Nitya Bhavishya: ದಿನದ ಆರಂಭದಿಂದ ಅಂತ್ಯದವರೆಗೂ ಈ ರಾಶಿಯವರು ಉತ್ಸಾಹದಿಂದಲೇ ಇರುತ್ತಾರೆ
2023 ಜನವರಿ 06 ರವಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 06 ಶುಕ್ರವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಭವಿಷ್ಯ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಪೂರ್ವಾಷಾಢ ಮಹಾನಕ್ಷತ್ರ, ಪುಷ್ಯ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಪೌರ್ಣಿಮಾ ತಿಥಿ, ಆರ್ದ್ರಾ ನಿತ್ಯನಕ್ಷತ್ರ, ಬ್ರಹ್ಮ ಯೋಗ, ಭದ್ರ ಕರಣ, ಸೂರ್ಯೋದಯ: 07 ಗಂಟೆಗೆ, ಸೂರ್ಯಾಸ್ತ – 06 ಗಂಟೆ 16 ನಿಮಿಷಕ್ಕೆ. ಶುಭಾಶುಭಕಾಲ: ರಾಹು ಕಾಲ 11:14 ರಿಂದ 12:38, ಯಮಘಂಡ ಕಾಲ 15:27 ರಿಂದ 16:52, ಗುಳಿಕ ಕಾಲ 08:25 ರಿಂದ 09:50ರ ವರೆಗೆ.
ತಾ. 06-01-2023ರ ಶುಕ್ರವಾರ ರಾಶಿ ಭವಿಷ್ಯ ಹೀಗಿದೆ:
ಮೇಷ: ಈ ದಿನದ ಆರಂಭದಿಂದ ಅಂತ್ಯದವರೆಗೂ ಉತ್ಸಾಹದಿಂದಲೇ ತುಂಬಿರುವಿರಿ. ನಿಮ್ಮ ಆಲೋಚನೆಗೆ ಅನುಕೂಲಕರವಾದ ಸನ್ನಿವೇಶಗಳು ಏರ್ಪಡುವುವು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳುವಿರಿ. ನೀವಿಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದೀರಿ. ನಿಮ್ಮ ಮಾತಿಗೆ ಮನ್ನಣೆ ಸಿಗಲಿಲಿದೆ. ಶ್ರಮದ ಫಲವನ್ನು ಉಣ್ಣುವ ಕಾಲ ಬಂದಿರುತ್ತದೆ. ಎಂದೂ ಕಾಣದ ನಿಮ್ಮ ನಡೆಯನ್ನು ಕಂಡು ನಿಮ್ಮವರು ಅಚ್ಚರಿಪಡಬಹುದು.
ವೃಷಭ: ಮನಸ್ಸು, ಬುದ್ಧಿಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಕಡೆಗೆ ಗಮನವಿರಬೇಕು. ರಾಜಿಯಾಗುವ ಸನ್ನಿವೇಶಗಳು ಎದುರಾಗಬಹದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯವು ಮುನ್ನಡೆದರೆ ಸೊಗಸು. ನ್ಯಾಯಾಲಯದಲ್ಲಿ ವಾದ-ವಿವಾದಗಳನ್ನು ಮಾಡಲಿದ್ದೀರಿ. ದೂರಪ್ರಯಾಣವನ್ನು ಮಾಡಿ ಆಯಾಸಗೊಳ್ಳಬೇಡಿ. ಭೂಮಿ, ವಾಹನ ಖರೀದಿಯ ಪ್ರಸ್ತಾಪವು ಆಗಬಹುದು. ಎಲ್ಲರೂ ನಿಮ್ಮ ನಗುಮೊಗವನ್ನು ಕಂಡು ಖುಷಿಪಡಲಿದ್ದಾರೆ.
ಮಿಥುನ: ನಿಮ್ಮ ದೇಹ ನಿಮಗೆ ದುರ್ಬಲವಾಗಿ ಕಾಣಿಸಬಹುದು. ಹಾಗಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ಹಾಸ್ಯಪ್ರಜ್ಞೆಯಿಂದ ನಿಮ್ಮವರನ್ನು ಸಂತೋಷವಾಗಿ ಇಡುವಿರಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ಅದಕ್ಕೆ ಇಲ್ಲವೆನ್ನಬೇಡಿ. ತಿನ್ನುವ ಆಹಾರವು ಆರೋಗ್ಯಯುಕ್ತವಾಗಲಿರಲಿ.
ಕರ್ಕ: ದ್ವೇಷಿಸುವ ಸ್ವಭಾವವು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಗೊತ್ತಿಲ್ಲದೇ ನಿಮ್ಮ ಸಮಯವು ವ್ಯರ್ಥವಾಗಬಹುದು. ಸಂಗಾತಿಯ ಜೊತೆಗೆ ಸಣ್ಣ ಕಲಹವು ಆಗಬಹುದು. ಯಾವುದೋ ಒಂದು ಬಲವಾದ ಆಲೋಚನೆಯಿಂದ ಮಾಡಲೇ ಬೇಕಾದ ಕಾರ್ಯಗಳು ನೆನಪಾಗದೇ ಇರಬಹುದು. ಹಣವನ್ನು ಮಿತವಾಗಿ ವ್ಯಯ ಮಾಡಿ. ನಿಮ್ಮ ದೌರ್ಬಲ್ಯಗಳು ಇತರರಿಗೆ ಮನವರಿಕೆಯಾಗಿ ಅವರಿಂದ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ ಇದೆ.
ಸಿಂಹ: ಹೊಸ ವಿಚಾರಗಳನ್ನು ತಿಳಿದುಕೊಳ್ಳುವತ್ತ ನಿಮ್ಮ ಗಮನವಿರಲಿದೆ. ಅನಾರೋಗ್ಯದಿಂದ ವ್ಯತ್ಯಾಸವಾದ ನಿಮ್ಮ ದೇಹ, ಮನಸ್ಸುಗಳು ಸ್ವಸ್ಥವಾಗುವ ಕಡೆಗೆ ಹೋಗುತ್ತಿವೆ. ಅಪ್ರಿಯಾವಾದ ಆಪಾದನೆಗಳು ಬರಬಹುದು. ಹಠದ ಸ್ವಭಾವವು ನಿಮ್ಮನ್ನು ಒಂಟಿಗನನ್ನಾಗಿ ಮಾಡುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಉನ್ನತ ಪದವಿಗೆ ಆಹ್ವಾನ ಬರಬಹುದು. ನಿಮ್ಮ ಯಶಸ್ಸಿನ ರಹಸ್ಯವನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ. ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾದೀತು.
ಕನ್ಯಾ: ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಕಾಳಜಿಗೆ ಇಂದು ಹೆಚ್ಚು ಸಮಯವನ್ನು ಅದಕ್ಕಾಗಿ ಮೀಸಲಿಡುವಿರಿ. ಯಾರ ಭಾವನೆಗಳಿಗೂ ನೋವನ್ನು ತರಲು ಹೋಗಬೇಡಿ. ಮಕ್ಕಳ ಜೊತೆ ಖುಷಿಯಿಂದ ಕಾಲವನ್ನು ಕಳೆಯುವಿರಿ. ಸಂಪಾದನೆಗೆ ಉತ್ತಮಮಾರ್ಗವು ನಿಮಗೆ ಗೊತ್ತಾಗಲಿದೆ. ಮಂದಿರಗಳಿಗೆ ಭೇಟಿ ನೀಡಿ ಸ್ವಲ್ಪ ಸಮಯವನ್ನು ಅಲ್ಲಿ ಕಳೆದು ಬರುವುದು ಒಳಿತು. ಅಲ್ಲಿನ ಸಕಾರಾತ್ಮಕ ವಾತಾವರಣವು ನಿಮ್ಮ ಮನೋಬಲವನ್ನು ಹೆಚ್ಚಿಸುವುದು. ಮನೋರಂಜನೆಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ.
ತುಲಾ: ನಿಮ್ಮ ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವು ಎದುರಾಗಲಿದೆ. ಸಂಗಾತಿಯ ಮುನಿಸಿಗೆ ನೀವು ಆಹಾರವಾಗುವಿರಿ. ಈ ಸಂದರ್ಭದಲ್ಲಿ ಮರುಮಾತನಾಡದೇ ಇರುವುದು ಒಳ್ಳೆಯದು. ಕೆಲವು ನಿಮಿಷಗಳಲ್ಲಿ ಇದು ಸರಿಯಾಗಲಿದೆ. ವಿದ್ಯಾರ್ಥಿಗಳು ಓದಿನಲ್ಲಿ ಮನಸ್ಸನ್ನು ಇಡಬಹುದು. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು. ಪಿರ್ತಾರ್ಜಿತ ಆಸ್ತಿಯನ್ನು ಗೊಂದಲಗಳು ಇರಬಹುದು.
ವೃಶ್ಚಿಕ: ಸಂಗಾತಿಯೊಂದಿಗೆ ಕಲಹಕ್ಕೆ ಇಳಿಯಬೇಡಿ. ಜಗಳವು ವಿಚ್ಛೇದನಕ್ಕೂ ಕಾರಣವಾದೀತು. ಭೂಮಿಯ ವ್ಯವಹಾರದಲ್ಲಿ ಜಯವಾಗುವ ಸಾಧ್ಯತೆ ಇದೆ. ಹೊಸ ಉತ್ಸಾಹದ ದಿನವಾಗಿ ಇಂದು ಇರಲಿದೆ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಮನೆಯ ನಿರ್ಮಾಣದ ಯೋಜನೆಯನ್ನು ರೂಪಿಸುವಿರಿ. ಆಕಸ್ಮಿಕ ಸುದ್ದಿಯಿಂದ ಮನಸ್ಸು ಖೇದಪಡುವುದು.
ಧನುಸ್ಸು: ಶತ್ರುಗಳ ಬಾಧೆಯು ನಿವಾರಣೆಯಾಗಲಿದೆ. ಪ್ರಯಾಣದ ಆಯಾಸವು ನಿಮ್ಮ ಆಲಸ್ಯಕ್ಕೆ ಕಾರಣವಾಗುವುದು. ಮಾತನ್ನು ಆಡುವಾಗ ಎಚ್ಚರವಿರಲಿ. ಬೇರೆಯವರ ನಾಶವನ್ನು ಮಾಡಲು ಹೋಗಿ ನಿಮ್ಮದೇ ಯಶಸ್ಸು ನಾಶವಾಗಬಹುದು. ಮಕ್ಕಳ ಅನಾರೋಗ್ಯದಿಂದ ಮನಸ್ಸು ಹಾಳಾಗುವುದು. ನಿದ್ರೆಯು ಚೆನ್ನಾಗಿ ಆಗದು. ಸಂಗಾತಿಯ ಜೊತೆ ಇಂದು ಸಂತೋಷದಿಂದ ಕಳೆಯುವಿರಿ. ಸಮಾಧಾನದ ಮನಃಸ್ಥಿತಿಯು ಉಂಟಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಬಹುದು.
ಮಕರ: ತಾ ಮಾಡಿದಡಿಗೆಯನು ತಾನುಣ್ಣಬೇಕು ಎನ್ನುವಂತೆ ನಿಮ್ಮ ಕೃತ್ಯವನ್ನು ನೀವೇ ಸ್ಮರಿಸಿಕೊಳ್ಳುವ ಸುಕಾಲ. ಇನ್ನೊಬ್ಬರ ಗೋಜಿಗೆ ಹೋಗದ, ನಿಮ್ಮ ಗೋಜಿಗೆ ಬಂದವರನ್ನು ಸುಮ್ಮನೆ ಬಿಡುವ ಛಾತಿ ನಿಮ್ಮದಲ್ಲ. ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ಸಹಾಯವನ್ನು ಪಡೆದುಕೊಂಡವರ ಭೇಟಿಯಾಗಲಿದೆ. ಅವರಿಂದ ಗೌರವವಾದರು ಸಿಗಲಿವೆ. ರಮಣೀಯ ಸ್ಥಳಗಳನ್ನು ನೋಡಲು ಬಯಸುವಿರಿ. ಸಂಗೀತದ ಕಲಾವಿದರಿಗೆ ಉತ್ತಮ ಅವಕಾಶಗಳು ಬಾಗಿಲನ್ನು ತೆರೆದು ಸ್ವಾಗತಿಸಲಿವೆ.
ಕುಂಭ: ನಿಮಗೆ ಗೊಂದಲವನ್ನು ಉಂಟುಮಾಡಲು ಹತ್ತಾರು ಜನರು ಸಲಹೆಗಳನ್ನು ಕೊಡಬಹುದು. ಘಟನೆಗಳು ನಡೆಯಬಹುದು. ನಿಮ್ಮ ನಿರ್ಧಾರ ಅಚಲವಾಗಿರಲಿ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಕಡಿಮೆ ಇರಲಿದೆ. ಮನಸ್ಸು ಶುದ್ಧವಾಗಿದ್ದು ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ಈ ದಿನವನ್ನು ಅನಾಯಾಸವಾಗಿ ಕಳೆಯುವಿರಿ.
ಮೀನ: ನಿಮ್ಮ ಶಕ್ತಿ, ಸಾಮರ್ಥ್ಯಗಳು ವ್ಯರ್ಥವಾಗುವ ದಿನ. ತನ್ನನ್ನು ಸಮಾಜ ಗುರುತಿಸುತ್ತಿಲ್ಲ ಎಂಬ ಕೊರಗು ಇಂದು ಕೊರಗು ಅತಿಯಾಗಿ ಕಾಡಲಿದೆ. ಆರೋಗ್ಯದಿಂದ ಕೂಡಿರುವಿರಿ. ಬರಬೇಕಾದ ಸಂಪತ್ತು ನಿಮ್ಮ ಕೈಸೇರಲಿದೆ. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅಸತ್ಯವನ್ನು ಹೇಳುವಿರಿ. ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಿ ಅಚ್ಚರಿಪಡುವಿರಿ. ನದಿ, ಸಮುದ್ರಗಳನ್ನು ನೋಡುವ ಬಯಕೆ ನಿಮ್ಮದಾಗಲಿದೆ.
ಲೋಹಿತಶರ್ಮಾ, ಇಡುವಾಣಿ