ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶನಿವಾರ ನಿಮ್ಮ ಅಸ್ತಿತ್ವದ ತೋರ್ಪಡಿಕೆ, ಮನಶ್ಚಂಚಲತೆ, ವಾಹನದಿಂದ ಗಾಯ, ಅಧಿಕಾರಿಗಳ ಮೆಚ್ಚುಗೆಗೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಗ್ರೀಷ್ಮ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುನರ್ವಸು, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಧೃತಿ ಕರಣ: ತೈತಿಲ, ಸೂರ್ಯೋದಯ – 06 : 13 am, ಸೂರ್ಯಾಸ್ತ – 07 : 03 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 11:02 – 12:39, ಗುಳಿಕ ಕಾಲ 07:49 – 09:26, ಯಮಗಂಡ ಕಾಲ 03:52 – 05:29
ತುಲಾ ರಾಶಿ: ಸಿಕ್ಕ ವಸ್ತುವನ್ನು ಮಾಲಿಕರಿಗೆ ತಲುಪಿಸಿ, ಹೆಮ್ಮೆಯಾಗುವುದು. ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಮತ್ತೊಂದು ಕಡೆ ಸಾಲವನ್ನು ಮಾಡಬೇಕಾಗಬಹುದು. ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಇಂದು ಮನಸ್ಸಿನಲ್ಲಿ ಭಯ ಮತ್ತು ಖಿನ್ನತೆಯಂತಹ ವಿಷಯಗಳಿಗೆ ಕಾರಣವಾಗಬಹುದು. ಒಂದು ಅಪಾಯವನ್ನು ತಪ್ಪಿಸಿಕೊಳ್ಳಲು ಹೋಗಿ ಮತ್ತೊಂದು ಅಪಾಯಕ್ಕೆ ಬೀಳುವ ಸಾಧ್ಯತೆ ಇದೆ. ಒಳ್ಳೆಯ ಆಲೋಚನೆಗಳನ್ನು ಇಟ್ಟುಕೊಳ್ಳಿ. ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ನಿಮ್ಮ ದೌರ್ಬಲ್ಯಗಳು ಇತರರಿಗೆ ಸಹಾಯವಾದೀತು. ಸಹೋದರನ ಜೊತೆ ಆಪ್ತ ಮಾತುಕತೆ ನಡೆಯಲಿದೆ. ಸ್ನೇಹಿತರ ಸಹಾಯ ಪಡೆಯಲು ಧನವನ್ನು ವ್ಯಯಿಸಬೇಕಾಗುವುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ. ಯಾವುದನ್ನೇ ಆದರೂ ಸ್ವಾಭಿಮಾನವನ್ನು ಬಿಟ್ಟು ಇರಲಾಗದು. ನಿಮ್ಮ ಘನತೆಗೆ ಧಕ್ಕೆ ಬರುವುದು. ಸಹೋದ್ಯೋಗಿಯ ಜೊತೆ ದೂರ ಪ್ರಯಾಣ ಮಾಡುವಿರಿ.
ವೃಶ್ಚಿಕ ರಾಶಿ: ನಿಮ್ಮ ಧೋರಣೆಯನ್ನು ನಿಷ್ಠುರವಾಗಿ ಹೇಳುವುದು ಬೇಡ. ನೀವು ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮೊಳಗೆ ಧನಾತ್ಮಕತೆ ತುಂಬುವುದು. ಕೆಲವು ವೈಫಲ್ಯಗಳಿಂದ ನೀವು ಪಾಠವನ್ನು ಕಲಿಯಬೇಕಾಗಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ನಿಮ್ಮವರ ಮಾತುಗಳಿಂದ ಗಾಬರಿಯಾಗಲಿದ್ದೀರಿ. ಊಹಿಸದೇ ಇರುವ ಮಾತುಗಳನ್ನು ಕೇಳಬೇಕಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ಮನೆಯಿಂದ ದೂರ ಇರುವರು. ಮಕ್ಕಳ ಸಾಧನೆಯು ನಿಮಗೆ ಖುಷಿ ಕೊಡುವುದು. ತಪ್ಪಿನ ಬಗ್ಗೆ ನಿಮಗೆ ಅಂಜಿಕೆ ಬರಬಹುದು. ಅಧೀರರಾಗಿ ಹಿಂದೇಟು ಹಾಕುವುಸು ಬೇಡ. ಉದ್ಯಮದಿಂದ ಸಾಕಷ್ಟು ಲಾಭವಿದ್ದರೂ ಅಸಮಾಧನವು ಕಾಡಬಹುದು. ಸಂಗಾತಿಯ ವಿಚಾರಕ್ಕೆ ನೀವು ತಲೆ ಹಾಕಬೇಡಿ. ಪಾಲುದಾರಿಕೆ ವಿಷಯವು ಪ್ರಸ್ತಾಪವಾದಾಗ ಪ್ರಯೋಜನವನ್ನು ತಿಳಿದುಕೊಳ್ಳಿ. ಆಸ್ತಿಯ ಹಂಚಿಕೆಯು ನಿಮಗೆ ಸಮಾಧಾನ ತರದು. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು. ಸಣ್ಣ ಉದ್ಯಮಿಗಳು ಬಂದ ಕೆಲಸವನ್ನು ಬಿಡದೇ ಮಾಡಿಕೊಡುವುದು ಉತ್ತಮ.
ಧನು ರಾಶಿ: ಅಧಿಕ ಲಾಭಾಂಶವನ್ನು ಪಡೆಯುವ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಇಂದು ನೀವು ಕುಟುಂಬದ ಜೊತೆ ಕುಳಿತು ಕುಶಲೋಪರಿಗಳನ್ನು ಹಂಚಿಕೊಳ್ಳುವಿರಿ. ಮನಸ್ಸೂ ಸಮಾಧಾನದಿಂದ ಇರುವುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಆರಂಭದ ಉತ್ಸಾಹವು ಅಂತ್ಯದ ವರೆಗೆ ಇರಲಾರದು. ಆಹಾರವು ನಿಮ್ಮನ್ನು ಉತ್ಸಾಹದಿಂದ ಇಡುವುದು. ಇತರರಿಗೆ ಧನಸಹಾಯ ಮಾಡಿ ಕಳೆದುಕೊಳ್ಳುವಿರಿ. ಗುರಿಯ ಸಾಧನೆಗೆ ಯಾರನ್ನಾದರೂ ಮಾದರಿಯಾಗಿ ಮಾಡಿಕೊಳ್ಳುವ ಅವಶ್ಯಕತೆ ಇರಲಿದೆ. ಮಕ್ಕಳಿಗೆ ಔದಾರ್ಯ ತೋರಿ, ಅವರ ದೃಷ್ಟಿಯಲ್ಲಿ ದೊಡ್ಡವರಾಗುವಿರಿ. ಶಾರೀರಿಕ ಆಯಾಸವನ್ನು ವಿಶ್ರಾಂತಿಯಿಂದ ಪರಿಹರಿಸಿಕೊಳ್ಳಿ. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ನಿಮ್ಮ ತಿಳುವಳಿಕೆಯ ಬಗ್ಗೆ ಅಹಂಕಾರ ಬೇಡ. ಪ್ರಶಂಸೆಯಿಂದ ಅಹಂಕಾರವು ಬರುವುದು. ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಅಲ್ಪ ಆದಾಯವನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವ ಯೋಚನೆ ಮಾಡುವಿರಿ.
ಮಕರ ರಾಶಿ: ಮೇಲಧಿಕಾರಿಗಳನ್ನು ಖುಷಿಪಡಿಸಲು ಏನೆಲ್ಲ ಸರ್ಕಸ್ ಮಾಡಬೇಕಾಗಿ ಬರಬಹುದು. ಇಂದು ಸಂಬಂಧವನ್ನು ಖುಷಿಪಡಿಸಲು ನಿಮಗೆ ಅವಕಾಶ ಸಿಗುವುದು. ಮೋಜಿಗಾಗಿ ಹೂಡಿಕೆ ಮಾಡಿ ಹಣವನ್ನು ಕಳೆದುಕೊಳ್ಳುವ ಉದ್ಯಮಿಗಳಿಗೆ ಕಳೆದ ಆರಂಭದ ದಿನಗಳನ್ನು ನೆನೆದು ಸಂತೋಷವಾಗಲಿದೆ. ಬಹಳಷ್ಟು ಖರ್ಚಿದ್ದು ಹಣದ ಹೊಂದಾಣಿಕೆ ಕಷ್ಟವಾದೀತು. ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಬಯಸುವಿರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ನಂಬಿಕೆಯನ್ನು ಸರಿಯಾದ ಕಡೆಯಲ್ಲಿ ಇರಿಸಿ. ಅದನ್ನು ವಿಚಲಿತಗೊಳಿಸುವುದು ಬೇಡ. ಕಛೇರಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವಿರಿ. ಪ್ರೀತಿಯನ್ನು ಇಷ್ಟಪಡುವುದಿಲ್ಲ. ಸ್ವಂತ್ರವಾಗಿರಲು ಇಚ್ಛಿಸುವಿರಿ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ. ಖುಷಿಯನ್ನು ನೀವೇ ಇಮ್ಮಡಿಸಿಕೊಳ್ಳುವಿರಿ. ಅನವಶ್ಯಕವಾಗಿ ಆಡುವ ಮಾತುಗಳು ನಿಮ್ಮ ಮೇಲಿನ ಗೌರವವನ್ನು ಕಡಿಮೆ ಮಾಡಿಸೀತು. ತಾರತಮ್ಯ ಭಾವವನ್ನು ಬಿಡಬೇಕಾಗುವುದು.
ಕುಂಭ ರಾಶಿ: ಸ್ನೇಹಿತನ ಮಾತಿಗೆ ಬೆಲೆ ಕೊಟ್ಟು ಸಾಲವಾಗಿ ಅಪರಿಚಿತರಿಗೆ ಹಣವನ್ನು ಕೊಡುವಿರಿ. ಇಂದು ನಿಮ್ಮ ಮಾತು ಆಕರ್ಷಣೀಯವಾಗಿ ಇರುವುದು. ಸಂಬಂಧದ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವ ಪ್ರಯತ್ನ ಮಾಡುವಿರಿ. ಹೊಸತನವನ್ನು ತಂದುಕೊಳ್ಳುವಲ್ಲಿ ನೀವು ಸದಾ ಪ್ರಯತ್ನಶೀಲರು. ಆದರೆ ಆಲಸ್ಯವನ್ನು ಬಿಡಬೇಕಾದೀತು. ಪ್ರೀತಿಗೋಸ್ಕರ ಹಣವನ್ನು ಖರ್ಚುಮಾಡುವಿರಿ. ಸುಮ್ಮನೇ ಕುಳಿತರೂ ನಿಮ್ಮನ್ನು ಕೆರಳಿಸಬಹುದು. ಅಪರಿಪೂರ್ಣ ಕೆಲಸದ ಯಾದಿಯನ್ನು ತಯಾರಿಸಿ ಮುಂದುವರಿಯಿರಿ. ಅಧ್ಯಾತ್ಮದಲ್ಲಿ ಆಸಕ್ತಿ ಇದ್ದರೂ ಸಮಯದ ಅಭಾವದಿಂದ ಅದು ಅಸಾಧ್ಯವಾದೀತು. ಗುರುಜನರ ಭೇಟಿಯಿಂದ ಮನಸ್ಸು ನೆಮ್ಮದಿಯಿಂದ ಇರಬಹುದು. ಇಂದು ವೃತ್ತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇರದು. ಎಲ್ಲರ ಮೇಲೂ ವಿನಾ ಕಾರಣ ಕೋಪ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ.
ಮೀನ ರಾಶಿ: ಕ್ರಿಯಾತ್ಮಕ ಚಿಂತನೆಯಿಂದ, ಕಾರ್ಯಗಳಿಂದ ಹೊಸ ಮೈಲುಗಲ್ಲಿಗೆ ಅಡಿಯಿಡುವಿರಿ. ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಯಾವುದಾದರೂ ಒಂದನ್ನು ಕಳೆದುಕೊಳ್ಳಬೇಕಾಗುವುದು. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಉತ್ಸಾಹವು ನಿಮ್ಮಲ್ಲಿ ಇರುವುದು. ಅಪ್ರಯೋಜಕ ಕೆಲಸಗಳನ್ನು ಮಾಡಲು ನೀವು ಹಿಂದೇಟು ಹಾಕಬಹುದು. ಸ್ನೇಹಿತರ ಸಜವಾಸದಿಂದನಿಮಗೆ ಅಪವಾದ ಬರಬಹುದು. ಪ್ರಯಾಣ ಮಾಡಬೇಕಾಗಿದ್ದರೂ ಭಯವು ನಿಮ್ಮನ್ನು ಕಾಡಬಹುದು. ಸಂಗಾತಿಗೆ ನಿಮ್ಮಿಂದ ಧೈರ್ಯದ ಅವಶ್ಯಕತೆ ಇರಲಿದೆ. ಇಂದು ಶುಭದ ನಿರೀಕ್ಷೆಯಲ್ಲಿ ಇರುವಿರಿ. ಕೊಟ್ಟ ಸಾಲವು ಮರಳಿ ಬರುವ ಸಾಧ್ಯತೆ ಇದೆ. ಇದು ನಿಮ್ಮನ್ನು ಸಂತೋಷವಾಗಿ ಇಡಬಲ್ಲದು. ಕೆಲಸದ ಸ್ಥಳವನ್ನು ಶಿಸ್ತಿನಿಂದ ಇಟ್ಟುಕೊಳ್ಳುವಿರಿ. ನಿಮಗೆ ಸಿಕ್ಮಿದ್ದನ್ನು ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ಅನಾರೋಗ್ಯದಿಂದಾಗಿ ಸಮಸ್ಯೆಯನ್ನು ಎದುರಿಸಬೇಕಾಗುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಇನ್ನೊಬ್ಬರ ಬಳಿ ಇರುವ ನಿಮ್ಮ ವಸ್ತುವನ್ನು ಬಹಳ ಪ್ರಯತ್ನದಿಂದ ಪಡೆಯುವಿರಿ.
Published On - 1:43 am, Sat, 19 July 25




