AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ದಿನ ಭವಿಷ್ಯ: ಈ ರಾಶಿಯವರು ದ್ವೇಷವನ್ನು ಸಾಧಿಸುತ್ತ ಕೂತರೆ ಮನಸ್ಸು ಹಾಳಾಗುವುದು ಬಿಟ್ಟರೆ ಮತ್ತೇನೂ ಆಗದು

Horoscope Today: ಡಿಸೆಂಬರ್ 28, 2022ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಇಂದು ಮಧ್ಯಾಹ್ನ 12 ಗಂ॥ 34 ನಿ।। ರಿಂದ ಇಂದು ಮಧ್ಯಾಹ್ನ 01 ಗಂ॥ 59 ನಿ।। ತನಕ.

Nithya Bhavishya: ದಿನ ಭವಿಷ್ಯ: ಈ ರಾಶಿಯವರು ದ್ವೇಷವನ್ನು ಸಾಧಿಸುತ್ತ ಕೂತರೆ ಮನಸ್ಸು ಹಾಳಾಗುವುದು ಬಿಟ್ಟರೆ ಮತ್ತೇನೂ ಆಗದು
ರಾಶಿಗಳು
TV9 Web
| Edited By: |

Updated on:Dec 28, 2022 | 11:19 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2022 ಡಿಸೆಂಬರ್ 28ರ ಬುಧವಾರ ನಿಮ್ಮ ರಾಶಿ ಫಲ ( Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ, ಮೂಲಾ ಮಹಾನಕ್ಷತ್ರ, ಶತಭಿಷಾ ನಿತ್ಯನಕ್ಷತ್ರ, ಬುಧವಾರ, ಡಿಸೆಂಬರ್ 28, 2022. ರಾಹುಕಾಲ: ಇಂದು ಮಧ್ಯಾಹ್ನ 12 ಗಂ॥ 34 ನಿ।। ರಿಂದ ಇಂದು ಮಧ್ಯಾಹ್ನ 01 ಗಂ॥ 59 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 57 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 11 ನಿಮಿಷಕ್ಕೆ.

ತಾ. 28-12-2022 ರ ಬುಧವಾರದ ರಾಶಿ ಭವಿಷ್ಯ ಹೀಗಿದೆ:

  1. ಮೇಷ ರಾಶಿ: ನಿಮ್ಮನ್ನು ಕಾಳಜಿ ಮಾಡುವವರು ಯಾರಿಲ್ಲ ಎಂದೆನ್ನಿಸಬಹುದು. ಸುಮ್ಮನೇ ಕುಳಿತಿರುವ ಬದಲು ಏನನ್ನಾದರೂ ಮಾಡಿ. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಿರಿ. ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಸಂಪತ್ತನ್ನು ಉಳಿಸಲು ಯತ್ನಿಸಿದಷ್ಟೂ ಯಾವುದಾದರೂ ಒಂದು ರೀತಿಯಲ್ಲಿ ಖರ್ಚಾಗುವುದು. ನಿದ್ರೆಯಲ್ಲಿ ಕಂಡ ಕನಸುಗಳೆಲ್ಲ ಸತ್ಯವಾಗದು.
  2. ವೃಷಭ ರಾಶಿ: ದ್ವೇಷವನ್ನು ಸಾಧಿಸುತ್ತ ಕೂರಬೇಡಿ. ಮನಸ್ಸು ಹಾಳಾಗುವುದು ಬಿಟ್ಟರೆ ಮತ್ತೇನೂ ಆಗದು. ಸಾಧ್ಯಾವಾದರೆ ಪ್ರೀತಿಸಿ, ಇಲ್ಲವೇ ತಟಸ್ಥವಾಗಿರಿ. ಬರುವ ಹಣವನ್ನು ನಿರೀಕ್ಷಿಸಬಹುದು. ಸಂಗಾತಿಯೊಂದಿಗೆ ಮನಸ್ತಾಪಗಳು ಏಳಬಹುದು. ಪ್ರೇಮ ನಿವೇದನೆಯನ್ನು ಮಾಡಲು ಹೋಗಬೇಡಿ. ತಿರಸ್ಕಾರಿಸಬಹುದು. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ನಿಮ್ಮನ್ನು ಸಮರ್ಥಿಕೊಳ್ಳಲು ಹೆಣಗಾಡುವಿರಿ. ಅಹಂಕರವನ್ನು ಬಿಟ್ಟುಬಿಡಿ.
  3. ಮಿಥುನ ರಾಶಿ: ಎಲ್ಲವೂ ವ್ಯರ್ಥವಾಯಿತು, ಯಾರೂ ಸಹಾಯಕ್ಕೆ ಬಾರರು, ಜೀವನವೇ ಹೀಗಾಯಿತು ಎಂಬ ಭಾವ ನಿಮ್ಮ ಮನಸ್ಸಿನಲ್ಲಿ ಓಡಾಡುತ್ತಿರಬಹುದು. ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಋಣಾತ್ಮಕ ಭಾವನೆಗಳೂ ದೂರವಾಗುವವು. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳ ಎನಿಸಬಹುದು. ಕುಟುಂಬದವರೊಂದಿಗೆ ನಗುತ್ತಾ ಇರಿ. ಕಲಾವಿದರಿಗೆ ದೊಡ್ಡ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ಬರಬಹುದು.
  4. ಕಟಕ ರಾಶಿ: ವ್ಯಾಪಾರಗಳಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುವುದು. ಲಾಭವೂ ಅಧಿಕಗೊಳ್ಳುವುದು. ಗ್ರಾಹಕರಿಂದ ವಂಚಿತರಾಗಬಹುದು. ಕುಟುಂಬಕ್ಕೆ ಸ್ವಲ್ಪ ಸಮಯವನ್ನು ಕೊಡಿ. ಅವರಿಗೆ ಏನು ಬೇಕು? ಏನು ಮಾಡಬೇಕು ಎಂಬುದನ್ನು ಅರಿತು ಕಾರ್ಯಪ್ರವೃತ್ತರಾಗಿ. ಪ್ರೇಮನಿವೇದನೆಗೆಂದು ಹೋಗುವಾಗ ಅವಘಡ ಸಂಭವಿಸಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಿ. ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಬೇಡಿ.‌ ಸಂಕಷ್ಟದ ಹಾದಿಯಾದೀತು.
  5. ಸಿಂಹ ರಾಶಿ: ಅನಾರೋಗ್ಯವನ್ನು ಸರಿಪಡಿಸಿಕೊಳ್ಳುವತ್ತ ನಿಮ್ಮ ಗಮನವಿರಲಿ. ಸ್ಪರ್ಧಾತ್ಮಕ ಕ್ರೀಡೆಗಳಿಗೆ ಭಾಗವಹಿಸಿ. ಸ್ನೇಹಿತರೊಂದಿಗೆ ಹೆಚ್ಚು ಕಾಲವನ್ನು ವ್ಯವಮಾಡುವಿರಿ. ಬಹಳ ದಿನಗಳಿಂದ ಹೋಗಬೇಕು ಎಂದು ಕೊಂಡ ಸ್ಥಳಗಳಿಗೆ ಹೋಗಿ ಬರುತ್ತೀರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ‌ ಕೂಡಿರುವವರಿಗೆ ನಿಮ್ಮ ನಿಜಸ್ಥಿತಿಯನ್ನು ತಿಳಿಸುವಿರಿ. ಸಂಪಾದನೆ ಹೆಚ್ಚಾಗುವುದು. ಮನೋರಂಜನೆಯ ಕಾರ್ಯಕ್ರಮಗಳಿಗೆ ಭಾಗವಹಿಸಬಹುದು.
  6. ಕನ್ಯಾ ರಾಶಿ: ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಗಳು ಅನಾಯಾಸವಾಗಿರುವುದಿಲ್ಲ. ವ್ಯರ್ಥ ಓಡಾಟಗಳು ಆಗುತ್ತವೆ. ಆ ಕಾರ್ಯಕ್ಕೊಸ್ಕರ ಖರ್ಚನ್ನೂ ಮಾಡಬೇಕಾಗಿಬರಬಹುದು. ಸಂಗಾತಿಯೊಡನೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯ ಸರಿಯುವುದು. ಭೂಮಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದರೆ ನಿಮ್ಮ ಬೆಲೆಗೆ ಸರಿಹೊಂದುವಂತೆ ಖರೀದಿಯಾಗುವುದು. ಮಕ್ಕಳಿಗೆ ಪ್ರೀತಿ ತೋರಿಸಿ. ಜೊತೆಗೆ ಭೀತಿಯೂ ಇರಲಿ. ಅತಿಯಾದ ಮಾಧುರ್ಯವು ದೇಹವನ್ನು ಹಾಳುಮಾಡುತ್ತದೆ.
  7. ತುಲಾ ರಾಶಿ: ಹೊಸ ವಸ್ತುಗಳ ಖರೀದಿಯಾಗಲಿದೆ. ಇದರಿಂದ ಮನೆಯಲ್ಲಿ ಕಿರಿಕಿರಿಯ ವಾತಾವರಣವೂ ನಿರ್ಮಾಣವಾಗುವುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳಿಂದ ಹೆಚ್ಚು ಲಾಭವಿರಲಿದೆ. ಯಾವ ಮಾತನ್ನೂ ಯೋಚಿಸದೇ ಕೊಡಬೇಡಿ. ಅದೇ ಮುಳುವಾದೀತು. ಸಂಗಾತಿಯ ಸೌಂದರ್ಯಕ್ಕೆ ಮಾರುಹೋಗಬೇಡಿ. ಎಲ್ಲರೊಂದಿಗೂ ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ಆಪತ್ತು ಎದುರಾದಾಗ ಅಂಬಿಕೆಯನ್ನು ಆರಾಧಿಸಿ.
  8. ವೃಶ್ಚಿಕ ರಾಶಿ: ಸುಂದರವಾದ ಪ್ರಕೃತಿಯ‌ ಮಡಿಲಿನಲ್ಲಿ ಓಡಾಡುತ್ತೀರಿ. ವ್ಯಾಪಾರದ ಕಾರಣದಿಂದ ದೂರ ಚಲಿಸುವ ಸಾಧ್ಯತೆ ಇದೆ. ನೀವು ವಾಹನವನ್ನು ಚಾಲನೆ ಮಾಡುವುದು ಬೇಡ. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಎಲ್ಲ ಸೋಲುಗಳನ್ನು ಪಾಠವನ್ನಾಗಿ ಮಾಡಿಕೊಳ್ಳಬೇಕು. ಸಾಧಿಸುವ ಛಲವಿರುವವಗೆ ಯಾವುದು ಸಾಧ್ಯವಿಲ್ಲ? ಪುತ್ರೋತ್ಸವದ ಆನಂದ ನಿಮ್ಮ ಪಾಲಿಗಿದೆ‌. ನೆರೆ-ಹೊರೆಯವರ ಜೊತೆ ಜಗಳಕ್ಕೆ ಹೋಗಬೇಡಿ.
  9. ಧನು ರಾಶಿ: ಮೂರನೆಯ ವ್ಯಕ್ತಿಗಳ ಒತ್ತಾಯಕ್ಕೆ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳುವಿರಿ‌. ದೀಪದ ಬುಡ ಕತ್ತಲೇ. ಇನ್ನೊಂದು ದೀಪವನ್ನು ಹಚ್ಚಿ. ಕತ್ತಲೆ ದೂರವಾಗುತ್ತದೆ. ಹಿಡಿದ ಕಾರ್ಯವನ್ನು ಬಿಡದೆ ಮುನ್ನಡೆಸು ಛಾತಿ ನಿಮ್ಮ ಯಶಸ್ಸಿನ ಗುಟ್ಟುಗಳಲ್ಲೊಂದು. ಗೊತ್ತಿದ್ದೂ ಉದ್ವೇಗಕ್ಕೆ ಒಳಗಾಗಬೇಡಿ. ಎದೆ ನೋವು ಕಾಣಿಸಿಕೊಂಡೀತು. ಶಸ್ತ್ರಚಿಕಿತ್ಸೆಯವರೆಗೂ ಒಯ್ಯಬಹುದು. ನಾಗರಾಜನಿಗೆ ಸುತ್ತು ಬನ್ನಿ. ಇಂದು ಹುಟ್ಟಿದ ಪ್ರೇಮವು ಕೆಲವೇ ದಿನದಲ್ಲಿ ಸಾಯುತ್ತದೆ.
  10. ಮಕರ ರಾಶಿ: ದಾಂಪತ್ಯಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಡುತ್ತಿದೆ. ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಇನ್ಮೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಾವಧಾನತೆಯಿರಲಿ. ಸ್ನೇಹಿತರೊಂದಿಗೆ ಸೇರಿ ಹಣವನ್ನು ಖರ್ಚು ಮಾಡಲು ಮುಂದಾಗುತ್ತೀರಿ. ನಿಮ್ಮ ನ್ಯೂನತೆಗಳು ಇನ್ನೊಬ್ಬರ ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ನಿರುದ್ಯೋಗದಲ್ಲಿ ಇದ್ದರೆ, ವಿಘ್ನಹರ್ತನನ್ನು ಪೂಜಿಸಿ ಉದ್ಯೋಗಾನ್ವೇಣೆಗೆ ತೆರಳಿ.
  11. ಕುಂಭ ರಾಶಿ: ದೃಢವೂ ಸುಂದರವೂ ಆದ ನಿಮ್ಮ ಕಾಯಕ್ಕೆ ಸಕ್ಕರೆಯನ್ನು ಇರುವೆಗಳು ಮುತ್ತಿದಂತೆ ಜನರು‌ ಮುತ್ತುತ್ತಾರೆ. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಉಪಯೋಗವಾಗಬಹುದು. ಸಂಗಾತಿಯೊಡನೆ ಸಲ್ಲಾಪ ಮಾಡುವಿರಿ. ಸಂಪತ್ತು ನಿಮ್ಮ ಶ್ರಮಕ್ಕನುಸಾರ ಸಿಗಲಿದೆ. ಬರೆವಣಿಗೆಯಿಂದ, ಮಾತಿನಿಂದ‌ ನಿಮಗೆ ಕೀರ್ತಿಯು ಲಭ್ಯ. ಆರೋಗ್ಯ ಚೆನ್ನಾಗಿರಲಿದೆ.
  12. ಮೀನ ರಾಶಿ: ಬದುಕು ಒಂದು ಸುಂದರ ಮನೆಯ ಕಿಟಕಿ ಇದ್ದಂತೆ. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು. ಹಾಗೆಯೇ ಶ್ರಮಪಟ್ಟರೆ ಸುಖ, ಶ್ರಮಪಡದಿದ್ದರೆ ಕಷ್ಟ. ಜೀವನದಲ್ಲಿ ನಮಗಾಗಿ ನಾವು ಬದುಕಬೇಕೆ ಹೊರತು ಬೇರೆಯವರಿಗೋಸ್ಕರವಲ್ಲ. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೇ. ಆದರೆ ಅವನಿಗೆ ಛಲವಿರಬೇಕು. ಬದಲಾವಣೆಯೆ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ನಿಲ್ಲುವುದು.

ಲೇಖನ: ಲೋಹಿತ ಶರ್ಮಾ, ಇಡುವಾಣಿ

Published On - 6:00 am, Wed, 28 December 22

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು