
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮಘಾ, ಯೋಗ : ವೃದ್ಧಿ, ಕರಣ : ಭದ್ರ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:09 – 10:45, ಯಮಗಂಡ ಕಾಲ 13:57 – 16:33, ಗುಳಿಕ ಕಾಲ 05:57 – 07:33.
ಮೇಷ ರಾಶಿ: ನಿಮಗೆ ಭರವಸೆ ಕೊಟ್ಟಷ್ಟೂ ತೃಪ್ತಿ ಇರದು. ಸ್ನೇಹಭಾವದಿಂದ ಎಲ್ಲರೊಂದಿಗೆ ವರ್ತಿಸಬಹುದು. ನಿಃಸ್ವಾರ್ಥ ಸೇವೆಗೆ ಅವಕಾಶ ಸಿಗಬಹುದು. ನಿಮ್ಮ ಧೈರ್ಯದಿಂದ ಹೊಸ ಉದ್ದಿಮೆ ಪ್ರಾರಂಭಿಸಬಹುದು. ಮನಸ್ಸು ಸ್ಥಿರವಾಗಿರಲು ವಿಶ್ರಾಂತಿ ಸಹಾಯ ಮಾಡುತ್ತದೆ. ಆಗದ ಕಾರ್ಯವನ್ನು ಮಾಡಿಕೊಡುವ ಆಶ್ವಾಸನೆ ಬೇಡ. ನಿಮ್ಮ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ. ಇಂದಿನ ಕಾರ್ಯಕ್ಕೆ ಸಮಯ ಸಾಲದೇ ಅರ್ಧಕ್ಕೇ ನಿಲ್ಲಿಸುವಿರಿ.
ವೃಷಭ ರಾಶಿ: ಸೃಜನಶೀಲತೆ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಎಲ್ಲರ ಪ್ರೋತ್ಸಾಹ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇತ್ತೀಚೆಗೆ ನೀವು ಎದುರಿಸಿದ ಸಂಕಷ್ಟಗಳಿಂದ ಹೊರಬರಲು ಸಮಯ ಸಿಕ್ಕಿದೆ. ಸ್ನೇಹಿತರ ಬೆಂಬಲ ನಿಮಗೆ ಮುಖ್ಯವಾಗಿದೆ. ನಿಮ್ಮೆದುರು ಸ್ಪರ್ಧಿಸಲು ಸಮರ್ಥರು ಬಂದಾರು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ಬರಬಹುದು. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವುದಿಲ್ಲ. ಅತ್ಯುತ್ಸಾಹವು ನಿಮಗೆ ಹಾನಿಯನ್ನು ಉಂಟುಮಾಡೀತು.
ಮಿಥುನ ರಾಶಿ: ಅನ್ಯರು ಮಾಡಿದ ತಪ್ಪಿನಿಂದ ನಿಮಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಸಮಯಕ್ಕಿಂತ ಮುಂಚೆ ಯೋಜನೆಗಳನ್ನು ಮುಗಿಸಲು ಸಾಧ್ಯವಾಗುತ್ತದೆ. ಇತರರ ಸಲಹೆಗಳನ್ನು ಗೌರವದಿಂದ ಸ್ವೀಕರಿಸಿದರೆ ಅದು ನಿಮ್ಮ ಬಲವಾಗುತ್ತದೆ. ಹತ್ತಾರು ವಿಚಾರಗಳನ್ನು ನೀವು ಒಂದೇ ಬಾರಿ ಅಲೋಚಿಸುವಿರಿ. ಅಧಿಕಪ್ರಸಂಗಿತನ ಬೇಡ. ಇನ್ನೊಬ್ಬರಿಂದ ಕೊಂಬೆ ನೋವಾಗುವುದು. ನಿಮ್ಮ ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು.
ಕರ್ಕಾಟಕ ರಾಶಿ: ನಿಮ್ಮ ವಸ್ತುಗಳನ್ನು ನವೀಕರಣ ಮಾಡಿಸಿಕೊಳ್ಳುವಿರಿ. ಪ್ರಕ್ಷುಬ್ದವಾಗಿದ್ದ ಮನಸ್ಸು ಸಮಾಧಾನಕ್ಕೆ ಬರಲಿದೆ. ನಿರ್ಧಾರಣಾ ಶಕ್ತಿ ಬೇರೆಯವರ ಸಲಹೆ ಕೇಳಲು ಅವಕಾಶವಿಲ್ಲದಂತೆ ಬೆಳೆಯಲಿ. ಇತರರ ಮೇಲೆ ನಿಮ್ಮ ಅಭಿಪ್ರಾಯ ಹೇರಬೇಡಿ. ಪ್ರೀತಿಯಲ್ಲಿ ನಿಮ್ಮ ಧೈರ್ಯ ಫಲ ಕೊಡಬಹುದು. ನೈಜ ಅಭಿಪ್ರಾಯ ಹೇಳಿದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು.
ಸಿಂಹ ರಾಶಿ: ನಿಮಗೆ ಸಲ್ಲದ ಮಾತುಗಳು ನಿಮ್ಮೆದುರು ಬರಬಹುದು. ಏರುದನಿಯಲ್ಲಿ ಮಾತನಾಡುವುದು ಬೇಡ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ನಿಮಗೆ ಸಹಾಯ ಮಾಡುತ್ತದೆ. ಇತರರ ಆಸೂಯೆಯಿಂದ ದೂರವಿರಿ. ನಿಮ್ಮ ಹವ್ಯಾಸಗಳು ನಿಮಗೆ ಆತ್ಮಸಂತೃಪ್ತಿಯನ್ನು ನೀಡುತ್ತವೆ. ಮನಸ್ಸು ಸ್ಥಿರವಾಗಿರಲು ಈ ದಾರಿಯು ಸಹಾಯವಾಗಬಹುದು. ದಾಂಪತ್ಯದಲ್ಲಿ ಬಿರುಸಿನ ಮಾತುಗಳು ಕೇಳಿಬರಬಹುದು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮ ನೇರವಾದ ಮಾತು ನಿಮಗಷ್ಟೇ ಚೆನ್ನಾಗಿದೆ ಎನ್ನಿಸಬಹುದು.
ಕನ್ಯಾ ರಾಶಿ: ದುಶ್ಚಟಗಳನ್ನು ಸ್ನೇಹಿತರು ನಿಮಗೆ ಗೊತ್ತಾಗದಂತೆ ಹಿಡಿಸಬಹುದು. ಸಣ್ಣ ತಪ್ಪಿಗೆ ಹೆಚ್ಚು ನಿಂದನೆ ಸಿಗಲಿದೆ. ನಿಮ್ಮ ಯೋಜನೆಗಳು ಸಮಯಕ್ಕೆ ಮುಕ್ತಾಯಗೊಳ್ಳುತ್ತವೆ. ಇತರರ ಅಭಿಪ್ರಾಯಗಳಿಗೆ ಸ್ಪಂದಿಸಿದರೆ ಪ್ರಗತಿ ಸಾಧ್ಯ. ಹೊಸ ಯೋಜನೆಗಳನ್ನು ಆರಂಭಿಸಲು ಇನ್ನೂ ಸಮಯ ಬಂದಿಲ್ಲ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು.
ತುಲಾ ರಾಶಿ: ಯಾವುದಕ್ಕೂ ಕೂಡಲೇ ಫಲವು ಸಿಗದು. ಅದು ಸಿಗುವ ತನಕ ಪ್ರಯತ್ನವನ್ನು ಬಿಡಬೇಡಿ. ಅಮೂಲ್ಯ ವಸ್ತುಗಳ ಮೇಲೆ ಹೂಡಿಕೆ ಮಾಡುವಿರಿ. ವಿದ್ಯಾರ್ಥಿಗಳು ಶಿಕ್ಷಕರಿಂದ ಉಪದೇಶವನ್ನು ಪಡೆಯುವರು. ನಿಮ್ಮ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿದರೆ ಉತ್ತಮ ಫಲ ಸಿಗುತ್ತದೆ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು.
ವೃಶ್ಚಿಕ ರಾಶಿ: ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮನಸಾರೆ ಮೆಚ್ಚುವರು. ಸಂಗಾತಿಯೊಂದಿಗೆ ಸಮಯ ಕಳೆಯುವ ಮೂಲಕ ಸಂತೋಷ ಸಿಗುತ್ತದೆ. ವೃತ್ತಿ ಮತ್ತು ಕುಟುಂಬ ನಡುವೆ ಸಮತೋಲನ ಕಾಯ್ದುಕೊಳ್ಳಿ. ಹಣವು ಖರ್ಚಾಗುವುದೆಂಬ ಆತಂಕ ಬೇಡ. ಅಧಿಕಾರವು ಕ್ಷಣಿಕ ಎಂಬ ಭಾವವು ನಿಮ್ಮೊಳಗೆ ಇರಲಿ. ಚಿಕ್ಕ ಕೆಲಸವನ್ನಾದರೂ ಬಹಳ ಅಚ್ಚುಕಟ್ಟಿನಿಂದ ಮಾಡಿಕೊಳ್ಳುವಿರಿ. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಕೆಲವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದೀತು.
ಧನು ರಾಶಿ: ಮಕ್ಕಳಲ್ಲಿ ಹೊಂದಾಣಿಕೆ ಸ್ವಭಾವವನ್ನು ಬೆಳೆಸಬೇಕಾಗುವುದು. ನಿಮಗಾಗದವರು ನಿರ್ಮಿಸಿದ ಜಾಲಕ್ಕೆ ಬೀಳುವಿರಿ. ಭಾವನೆಗಳನ್ನು ಪ್ರೀತಿಪಾತ್ರರಿಗೆ ಮುಕ್ತವಾಗಿ ಹಂಚಿಕೊಳ್ಳಿ. ದೇಹಕ್ಕೆ ಉಂಟಾದ ಸಂಕಟಗಳನ್ನು ನಿವಾರಿಸಿ ವಿಶ್ರಾಂತಿ ಪಡೆಯಿರಿ. ಪ್ರೀತಿಯಲ್ಲಿ ಯಶಸ್ಸು ದೊರೆಯುವ ದಿನ ಇದಾಗಿದೆ. ವಿದ್ಯಾರ್ಥಿಗಳು ಓದಿಗೆ ಸಮಯವು ಸಿಗದೇ ಕಷ್ಟವಾಗುವುದು. ಆಗುತ್ತಿರುವ ಕೆಲಸಕ್ಕೆ ಅಡ್ಡಗಾಲು ಹಾಕಿ ದಿಕ್ಕು ತಪ್ಪಿಸುವುದು ಬೇಡ.
ಮಕರ ರಾಶಿ: ನಿಮ್ಮ ಮಕ್ಕಳ ನಿರೀಕ್ಷೆಗಳನ್ನು ಹುಸಿಗೊಳಿಸದೇ ಸಮಾಧಾನ ಮಾಡಿ. ದೊಡ್ಡ ವ್ಯಕ್ತಿಗಳೆಂದು ಯಾರಾದರೂ ಹೇಳಿ ನಿಮಗೆ ವಂಚಿಸಬಹುದು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ನಿಮ್ಮ ಶಕ್ತಿ ಇಂದು ಸಹಾನುಭೂತಿಯನ್ನೆ ನೀಡುತ್ತದೆ. ಕೊಡುಕೊಳ್ಳುವ ವ್ಯವಹಾರವು ಪ್ರಮಾಣಿಕವಾಗಿ ಇರಲಿ. ಉತ್ತಮ ಉದ್ಯೋಗವನ್ನು ಕಳೆದುಕೊಳ್ಳಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ನಿರಾಕರಿಸುವಿರಿ. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು.
ಕುಂಭ ರಾಶಿ: ನೀವು ಹೇಳದೇ ಇರುವ ರಹಸ್ಯವು ಇಂದು ನಿಮ್ಮಿಂದ ತಿಳಿಯಲಿದೆ. ಕೊಟ್ಟ ಹಣವು ಮತ್ತೆ ಬರುವ ನಿರೀಕ್ಷೆಯಲ್ಲಿ ಇರುವಿರಿ. ಆಹ್ವಾನವಿಲ್ಲದ ಕಡೆ ಹೋಗುವುದು ಬೇಡ. ಗುರಿಗಳನ್ನು ತಲುಪಲು ತಾಳ್ಮೆ ಮತ್ತು ಸೂಕ್ತ ಯೋಜನೆ ಅಗತ್ಯ. ವಿವಾಹದ ಮಾತುಕತೆಗೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ದೃಷ್ಟಿದೋಷವು ನಿಮಗೆ ಅಧಿಕವಾಗಬಹುದು. ಹಳೆಯ ಪರಿಚಯವು ನಿಮಗೆ ಹೊಸತಾಗಿ ಕಾಣಿಸುವುಸುದು.
ಮೀನ ರಾಶಿ: ಕಛೇರಿಯಲ್ಲಿ ಯಾರ ಜೊತೆಗಾದರೂ ಅನುಚಿತವಾಗಿ ವರ್ತಿಸಿದರೆ ಕಷ್ಟ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಗೊಂದಲಗಳು ಬರಬಹುದು. ಹೆಚ್ಚು ಪರಿಶ್ರಮ ಬೇಕಾದ ದಿನವಾಗಿದ್ದು, ಗುರಿ ತಲುಪಲು ದೃಢ ನಿಲುವು ಅಗತ್ಯ. ವಿದ್ಯಾಭ್ಯಾಸ ಪೂರ್ಣವಾದ ಸಂತಸದಲ್ಲಿ ಇರುವಿರಿ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಯಾರನ್ನೂ ನೀವು ತಪ್ಪಾಗಿ ಗ್ರಹಿಸುವುದು ಬೇಡ.
ಲೋಹಿತ ಹೆಬ್ಬಾರ್-8762924271 (what’s app only)