ರಾಶಿ ಭವಿಷ್ಯ
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 02 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪೂರ್ವಾಷಾಢ ಮಹಾನಕ್ಷತ್ರ , ಭರಣಿ ನಿತ್ಯನಕ್ಷತ್ರ , ಸೋಮವಾರ, ಜನವರಿ 02, 2023. ರಾಹುಕಾಲ: ಇಂದು ಬೆಳಿಗ್ಗೆ 08 ಗಂ॥ 24 ನಿ।। ರಿಂದ ಇಂದು ಬೆಳಿಗ್ಗೆ 09 ಗಂ॥ 48 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 14 ನಿಮಿಷಕ್ಕೆ.
ತಾ. 01-01-2023 ರ ರಾವಿವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ ರಾಶಿ: ಮನಸ್ಸಿನ ಕಿರಿಕಿರಿಯನ್ನು ಅನುಭವಿದೇ ವಿಧಿಯಿಲ್ಲ. ಸ್ವಬುದ್ಧಿಯಿಂದ ಕಾರ್ಯಗಳನ್ನು ಮಾಡುವಿರಿ. ನಿಮ್ಮಲ್ಲಿ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವುದಿಲ್ಲ. ಸಂಗಾತಿಯೊಂದಿಗೆ ಕಲಹವಾಗಲಿದೆ. ವ್ಯಾಪರಾದಲ್ಲಿ ನಷ್ಟದ ಸಾಧ್ಯತೆ ಇದೆ. ಜಾಗರೂಕರಾಗಿ ಕಾಲಿಡಿ. ಸಂಗೀತ, ನೃತ್ಯ, ಶಿಲ್ಪಗಳ ಕಲಾವಿದರಿಗೆ ಶುಭವಾಗಲಿದೆ. ನಂಬಿಕೆಯನ್ನು ಕಳೆದುಕೊಳ್ಳಬೇಕಾದ ದಿನವೂ ಇದಾಗಿರುತ್ತದೆ. ದುಡುಕಿ ಯಾವದೋ ಅಪರಿಹಾರ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
- ವೃಷಭ ರಾಶಿ: ಶರೀರದಲ್ಲಿ ಗಾಯಗಳು ಆಗಲಿವೆ. ಸಂಪತ್ತಿನ್ನ ವ್ಯಯವನ್ನು ಕಾಣಬಹುದಾಗಿದೆ. ಧೈರ್ಯವೂ ಕರ್ಮದಲ್ಲಿ ನಿರಾಸಕ್ತಿಯೂ ಕಾಣಿಸಬಹುದು. ಸಂಗಾತಿಯ ಸಂಗ ಸಿಗುವುದು. ಸಲ್ಲಾಪದಲ್ಲಿ ಕಾಲ ಕಳೆಯುವಿರಿ. ನಾಟಕದಲ್ಲಿ ಆಸಕ್ತಿಯಿರುವವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಆಲಸ್ಯದಿಂದ ಸಿಗುವ ಸಂಪತ್ತು ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಬೇಕು. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ಆಗಲಿವೆ.
- ಮಿಥುನ ರಾಶಿ: ಪ್ರಮಕ್ಕಳಿಂದ ಬರುವ ಸಮಸ್ಯೆಗಳಿಗೆ ಜವಾಬ್ದಾರರಾಗುತ್ತೀರಿ. ರಕ್ತಸಂಬಂಧೀ ಖಾಯಿಲೆಗಳು ಬರಬಹುದು. ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಕಾರ್ಯಗಳು ಶೀಘ್ರವಾಗಿ ಫಲಿಸದೆ ಇರಬಹುದು. ನಿಮ್ಮ ವೇಗಕ್ಕೆ ಸಕಾಲದಲ್ಲಿ ಆಗುವ ಕಾರ್ಯಗಳೂ ತುಂಬ ದೀರ್ಘವೆನಿಸುತ್ತದೆ. ವ್ಯವಹಾರದಲ್ಲಿ ಎಚ್ಚರವಿರಲಿ. ಒಮ್ಮುಖ ನಿರ್ಧಾರಗಳು ಅನಾಹುತಕ್ಕೆ ಕಾರಣವಾಗಲಿದೆ. ಆರಕ್ಕೇರದ ಮೂರಕ್ಕಿಳಿಯದ ದಿನವಿದು ನಿಮಗೆ.
- ಕಟಕ ರಾಶಿ: ಪ್ರಯಾಣವನ್ನು ಮಾಡದ ಅನಿವಾರ್ಯತೆ ಎದುರಾದರೂ ಆದೀತು. ಅನಿರೀಕ್ಷಿತ ಖರ್ಚಿನಿಂದಾಗಿ ಸ್ನೇಹಿತರಲ್ಲಿ ಹಣವನ್ನು ಕೇಳುವಿರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ವಿವಾದಗಳೂ ತಾರಕಕ್ಕೆ ಹೋಗಬಹುದು. ಮುಂದಿನ ಕಾರ್ಯದಲ್ಲಿ ಆಗುವ ಖರ್ಚುಗಳ ಬಗ್ಗೆ ತಲೆಕೆಡಿಕೊಳ್ಳಬಹುದು. ಎಲ್ಲರೂ ನಿಮ್ಮವರಲ್ಲ ಎಂದು ಹೆಜ್ಜೆ ಹೆಜ್ಜೆಗೂ ಗೊತ್ತಿರಬೇಕು. ಪೂರ್ವಸುಕೃತವು ನಿಮ್ಮ ರಕ್ಷಣೆಗಿರುತ್ತದೆ. ಮಕ್ಕಳ ವಿಚಾರಕ್ಕೆ ಅಲೆದಾಟವಿರಲಿದೆ.
- ಸಿಂಹ ರಾಶಿ: ಗೌರವವನ್ನು ಕಳೆದುಕೊಳ್ಳುವ ಸಮಯ. ನಡೆ, ನುಡಿಗಳಲ್ಲಿ ಆದಷ್ಟು ಜಾಗರೂಕರಾಗಿರಿ. ಧನವು ಕೈಗೆಟುಕದ ದ್ರಾಕ್ಷಿಯಂತೆ. ಕಂಡರೂ ಪಡೆಯಲಾಗದ ಸ್ಥಿತಿ ಇರಲಿದೆ. ಕೆಟ್ಟ ಆಲೋಚನೆಗಳನ್ನು ಮಾಡಿ ಮನಸ್ಸಿನ್ನು ಹಾಳು ಮಾಡಿಕೊಳ್ಳುವಿರಿ. ಭೂವ್ಯವಹಾರದಲ್ಲಿ ಲಾಭವಿರಲಿದೆ. ಹಳೆಯ ರೋಗಗಳು ಮತ್ತೆ ಬಂದರೂ ಬರಬಹುದು. ಕಫಕ್ಕೆ ಸಂಬಂಧಿಸಿದ ರೋಗವು ಬರಬಹುದು. ಸಹೋದರರ ಜೊತೆ ಕಲಹವೇರ್ಪಡಬಹುದು.
- ಕನ್ಯಾ ರಾಶಿ: ವಿವಾಹ ಕಾರ್ಯಗಳ ಪ್ರಸ್ತಾಪಗಳು ನಡೆದು ನೀವು ನಿಮ್ಮ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ. ಮನೆಯವರೊಂದಿಗೆ ಖುಷಿಯಿಂದ ಕಾಲಕಳೆಯುವಿರಿ. ಪರ್ವತ, ಮರಗಳನ್ನು ಏರುವ ಸಾಹಸಕ್ಕೆ ಹೋಗಬೇಡಿ. ಧರ್ಮದ ಕಾರ್ಯಗಳ ಆಸಕ್ತಿಯು ಕಡಿಮೆಯಾಗಬಹುದು. ಒಳ್ಳೆಯದಲ್ಲ ಅದು. ಮಕ್ಕಳಿಂದ ನೋವನ್ನು ಪಡೆಯಬೇಕಾದೀತು. ಕುಟುಂಬಕ್ಕೋಸ್ಕರ ಧನವನ್ನು ತ್ಯಾಗಮಾಡಬೇಕಾಗಿಬರಬಹುದು.
- ತುಲಾ ರಾಶಿ: ಚಿಂತೆಯು ನಿಮ್ಮನ್ನು ಸುಡುವ ಮಹಾಗ್ನಿ. ನಿಮ್ಮ ಕಳೆದು ಹೋದ ಕಾರ್ಯಗಳನ್ನೇ ನೆನಪಿಸಿ ನಿಮ್ಮನ್ನು ಹತಾಶಗೊಳಿಸಬಹುದು. ಒಂಟಿಯಾಗಿರಬೇಡಿ. ಸ್ನೇಹಿತ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಇಷ್ಟವಾಗುವ ಸ್ಥಳಗಳಿಗೆ ಇಷ್ಟವಾದವರನ್ನು ಕರೆದುಕೊಂಡು ಹೋಗಿ. ಕೆಲಸದ ಸ್ಥಳದಲ್ಲಿ ಒತ್ತಡದ ವಾತಾವರಣವಿರಬಹುದು. ಎಲ್ಲೆಡೆಗೆ ಸಿಗುವ ಅಗೌರವವೂ ನಿಮ್ಮ ಚಿಂತೆಯನ್ನು ಇಮ್ಮಡಿಗೊಳಿಸೀತು. ವಿದ್ಯಾರ್ಥಿಗಳು ಶ್ರಮವಹಿಸಿ ಮುಂಬರುವ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಬಹುದು.
- ವೃಶ್ಚಿಕ ರಾಶಿ: ಹೊಸತನಕ್ಕೆ ಮೈಯೊಡ್ಡಿಕೊಳ್ಳುವ ನಿಮ್ಮ ತೆರೆದ ಹೃದಯವನ್ನು ಎಲ್ಲರೂ ಮೆಚ್ಚಿಕೊಳ್ಳುವರು. ವಿದೇಶಕ್ಕೆ ಹೋಗಲು ಆಲೋಚನೆ ಮಾಡಿದ್ದರೆ ಹೊರಡಬಹುದು. ಆನಾರೋಗ್ಯದಿಂದ ಮುಕ್ತಿಸಿಗಲಿದೆ. ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ಪ್ರತಿಭೆಯ ಅನಾವರಣಕ್ಕೆ ಸುಕಾಲ. ಸಂಪತ್ತು ಉಳಿಸಿಕೊಳ್ಳಲು ಯತ್ನಿಸಿದಷ್ಟೂ ಅಪ್ರಯಾಸವಾಗಿ ಖರ್ಚಾಗುವುದು. ಗಣೇಶನ ಸ್ತುತಿಯು ನಿಮ್ಮ ಸಹಾಯಕ್ಕೆ ಬರುವುದು.
- ಧನು ರಾಶಿ: ಆರ್ಥಿಕಸ್ಥಿತಿಯು ನಿಮ್ಮ ಎಂದಿನ ಜೀವನಕ್ಕಿಂತ ಭಿನ್ನವಾಗಿರಲಿದೆ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಮನಸ್ಸು ಸ್ವಲ್ಪ ಲಘುವಾಗಲಿದೆ. ಅನಾರೋಗ್ಯದಿಂದಲೂ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ದೈವಾನುಗ್ರಹವಿಲ್ಲವೆಂದು ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸಿದರೆ ಹೇಗೆ? ಇಂದಿನ ಸತ್ಕಾರ್ಯವೆಡ ನಿಮಗೆ ಉತ್ತಮವಾದ ಫಲವನ್ನು ಕೊಡುವುದು. ನಿರಾಶರಾಗದೇ ಒಳ್ಳೆಯ ಮನಸ್ಸಿನಿಂದ ಮುನ್ನಡೆಯಿರಿ.
- ಮಕರ ರಾಶಿ: ದೇವಸಮಾನರಾದ ತಂದೆ ಹಾಗು ತಾಯಿಯರನ್ನು ಪ್ರೀತಿಯಿಂದ ನೋಡಿರಿ. ಮನೆಯಿಂದ ದೂರ ಹೋಗುವಾಗ, ಕಛೇರಿಗೆ ಹೋಗುವಾಗ ನಮಸ್ಕರಿಸುವುದನ್ನು ಮರೆಯಬೇಡಿ. ಹಿರಿಯರಿಗೆ ನಿಮ್ಮ ಕೈಲಾದ ಮತ್ತು ಅವರಿಗೆ ಅವಶ್ಯಕವಾದ ಕಾರ್ಯಗಳನ್ನು ಮಾಡಿಕೊಡಿ. ಸಂಗಾತಿಯೊಂದಿಗೆ ಸುತ್ತಾಟ ನಡೆಸುವಿರಿ. ಸಹೋದರನ ಕಾರಣದಿಂದ ಹಣವು ಖರ್ಚಾಗಬಹುದು. ಸಿಟ್ಟಿಗೇಳುವ ಅವಶ್ಯಕತೆಯಿಲ್ಲ. ಸಮಾಧಾನ ಚಿತ್ತದಿಂದ ಇರಿ.
- ಕುಂಭ ರಾಶಿ: ಏಕಾಗ್ರತೆಯು ಮೂಲಮಂತ್ರವಾಗಿರಲಿ. ಈಗ ಇದರ ಅವಶ್ಯಕತೆ ಬಹಳ ಇದೆ. ಮನಶ್ಚಾಂಚಲ್ಯ ನಿಮ್ಮನ್ನು ಅನೇಕ ವಿಧವಾಗಿ ಕಾಡಬಹುದು. ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಇರಬೇಕಾಗಿಬರಬಹುದು. ಮನೋರಂಜನೆಯ ಕಾರ್ಯಕ್ರಮವನ್ನು ವೀಕ್ಷಿಸುವಿರಿ. ಮನೆಗೆಲಸದಲ್ಲಿ ಸಹಕಾರಿಯಾಗುವಿರಿ.
- ಮೀನ ರಾಶಿ: ಇನ್ನೊಬ್ಬರಿಗೆ ಹೋಸಿಕೊಳ್ಳುವ ಸ್ವಭಾವವನ್ನು ಬಿಡಿ. ನಿಮಗೆ ನಿಮ್ಮದೇ ಆದ ಪ್ರತಿಭೆ, ಸಾಮರ್ಥಗಳು ಇವೆ. ಎಲ್ಲವೂ ಏಕಕಾಲಕ್ಕೆ ಪ್ರಕಟವಾಗದು. ಕಾಲಕ್ಕಾಗಿ ತಾಳ್ಮೆಯಿಂದ ಕುಳಿತುಕೊಳ್ಳಬೇಕು. ಪತ್ನಿಯೊಂದಿಗೆ ಸುಖದಿಂದ ಕಾಲವನ್ನು ಕಳೆಯುವಿರಿ. ಸಂಬಂಧಿಕರ ಆಗಮನವಾಗಲಿದೆ. ಕೃಷಿಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಸಮಾರಂಭಗಳಿಗೆ ಹೋಗಿ ಒಂದಿಷ್ಟು ಹರಟೆ ಹೊಡೆದು ಬರುವ ಎಂಬ ಮನಸ್ಸಿರುತ್ತದೆ. ಉದಾಸೀನತೆಯು ನಿಮ್ಮನ್ನು ಮುತ್ತಲಿದೆ.ಲೋಹಿತಶರ್ಮಾ, ಇಡುವಾಣಿ