Horoscope: ರಾಶಿಭವಿಷ್ಯ, ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು, ನೆಮ್ಮದಿ ಇರುವುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 22) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು, ನೆಮ್ಮದಿ ಇರುವುದು
ರಾಶಿ ಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 22, 2023 | 12:45 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಧ್ರುವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:19 ರಿಂದ 01:44ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:03 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ 12:19ರ ವರೆಗೆ.

ಧನು ರಾಶಿ : ತಂದೆಯ ಜೊತೆ ಮನಸ್ತಾಪವು ಬರಬಹುದು. ಅದನ್ನು ಮುಂದುವರಿಸುವ ಪ್ರಯತ್ನ‌ವನ್ನು ಮಾಡಬೇಡಿ. ಹಿರಿಯರ ಆಶೀರ್ವಾದವನ್ನು ಪಡೆದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ನಿಮ್ಮ ಗೌರವಕ್ಕೆ ಸಂಗಾತಿಯಿಂದ ತೊಂದರೆಯಾಗಬಹುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ನಿಮ್ಮ ಸೋಲನ್ನು ನೀವು ಸಹಜವಾಗಿ ಒಪ್ಪಿಕೊಳ್ಳಲಾರಿರಿ. ರಾಜಕೀಯವಾಗಿ ಬೆಳೆಯಲು ಬಹಳ ಆಸಕ್ತಿಯನ್ನು ತೋರುವಿರಿ. ಕಛೇರಿಯಲ್ಲಿ ಸ್ತ್ರೀಯರ ಅಲ್ಪ ಸಹಕಾರವು ಸಿಗುವುದು. ಸಂಗಾತಿಯ ಅನೇಕ ವಿಚಾರಗಳು ನಿಮಗೆ ತಿಳಿಯದೇ ಇರುವುದು.

ಮಕರ ರಾಶಿ : ಸಂಗಾತಿಯ ಪ್ರೀತಿಯನ್ನು ಪೂರ್ಣವಾಗಿ ಪಡೆದುಕೊಳ್ಳಲು ಆಗದು. ನೂತನ ಗೃಹನಿರ್ಮಾಣಕ್ಕೆ ಬಂಧುಗಳಿಂದ ಅಲ್ಪ ಸಹಾಯವು ದೊರೆಯಬಹುದು. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನ ಇರದು. ವಾಹನ ಖರೀದಿಯಲ್ಲಿ ಮೋಸವಾಗುವುದು. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ‌. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿ. ನಿಮ್ಮ ಅಹಂ ಭಾವವನ್ನು ಇತರರು ಆಡಿಕೊಂಡಾರು.

ಕುಂಭ ರಾಶಿ : ನಿಮ್ಮ ಬಗ್ಗೆ ನಿಮಗೇ ನಕಾರಾತ್ಮಕ ಭಾವವು ಬರಬಹುದು. ಆಲಸ್ಯವನ್ನು ಇನ್ನೊಬ್ಬರಿಂದ ರೂಢಿಸಿಕೊಳ್ಳುವಿರಿ. ಪ್ರಾಮಾಣಿಕತೆಗೆ ಯೋಗ್ಯವಾದ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿ ಇರುವುದು. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿದ್ದು, ಚಿಂತೆಯು ಕಾಡಬಹುದು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಉದ್ಯೋಗವು ನಿಮಗೆ ಸಾಕೆನಿಸಿ ಕೈ ಬಿಡಬಹುದು.‌ ಆಸ್ತಿ ಖರೀದಿಯನ್ನು ಮಾಡಲು ಅವಕಾಶವು ಸಿಗಬಹುದು. ಅನಿರೀಕ್ಷಿತವಾಗಿ ಉಡುಗೊರೆಯನ್ನು ಆಪ್ತರಿಂದ ಪಡೆಯುವಿರಿ. ಇಷ್ಟಪಟ್ಟವರ ಭೇಟಿಯು ಮನಸ್ಸಿಗೆ ಹಿತವೆನಿಸುವುದು. ಕೆಲವು ಸಮಸ್ಯೆಯನ್ನು ನೀವಾಗಿಯೇ ತಂದುಕೊಳ್ಳುವಿರಿ.

ಮೀನ ರಾಶಿ : ಉನ್ನತ ವಿದ್ಯಾಭ್ಯಾಸಕ್ಕೆ ನಿಮಗೆ ಅಧಿಕ ಒತ್ತಡ ಬರಬಹುದು. ಪಾಲುದಾರಿಕೆಯಿಂದ ಪರಸ್ಪರ ಕಲಹವಾಗಬಹುದು. ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗಬಹುದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ನಿಮ್ಮ ಹಾಸ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ವಾಗ್ವಾದವೇ ಆಗಿ ಮನಸ್ಸು ಮುರಿಯಬಹುದು. ನಿಮಗೆ ವಿರೋಧಿಗಳ ಭಯವು ಕಾಡುವ ಸಾಧ್ಯತೆ ಇದೆ.

-ಲೋಹಿತಶರ್ಮಾ – 8762924271 (what’s app only)

ತಾಜಾ ಸುದ್ದಿ
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!
ನೋಕಿಯಾ ಫೋನ್ ಹೋಗಿ HMD Mobile ಮಾರುಕಟ್ಟೆಗೆ ಬಂತು!
ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು
ಹತ್ತಾರು ಊರು ಸುತ್ತಿದರೂ ನಿಮಗೆ ಮನಯೇ ಶ್ರೇಷ್ಠ ಎನ್ನಿಸಬಹುದು
ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ? ವಿಡಿಯೋ ನೋಡಿ
‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ
‘ಪವಿತ್ರಾ ಗೌಡಗೆ ಲೋ ಬಿಪಿ’: ಆರೋಪಿಗಳ ತಪಾಸಣೆ ನಡೆಸಿದ ವೈದ್ಯರ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ