Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಹಣದ ವಿಚಾರದಲ್ಲಿ ಸರಿಯಾದ ಮಾರ್ಗದರ್ಶನ ಬೇಕಾಗುವುದು

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 09 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಹಣದ ವಿಚಾರದಲ್ಲಿ ಸರಿಯಾದ ಮಾರ್ಗದರ್ಶನ ಬೇಕಾಗುವುದು
ಇಂದಿನ ದಿನಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Jan 09, 2024 | 12:45 AM

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 09) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ವೃದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:29 ರಿಂದ 04:53 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:50 ರಿಂದ 11:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:04ರ ವರೆಗೆ.

ಧನು ರಾಶಿ: ಸರ್ಕಾರದ ಕಾರ್ಯವನ್ನು ಮಾಡಲು ಹೆಚ್ಚು ಆಯಾಸಗೊಳ್ಳಬೇಕಾಗುವುದು. ದೂರದಲ್ಲಿರುವವರೆಗೆ ಮನೆಯ ನೆನಪು ಕಾಡಬಹುದು. ನೀವು ಇಂದು ಎಲ್ಲರಿಂದ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಮಂಗಲ ಕಾರ್ಯಗಳಿಂದ ನೆಮ್ಮದಿ ಇರುವುದು. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ‌ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಮಿತ್ರರ ಮನಸ್ತಾಪವನ್ನು ನೀವು ಬಗೆಹರಿಸಿಕೊಳ್ಳುವಿರಿ. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ಬೆಳೆಯಬಹುದು. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ‌ ಇರುಬುದು. ಸಾಹಿತ್ಯದಲ್ಲಿ ಆಸಕ್ತಿ ಮೂಡುವ ಸಾಧ್ಯತೆ ಇದೆ. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುಬಿರಿ. ಮಕ್ಕಳ ಬಗ್ಗೆ ನಿಮ್ಮ ಭಾವನೆ ತಪ್ಪಾಗಬಹುದು.

ಮಕರ ರಾಶಿ: ಸ್ತ್ರೀಯರ ಜೊತೆಗೆ ನಿಮ್ಮ ಅಧಿಕ ಒಡನಾಟವು ಇರುವುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಕಿರಿಕಿರಿಯನ್ನು ಅನುಭವಿಸಿದರೂ ಅದನ್ನು ವ್ಯಕ್ತ ಮಾಡುವುದು ಬೇಡ. ಸ್ನೇಹಿತರು ನಿಮ್ಮನ್ನು ಅಪಮಾನ ಮಾಡಬಹುದು. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ಹಳೆಯ ಮನೆಯ ದುರಸ್ತಿ ಕಾರ್ಯವು ಜರುಗಲಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಇಂದಿನ‌ ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬೇಕಾದ ವಸ್ತುವು ಕಣ್ಮರೆಯಾಗಬಹುದು. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ. ನಿಮ್ಮ ವರ್ತನೆಯನ್ನು ಇತರರು ಅನುಕರಿಸಿಯಾರು.

ಕುಂಭ ರಾಶಿ: ಸಿಟ್ಟು ಮಾಡಿಕೊಂಡು ಮನೆಯಿಂದ ಹೊರಟರೂ ವ್ಯವಹಾರದಲ್ಲಿ ಲಾಭ ಬರುವ ಕಾರಣ ಅನಿವಾರ್ಯವಾಗಿ ಶಾಂತರಾಗಬೇಕಾದೀತು. ‌ಮನೆಯ ಬಗ್ಗೆಯೆರ ಹೆಚ್ಚು ಯೋಚಿಸುವಿರಿ. ಅನಾರೋಗ್ಯವು ಉತ್ಸಾಹವನ್ನು ಕಡಿಮೆ ಮಾಡುವುದು. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಛೇರಿಯಲ್ಲಿ ಅನಗತ್ಯವಾಗಿ ಮಾತನಾಡಿ ಸುಮ್ಮನೇ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳುವುದು ಬೇಡ. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವರು. ವೃತ್ತಿಯಲ್ಲಿ ಬಡ್ತಿಯನ್ನು ಅಪೇಕ್ಷಿಸುವಿರಿ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಆಪ್ತರ ಮಾತಿನ ಮೇಲೆ ಭರವಸೆ ಇಡಿ. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮೀನ ರಾಶಿ: ಮನೆಯಲ್ಲಿ ನಡೆಯು ಸಮಾರಂಭಕ್ಕೆ ಖರ್ಚು ನಿಮ್ಮ ಊಹೆಯನ್ನೂ ಮೀರಬಹುದು. ಸಾಲದ ಚಿಂತೆಯಲ್ಲಿ ನೀವು ಎಲ್ಲವನ್ನೂ ಮರೆಯುವಿರಿ. ಇಂದು ನಿಮಗೆ ಮಾತಿನಿಂದಾಗಿ ತೊಂದರೆಗಳು ಬರಬಹುದು. ಎಲ್ಲರ ಜೊತೆಗೂ ವಾಗ್ವಾದಕ್ಕೆ ಹೋಗುವುದು ಬೇಡ. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು. ಯಾರಿಂದಲಾದರೂ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಇಂದು ಸಹಾಯವನ್ನು ಪಡೆಯುವಿರಿ. ಹಣದ ವಿಚಾರದಲ್ಲಿ ನಿಮಗೆ ಸರಿಯಾದ ಮಾರ್ಗದರ್ಶನ ಬೇಕಾಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ