Horoscope – ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸಾಲ ಮರುಪಾವತಿ ಆಗುವ ಸಾಧ್ಯತೆ ಇದೆ

ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣಪಕ್ಷ, ದಶಮಿ ತಿಥಿ, ಗುರುವಾರ, ಮೇ 06, 2021ರ ರಾಶಿ ಭವಿಷ್ಯ.

Horoscope - ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸಾಲ ಮರುಪಾವತಿ ಆಗುವ ಸಾಧ್ಯತೆ ಇದೆ
ದಿನ ಭವಿಷ್ಯ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: May 06, 2021 | 6:30 AM

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣಪಕ್ಷ, ದಶಮಿ ತಿಥಿ, ಗುರುವಾರ, ಮೇ 06, 2021. ಶತಭಿಷ ನಕ್ಷತ್ರ. ರಾಹುಕಾಲ: ಇಂದು ಮಧ್ಯಾಹ್ನ 1: 48 ನಿಮಿಷದಿಂದ ಮಧ್ಯಾಹ್ನ 3:24 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.47. ಸೂರ್ಯಾಸ್ತ: ಸಂಜೆ 6.37.

ತಾ.06-05-2021 ರ ಗುರುವಾರದ ರಾಶಿಭವಿಷ್ಯ

ಮೇಷ: ಮನಸ್ಸು ಹಿಡಿತದಲ್ಲಿರಲಿ. ಎಷ್ಟು ಪ್ರಯತ್ನಿಸಿದರೂ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಕ್ಲೇಷ ಉಂಟಾಗುವುದು. ತೋರಿಕೆಯ ಸ್ವಭಾವದಿಂದ ದೃಷ್ಟಿದೋಷ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ:  5

ವೃಷಭ: ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ:  1

ಮಿಥುನ: ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿರಿ. ಹೊಸ ವ್ಯಾಪಾರ, ಉದ್ಯೋಗದ ಅವಕಾಶಗಳು ಕೂಡಿ ಬರುವವು. ಹಳೆಯ ಸಮಸ್ಯೆಗಳು ಪರಿಹಾರವಾಗುವವು. ಶುಭಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಶುಭ ಸಂಖ್ಯೆ:  9

ಕಟಕ: ಎಲ್ಲವೂ ಇದ್ದಂತೆ ಇರಲಿ ಎಂಬ ಮನೋಭಾವನೆ ಇರುವುದು. ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ವಿದೇಶ ಪ್ರಯಾಣದ ಯೋಗವಿದೆ. ಉದ್ಯೋಗದಲ್ಲಿ ಪ್ರಗತಿ ಮುಂದುವರೆಯುವುದು. ಶುಭ ಸಂಖ್ಯೆ:  3

ಸಿಂಹ: ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವುದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭ ಸಂಖ್ಯೆ:  7

ಕನ್ಯಾ: ಹೊಸ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ವಿಚಾರಮಾಡಿ ಮುಂದುವರೆಯಿರಿ. ಉದ್ಯೋಗದ ಸ್ಥಾನ ಬದಲಾವಣೆಯ ಯೋಗವಿದೆ. ಆಮಿಷಕ್ಕೆ ಒಳಗಾಗಿ ಮೋಸಹೋಗುವ ಸಂಭವವಿದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ:  6

ತುಲಾ: ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವುದು. ಮನೆಯಲ್ಲಿ ನೆಮ್ಮದಿ ಇರುವದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. ಶುಭ ಸಂಖ್ಯೆ: 2

ವೃಶ್ಚಿಕ: ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೊಟ್ಟಸಾಲ ಮರುಪಾವತಿಯಾಗುವುದು. ಶುಭ ಸಂಖ್ಯೆ: 8

ಧನು: ತಪ್ಪುಗಳನ್ನು ಸಮರ್ಥಿಸುವದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಅಧಿಕಾರಿಗಳ ಕಿರಿಕಿರಿಗೆ ಮಣಿಯದೇ ಧೈರ್ಯದಿಂದ ಕೆಲಸ ನಿರ್ವಹಿಸಿರಿ. ಮತ್ತೊಬ್ಬರ ಮೇಲೆ ಅತಿಯಾದ ವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ಶುಭ ಸಂಖ್ಯೆ: 3

ಮಕರ:  ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವುದು. ಸಂಕಷ್ಟಗಳ ಪರಿಹಾರಕ್ಕಾಗಿ ಅಲೆದಾಡಬೇಕಾದ ಸಂಭವವಿದೆ. ಶುಭ ಸಂಖ್ಯೆ: 3

ಕುಂಭ: ನಿಧಾನವಾಗಿ ಕಾರ್ಯಸಿದ್ಧಿಯಾಗುವುದು. ಮಕ್ಕಳಲ್ಲಿ ಹೊಸಹುರುಪು ಕಂಡು ಬರುವುದು. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವುದು. ಮಂದಗತಿಯ ಕೆಲಸಗಳು ನಿರಾಸೆ ಮೂಡಿಸುವ ಸಾಧ್ಯತೆ ಇದೆ. ಶಾಂತಚಿತ್ತರಾಗಿ ವ್ಯವಹರಿಸಿರಿ. ಶುಭ ಸಂಖ್ಯೆ:  4

ಮೀನ: ಆದಾಯ ಹೆಚ್ಚುವುದು. ವ್ಯವಹಾರಿಕ ಏಳ್ಗೆ ಇರುವದು. ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಶಾಂತಚಿತ್ತರಾಗಿ ವ್ಯವಹರಿಸಿರಿ. ಕೆಲಸದಲ್ಲಿ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಶುಭ ಸಂಖ್ಯೆ: 9

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937