ದಿನ ಭವಿಷ್ಯ
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2022 ಡಿಸೆಂಬರ್ 29ರ ಗುರುವಾರ ನಿಮ್ಮ ರಾಶಿ ಫಲ ( Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಸಪ್ತಮೀ ತಿಥಿ, ಮೂಲಾ ಮಹಾನಕ್ಷತ್ರ, ಪೂರ್ವಾಭಾದ್ರ ನಿತ್ಯನಕ್ಷತ್ರ, ಗುರುವಾರ, ಡಿಸೆಂಬರ್ 29, 2022. ರಾಹುಕಾಲ: ಇಂದು ಮಧ್ಯಾಹ್ನ 01 ಗಂ॥ 59 ನಿ।। ರಿಂದ ಇಂದು ಮಧ್ಯಾಹ್ನ 03 ಗಂ॥ 23 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 11 ನಿಮಿಷಕ್ಕೆ.
ತಾ. 29-12-2022 ರ ಗುರುವಾರದ ರಾಶಿ ಭವಿಷ್ಯ ಹೀಗಿದೆ:
- ಮೇಷ ರಾಶಿ: ನಗುತ್ತಲಿರುವ ನಿಮಗೆ ಯಾವ ರೋಗಗಳು, ತೊಂದರೆಗಳು ಏನು ಮಾಡೀತು? ಧಾರ್ಮಿಕ ಕಾರ್ಯಗಳಿಗೆ ನಿಮ್ಮ ಹಣವನ್ನು ನೀಡುತ್ತೀರಿ. ಇದರಿಂದ ನೀವು ಮಾನಸಿಕ ಶಾಂತಿಯೂ ನಿಮ್ಮದಾಗಲಿದೆ. ಹಾಸ್ಯಪ್ರವೃತ್ತಿಯುಳ್ಳ ನೀವು ಇತರರನ್ನೂ ನಗೆಗಡಲಲ್ಲಿ ತೆಲಿಸುವಿರಿ. ಹಿರಿಯ ಹಾಗೂ ಪ್ರಮುಖ ವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ವಿಫಲರಾಗುವಿರಿ.
- ವೃಷಭ ರಾಶಿ: ಆತುರದ ನಿರ್ಧಾರವನ್ನು ತೆಗದುಕೊಳ್ಳಲು ಹೋಗಬೇಡಿ. ಏಕೆಂದರೆ ಇಂದು ನಿಮ್ಮ ಇಂದ್ರಿಯಗಳು ಸತ್ಯಾಸತ್ಯವನ್ನು ಸರಿಯಾಗಿ ಗ್ರಹಿಸಲಾರವು. ಉತ್ತಮ ಆಹಾರವನ್ನು ಸೇವಿಸುವಿರಿ. ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವವು. ಆಫೀಸ್ ನಲ್ಲಿ ಒತ್ತಡದ ವಾತಾವರಣವಿರುವುದು. ಸಮಾಧಾನದಿಂದ ನಿಭಾಯಿಸಿ. ಕಾಲು ಕೆರೆದುಕೊಂಡು ಪತ್ನಿಯೊಂದಿಗೆ ಜಗಳವಾಡಬೇಡಿ.
- ಮಿಥುನ ರಾಶಿ: ಫಲಾಪೇಕ್ಷೆಗಳಿಲ್ಲದೇ ನಿಃಸ್ವಾರ್ಥ ಸೇವೆಯಲ್ಲಿ ಸಮಯವನ್ನು ಕಳೆಯಿರಿ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೋ ಅಂದರೆಂದು ನೀವು ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಹಣದ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮ್ಮವರನ್ನು ಮಾತನಾಡಿಸಿ. ಅವರೊಂದಿಗೆ ಕೆಲವು ಮಾತನಾಡಿ. ಸಂಬಂಧಗಳು ಸುಂದರವಾಗಿರಲಿ. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಬೇಡಿ.
- ಕಟಕ ರಾಶಿ: ಸಂಗಾತಿಯ ಜೊತೆ ವೈಮನಸ್ಯ ಬೆಳೆಸಿಕೊಳ್ಳಬಹುದು. ಮನೆಯಲ್ಲಿ ಕಚೇರಿಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಕಲಾತ್ಮಕ ಮತ್ತು ಸೃಜನಶೀಲ ವ್ಯಕ್ತಿತ್ವಕ್ಕೆ ಬಹಳಷ್ಟು ಮೆಚ್ಚುಗೆ ಬರಲಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಫಲವು ಸಿಗಲಿದೆ. ತಂದೆ-ತಾಯಿಯರ ಅನುಗ್ರಹವನ್ನು ಪಡೆದುಕೊಳ್ಳುವಿರಿ.
- ಸಿಂಹ ರಾಶಿ: ಕ್ರೀಡೆಯಲ್ಲಿ ಮನಸ್ಸುಳ್ಳವರಾಗುವಿರಿ. ಕಲ್ಪನೆಯಂತೆ ನಡೆಯದು ಎಂಬ ಸತ್ಯ ಇಂದು ಮನವರಿಕೆಯಾಗಲಿದೆ. ದೂರಪ್ರಯಾಣ ಸುಖಕರವಾಗಿದೆ. ಯಾರನ್ನೋ ಅವಮಾನಿಸಲು ಹೋಗಿ ಹಳ್ಳಕ್ಕೆ ಬೀಳಬೇಡಿ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿರುವುದು. ಸಿಟ್ಟಿನ ಮೂಟೆಯನ್ನು ಕೆಳಗಿಳಿಸಿ. ಆಗ ಸಿಗುವ ಆನಂದಕ್ಕೆ ಬೆಲೆಯೆಷ್ಟು? ನಿಮ್ಮ ಆಲೋಚನೆಗಳನ್ನು ಇತರೊಂದಿಗೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ಯಾರನ್ನೂ ನಂಬದ ನೀವು ಇಂದು ಒಬ್ಬರನ್ನು ನಂಬಿ ಮೋಸ ಹೋಗುತ್ತೀರಿ.
- ಕನ್ಯಾ ರಾಶಿ: ನೀವು ಅನುಮಾನಾಸ್ಪದವಾಗಿ ಇದ್ದರೆ ನಿಮ್ಮ ಕುರಿತು ಜನರ ಮನಸ್ಸಿನಲ್ಲಿ ಅನುಮಾನದ ಸಣ್ಣ ದೊಡ್ಡ ಅಲೆಗಳು ಏಳುವವು. ಸ್ವಲ್ಪ ಕಾಲ ಏನನ್ನೂ ಯೋಚಿಸದೇ ಇರಲು ಯತ್ನಿಸಿ. ಮನಸ್ಸು ಶಕ್ತಿಯನ್ನು ಉಲ್ಬಣಗೊಳಿಸಿಕೊಳ್ಳುವುದು. ನಕಾರಾತ್ಮಕತೆ ದೂರವಾಗುವುದು. ಹಣದ ಸಮಸ್ಯೆಗಳು ಎದುರಾಗಬಹುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ವಿಶ್ವಸಘಾತಕ ಕಾರ್ಯಗಳಿಗೆ ಮುನ್ನುಗ್ಗದಿರಿ. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ.
- ತುಲಾ ರಾಶಿ: ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ನಿಮ್ಮ ಜೀವನವನ್ನು ಲಘುವಾಗಿ ಕಾಣುವುದು ಬೇಡ. ನೀವೂ ಉತ್ಕೃಷ್ಟರೇ. ಕಾಲವೇ ಅದಕ್ಕೆ ಉತ್ತರಿಸಬೇಕು. ಅಲ್ಲಿಯ ತನಕ ತಾಳ್ಮೆಯಿಂದ ಇರಬೇಕಾದ ಕರ್ತವ್ಯವಿದೆ. ಒಳ್ಳೆಯವರ ಸಂಗ ಸಿಗಬಹುದು. ಸಿಗದಿದ್ದರೆ ನೀವೇ ಹೋಗಿ. ಒಳ್ಳೆಯ ಪುಸ್ತಕವನ್ನು ತಂದು ಓದಿ. ಸ್ನೇಹಿತನ ಕೆಲಸವನ್ನು ಅದು ಮಾಡುವುದು. ಹಳೆಯ ಗೆಳತಿ ನೆನಪಿಗೆ ಬರಬಹುದು.
- ವೃಶ್ಚಿಕ ರಾಶಿ: ನಿಮಗೆ ಸಿಕ್ಕಷ್ಟು ಅನ್ನವನ್ನು ಮಾತ್ರವೇ ಊಟ ಮಾಡಿ. ಇನ್ನೊಂದು ಅನ್ನವನ್ನು ಕಂಡು ಅಸೂಯೆ ಪಡುವುದೋ ಕೈ ಹಾಕಿ ತೆಗೆಯುವುದೋ ಮಾಡಬೇಡಿ. ಹೆಸರು ಹಾಳಾದೀತು. ರಸಿಕತೆಯಲ್ಲಿ ಸ್ಥಾನವನ್ನೂ, ಬುದ್ಧಿಯನ್ನೂ ಸ್ಥಳವನ್ನೂ ಸಂದರ್ಭವನ್ನೂ ವ್ಯಕ್ತಿಯನ್ನೂ ನಗಣ್ಯಗೊಳಿಸಬೇಡಿ. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ನೀವು ಆರಾಮಾಗಿದ್ದೀರಿ ಎಂದು ತೋರಿಸಲು ಹೋಗಬೇಡಿ. ಅಪಹಾಸ್ಯಕ್ಕೆ ಆಹಾರವಾಗಬಹುದು.
- ಧನು ರಾಶಿ: ಸ್ನೇಹಿತರ ಸಹಾನುಭೂತಿಯು ನಿಮ್ಮನ್ನು ಸಂಕಷ್ಟದಿಂದ ದೂರಮಾಡೀತು. ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ, ನೀರಾಗಿ ಹನಿ ನೀರ ಸುರಿಸುವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ. ಯಾರಿಗೋ ಕಾದು ಸಮಯವನ್ನು ಹಾಳು ಮಾಡುವಿರಿ.
- ಮಕರ ರಾಶಿ: ಅಪವಾದಗಳು ನಿಮ್ಮ ಮೇಲೆ ಎರಗಿ ಬೀಳಬಹುದು. ನಿಮ್ಮ ಎಂದಿನ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ನಿಮ್ಮ ಕಿವಿ ಮಾತು ಅನೇಕರಿಗೆ ಸ್ಫೂರ್ತಿಯಾಗಬಹುದು. ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ.
- ಕುಂಭ ರಾಶಿ: ಅದೃಷ್ಟವನ್ನು ಹುಡುಕುವ ನೀವು ಇಂದು ಬಾಗಿಲ ತೆರೆದು ಸ್ವಾಗತಿಸಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುವು. ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಂಬುಗೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕು. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ.
- ಮೀನ ರಾಶಿ: ಎಂದೋ ನೆಟ್ಟ ಗಿಡವು, ಬೆಳೆದು ಮರವಾಗಿ ಫಲವನ್ನು ಕೊಡುವಂತೆ, ಎಂದೋ ಮಾಡಿದ ಸತ್ಕಾರ್ಯ ಇಂದು ಫಲ ಕೊಡುವುದು ನಿಮಗೆ. ಕಳೆದುಹೋದ ಬಗ್ಗೆ ನೆನೆನೆನೆದು ಕೊರಗಿ ಕಣ್ಣೀರಾಗುವುದಕ್ಕಿಂತ ಉತ್ತಮ ಆಲೋಚನೆಗಳಿಂದ ಮುಂದಿನದನ್ನು ಚಿಂತಿಸಿ. ದಾರಿ ಸುಗಮ. ಗೌರವ, ಸಮ್ಮಾನಗಳು ನಿಮ್ಮ ಸೇವೆಗೆ, ಕಾರ್ಯಗಳಿಗೆ ಬರಲಿವೆ. ರಾಶ್ಯಧಿಪತಿಯಾದ ಗುರುವನ್ನೇ ಗೌರವಿಸಿ, ಪೂಜಿಸಿ. ಕತ್ತಲನ್ನು ಬೆಳಗುವ ದೀಪದಂತೆ ಕಷ್ಟವನ್ನೂ ಕರಗಿಸುವ ಸೂರ್ಯನು ಗುರು.