿ ಸಿಗದೇ ಹೋಗಬಹುದು. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಆರ್ಥಿಕತೆಯ ಕಾರಣದಿಂದ ಕುಟುಂಬದಲ್ಲಿ ಕೆಲವು ಮಾತುಗಳು ಬರಬಹುದು. ಮಾತಿನ‌ ಮೇಲೆ ನಿಯಂತ್ರಣವಿಟ್ಟುಕೊಂಡು ಮಾತನಾಡಿ. ಬಾಕಿ ಸಾಲದ ಮೊತ್ತವನ್ನು ತುಂಬಲು ಸ್ನೇಹಿಯರ ಸಹಾಯವನ್ನು ಕೇಳುವಿರಿ. ಸಹೋದರರ ಅಸಹಕಾರವು ಸಿಟ್ಟು ಬರುವಂತೆ ಮಾಡುವುದು. ಔಷಧಿಯಿಂದ ಅನಾರೋಗ್ಯವನ್ನು ನಿಯಂತ್ರಿಸಿ. ಸಕಾರಾತ್ಮಕ ಆಲೋಚನೆಯು ನಿಮಗೆ ನೆಮ್ಮದಿ ಕೊಡುವುದು. ಇನ್ನೊಬ್ಬರ ವಿಚಾರಕ್ಕೆ ನೀವು ಮೂಗು ತೂರಿಸುವುದು ಬೇಡ. ತಾಯಿಯಿಂದ ಬೈಗುಳ ಸಿಕ್ಕೀತು. ಇಂದು ನೀವು ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ನಿಮಗೆ ಸಿಕ್ಕ ಯೋಜನೆಯನ್ನು ಸರಿಯಾಗಿ ನಿಭಾಯಿಸಿ.

ಮೀನ ರಾಶಿ: ಮಾಡಬೇಕು ಎಂದುಕೊಂಡ ಕೆಲಸವು ನಿಮಗೆ ಸಮಾಧಾನ ತರದು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ಮಂಗಲ ಕಾರ್ಯವನ್ನು ಮಾಡಲು ನಿಮಗೆ ಮನಸ್ಸು ಇರುವುದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ವ್ಯಾಯಾಮ‌ ಮುಂತಾದ ದೈಹಿಕ ಕಸರತ್ತನ್ನು ಮಾಡಲು ಯೋಚಿಸುವಿರಿ. ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರದಲ್ಲಿ ಇಂದು ಜಾಗರೂಕತೆ ಬೇಕು. ವಿವಾಹಕ್ಕೆ ಸಂಬಂಧಿಸಿದಂತೆ ಕುತೂಹಲವು ಇರಲಿದೆ‌. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾನಸಿಕವಾಗಿ ಸ್ಥಿರವಾಗಬೇಕಿದೆ. ನಿಮ್ಮ ಮಾತೇ ನಿಮಗೆ ಹಿಂದಿರುಗಿ ಬರಬಹುದು. ಹಳೆಯ ವಸ್ತುಗಳನ್ನು ಮಾರಾಡ ಮಾಡುವಿರಿ. ಮುಖಂಡರಿಗೆ ಗೌರವವು ಸಿಗಲಿದೆ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್