Nitya Bhavishya ಈ ವರ್ಷದ ಕೊನೆ ದಿನ ಡಿ. 31ರ ಭವಿಷ್ಯ ನಿಮ್ಮ ಪಾಲಿಗೆ ಹೇಗಿರತ್ತೆ ಎಂದು ತಿಳಿದುಕೊಳ್ಳಿ

| Updated By: ರಮೇಶ್ ಬಿ. ಜವಳಗೇರಾ

Updated on: Dec 31, 2022 | 6:00 AM

2022ಕ್ಕೆ ವಿದಾಯ ಹೇಳುವ ಮುನ್ನ ಈ ವರ್ಷದ ಕೊನೆ ದಿನದ (ಡಿಸೆಂಬರ್ 31) ಭವಿಷ್ಯ ನಿಮ್ಮ ಪಾಲಿಗೆ ಹೇಗಿರತ್ತೆ ಎಂದು ತಿಳಿದುಕೊಳ್ಳಿ.

Nitya Bhavishya ಈ ವರ್ಷದ ಕೊನೆ ದಿನ ಡಿ. 31ರ ಭವಿಷ್ಯ ನಿಮ್ಮ ಪಾಲಿಗೆ ಹೇಗಿರತ್ತೆ ಎಂದು ತಿಳಿದುಕೊಳ್ಳಿ
ರಾಶಿ ಭವಿಷ್ಯ
Follow us on

2022ಕ್ಕೆ ಗುಡ್ ಬೈ ಹೇಳುವ ಸಮಯ ಬಂದೇಬಿಟ್ಟಿದೆ. 2023 ಹೊಸ ವರ್ಷವನ್ನು (New Year 2023) ಬರಮಾಡಿಕೊಳ್ಳಲು ವಿಶ್ವದಾದ್ಯಂತ ಜನರು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 2022ಕ್ಕೆ ವಿದಾಯ ಹೇಳುವ ಮುನ್ನ ಈ ವರ್ಷದ ಕೊನೆ ದಿನದ (ಡಿಸೆಂಬರ್ 31) ಭವಿಷ್ಯ (Daily Horoscope) ನಿಮ್ಮ ಪಾಲಿಗೆ ಹೇಗಿರತ್ತೆ ಎಂದು ತಿಳಿದುಕೊಳ್ಳಿ.

ಪಂಚಾಂಗ

ಶಾಲಿವಾಹನ ಶಕೆ1945 ಶುಭಕೃತ್ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಧನುರ್ಮಾಸ ಮಹಾನಕ್ಷತ್ರ : ಪೂರ್ವಾಷಾಢ, ಮಾಸ : ಪುಷ್ಯ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ನವಮೀ , ನಿತ್ಯನಕ್ಷತ್ರ : ರೇವತೀ, ಯೋಗ : ಪರಿಘ, ಕರಣ : ಕೌಲವ, ಸೂರ್ಯೋದಯ – 06-58am, ಸೂರ್ಯಾಸ್ತ – 06-12pm. ಶುಭಾಶುಭಕಾಲ ರಾಹು ಕಾಲ11:11 – 12:35 , ಯಮಘಂಡ ಕಾಲ 15:24 – 16:48 , ಗುಳಿಕ ಕಾಲ 08:22 – 09:47

ಮೇಷ

ಸಂಗಾತಿಯ ಆನಾರೋಗ್ಯದಿಂದ ಮಾನಸಿಕ ಸ್ಥಿತಿ ಅಸ್ತವ್ಯಸ್ತವಾಗಬಹುದು. ನಿಮ್ಮ ಆಸಕ್ತಿಯ ಹಾಗೂ ಆನಂದ ಸಿಗುವ ಕೆಲಸಗಳನ್ನು ಮಾಡಲು ಇನ್ನೂ ಕಾಯಬೇಕಿದೆ. ಇತರರ ಮಾತನ್ನು ಕೇಳಿ ಖರೀದಿಯನ್ನು ಮಾಡಲು ಮುಂದಾಗಬೇಡಿ. ಅತಿಥಿಗಳ ಆಗಮನವಾಗಲಿದೆ. ನಿಮ್ಮವರ ಜೊತೆ ಆನಂದದಿಂದ ಕಾಲವನ್ನು ಕಳೆಯುವಿರಿ. ದ್ವೇಷವನ್ನು ಮುಂದುವರಿಸುವ ಬದಲು ಇಂದೇ ಅದಕ್ಕೆ ಮಂಗಲ ಹಾಡಿ.

ವೃಷಭ

ಭವಿಷ್ಯಕ್ಕಾಗಿ ಹೂಡಿಕೆಗಳನ್ನು ಮಾಡಲು ಹೋಗಬೇಡಿ‌ ಇಂದು. ನಿಮ್ಮ ಅಂತಸ್ಸತ್ತ್ವವೇ ನಿಮ್ಮ ನಿಜಸತ್ತ್ವ. ಹಾಸ್ಯಪ್ರಜ್ಞೆಯು ನಿಮ್ಮ ದುಃಖಗಳನ್ನು ಮರೆಸೀತು. ಸ್ನೇಹಿತರ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯ ಜೊತೆ ಕಾಲದ ಮಿತಿಯಿಲ್ಲದೇ ಹರಟೆಯನ್ನು ಹೊಡೆಯುವಿರಿ. ವಿವಾಹಜೀವನ ವಾರ್ಷಿಕೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಿಕೊಳ್ಳುವಿರಿ. ಯಾರದೋ ಮಾತಿಗೆ ಕಿವಿಯಾಗಬೇಡಿ.

ಮಿಥುನ

ನಿಮ್ಮ ಬಗ್ಗೆ ಇಲ್ಲಸಲ್ಲದ‌ ಗುಮಾನಿಗಳು ಎಲ್ಲೆಡೆ ಹರಡಬಹುದು. ಅದನ್ನೆಲ್ಲ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವ ಅವಶ್ಯಕತೆಯಿಲ್ಲ. ದೂರದ‌ ಪ್ರಯಾಣವನ್ನು ಮಾಡಬೇಡಿ. ಹಣದ ಅಗತ್ಯತೆ ಇಂದು ತುಂಬಾ ಕಾಡಲಿದೆ. ಸಂಗಾತಿಯ ಜೊತೆ ಕಾಲವನ್ನು ಕಳೆಯಿರಿ. ಮನಸ್ಸು ಹಗುರಾದೀತು‌. ಕಛೇರಿಯಲ್ಲಿ ಗ್ರಾಹಕರ ಜೊತೆ ಮಾತುಗಳನ್ನು ಆಡುವಾಗ ಎಚ್ಚರವಿರಲಿ. ಕಛೇರಿಯಲ್ಲಿ ನಿಮ್ಮ‌ ಮೇಲಿನ ಅಭಿಪ್ರಾಯ ಬದಲಾಗಬಹುದು.

ಕಟಕ

ಸಂಗಾತಿಯ ಸನಿಹವಿದ್ದು ಸಮಯವನ್ನು ಸಲ್ಲಾಪದಲ್ಲಿ ಸವೆಸುವಿರಿ. ಇಂದು ನಿಮ್ಮ ಒತ್ತಡದಲ್ಲಿ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾರಿರಿ. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ಸುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸಿಕೊಂಡು ಜೀವನವನ್ನು ಸಾಗಿಸಿ. ಅನೇಕ ಬದಲಾವಣೆಗಳು ನಿಮ್ಮ ಜೀವನಕ್ಕೆ ಅಗತ್ಯವಿದೆ. ಎಲ್ಲವನ್ನೂ ಸರಿ ಮಾಡಬಲ್ಲೆನೆಂಬ ಮನಃಸ್ಥಿತಿಯಿಂದ ಹೊರಗುಳಿದು ಯೋಚಿಸಿ.

ಸಿಂಹ

ದಾಯಾದಿ ಕಲಹವನ್ನು ಮಾಡಿಕೊಳ್ಳಬೇಡಿ. ಅದು ಅತಿರೇಕಕ್ಕೆ ಹೋಗಿ ಸುದೀರ್ಘಾಕಾಲದ ದ್ವೇಷ, ಅಸೂಯೆಗಳಿಗೆ ಕಾರಣವಾಗುವುದು. ಭವಿಷ್ಯದಲ್ಲಿ ಭರವಸೆಯನ್ನು ಇಟ್ಟುಕೊಂಡಿರಿ. ಇಂದಿನ ಜೀವನ ಸಂತೋಷದಿಂದ ಕೂಡಿರುವುದು. ಅತ್ಯಾಪ್ತರಿಂದ ಅಪರೂಪದ ಬಹುಮಾನ ಸಿಗಲಿದೆ. ಪ್ರಭಾವೀ ವ್ಯಕ್ತಿಗಳ ಭೇಟಿಯಾಗುವುದು. ನಿಮ್ಮ ಜೀವನದ ದಿಕ್ಕಿಗೆ ಹೊಸ ಮಾರ್ಗವೂ ಸೇರ್ಪಡೆಯಾಗುವುದು. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಿ.

ಕನ್ಯಾ

ಮನೆಯ ವಾತಾವರಣವು ಮನಶ್ಚಾಂಚಲ್ಯಕ್ಕೆ ಕಾರಣವಾದೀತು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಪ್ರೀತಿಸುವುದನ್ನು ಕಲಿತರೆ ನಿಮ್ಮ ಸುತ್ತಲು ಎಂತಹದೇ ನಕಾರಾತ್ಮಕ ಅಂಶಗಳಿರಲಿ ಅವುಗಳು ಸಕಾರಾತ್ಮಕವಾಗಿ ನಿಮಗೆ ತೋರುತ್ತವೆ. ಹೊಸತನ್ನು ಏನಾದರೂ ಮಾಡಬೇಕೆಂದು ಆಸೆಯಿಟ್ಟುಕೊಂಡಿರುವ ನಿಮಗೆ ದಾರಿಗಳೂ ಸರಿಯಾಗಿ ಸಿಕ್ಕಾವು. ಒಳ್ಳೆಯ ಪುಸ್ತಕಗಳನ್ನು ಓದಿ, ಮನಸ್ಸನ್ನು ಹಗುರಾಗಿಸಿಕೊಳ್ಳಿ.

ತುಲಾ

ಕಾರ್ಯದಲ್ಲಿನ ನಿಮ್ಮ‌ ಬದ್ಧತೆಗೆ ಎಲ್ಲರೂ ಅಚ್ಚರಿಪಡುತ್ತಾರೆ. ಇಂದು ಹಣದ ಹೂಡಿಕೆಯ ಮಾರ್ಗಗಳನ್ನು ಹುಡುಕುವಿರಿ. ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ನಿಮ್ಮ ನೋವನ್ನು ಆಲಿಸುವ ಕಿವಿಗಳ ಕೊರತೆ ಇದೆ. ನೀವು ನೀಡುವ ಅಭಿಪ್ರಾಯಗಳು ಬಾಲಿಶ ಎಂದು ಮನೆಯವರಿಗೆ ಅನ್ನಿಸಬಹುದು. ದೇಹ ಹಾಗೂ ಮಾನಸಿಕ ನೋವುಗಳನ್ನು ನನೆನೆನೆದು ಸಂಕಟಪಡುವಿರಿ.

ವೃಶ್ಚಿಕ

ಸಂಗಾತಿಯಿಲ್ಲದೇ ನೀವಿಂದು ಚಟಪಡಿಸುವ ಸ್ಥಿತಿ ಬಂದೀತು. ಹಳೆಯ ನೆನಪುಗಳೊಂದಿಗೆ ಇಂದು ಸ್ನೇಹಿತನ‌ ಭೇಟಿಯಾಗಿ ದಿನವಿಡೀ ಹರಟುವ ದಿನವಾಗಲಿದೆ. ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿದೆ. ವ್ಯಾಪಾರಸ್ಥರು ಗ್ರಾಹಕರೊಂದಿಗೆ ಸಮಾಧಾನದಿಂದ‌ ಮಾತನಾಡಿ. ಎಂದೋ ಉಳಿಸಿಟ್ಟ ಕಾಸು ಇಂದು ತುರ್ತಿಮನ ಕಾಲಕ್ಕೆ ಬಳಕೆಗೆ ಬರುತ್ತದೆ. ಇಂದು ನಿಮ್ಮ ಮನಸ್ಸಿಗೆ ಹಿತವಾದ ಯಾವುದಾರೂ ಒಂದು ಕೆಲಸವನ್ನು ಮಾಡಿ.

ಧನು

ನಿಮ್ಮನ್ನು ಇಷ್ಟಪಟ್ಟವರ ಜೊತೆ ಖುಷಿಯಿಂದ ವ್ಯವಹರಿಸಿ. ಅವರಿಗೆ ನೋವಾಗುವಂತೆ ಮಾಡಬೇಡಿ. ಕೋರ್ಟ್, ಕಛೇರಿಯ ವ್ಯವಹಾರದಲ್ಲಿ ನಿಮ್ಮ ಪಾಲಿಗೆ ಶುಭವೇ. ಎಷ್ಟೋ ದಿನದ ನಿಮ್ಮ ಜಟಿಲವೂ ಮಂದಗತಿಯಲ್ಲಿಯೂ ಸಾಗುತ್ತಿದ್ದು ಇಂದು ವೇಗವನ್ನು ಪಡೆಯುತ್ತದೆ. ನಿಮ್ಮ ಸುತ್ತಲಿನ ಜಗತ್ತಿಗೆ ನೀವು ಅಚ್ಚರಿಯ ಆಸಾಮಿಯಾಗುತ್ತೀರಿ. ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನವನ್ನು ಮಾಡಿ. ಆಹಾರದ ಕೊರತೆಗಳು ಕಾಣಿಸಬಹುದು.

ಮಕರ

ನೀವು ನಿಮ್ಮ ಸಂಗಾತಿಯಿಂದ ತೊಂದರೆಯನ್ನು ಎದುರಿಸಬೇಕಾಗಿಬರಬಹುದು. ಮನೆಯ ಕಾರ್ಯಗಳಲ್ಲಿ ಮಗ್ನರಾಗಿ ಆಯಾಸವನ್ನು ತರಿಸಿಕೊಳ್ಳುವಿರಿ. ಮನೆಯಲ್ಲಿ ಜಗಳಗಳು ಇದ್ದೇ ಇರುತ್ತವೆ. ಅದನ್ನು ನಿಭಾಯಿಸು ಕಲೆ ತಿಳಿದ ನೀವು ಶಾಂತವಾಗುವಂತೆ ಮಾಡುವಿರಿ. ನಿಮ್ಮ ತಿಳಿವಳಿಕೆಯ ಮಟ್ಟ ಎಷ್ಟೆಂದು ನಿಮ್ಮ ವರ್ತನೆಯಿಂದ ಎಲ್ಲರಿಗೂ ತಿಳಿಯುತ್ತದೆ. ಮಾನಸಿಕ ಒತ್ತಡಕ್ಕೆ ಸಿಲುಕದೇ ನಿಶ್ಚಿಂತೆಯಿಂದ ಇರಲು ಹವಣಿಸಿ.

ಕುಂಭ

ನಿಮಗೆ ನಿಮ್ಮ ಕೆಲಸದಲ್ಲಿ ಮಾತ್ರ ಗಮನವಿರಲಿ.‌ ಅನ್ಯರ ಕಾರ್ಯದ ಸಹವಾಸ ಬೇಡ. ನೀವು ನಿಮ್ಮ ಅಂತರಂಗವನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅದು ನಿಲ್ಲದು. ಹಣದ ಸಂಗ್ರಹಣೆಯ ವಿಚಾರದಲ್ಲಿ ನಿಮಗೆ ಇಂದು ಕೌಶಲ್ಯ ಸಿಗಲಿದೆ. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಪ್ರೀತಿಯಿಂದ ಎಲ್ಲರೊಂದಿಗೆ ಮಾತನಾಡಿ. ಮನೆಯವರ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸಿ.

ಮೀನ

ಸಂಗತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ನಿಮ್ಮ ವಿಶ್ವಾಸವೇ ಎಲ್ಲ ಕಾರ್ಯಗಳನ್ನು ಅನಾಯಾಸವಾಗಿ ಮಾಡಯವಂತೆ ಮಾಡುತ್ತದೆ. ಹೊಸ ಸ್ನೇಹಿತರನ್ನು ಪಡೆಯುವಿರಿ. ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡಲಿದ್ದೀರಿ. ವಿದ್ಯಾರ್ಥಿಗಳು ಯಂತ್ರೋಪಕರಣಗಳು ಸಿಕ್ಕಿ ಆನಂದವನ್ನು ಪಡೆಯಲಿದ್ದಾರೆ. ಕೆಲಸವನ್ನು ನಿರ್ಧರಿಸುವಾಗ ಯಾವುದೇ ಒತ್ತಡಗಳಿಗೆ ಅವಕಾಶ ಕೊಡಬೇಡಿ. ಬೇಕಾದಷ್ಟು ಕಾರ್ಯಗಳಿರುತ್ತವೆ. ಸಮಯವನ್ನು ಹಾಗೇ ವ್ಯರ್ಥವಾಗಿ ಕಳಡಯಬೇಡಿ.

ಲೋಹಿತಶರ್ಮಾ, ಇಡುವಾಣಿ