Horoscope Today 13 September : ಈ ರಾಶಿಯವರು ನಿಮಗೆ ಗೊತ್ತಿರುವುದನ್ನೆಲ್ಲ ಹೇಳೋ ಬದಲು ಬೇರೆಯವರಿಗೆ ಬೇಕಾದಷ್ಟನ್ನೇ ಹೇಳಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ ಶನಿವಾರ ಬಲ ಪ್ರದರ್ಶನ, ನೌಕರರಿಗೆ ಪದೋನ್ನತಿ, ಕಾಮಗಾರಿಯ ವರದಿ, ಹರಟೆಯಿಂದ ಕಾಲಹರಣ, ಕಾರ್ಯದ ಮರೆವು, ನಿಶ್ಚಿತ ಕಾರ್ಯಕ್ಕೆ ತಡೆ, ವೇತನದ ಕುತೂಹಲ ಇವೆಲ್ಲ ಇಂದಿನ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಗಂಡ, ಕರಣ : ತೈತಿಲ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:25 – 10:57, ಗುಳಿಕ ಕಾಲ 06:22 – 07:54, ಯಮಗಂಡ ಕಾಲ 14:00 – 15:32,
ಮೇಷ ರಾಶಿ :
ಪರ್ವತದಂತಹ ತಾಳ್ಮೆಯೂ ಒಮ್ಮೆ ಕರಗಿಹೋಗುವ ಸಂದರ್ಭ ಬರಬಹುದು. ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಿಗಬಹುದು. ವಿವೇಚನಾತ್ಮಕ ವಿಚಾರಕ್ಕೆ ಸಮಯವನ್ನು ಪಡೆಯುವುದು ಒಳ್ಳೆಯದು. ಕಾರಣಾಂತರಗಳಿಂದ ನಿಮ್ಮ ಯಾತ್ರೆಯು ಸ್ಥಗಿತವಾಗುವುದು. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಪ್ರಸಿದ್ಧಿಯು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ವಿನಮ್ರವಾಗಿ ಅದನ್ನು ಸ್ವೀಕರಿಸುವ ಸ್ವಭಾವ ಇರಲಿ. ನಿರಾಸೆಯಿಂದ ನೀವು ಹೊರಬರುವಿರಿ.
ವೃಷಭ ರಾಶಿ :
ಆರ್ಥಿಕತೆಯ ರಕ್ಷಣೆಯು ನಿಮ್ಮ ಮಹತ್ತ್ವದ ಕೆಲಸಗಳಲ್ಲಿ ಒಂದು. ದಾಂಪತ್ಯದಲ್ಲಿ ಬೇಸರವಿರಲಿದೆ. ಇಬ್ಬರೂ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ನಿಮ್ಮನ್ನು ಯಾರೂ ಸೇರಿಸಿಕೊಳ್ಳದಿದ್ದರೆ ಬೇಸರವಿಲ್ಲ. ಸ್ನೇಹಿತರನ್ನೂ ನಿಮ್ಮಿಂದ ದೂರವಿಡುವಿರಿ. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ಕೆಲವು ಸೂಚನೆಗಳು ನಿಮಗೆ ಭವಿಷ್ಯವನ್ನು ತಿಳಿಸಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೇ ಇರುವುದು. ದೇವಾಲಯದ ಜವಾಬ್ದಾರಿಯನ್ನು ಹೊರಬೇಕಾಗುವುದು. ನಿಮ್ಮ ನೌಕರರನ್ನು ಬಹಳ ಕೆಳಮಟ್ಟದಲ್ಲಿ ನೋಡುವಿರಿ. ಯಾವುದನ್ನೂ ಪೂರ್ವದಲ್ಲಿ ಖಚಿತಪಡಿಸಿಕೊಳ್ಳದೇ ಮುಂದುವರಿಯುವುದು ಬೇಡ.
ಮಿಥುನ ರಾಶಿ :
ನಿಮ್ಮ ಸಫಲತೆಯನ್ನು ಆರಂಭದ ಲಕ್ಷಣವೇ ತಿಲಕಿಸುವುದು. ಕಛೇರಿಯ ನಿಯಮಗಳನ್ನು ಸಡಿಲ ಮಾಡುಕೊಳ್ಳುವಿರಿ. ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಇರಲಿದೆ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ರಾಜಕಾರಣಿಗಳ ಇಬ್ಬಗೆಯ ವರ್ತನೆಯು ಬೇಸರ ತರಿಸಬಹುದು. ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಯಾರ ಮಾತಿಗೂ ಭಯಗ್ರಸ್ಥರಾಗದೇ ವಿನಯದಿಂದ ಉತ್ತರ ನೀಡಿ. ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ಒಮ್ಮೆ ಧ್ವಂಸವಾದುದನ್ನು ಮರು ನಿರ್ಮಾಣ ಮಾಡುವುದು ಕಷ್ಟ. ನೀವು ಇದರಿಂದ ನಿರಾಳರಾಗುವಿರಿ. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು. ಮನೆಯ ಕೆಲಸವನ್ನು ಬೇಗನೆ ಮುಗಿಸಿ ವಿಶ್ರಾಂತಿ ಪಡೆಯುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದು ಸುತ್ತಾಡುವಿರಿ.
ಕರ್ಕಾಟಕ ರಾಶಿ :
ದೊಡ್ಡ ದನಿಯಲ್ಲಿ ಮಾತನಾಡಿದಾಗ ಮಾತ್ರ ನೀವು ಪ್ರಸಿದ್ಧರಾಗುತ್ತೀರಿ ಎನ್ನುವುದು ಬೇಡ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ನಿಮ್ಮ ಕಾರ್ಯದ ಉದ್ದೇಶವೇ ಮರೆತುಹೋಗಬಹುದು. ಇಂದು ನೋವು ಅತಿಯಾಗಬಹುದು. ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯಲು ಆಗದು. ಅಶಿಸ್ತಿನ ಕಾರಣ ಹಿರಿಯರಿಂದ ಬೈಸಿಕೊಳ್ಳಬೇಕಾಗುವುದು. ನಿಮಗೆ ಗೊತ್ತಿಲ್ಲದೇ ನಿಮ್ಮ ವಸ್ತುಗಳ ಅಪಹರಣವಾಗಬಹುದು. ಕಾಮಗಾರಿಯ ನೇತೃತ್ವವನ್ನು ಅನ್ಯರ ಮುಖಾಂತರ ಪಡೆಯುವಿರಿ. ಆಗಾಗ ಗಮನಿಸುತ್ತಿರುವುದು ಅವಶ್ಯಕ. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ವೈಯಕ್ತಿಕ ನಿಲುವನ್ನು ಯಾರ ಮೇಲೂ ಹೇರಿಕೆ ಮಾಡಬೇಡಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಇಂದು ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರುವುದು. ಭೂಮಿಯ ಉತ್ಪನ್ನದಿಂದ ಲಾಭವಾಗಲಿದೆ.
ಸಿಂಹ ರಾಶಿ :
ಅನೇಕರ ಸಹಾಯದಿಂದ ನಿಮ್ಮ ವಿವಾಹ ಸಮಂಪನ್ನವಾಗಲಿದ್ದು, ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ. ಸಂಗಾತಿಯ ಜೊತೆ ಸ್ನೇಹ ಕೂಟದಲ್ಲಿ ಭಾಗವಹಿಸುವಿರಿ. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ. ಸಿದ್ಧತೆ ಇಲ್ಲದೇ ಪ್ರಯತ್ನಿಸಿ ಹಣದ ಅಪಾಯಕ್ಕೆ ಬೀಳುವಿರಿ. ಪಕ್ಕದವರು ಎಂತಹವರು ಎನ್ನುವುದನ್ನು ನೋಡಿ ಮಾತನಾಡಿ. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ವ್ಯರ್ಥ ಕಾಲಹರಣವನ್ನು ಮಾಡಿ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುವುದು. ನಿಮ್ಮ ವೇತನದ ಬಗ್ಗೆ ಸ್ನೇಹಿತರಿಗೆ ತಣಿಸಲಾಗಾದ ಕುತೂಹಲ. ಅನುಮಾನಗಳ ಸುತ್ತ ಇರುವ ನಿಮ್ಮ ಮನಸ್ಸಿಗೆ ಸರಿಯಾದ ಮಾಹಿತಿ ಸಿಗಕಿದೆ. ಅಹಂಕಾರವನ್ನು ಎಲ್ಲರೆದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಇಂದು ಎದುರಿನವರ ಜೊತೆ ಅಗತ್ಯವಿರುವಷ್ಟು ಮಾತ್ರ ಮಾತನಾಡಿ.
ಕನ್ಯಾ ರಾಶಿ :
ಹೊಸ ರೀತಿಯಲ್ಲಿ ಸ್ಫುರಿಸುವ ನಿಮ್ಮ ಆಲೋಚನೆಗಳು ಯಾರನ್ನೂ ಮೆಚ್ಚಿಸುವುದು. ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ನಿಮ್ಮವರಿಗೆ ಆದ ಅಪಮಾನದಿಂದ ನೀವು ಕೋಪಗೊಳ್ಳುವಿರಿ. ನಿಮ್ಮ ಸಂಕುಚಿತ ಬುದ್ಧಿಯಿಂದ ಎಷ್ಟೇ ಆಲೋಚಿಸಿದರೂ ಸಮಸ್ಯೆಗೆ ಪರಿಹಾರ ಸಿಗದು. ನಿಮ್ಮ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ ಕೆಲಸಗಳನ್ನು ಮರೆಸುವುದು. ತೂಗು ಕತ್ತಿಯನ್ನು ತಲೆಯ ಮೇಲಿರಿಸಿದಂತೆ ಕೆಲಸ ಮಾಡಬೇಕಾಗುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು. ಇದರಿಂದ ನೀವು ಉದ್ವೇಗಕ್ಕೆ ಒಳಗಾಗುವಿರಿ.
ತುಲಾ ರಾಶಿ :
ನಿಮ್ಮ ಸಾಲಕ್ಕೆ ಹೆಚ್ಚಿನ ಬಡ್ಡಿಯು ಸೇರಿ ಆತಂಕವನ್ನು ತರಬಹುದು. ಇಂದು ನಿಮ್ಮಲ್ಲಿ ವಿನೋದದ ಮನಃಸ್ಥಿತಿ ಇರುವುದು. ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು. ಒತ್ತಾಯ ಪೂರ್ವಕವಾಗಿ ಆಹಾರವನ್ನು ಸೇವಿಸಿ ಆರೋಗ್ಯ ಕೆಡಬಹುದು. ಸಣ್ಣ ಹೆಜ್ಜೆಯೂ ದೊಡ್ಡ ಗುರಿಗೆ ಕಾರಣವಾಗುವುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ಬಹಳ ದಿನಗಳಿಂದ ಸಾಗುತ್ತಿದ್ದ ಕೆಲಸವನ್ನು ಇಂದೇ ಮುಗಿಸಬೇಕೆಂದು ನಿರ್ಧರಿಸುವಿರಿ. ಸಂದರ್ಭವನ್ನು ನೋಡಿ ಮಾತನಾಡುವುದು ಉತ್ತಮ. ಮನೆಯಲ್ಲಿ ಅನ್ಯರಿದ್ದರೂ ನೀವೇ ಪತ್ರವ್ಯವಹಾರವನ್ನು ಮಾಡಬೇಕಾಗುವುದು. ನಿಮ್ಮ ಸಹಜ ವರ್ತನೆಯೂ ತೋರಿಕೆಯಂತೆ ಕಾಣಬಹುದು. ತಾಯಿಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ.
ವೃಶ್ಚಿಕ ರಾಶಿ :
ಭೊಗ ವಸ್ತುಗಳ ಬಳಕೆಯನ್ನು ಎಲ್ಲಿ ಮಾಡಬೇಕೋ ಅಲ್ಲಿಯೇ ಮಾಡಿ. ಎಲ್ಲ ವ್ಯಕ್ತಿ, ವಸ್ತು, ಹುದ್ದೆಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ಸಂಕಷ್ಟಗಳ ನಿವಾರಣೆಗೆ ದೈವದ ಮೊರೆ ಹೋಗುವಿರಿ. ಅಂತಸ್ತನ್ನು ತೋರಿಸಿದರೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡಲಾರರು. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಆರೋಗ್ಯದ ಮೇಲೆ ಹೂಡಿಕೆ ಮಾಡಿಕೊಳ್ಳುವುದು ಉತ್ತಮ. ಈ ದಿನವು ದುರಂತದಲ್ಲಿ ಕೊನೆಯಾಗಬಹುದು. ನಿಮ್ಮ ಉಪಯೋಗವನ್ನು ಪಡೆದು ಕೈ ಬಿಡಬಹುದು. ಉದ್ಯಮದ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ಒತ್ತಡವನ್ನು ತಗ್ಗಿಸಿಕೊಳ್ಳಲು ಕೆಲಸವನ್ನು ಹಂಚುವುದು ಉತ್ತಮ. ಸೌಂದರ್ಯವೃದ್ಧಿಯನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮವರಲ್ಲದವರ ಮೇಲೆ ಆಕರ್ಷಣೆ ಉಂಟಾಗಬಹುದು.
ಧನು ರಾಶಿ :
ಮನೆಯ ಸಮೀಪ ಆತಂಕದ ಸನ್ನಿವೇಶ ಸೃಷ್ಟಿಯಾಗಲಿದೆ. ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಹಿಂಸಾತ್ಮಕವಾಗಿ ಹೋಗದೇ ಸಮಾಧಾನ ಚಿತ್ತದಿಂದ ಸಮಸ್ಯೆಯನ್ನು ಮಾರ್ಗವನ್ನು ಕಂಡುಕೊಳ್ಳುವಿರಿ. ಸಹೋದ್ಯೋಗಿಯ ಕಾರಣದಿಂದ ನಿಮಗೆ ಬೈಗುಳ ಸಿಗುವುದು. ಮಕ್ಕಳ ಭವಿಷ್ಯಕ್ಕಾಗಿ ಕ್ಲಿಷ್ಟದ ಜೀವನ ಯಾಪನ ಮಾಡಬೇಕಾಗುವುದು. ಭಯವನ್ನು ಬಿಟ್ಟು ಬಂದ ಅವಕಾಶಗಳನ್ನು ಪಡೆಯಿರಿ. ಇಂದು ಅಸಾಧ್ಯ ಕಾರ್ಯದಲ್ಲು ದುಸ್ಸಾಹಸ ಮಾಡುವುದು ಬೇಡ. ಸಂಗಾತಿ ದುರಭ್ಯಾಸದಿಂದ ನಿಮ್ಮ ಮೇಲೂ ದುಷ್ಪರಿಣಾಮ ಬೀರುವುದು ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ. ಇಂದನ ಖುಷಿಯ ವಿಚಾರವನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ.
ಮಕರ ರಾಶಿ :
ಚರಾಸ್ತಿಯ ಲೆಕ್ಕ ಸಿಗದೇ ಬಹಳ ತಲೆ ಕೆಡಿಸಿಕೊಳ್ಳುವಿರಿ. ಇಂದಿನ ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ವೃದ್ಧಿ ಆಗಬಹುದು. ಖರ್ಚನ್ನು ನಿಯಂತ್ರಣಕ್ಕೆ ತಂದುಕೊಳ್ಳಿ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಶ್ರಮ. ಮನೋರಂಜನೆಯನ್ನು ಪಡೆಯಲು ಪೂರಕ ವಾತಾವರಣವನ್ನು ಹುಡುಕುವಿರಿ. ಆಲಸ್ಯವು ಇಂದಿನ ಕಛೇರಿಯ ಕೆಲಸವನ್ನು ನಿಧಾನ ಮಾಡಿಸುವುದು. ನಿಮಗೆ ಸೆಡ್ಡು ಹೊಡೆದವರ ಮುಂದೆ ಬೆಳೆಯುವ ಬಯಕೆ ಅತಿಯಾಗಿ ಬರಲಿದೆ. ನಿಮ್ಮ ಸ್ವಭಾವವು ಇದ್ದಕಿದ್ದಂತೆ ಬದಲಾಗಿ ಪ್ರೀತಿಸುವವರಿಗೆ ಇದು ಕಷ್ಟವಾಗಬಹುದು. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.
ಕುಂಭ ರಾಶಿ :
ಇಂದು ಅಭಿಮಾನಿಗಳೆಂದು ಹೇಳಿ ನಿಮಗೆ ಸನಿಹವಾಗುವವರು ಇದ್ದಾರೆ. ಓದಿನಲ್ಲಿ ಆಸಕ್ತಿ ಕಡಿಮೆ ಆಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಪುಣ್ಯಕ್ಷೇತ್ರಗಳ ದರ್ಶನಭಾಗ್ಯವು ಸಿಗಲಿದೆ. ಆರೋಗ್ಯದ ಸಮಸ್ಯೆಯು ದೂರವಾಗಲು ಯೋಗ್ಯವಾದ ಆಹಾರವನ್ನು ಸೇವಿಸಿ. ಬಂಧುಗಳ ಭೇಟಿಯಿಂದ ಉತ್ಸಾಹವಿರಲಿದೆ. ಅನೇಕ ಜನರ ನಡುವೆ ನೀವು ಮುಂದಡಿ ಇಡುವಿರಿ. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ದಾಂಪತ್ಯದ ಕಲಹವನ್ನು ಮೌನವಹಿಸಿ ನೀವೇ ಶಾಂತಗೊಳಿಸಿ. ಮಾತಿಗೆ ಮಾತು ಬೆಳೆಯುವುದು ಬೇಡ. ಕಾರ್ಯದಲ್ಲಿ ಮನಸ್ಸು ದುರ್ಬಲವಾದಂತೆ ತೋರುವುದು. ನೀವು ಇಂದು ಕಛೇರಿಯ ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಸಿಟ್ಟುಗೊಳ್ಳುವಿರಿ. ನಿಮ್ಮ ಸ್ತುತಿಯನ್ನು ನೀವೇ ಆದಷ್ಟು ಕಡಿಮೆ ಮಾಡಿಕೊಳ್ಳಿ. ನಿಮ್ಮ ವಸ್ತುವನ್ನು ಇಂದು ಇನ್ನೊಬ್ಬರು ಬಳಸಬಹುದು.
ಮೀನ ರಾಶಿ :
ನೀರಿನಿಂದ ತೊಂದರೆ ಅಥವಾ ನೀರು ಸಿಗದೇ ಹಾಹಾಕಾರ ಪಡುವ ಸ್ಥಿತಿ ಬರಬಹುದು. ಉನ್ನತ ವಿದ್ಯಾಭ್ಯಾಸದ ಕುರಿತು ಸ್ನೇಹಿತರ ಜೊತೆ ಚರ್ಚೆ ನಡೆಸುವಿರಿ. ಕುಟುಂಬ ನಿಮ್ಮ ಮಾರ್ಗದರ್ಶನವನ್ನು ಅಪೇಕ್ಷಿಸುವುದು. ಸಭೆಗೆ ಅತಿಥಿಯಾಗಿ ಭಾಗವಹಿಸುವಿರಿ. ಅಸ್ತಿ ಹಂಚಿಕೆಯ ವಿಚಾರವು ಇಂದು ಮುನ್ನೆಲೆಗೆ ಬರಬಹುದು. ನಿಮ್ಮ ಕೆಲಸಗಳಿಗೆ ತಾತ್ಕಾಲಿಕ ತೊಂದರೆಯು ಬರಬಹುದು. ಅಲ್ಪ ಬೆಳಕಿನ ನಡುವೆ ಕೆಲಸ ಮಾಡುವಿರಿ. ವ್ಯಾಪಾರದಿಂದ ಅಭಿವೃದ್ಧಿಯ ಒಂದೊಂದೇ ಹಂತವನ್ನು ಏರುವಿರಿ. ಗೆಳೆಯರ ಜೊತೆ ದೂರ ಪ್ರೇಕ್ಷಣೀಯ ಸ್ಥಳಕಗಕೆ ಪ್ರವಾಸ. ಉನ್ನತ ಸ್ಥಾನವು ಪ್ರಭಾವೀ ವ್ಯಕ್ತಿಯ ಸಹಕಾರದಿಂದ ಪ್ರಾಪ್ತವಾಗುವುದು. ನಿಮ್ಮವರ ಮೇಲಿದ್ದ ನಿಮ್ಮ ಅಭಿಪ್ರಾಯವು ಬದಲಾಗಬಹುದು. ನಿಮ್ಮ ನಿರೀಕ್ಷೆಯು ಇಂದು ಕಡಿಮೆಯಾಗಲಿದೆ. ನಿಮ್ಮವರ ಪ್ರೀತಿಯನ್ನೂ ನೀವು ಕಳೆದುಕೊಳ್ಳುವಿರಿ.
– ಲೋಹಿತ ಹೆಬ್ಬಾರ್ 8762924271 (what’s app only)




