
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಶಿವ, ಕರಣ : ಗರಜ, ಸೂರ್ಯೋದಯ – 06 – 14 am, ಸೂರ್ಯಾಸ್ತ – 05 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:09 – 10:36 ಯಮಗಂಡ ಕಾಲ 13:30 – 14:58, ಗುಳಿಕ ಕಾಲ 06:14 – 07:41.
ಮೇಷ ರಾಶಿ: ನಿಮ್ಮನ್ನು ನೀವು ಪ್ರಶಂಸಿಸಿಕೊಳ್ಳುವುದು ಇತರರಿಗೆ ಇಷ್ಟವಾಗದು. ನಿಮ್ಮ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗವುದು. ಬಂಧುಗಳ ಆಗಮನದಿಂದ ನಿಮಗೆ ವ್ಯಾಪಾರದಲ್ಲಿ ನಷ್ಟವಾಗಬಹುದು. ಉದ್ಯಮದ ಯೋಜನೆಯನ್ನು ಅಂತಿಮಗೊಳಿಸಿ. ಪಾರದರ್ಶಕ ವ್ಯವಹಾರದಿಂದ ನಿಮಗೆ ಲಾಭವಿರವುದು. ಕಡಿಮೆ ಖರ್ಚಿನಲ್ಲಿ ಸಂತಸವನ್ನು ಅನುಭವಿಸುವಿರಿ.
ವೃಷಭ ರಾಶಿ: ಒತ್ತಡದಿಂದ ಮಾತ್ರ ಕಾರ್ಯವು ಸಾಧ್ಯ ಎಂಬ ಭ್ರಮೆಯಲ್ಲಿ ಇರುವಿರಿ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ದಾಳವಾಗಿ ಬಳಸಿಕೊಳ್ಳಬಹುದು. ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಬೇಡ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿಯುವಿರಿ. ನಿಮ್ಮ ನೇರ ಮಾತು ಇನ್ನೊಬ್ಬರನ್ನು ಘಾಸಿಗೊಳಿಸುವುದು. ಕೆಟ್ಟ ಕನಸಿನಿಂದ ಮನಸ್ಸಿಗೆ ತಳಮಳ. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ದೂರ ಪ್ರಯಾಣದ ಮನಸ್ಸಿದ್ದರೂ ಅನನುಕೂಲತೆಯಿಂದ ಅದು ಕಷ್ಟವಾದೀತು.
ಮಿಥುನ ರಾಶಿ: ಸುಖದ ಜೀವನ ಮತ್ತು ಹಣ ಸಂಪಾದನೆ ಈ ಎರಡು ಮಾರ್ಗಗಳು ನಿಮ್ಮ ಮುಂದು ಇರುವುದು. ಆಯ್ಕೆಯೂ ನಿಮಗೇ ಬಿಟ್ಟಿದ್ದಾಗಿದೆ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ನಡೆಸುವಿರಿ. ಮುಖ್ಯ ಕಾರ್ಯಗಳು ನಿಮ್ಮನ್ನು ತಪ್ಪಿಹೋಗಬಹುದು. ಇಂದು ಎಂತಹ ಆಚರಣೆಯನ್ನೂ ನೀವು ಮಾಡಲು ಸಿದ್ಧರು. ತಿದ್ದಿಕೊಳ್ಳುವ ಅಂಶಗಳನ್ನು ಗಮನಿಸುವುದು ಮುಖ್ಯವಾದೀತು. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು.
ಕರ್ಕಾಟಕ ರಾಶಿ: ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಮಾಡುವಿರಿ. ಸ್ವಾಭಿಮಾನಕ್ಕೆ ಅಡ್ಡಿಯಾದೀತು. ನೀವು ಆಪ್ತರಿಗೆ ಎಲ್ಲವನ್ನೂ ಹೇಳಬೇಕು ಎಂದುಕೊಂಡರೂ ನಿಮಗೆ ಹೇಳಲಾಗದೆ ದುಃಖವು ಬರುವುದು. ಭೂ ವ್ಯವಹಾರದಲ್ಲಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗದು. ನಿಮ್ಮ ಪ್ರೈವೆಸಿಗೆ ಅಡ್ಡಿಯಾದವರನ್ನು ಆಡಿಕೊಳ್ಳುವಿರಿ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು. ಸ್ಪರ್ಧಾತ್ಮಕ ಅಂಶಗಳನ್ನು ಸರಿಯಾಗಿ ತಿಳಿದು, ಮುಂದುವರಿಯಿರಿ.
ಸಿಂಹ ರಾಶಿ: ಇನ್ನೊಬ್ಬರಿಗಾಗಿ ನೀವು ನಿಮ್ಮ ತುರ್ತಿನ ಕಾರ್ಯವನ್ನು ಬಿಡಬೇಕಾದೀತು. ಆರ್ಥಿಕ ನಷ್ಟಕ್ಕೆ ನಿಮಗೆ ಚಿಂತೆಯಾಗಬಹುದು. ಎಲ್ಲರ ಜೊತೆಗೂಡಿ ಕೆಲಸ ಮಾಡಲು ನಿಮಗೆ ಆಗದೇ ಇರುವುದು. ನಿಮ್ಮ ಪ್ರಶಂಸೆಯಿಂದ ಉಳಿದವರಿಗೆ ಕಷ್ಟವಾದೀತು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಆಗಲಿದೆ. ಬಂಧುಗಳ ಜೊತೆಗೆ ಸಂವಹನವು ಇಷ್ಟವಾಗದು. ವಾಹನದ ಓಡಾಟವು ನಿಮಗೆ ಕಿರಿಕಿರಿ ಕೊಡಬಹುದು.
ಕನ್ಯಾ ರಾಶಿ: ಅನಿರೀಕ್ಷಿತವಾಗಿ ದೊರೆತ ಉನ್ನತ ಅಧಿಕಾರದಿಂದ ನಿಮಗೆ ಸಂತೋಷವಾಗಲಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ನೀವೇ ಸರಿಮಾಡಿಕೊಳ್ಳುವುದು ಉತ್ತಮ. ಮಕ್ಕಳನ್ನು ಸುಂದರ ತಾಣಕ್ಕೆ ಕರೆದುಕೊಂಡುಹೋಗುವಿರಿ. ನಿಮ್ಮ ಮೇಲಿನ ಆರೋಪವು ಸುಳ್ಳು ಎಂದು ತೀರ್ಮಾನವು ಪ್ರಕಟವಾಗುವವುದು. ಸಮಯಸ್ಫೂರ್ತಿಯಿಂದ ಗಂಭೀರವಾದ ಸಮಸ್ಯೆಯನ್ನೂ ಸಲೀಸಾಗಿ ಬಗೆಹರಿಸಿಕೊಳ್ಳುವಿರಿ.
ತುಲಾ ರಾಶಿ: ಉದ್ಯೋಗವನ್ನು ಅರಸಿ ದೂರದ ಊರಿಗೆ ಹೋಗುವಿರಿ. ಕೆಲಸದ ಹುಡುಕಾಟದಲ್ಲಿ ನಿಮ್ಮ ಸಮಯವು ವ್ಯರ್ಥವಾಗುವುದು. ಪದೆ ಪದೆ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಬಿನ್ನವಾಗಿರುವುದು. ಕಳೆದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಹಾಳುಮಾಡಿಕೊಳ್ಳುವಿರಿ. ದೂರದಲ್ಲಿ ಇರುವ ಮಿತ್ರರು ನಿಮಗೆ ಸಹಾಯವನ್ನು ಮಾಡುವರು. ನಿಮ್ಮ ಅಂತಶ್ಶಕ್ತಿ ನಿಮ್ಮರಿಗೆ ಗೊತ್ತಾಗುವುದು.
ವೃಶ್ಚಿಕ ರಾಶಿ: ರಾಜಕೀಯ ವ್ಯಕ್ತಿಗಳ ಸಹವಾಸವಾಗಲಿದೆ. ಸ್ನೇಹಿತರು ನಿಮ್ಮ ಉದ್ಯೋಗಕ್ಕೆ ಸಹಾಯ ಮಾಡುವರು. ತುಂಬಾ ಹಳೆಯದಾದ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮ್ಮ ಹೆಗಲಿಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಉದ್ಯಮದಿಂದ ನೀವು ನಿರೀಕ್ಷಿಸುವಿರಿ. ಮಾತಿಗೆ ತಪ್ಪಿದ ಕಾರಣ ನಿಮ್ಮನ್ನು ಅವಮಾನಿಸಬಹುದು. ಆರ್ಥಿಕಬಲವು ನಿಮಗೆ ತುಂಬಾ ಅಗತ್ಯವಾಗಿ ಬೇಕಿದೆ. ಬೇರೆ ಕೆಲಸಗಳಿಂದ ಹೆಚ್ಚು ಆದಾಯ ಬರುವಂತೆ ನೀವು ನೋಡಿಕೊಳ್ಳುವಿರಿ.
ಧನು ರಾಶಿ: ಇಂದು ನೀವು ಮನೆಯನ್ನು ಶುದ್ಧ ಮಾಡುವಲ್ಲಿ ಆಸಕ್ತರಾಗಿರುವಿರಿ. ಸಣ್ಣ ಉದ್ಯೋಗಕ್ಕೂ ಇಂದು ಅಲ್ಪ ಲಾಭವಾಗುವುದು. ಉದ್ಯೋಗದ ನಿಮಿತ್ತ ಮಾಡಿದ ಸುತ್ತಾಟವು ಅನಾರೋಗ್ಯಕ್ಕೆ ಕಾರಣವಾಗುವುದು. ನಿಕಟ ಸಂಪರ್ಕಗಳಿಂದ ನಿಮಗೆ ಹೊಸ ದೃಷ್ಟಿ ಸಿಗಲಿದೆ. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ. ಇಂದು ಹೆಚ್ಚಿನ ಸಮಯವನ್ನು ನಿದ್ರೆಯಿಂದ ಕಳೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ನಿಮ್ಮನ್ನು ಅವಲಂಬಿಸಿದವರ ಅವಶ್ಯಕತೆಗಳನ್ನು ಪೂರೈಸುವಿರಿ.
ಮಕರ ರಾಶಿ: ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವನ್ನು ನೀವು ಕಳೆದುಕೊಳ್ಳುವಿರಿ. ಅಪರಿಚಿತರ ಸಲಹೆಗಳು ಸೂಕ್ತ ಎಂದೆನಿಸಬಹುದು. ಎಲ್ಲರನ್ನೂ ನೀವು ನೋಡುವ ದೃಷ್ಟಿಯು ಬದಲಾಗುವುದು. ನಿಮ್ಮ ಆಸಕ್ತಿಕ್ಷೇತ್ರದಲ್ಲಿ ಅಧ್ಯಯನಕ್ಕೆ ಅವಕಾಶ ಸಿಗುವುದು. ಕಷ್ಟಗಳು ಮೋಡಗಳಂತೆ ಒಂದೇ ಕಡೆ ನಿಲ್ಲದೇ ಚಲಿಸುವುವು. ದೈವಭಕ್ತಿಯು ಕಡಿಮೆ ಆಗಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ.
ಕುಂಭ ರಾಶಿ: ಸಮಯಪ್ರಜ್ಞೆಯಿಂದ ನೀವು ಸೂಕ್ತವಾದ ಮಾತುಗಳನ್ನು ಆಡುವಿರಿ. ನಿಮ್ಮೊಳಗಿನ ಭೀತಿಯನ್ನು ನೀವು ಯಾರೊಂದಿಗಾದರೂ ಹೇಳಿಕೊಳ್ಳಿ. ಉದ್ಯೋಗದ ಹಾದಿ ಸುಗಮವಾಗಲಿದೆ. ನೀವು ಅಧಿಕಾರಿಗಳ ಬೆಂಬಲ ಸಿಗುವುದು. ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಾಗಲಿದೆ. ನಿಮ್ಮ ಊಹೆಯು ಇಂದು ಸತ್ಯವಾಗುವುದು. ವ್ಯಾಪಾರದಲ್ಲಿ ಅಧಿಕಲಾಭವನ್ನು ನಿರೀಕ್ಷಿಸುವುದು ಬೇಡ. ನಿಮ್ಮ ಅನನುಕೂಲತೆಯನ್ನು ಹೇಳಬೇಡಿ.
ಮೀನ ರಾಶಿ: ಹೊಸತನ್ನು ರೂಢಿಸಿಕೊಳ್ಳಲು ಬಯಸುವಿರಿ. ಅಧಿಕ ಲಾಭದಿಂದ ಅತಿಯಾದ ಸಂತೋಷವಾಗುವುದು. ಸಿಕ್ಕ ಅವಕಾಶಗಳನ್ನು ನೀವು ಯೋಗ್ಯರೀತಿಯಿಂದ ಬಳಸಿಕೊಳ್ಳುವಿರಿ. ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸುವುದು ಒಳ್ಳೆಯದು. ಒತ್ತಾಯದಿಂದ ಒಲಿಸಿಕೊಂಡಿದ್ದು ನಿಮಗೆ ಸಿಗದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ.
ಲೋಹಿತ್ ಹೆಬ್ಬಾರ್ – 8762924271 (what’s app only)
Published On - 1:05 am, Sat, 31 October 26