AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 26 November : ಇಂದು ಈ ರಾಶಿಯವರು ಬೇಸರದಿಂದ ಸ್ಥಾನತ್ಯಾಗ ಮಾಡುವರು

ದಿನ ಭವಿಷ್ಯ, 26, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಷಷ್ಠೀ ತಿಥಿ ಬುಧವಾರ ತಂತ್ರಗಾರಿಕೆ, ಅನಿರೀಕ್ಷಿತ ಪ್ರಯಾಣ, ಸ್ಪರ್ಧೆಯಲ್ಲಿ ಜಯ, ಒಪ್ಪಂದದಲ್ಲಿ ಭಿನ್ನಮತ, ಸಾಲಕ್ಕೆ ಪಡೆಯಲು ತಿರಸ್ಕಾರ, ಸಂಭ್ರಮ ಇವೆಲ್ಲ ಇಂದಿನ ವಿಶೇಷವಾಗಿರಲಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.

Horoscope Today 26 November : ಇಂದು ಈ ರಾಶಿಯವರು ಬೇಸರದಿಂದ ಸ್ಥಾನತ್ಯಾಗ ಮಾಡುವರು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 26, 2025 | 12:51 AM

Share

ಮೇಷ ರಾಶಿ:

ನಿಮ್ಮ ಕೆಲಸದಲ್ಲಿ ಕಲಾತ್ಮಕತೆಗೆ ಪ್ರೇರಣೆ ಸಿಗುವುದು. ಎಲ್ಲದಕ್ಕೂ ಮನೆಯವರ ಬೆಂಬಲ. ಸಂಬಂಧದಲ್ಲಿ ಸಿಹಿ ಕ್ಷಣ. ವಿಧಿಯನ್ನು ಸಮಯವನ್ನು ಮೀರದೇ ಕಾರ್ಯವನ್ನು ಮಾಡಲು ಪ್ರಯತ್ನಿಸಿ, ಸಾಧ್ಯವಾದರೆ ಸಾಧಿಸಿ. ನಿಮ್ಮ ನಿಜವಾದ ಪ್ರಯತ್ನಕ್ಕೆ ದೈವವೂ ಸಹಾಯ ಮಾಡುವುದು. ಇಂದು ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಮಾಡುವಿರಿ. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ಪ್ರಯಾಣದಲ್ಲಿ ಜಾಗರೂಕತೆ ಇರಲಿ. ಗೊಂದಲ ವಾತಾವರಣವನ್ನು ನೀವು ಸೃಷ್ಟಿಮಾಡಿಕೊಳ್ಳುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ. ಸಾಲ ಮಾಡುವ ಯೋಜನೆಯಿಂದ ವಿಮುಖರಾಗುವಿರಿ. ನಿಮ್ಮ ಮಾತಿನಿಂದ ತಾಯಿಗೆ ಬೇಸರವಾಗಲಿದೆ. ನಿಮ್ಮನ್ನು ನೀವು ಬದಲಿಸಿಕೊಳ್ಳುವಿರಿ. ಕಾನೂನಿನ ಸಮರದಲ್ಲಿ ರೋಚಕತೆ ಇರುವುದು. ಸಂಗಾತಿಯ ಕಿರಿಕಿರಿಯಿಂದ ನಿಮಗೆ ಕಷ್ಟವಾದೀತು. ಗಗನ ಕುಸುಮವು ನೋಡಲಷ್ಟೇ ಚಂದ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳು ಸಿಗುವುದು. ಸಾಹಿತ್ಯ ಕ್ಷೇತ್ರದವರು ಗೌರವವನ್ನು ಪಡೆಯಬಹುದು.

ವೃಷಭ ರಾಶಿ:

ನಿಮ್ಮ ತಂತ್ರಗಳು ಯಶಸ್ಸು ತರುತ್ತವೆ. ಕೆಲಸದಲ್ಲಿ ಗಮನ ಸೆಳೆಯುವ ರೀತಿಯ ಕೆಲಸ. ಮನೆಯ ಬದಲಾವಣೆಯನ್ನು ಮಾಡುವಿರಿ. ಯಾರಿಂದಲೂ ಆರ್ಥಿಕ ಸಹಾಯವು ಸಿಗದೇ ಕಷ್ಟವಾದೀತು. ಮನಸ್ಸು ಚಂಚಲವಾಗಿ ಕೆಲಸವು ಸೂಚಿಸದು. ಗೌಣವಾದುದನ್ನು ಪ್ರಾಮುಖ್ಯ ಮಾಡುವುದು ಬೇಡ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ನಿಮಗೆ ಸಂಬಂಧಿಸದ ವಿಚಾರದಲ್ಲಿ ಮಧ್ಯಸ್ತಿಕೆ ಬೇಡ. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಇಂದು ಭೀತಿಯು ಇರಲಿದ್ದು ಮನೆಯನ್ನು ಬಿಟ್ಟು ಹೋಗಲಾರಿರಿ. ಅಶುಭಾವಾರ್ತೆಯಿಂದ ಇಂದಿನ ಕಾರ್ಯವೆಲ್ಲ ಹಾಳಾಗಬಹುದು. ಸ್ನೇಹಿತರು ಅಚ್ಚರಿ ಮಾಹಿತಿಯನ್ನು ಹಂಚಬಹುದು. ದಾಂಪತ್ಯದ ಬಾಂಧವ್ಯದಲ್ಲಿ ಹೊಸ ಬೆಳಕು. ಮಾನವೀಯ ಮನಸ್ಸು ಎಲ್ಲರಿಗೂ ಸಂತೋಷ. ಸಂಗಾತಿಯ ವ್ಯವಹಾರದ ವಿಷಯದಲ್ಲಿ ಭಿನ್ನಾಭಿಪ್ರಾಯ ಬರಬಹುದು. ನಿಮಗಾದ ನೋವಿನಿಂದ ಇತರರಿಗೂ ನೋವು ಕೊಡುವಿರಿ.

ಮಿಥುನ ರಾಶಿ:

ನಿಮ್ಮ ಶ್ರಮಕ್ಕೆ ಸರಿಯಾದ ಫಲ. ಕೆಲಸದಲ್ಲಿ ಉನ್ನತಿ ಅವಕಾಶಸ ನಿರೀಕ್ಷೆ. ಹೂಡಿಕೆಯಲ್ಲಿ ಉತ್ತಮ ನಿರ್ಧಾರ. ಕುಟುಂಬದಲ್ಲಿ ದೊಡ್ಡ ವಿಷಯ ಪರಿಹಾರ. ಒಳ್ಳೆಯವರನ್ನೇ ಅನುಮಾನಿಸುವಂತೆ ಮಾಡಬಹುದು. ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. ಸಮಯೋಚಿತ ಸಲಹೆಯಿಂದ ಬರುವ ತೊಂದರೆಯು ದೂರಾಗುವುದು. ಸ್ಪರ್ಧಾತ್ಮಕ ಮನೋಭಾವವು ನಿಮ್ಮ ದಾರಿಯನ್ನು ತಪ್ಪಿಸಬಹುದು. ಪಾಲುದಾರಿಕೆಯಲ್ಲಿ ಕಲಹವಾಗುವ ಸಾಧ್ಯತೆ ಇದೆ. ಪತ್ರವ್ಯವಹಾರವು ಸಂಪೂರ್ಣ ಪ್ರಾಮಾಣಿಕವಾಗಿ ಇರದು ಎಂಬುದು ಗಮನದಲ್ಲಿ ಇರಲಿ. ಕೇಳಿಕೊಂಡು ಬಂದವರಿಗೆ ನಿಮ್ಮಿಂದ ಅಲ್ಪ ಸಹಾಯ ಸಿಗುವುದು. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಹಿರಿಯರಿಂದ ಆದರ. ನಿಮ್ಮ ಜವಾಬ್ದಾರಿತನ ಎಲ್ಲರ ಮೆಚ್ಚುಗೆ ಪಡೆಯುತ್ತದೆ. ನೀವು ಇಂದು ವಿಶೇಷ ಲಕ್ಷ್ಯವನ್ನು ಇಟ್ಟುಕೊಂಡು ಕೆಲಸವನ್ನು ಮಾಡಬೇಕಾದೀತು.

ಕರ್ಕಾಟಕ ರಾಶಿ:

ಉದ್ಯೋಗದಲ್ಲಿ ನಿಮ್ಮ ನಿರ್ಣಯಗಳಿಗೆ ನೀವೇ ಚೈತನ್ಯ ತುಂಬಬೇಕು. ಆರ್ಥಿಕ ಆದಾಯದಲ್ಲಿ ಸರಿಯಾದ ವೇಗ ಕಾಣಿಸುವುದು. ನಿಮ್ಮ ಬಳಿ ಇರುವ ವಸ್ತುವು ಅನೇಕ ಉಪಯೋಗಕ್ಕೆ ಬರಬಹುದು. ನಿಮಗೆ ಗೊತ್ತಿರುವುದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇಂದು ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ವೀಕ್ಷಿಸಬಹುದು. ಇಂದು ನಿಮಗೆ ಬರಬೇಕಾದ ಹಣವು ಅನಿರೀಕ್ಷಿತ ರೀತಿಯಲ್ಲಿ ಬಂದರೂ ಅದು ಇನ್ನೊಂದು ಮಾರ್ಗದಲ್ಲಿ ಖಾಲಿಯಾಗುವುದು. ನಿಮಗೆ ಇಷ್ಟವಿಲ್ಲದವರನ್ನು ಮನಸ್ಸಿನಿಂದ ಹೊರಹಾಕಿ. ಮನೆಯ ನಿರ್ಮಾಣಕ್ಕೆ ಅಧಿಕ ಖರ್ಚು ಮಾಡಬೇಕಾಗುವುದು. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ರೀತಿಯ ಪರೀಕ್ಷೆಗಳು ಬರಬಹುದು. ಬಂಧುಗಳ ಒಡನಾಟ ಸಂತೋಷ ತರುತ್ತದೆ. ಚಿಕ್ಕ ಗೊಂದಲ ಇದ್ದರೂ ಅಂತ್ಯದಲ್ಲಿ ಯಶಸ್ಸು. ದೂರದಿಂದ ಶುಭವಾರ್ತೆ ಸಾಧ್ಯ. ಸದುದ್ದೇಶದ ಸಂಬಂಧಗಳು ನಿಮಗೆ ಯಶಸ್ಸು ಕೊಡುವುದು. ಇಂದು ಹೆಚ್ಚು ಶ್ರಮವಹಿಸಿ ಕೆಲಸವನ್ನು ಮಾಡಬೇಕಾದೀತು. ನಿಮ್ಮ ಮನವನ್ನು ಸಂಗಾತಿಯು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವರು.

ಸಿಂಹ ರಾಶಿ:

ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸಿಗೆ ದಾರಿ. ನಿಮ್ಮ ಕೆಲಸದಲ್ಲಿ ರಹಸ್ಯ ಬರುವ ಅಡಚಣೆ ದೂರವಾಗುತ್ತದೆ. ಹಣಕಾಸಿನಲ್ಲಿ ಇದ್ದಕ್ಕಿದ್ದಂತೆ ಸುಧಾರಣೆ. ನಿಮಗೆ ಇಂದು ಏನಾದರೂ ಹೊಸತನ್ನು ಮಾಡುವ ಉದ್ದೇಶವಿರುವುದು. ಮೇಲಿಂದ ಮೇಲೆ‌ ಬೀಳವ ಘಾತದಿಂದ ಬಲವಾದ ಘಾಸಿಯಾಗಲಿದೆ. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಗಾಯದ ಮೇಲೆ ಬರೆ ಬೀಳಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಶುಭವಾದ ಕೆಲಸಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ. ಬಂಧುಗಳ ಮಾತಿಂದ ಸಿಟ್ಟಾಗುವಿರಿ. ಆದರೆ ತೋರಿಸಲು ಹೋಗುವುದಿಲ್ಲ. ಸಂಬಂಧದಲ್ಲಿ ಆಳವಾದ ಮಾತುಕತೆಯಿಂದ ಧೈರ್ಯ ಹೆಚ್ಚಾಗುತ್ತದೆ. ಅತಂತ್ರವಾದುದನ್ನು ಸ್ವತಂತ್ರ ಮಾಡಿಕೊಳ್ಳುವಿರಿ. ಕೃಷಿ ಚಟುವಟಿಕೆಯಲ್ಲಿ ಉತ್ಸಾಹವು ಸ್ವಲ್ಪ ಇರುವುದು. ಸಂತಾನಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಭೇಟಿ ಮಾಡಿ.

ಕನ್ಯಾ ರಾಶಿ:

ಎರಡು ಕೆಲಸಗಳನ್ನು ಒಂದೇ ರೀತಿಯಲ್ಲಿ ಸಮರ್ಪಕವಾಗಿ ನಡೆಸುತ್ತೀರಿ. ಹಣದ ವ್ಯವಹಾರಗಳಲ್ಲಿ ನಿಖರತೆ. ನೀವು ನಿಮ್ಮ ಪ್ರತಿಬಂಧವನ್ನು ಮೀರಿ ತೊಂದರೆ ಪಡುವಿರಿ. ನಿಮಗೆ ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಪಾಲುದಾರಿಕೆ ಸಿಗಬಹುದು. ನಿಮ್ಮ ಚಾಂಚಲ್ಯದ ಸ್ಥಿತಿಗೆ ಸಿಟ್ಟಾಗಬಹುದು. ಓಡಾಡಲಟದ ಗೀಳನ್ನು ತಪ್ಪಿಸಿಕೊಳ್ಳಬೇಕು. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು‌‌. ಕಛೇರಿಯಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗಲಿದೆ‌. ಸಂಬಂಧದಲ್ಲಿ ಸ್ನೇಹ, ಪ್ರೀತಿ ಹೆಚ್ಚಳ. ಕೆಲಸದಲ್ಲಿ ಶಾಂತ ಮನಸ್ಸಿನಿಂದ ಮಾಡಿದ ಪ್ರಯತ್ನ ಫಲವತ್ತಾಗುತ್ತದೆ. ಸಮಾರಂಭದಲ್ಲಿ ಅನಿರೀಕ್ಷಿತ ಗೌರವವು ನಿಮಗೆ ಪ್ರಾಪ್ತವಾಗುವುದು. ದಾಂಪತ್ಯದಲ್ಲಿ ಅಸಹಜ‌ ಮಾತುಕತೆಗಳು ಕಿರಿಕಿರಿಯನ್ನು ಉಂಟುಮಾಡೀತು.

ತುಲಾ ರಾಶಿ:

ಚಿಕ್ಕ ತಪ್ಪುಗಳನ್ನು ಸರಿ‌ ಮಾಡಿಕೊಳ್ಳಲು ಸಮಯ. ಕೆಲಸದಲ್ಲಿ ನಿಮ್ಮ ಕಲ್ಪನೆಗಳಿಗೆ ಮಾನ್ಯತೆ ಸಿಕ್ಕಿ ಸಂತೋಷ. ಇಂದು ನಿಮ್ಮಲ್ಲಿ ಉತ್ಸಾಹವಿದ್ದು ನೀವೇ ಸ್ವತಃ ಜವಾಬ್ದಾರಿಯನ್ನು ಪಡೆಯುವಿರಿ. ನಿಮ್ಮದಾದ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬೇಕಾಗುವುದು. ಮುಖವನ್ನು ಗಂಟು ಹಾಕಿಕೊಂಡು ಇರುವುದು ನಿಮ್ಮಿಂದ ಜನರನ್ನು ದೂರವಿರಿಸುತ್ತದೆ. ನಿಮ್ಮಲ್ಲಿರುವ ಅಲ್ಪ ಸ್ವಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಹೂಡಿಕೆಯಿಂದ ಅಲ್ಪ ಹಣವನ್ನು ಕಳೆದುಕೊಳ್ಳಬೇಕಾಗುವುದು. ಇಂದಿನ ನಿಮ್ಮ ಮಾರಾಟದಿಂದ ಬೆಲೆಯು ಸಿಗದು. ನಿಮ್ಮ ವ್ಯಕ್ತಿತ್ವಕ್ಕೆ ಕಳಂಕವನ್ನು ಬಳಿಯಬಹುದು. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಹೆಬ್ಬಯಕೆ ಬೇಡ. ಮೋಜಿಗಾಗಿ ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮಿಂದ ಮನೆಯವರಿಗೆ ನೆರವಾಗಿದೆ ಎನ್ನಿಸುವ ನೆಮ್ಮದಿ. ನಿಮ್ಮ ಸಹನೆ ದೊಡ್ಡ ಸಾಧ್ಯತೆಯನ್ನು ತರಬಹುದು. ಕೂಡಿಟ್ಟ ಹಣವನ್ನು ನೀವು ಬಿಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು.

ವೃಶ್ಚಿಕ ರಾಶಿ:

ಗಮನ ಸೆಳೆಯುವ ಅವಕಾಶಗಳು ಸಿಗುತ್ತವೆ. ಕೆಲಸದಲ್ಲಿ ಹೊಸ ಜವಾಬ್ದಾರಿ. ಹಣಕಾಸಿನಲ್ಲಿ ಲಾಭದ ಲಕ್ಷಣಗಳು ಬರಲಿವೆ. ವ್ಯಾವಹಾರಿಕ ಸಂಬಂಧವನ್ನು ಹಾಗೆಯೇ ಇಟ್ಟುಕೊಂಡರೆ ಒಳ್ಳೆಯದು. ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಹಣ ಕೊಟ್ಟರೆ ಎಲ್ಲವೂ ಸಿಗದು. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ. ವಿದೇಶದ ಪ್ರಯಾಣಕ್ಕೆ ಆಯಾಸವು ಅಡ್ಡಿಬರಬಹುದು. ನಿಮ್ಮ ಮಾತುಗಳಿಗೆ ಒಪ್ಪಿಗೆಯ ವಾತಾವರಣ. ಸಂಬಂಧದಲ್ಲಿ ಸ್ಪಷ್ಟತೆ. ಸ್ವಲ್ಪ ಅಹಂಕಾರ ನಿಯಂತ್ರಿಸಿದರೆ ದಿನ ಅದ್ಭುತ. ಆಕರ್ಷಕ ಮಾತಿಗೆ ಮನಸೋತು ಪ್ರೀತಿಯಲ್ಲಿ ಬೀಳುವಿರಿ. ಕಷ್ಟವೆಂದು ಸಿಕ್ಕ ಕೆಲಸವನ್ನು ಬಿಡುವಿರಿ. ಏನಾದರೂ ಹೇಳಬೇಕೆಂದು ಇದ್ದರೆ ನೇರವಾಗಿ ಹೇಳಿ. ಅಮಂಗಲವಾದ ಕಾರ್ಯಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ. ರಾಜಕೀಯ ಏರಿಳಿತದಿಂದ ನಿಮ್ಮ ನಿರ್ಧಾರವು ಸರಿಯಾಗದು.

ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಧನು ರಾಶಿ:

ಮನೆಯವರೊಂದಿಗೆ ಸಮಾಧಾನದ ಮಾರಕತೆ. ಕೆಲಸದಲ್ಲಿ ಹಳೆಯ ಸಮಸ್ಯೆಗೆ ಹೊಸ ಪರಿಹಾರ. ಹಣಕಾಸಿನಲ್ಲಿ ಸಾಧಾರಣ ಬೆಳವಣಿಗೆ. ನಿಮ್ಮ ನಿಯೋಜಿತ ಕಾರ್ಯಗಳನ್ನು ಮಾಡಲು ಜನರು ಸಿಗದೇಹೋಗಬಹುದು. ಧಾರ್ಮಿಕ ಕಾರ್ಯಗಳಿಗೆ ಮುಂದಾಳುತ್ವವವನ್ನು ವಹಿಸುವಿರಿ. ಉದ್ವೇಗದಲ್ಲಿ ನೀವು ಏನನ್ನಾದರೂ ಹೇಳಬಹುದು. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಬೇಡದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವಿರಿ. ಭಾವನೆಗಳು ಸಮತೋಲನವಾಗುತ್ತವೆ. ಸ್ನೇಹಿತರಲ್ಲಿ ಒಬ್ಬರಿಂದ ಉಪಯುಕ್ತ ಸಹಾಯ. ಆರೋಗ್ಯದಲ್ಲಿ ಹಗುರತೆ. ಮನಸ್ಸು ಧಾರ್ಮಿಕ ಚಿಂತನೆಗೆ ಒಲಿಯುವ ದಿನ.. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು.‌ ನಿಮ್ಮ ರಹಸ್ಯವನ್ನು ನೀವು ಗೊತ್ತಿಲ್ಲದೇ ಬೇರೆಯವರ ಜೊತೆ ಹಂಚಿಕೊಳ್ಳುವಿರಿ.

ಮಕರ ರಾಶಿ:

ಮಾತು, ಬುದ್ಧಿವಂತಿಕೆ ನಿಮ್ಮ ಶಸ್ತ್ರ. ಒಬ್ಬರಿಗೆ ಹೇಳಿದ ಸಲಹೆ ಮಹತ್ತರ ಫಲ ನೀಡಬಹುದು. ಹೊಸ ಸಂಪರ್ಕಗಳು ಪ್ರಯೋಜನಕಾರಿ. ನಿಮ್ಮ ಮಕ್ಕಳನ್ನು ಸರಿಯಾದ ಮಾರ್ಗಕ್ಕೆ ತರಲು ಸಮಯವು ಬೇಕಾಗುವುದು. ನಿಮಗೆ ತಿಳಿದ ವಿಚಾರದ ಬಗ್ಗೆ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನವನ್ನು ಕೊಡುವರು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ಸರಿಯಾದ ಸಮಯಕ್ಕೆ ಉತ್ತಮ ವೈದ್ಯರ ಸಲಹೆಯನ್ನು ಪಡೆಯಿರಿ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಇಂದು ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ನಿಮ್ಮ ಕೆಲಸದಲ್ಲಿ ಗೊಂದಲ ನಿವಾರಣೆ. ಹಣಕಾಸಿನಲ್ಲಿ ಸ್ಥಿರ ವೇಗ. ಮನಸ್ಸಿಗೆ ಹೊಸ ಆಲೋಚನೆಗಳು ಬೀಳುವ ದಿನ. ಚಿಕ್ಕ ಪ್ರಯಾಣದ ಸಾಧ್ಯತೆ. ಹೊಸ ಉದ್ಯೋಗಕ್ಕೆ ಬೇಕಾದ ಸಿದ್ಧತೆಯನ್ನೂ ಆಲೋಚಿಸುವಿರಿ. ಯಾರೋ ಕೊಟ್ಟದ್ದನ್ನು ಸ್ವೀಕರಿಸುವುದಿಲ್ಲ. ‌ಗೆಲುವನ್ನು ಸಾಧಿಸಲು ಛಲವಿರುವುದು.

ಕುಂಭ ರಾಶಿ:

ತಾಳ್ಮೆಯನ್ನು ಅಧಿಕವಾಗಿ ಬೆಳೆಸಿಕೊಳ್ಳುವಿರಿ. ಕಲೆ, ಸಂಗೀತ, ಸೌಂದರ್ಯ, ಹಣಕಾಸು ನಿರ್ವಹಣೆ ಇವರ ವಿಶೇಷತೆ. ಒಂದು ಕೆಲಸ ಹಿಡಿದರೆ ಬಿಡದೇ ಮುಗಿಸುತ್ತಾರೆ. ಎಲ್ಲವೂ ನಿಮ್ಮ ಕೈಯಲಿದೆ ಎಂದುಕೊಂಡು ಬೀಗುವುದು ಬೇಡ. ಸಾಮಾಜಿಕ ಕಾರ್ಯಗಳ ಬಗ್ಗೆ ಕಿವಿಮಾತನ್ನು ಆಪ್ತರು ಹೇಳುವರು. ಪ್ರೇಮದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ತಾಳ್ಮೆಯಿಂದ ಮುಂದುವರಿಯುವುದು ಮುಖ್ಯವಾದೀತು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಪ್ರಯಾಣದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಂಡು ಸಮಾಧಾನ ಪಡುವಿರಿ. ತುರ್ತು ಅವಶ್ಯಕತೆ ಇರುವುದು. ಭೀತಿಯಿಂದ ನೀವು ಕೆಲವನ್ನು ಮಾಡದೇ ಇರುವಿರಿ. ಇರುವುದರಲ್ಲಿ ನೆಮ್ಮದಿಯನ್ನು ಕಾಣುವುದು ಮುಖ್ಯವಾದೀತು. ಮನಸ್ಸಿನ ಚಾಂಚಲತ್ಯವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ತೊಂದರೆ ಬರಬಹುದು.

ಮೀನ ರಾಶಿ:

ಧೈರ್ಯ, ಸಾಹಸ, ತಾತ್ಕಾಲಿಕ ನಿರ್ಧಾರಶಕ್ತಿ, ಹೊಸ ಕಾರ್ಯ ಶುರು ಮಾಡುವ ಸಾಮರ್ಥ್ಯ, ನಿಮ್ಮ ಬಲ. ಎಲ್ಲಿಯೇ ಹೋದರೂ ಮೊದಲ ಸ್ಥಾನ ನಿಲ್ಲುತ್ತಾರೆ. ಆದರೆ ಯಾವುದನ್ನೂ ಮೊದಲಿನಂತೆ ಮಾಡಲಾಗದು ಎಂಬ ಭ್ರಮೆಯ ನಿರಸನವಾಗಲಿದೆ. ನಿಮ್ಮ ಇಂದಿನ ಶ್ರಮವು ಎಷ್ಟೇ ಇದ್ದರು ಒಂದು ಮಾತು ಎಲ್ಲದಕ್ಕೂ ತಣ್ಣೀರು ಹಾಕುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆದರೂ ಮನಸ್ಸಿಗೆ ನೆಮ್ಮದಿ ಸಿಗದು. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಮಕ್ಕಳ‌ ವಿವಾಹ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಶತ್ರುಗಳ ಉಪಟಳ ಕಡಿಮೆ ಆಗಿದ್ದು ವೈಯಕ್ತಿಕ ಯೋಜನೆಗೆ ಸಮಯ ಕೊಡಲಾದೀತು. ಮಾತನ್ನು ನಿಯಂತ್ರಿಸಿರುವುದು ಮಿತ್ರರಿಗೆ ಆಶ್ಚರ್ಯ ಎನಿಸುವುದು. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರವನ್ನು ಮಾಡಿಕೊಳ್ಳಿ.

26 ನವೆಂಬರ್​ 2025ರ ಸೋಮವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಗಂಡ, ಕರಣ : ತೈತಿಲ, ಸೂರ್ಯೋದಯ – 06 – 24 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:07 – 13:33, ಗುಳಿಕ ಕಾಲ 10:41 – 12:07, ಯಮಗಂಡ ಕಾಲ 07:50 – 09:16

-ಲೋಹಿತ ಹೆಬ್ಬಾರ್-8762924271 (what’s app only)

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ