ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲಪಕ್ಷ, ಅಷ್ಟಮಿ ತಿಥಿ, ಗುರುವಾರ, ಮೇ 20, 2021. ಮಖೆ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 1:49 ರಿಂದ ಇಂದು ಮಧ್ಯಾಹ್ನ 3:26 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.42. ಸೂರ್ಯಾಸ್ತ: ಸಂಜೆ 6.42.
ತಾ.20-05-2021 ರ ಗುರುವಾರದ ರಾಶಿಭವಿಷ್ಯ
ಮೇಷ: ಪೂರ್ಣವಿಶ್ವಾಸ ಇಲ್ಲದ ಅಥವಾ ತಿಳಿಯದ ಕೆಲಸದಲ್ಲಿ ಹಣವ್ಯಯ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ದಿನದ ಕೆಲಸ ಬೇಸರ ಉಂಟುಮಾಡುವ ಸಾಧ್ಯತೆ ಇದೆ.
5
ವೃಷಭ: ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು.ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವದು. ಶುಭ ಸಂಖ್ಯೆ: 9
ಮಿಥುನ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಶುಭ ಸಂಖ್ಯೆ: 2
ಕರ್ಕ: ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ. ಸಾಧನೆಗೆ ಸೂಕ್ತ ಅವಕಾಶ ದೊರೆಯುವದು. ಹಣಕಾಸಿನ ತೊಂದರೆಗಳು ಪರಿಹಾರವಾಗುವವು. ವ್ಯವಹಾರಗಳಲ್ಲಿ ಗೌಪ್ಯತೆ ಇರಲಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 4
ಸಿಂಹ: ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಕೊರತೆ ಇಲ್ಲ. ವ್ಯವಹಾರ ಚತುರತೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ. ಶುಭ ಸಂಖ್ಯೆ: 7
ಕನ್ಯಾ: ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ.ವ್ಯವಹಾರದಲ್ಲಿ ಮಂದಗತಿ ಇರುವದು. ವ್ಯಾಪಾರದಲ್ಲಿ ಜಾಗರೂಕತೆ ಅವಶ್ಯ. ಹಾನಿ ತಡೆಗಟ್ಟುವ ಪ್ರಯತ್ನಕ್ಕೆ ಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶುಭಫಲವಿದೆ. ಶುಭ ಸಂಖ್ಯೆ: 3
ತುಲಾ: ನಿಶ್ಚಿತ ಕೆಲಸಕ್ಕೆ ಬೆಂಬಲ ಸಿಗುವದರಿಂದ ಉತ್ತಮ ಫಲ ದೊರೆಯುವದು. ಸುಮ್ಮನೇ ಕೂಡದ ಜಾಯಮಾನ ಇರುವದರಿಂದ ಹೊಸ ಯೋಜನೆಯನ್ನು ರೂಪಿಸುವಿರಿ. ಹಿಂದಿನ ಬಾಕಿ ವಸೂಲಾತಿಗೆ ಶ್ರಮಿಸಬೇಕಾಗುವದು. ಶುಭ ಸಂಖ್ಯೆ:8
ವೃಶ್ಚಿಕ: ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವದು. ವಿದೇಶ ಪ್ರಯಾಣದ ಯೋಗವಿದೆ. ಶುಭ ಸಂಖ್ಯೆ: 2
ಧನು: ಸ್ವಜನರಲ್ಲಿ ಮನಸ್ತಾಪ. ದೇಹಾರೋಗ್ಯವೂ ಸರಿಯಿರದೆ ತಾಪದಾಯಕವಾಗುತ್ತದೆ. ಆದರೆ ಶ್ರೇಷ್ಠ ಜನರಿಂದ ಪುರಸ್ಕಾರ. ಸಾಂಸಾರಿಕ ದೃಷ್ಟಿಯಲ್ಲೂ ತೃಪ್ತಿದಾಯಕವಿದ್ದು ನೆಮ್ಮದಿ ಉಂಟಾಗುತ್ತದೆ. ಶುಭ ಸಂಖ್ಯೆ: 1
ಮಕರ: ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ. ಶುಭ ಸಂಖ್ಯೆ: 7
ಕುಂಭ: ಅಲ್ಪ ತ್ರಾಸದಾಯಕ. ಗಡಿಬಿಡಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಸಂಭವ. ಮಹತ್ವದ ಕೆಲಸಗಳನ್ನು ಮುಂದೂಡುವದು ಒಳ್ಳೆಯದು. ಮಂಗಲಕಾರ್ಯ, ಹೆಸರು, ಕಡಲೆ ದಾನ ಮಾಡಿರಿ. ಶುಭ ಸಂಖ್ಯೆ:9
ಮೀನ: ನಿಮ್ಮ ಶತ್ರುಗಳು ತಮ್ಮ ಕೃತ್ಯಗಳಿಂದ ತಾವಾಗಿಯೇ ಮಣಿಯುವರು. ಪರಿಹಾರವಾಗುವುದು.ಚೋರ ಭಯ, ಅಗ್ನಿ ಭಯ ಮುಂತಾದ ಭಯ ನಿವಾರಣೆಯಾಗುವುದು. ಪುತ್ರಸೌಖ್ಯ, ಮನೆಯಲ್ಲಿ ಸಂತೋಷವಿರುವದು. ಶುಭ ಸಂಖ್ಯೆ: 5
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937