ಯೂಪ, ಶರ, ಶಕ್ತಿ, ದಂಡಯೋಗಗಳ ಬಗ್ಗೆ ಗೊತ್ತಾ? ಯೋಗಗಳ ಲಕ್ಷಣ ಮತ್ತು ಫಲಗಳೇನು?

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಪ್ರಕಾರದ ಯೋಗಗಳನ್ನು ಹೇಳಿದ್ದಾರೆ. ಅವುಗಳು ನಾವು ಹುಟ್ಟುವಾಗ ಆಯಾ ಸ್ಥಾನದಲ್ಲಿದ್ದರೆ, ಯೋಗಗಳು ಸಂಭವಿಸುತ್ತವೆ ಮತ್ತು ಸಮಯಕ್ಕೆ ಯೋಗ್ಯವಾದ ಫಲವನ್ನು ಕೊಡುತ್ತವೆ. ಜ್ಯೋತಿಷ್ಯದಲ್ಲಿ ಈ ಮೂರು ಯೋಗಗಳನ್ನು ಆಕೃತಿ ಯೋಗಗಳು ಎಂಬುದಾಗಿ ಕರೆದಿದ್ದಾರೆ.

ಯೂಪ, ಶರ, ಶಕ್ತಿ, ದಂಡಯೋಗಗಳ ಬಗ್ಗೆ ಗೊತ್ತಾ? ಯೋಗಗಳ ಲಕ್ಷಣ ಮತ್ತು ಫಲಗಳೇನು?
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 22, 2023 | 3:31 PM

ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಪ್ರಕಾರದ ಯೋಗಗಳನ್ನು ಹೇಳಿದ್ದಾರೆ. ಅವುಗಳು ನಾವು ಹುಟ್ಟುವಾಗ ಆಯಾ ಸ್ಥಾನದಲ್ಲಿದ್ದರೆ, ಯೋಗಗಳು ಸಂಭವಿಸುತ್ತವೆ ಮತ್ತು ಸಮಯಕ್ಕೆ ಯೋಗ್ಯವಾದ ಫಲವನ್ನು ಕೊಡುತ್ತವೆ. ಜ್ಯೋತಿಷ್ಯದಲ್ಲಿ ಈ ಮೂರು ಯೋಗಗಳನ್ನು ಆಕೃತಿ ಯೋಗಗಳು ಎಂಬುದಾಗಿ ಕರೆದಿದ್ದಾರೆ.

ಯೋಗಗಳ ಲಕ್ಷಣ ಮತ್ತು ಫಲಗಳು :

ಯೂಪ ಯೋಗ – ಲಗ್ನದಲ್ಲಿ ಅಂದರೆ ಮೊದಲನೇ ಮನೆಯಲ್ಲಿ, ದ್ವಿತೀಯದಲ್ಲಿ, ತೃತೀಯ ಹಾಗೂ ಚತುರ್ಥದಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಯೂಪ ಯೋಗ ಎನ್ನುವರು. ಅಂದರೆ ಸಾಲಾಗಿ ಒಂದರಿಂದ ನಾಲ್ಕನೇ ಮನೆಯವರೆಗೆ ಎಲ್ಲ ಗ್ರಹರೂ ಇರಬೇಕು. ಅದರಲ್ಲಿ ರಾಹು ಅಥವಾ ಕೇತುಗಳಲ್ಲಿ ಯಾರಾದರೂ ಒಬ್ಬರು ಇರುವರು.

ಫಲಗಳು ಈ ಯೋಗದಲ್ಲಿ ಜನಿಸಿದವರು ತ್ಯಾಗ ಬುದ್ಧಿಯನ್ನು ಇಟ್ಟುಕೊಂಡಿರುತ್ತಾರೆ ಹಾಗೂ ಯಜ್ಞ, ಯಾಗ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿರುತ್ತಾರೆ. ಯೂಪ ಎಂದರೆ ಯಜ್ಞದಲ್ಲಿ ಬಳಕೆಯಾಗುವ ಒಂದು ಸ್ತಂಭ. ಈ ಯೋಗದಲ್ಲಿ ಎಲ್ಲ ಗ್ರಹಗಳು ಸಾಲಾಗಿ ನಾಲ್ಕು ಮನೆಗಳಲ್ಲಿ ಹಂಚಿಕೆಯಾಗುವುದು. ಅದು ಸ್ತಂಭದಂತೆ ಕಾಣಿಸುವುದರಿಂದ ಮತ್ತು ಈ ಯೋಗದಲ್ಲಿ ಜನಿಸಿದವರು ಯಜ್ಞ, ಯಾಗಗಳಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿರುವುದರಿಂದ ಈ ಹೆಸರು.

ಇನ್ನು ಶರ ಯೋಗ.

ಲಕ್ಷಣ ಲಗ್ನದಿಂದ ಚತುರ್ಥ, ಪಂಚಮ, ಷಷ್ಠ, ಸಪ್ತಮದಲ್ಲಿ ಎಲ್ಲ ಗ್ರಹಗಳೂ ಇದ್ದರೆ, ಅದನ್ನು ಶರಯೋಗ ಎನ್ನುವರು. ಇದರ ಫಲ ಈ ಯೋಗದಲ್ಲಿ ಜನಿಸಿದವರು ಹಿಂಸೆಯನ್ನು ಅಧಿಕವಾಗಿ ಮಾಡುವವರಾಗಿರುತ್ತಾರೆ. ಅಷ್ಟೇ ಅಲ್ಲದೇ ರಕ್ಷಣಾವ್ಯವಸ್ಥೆಯಲ್ಲಿ ಕಾರ್ಯವನ್ನು ನಿರ್ವಹಿಸುವವರೂ ಅಲ್ಲಿಯೇ ವಿವಿಧ ಹುದ್ದೆಗಳನ್ನು ಮಾಡುವವರೂ, ರಾಜನಿಗೆ ಗೌಪ್ಯ ವಿಚಾರಗಳನ್ನು ತಿಳಿಸುವವರೂ ಅಥವಾ ಶಸ್ತ್ರಗಳನ್ನು ತಯಾರಿಸುವವರೂ ಆಗಿರುತ್ತಾರೆ.

ಇದನ್ನೂ ಓದಿ: ರಾಶಿಭವಿಷ್ಯ, ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು, ನೆಮ್ಮದಿ ಇರುವುದು

ಶರ ಎಂದರೆ ಬಾಣ. ಬಾಣದಂತೆ ನೇರವಾಗಿ ಇರುವುದರಿಂದ ಈ ಹೆಸರು. ಶರವು ಯುದ್ಧದಲ್ಲಿ, ದೇಶರಕ್ಷಣೆಗೆ ಬಳಕೆಯಾಗುವ ಕಾರಣ, ಅಲ್ಲಿ ಹಿಂಸೆಯು ಮುಖ್ಯವಾಗಿ ಕಾಣಿಸುತ್ತದೆ. ಅಷ್ಟೇ ಅಲ್ಲದೇ ರಾಜ್ಯದ ರಕ್ಷಣೆಗೆ ರಾಜನಿಗೆ ಉಪಯೋಗವಾಗುವ ಸಮಚಾರವನ್ನೂ ತಿಳಿಸುವುದಾಗಿದೆ. ಇನ್ನು ವೃತ್ತಿಯೂ ಶಸ್ತ್ರಗಳನ್ನು ತಯಾರಿಸುವುದೇ ಆಗಿರುವುದು. ಅಥವಾ ಅದರಲ್ಲಿ ಹೆಚ್ಚು ಆಸಕ್ತಿಯೂ ಇರುವುದು.

ಶಕ್ತಿ ಯೋಗ

ಲಕ್ಷಣ ಲಗ್ನದಿಂದ ಸಪ್ತಮ, ಅಷ್ಟಮ, ನವಮ, ದಶಮಸ್ಥಾನದಲ್ಲಿ ಎಲ್ಲ ಗ್ರಹರಿದ್ದರೆ ಅದನ್ನು ಶಕ್ತಿ ಯೋಗ ಎನ್ನುವರು. ಇದರ ಫಲ ತಮ್ಮ ಕುಲಕ್ಕೆ ಯೋಗ್ಯವಲ್ಲದ ವೃತ್ತಿಯಲ್ಲಿ ತೊಡಗಿಕೊಳ್ಳುವನು, ಆಲಸ್ಯ ಸ್ವಭಾವವನ್ನು ಇಟ್ಟುಕೊಂಡವನು, ಸುಖ, ಧನ, ಕನಕಾದಿಗಳಿಂದ ಹೀನನೂ ಆಗಿರುವನು.

ಶಕ್ತಿ ಎಂದರೆ ಒಂದು ಆಯುಧ, ಅದು ಇಂದ್ರನದು.

ದಂಡ ಯೋಗ

ಲಕ್ಷಣ – ದಶಮ, ಏಕಾದಶ, ದ್ವಾದಶ ಮತ್ತು ಲಗ್ನದಲ್ಲಿ ಎಲ್ಲ ಗ್ರಹರೂ ಇದ್ದರೆ ಅದು ದಂಡಯೋಗ. ಫಲ – ಈ ಯೋಗದಲ್ಲಿ ಜನಿಸಿದವನು ತಾನು ಇಷ್ಟಪಡುವ ಜನರಿಂದ ದೂರವಿರುವನು. ಅಷ್ಟು ಮಾತ್ರವಲ್ಲದೇ ದುಷ್ಕೃತ್ಯಗಳಲ್ಲಿ ಮನಸ್ಸುಳ್ಳವನೂ ಆಗುವನು.

ಹೀಗೆ ಗ್ರಹಗತಿಗಳ ಸಣ್ಣ ಬದಲಾವಣೆಯೂ ಮನುಷ್ಯನನ್ನು ಉನ್ನತಕ್ಕೂ ಅವನತಿಗೂ ತಳ್ಳಬಹುದು. ಇಲ್ಲಿ ಎಲ್ಲ ಯೋಗಗಳೂ ಒಂದೇ ರೀತಿಯಲ್ಲಿ ಕಂಡರೂ ಅವುಗಳ ಸ್ಥಾನವು ಬದಲಾದುದರಿಂದ ಶುಭಾಶುಭಫಲವು ಸಿಗುವುದು. ಒಂದನೇ ಯೂಪ ಯೋಗದಲ್ಲಿ ಹೆಚ್ಚು ಶುಭ, ಎರಡನೇಯದಲ್ಲಿ ಅಂದರೆ ಶರ ಯೋಗದಲ್ಲಿ ಶುಭಾಶುಭ, ಮೂರು ಮತ್ತು ನಾಲ್ಕು ಶಕ್ತಿ ಮತ್ತು ದಂಡ ಯೋಗಗಳಲ್ಲಿ ಅಶುಭವೇ ಹೆಚ್ಚಿರುವುದು. ಹೀಗೆ ಗ್ರಹಗಳು ಒಂಭತ್ತೇ ಆದರೂ ಅವುಗಳ ಸ್ಥಾನ, ಬಲಗಳ ಮೇಲೆ ಇವು ನಿರ್ಣಯವಾಗುತ್ತದೆ.

ಲೋಹಿತಶರ್ಮಾ, ಇಡುವಾಣಿ

Published On - 3:26 pm, Wed, 22 November 23