Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 31ರ ದಿನಭವಿಷ್ಯ
ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 31 ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಮನ್ಯುಸೂಕ್ತದ ಶ್ರವಣ ಮಾಡುವುದರಿಂದ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ದೊರೆಯಲಿದೆ. ಒಂದು ಕೆಲಸವನ್ನು ಪೂರ್ಣ ಮಾಡುವುದಕ್ಕೆ ನಾಲ್ಕೈದು ಬಾರಿ ಪ್ರಯತ್ನ ಮಾಡಬೇಕು ಎಂಬ ಪರಿಸ್ಥಿತಿ ಉದ್ಭವ ಆಗುವುದಿಲ್ಲ. ಇನ್ನು ಸರ್ಕಾರದಿಂದ ಬರಬೇಕಾದ ಹಣ ಏನಾದರೂ ಬಾಕಿ ಇದ್ದಲ್ಲಿ ಅದು ಕೈ ಸೇರುವ ಸಾಧ್ಯತೆ ಇದೆ. ಯಾವುದಾದರೂ ಮುಖ್ಯ ಕೆಲಸದ ಸಲುವಾಗಿ ಪ್ರಯಾಣ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಕಾರ್ತಿವೀರ್ಯಾರ್ಜುನನ ಸ್ಮರಣೆಯನ್ನು ಸಹ ಮಾಡಿಕೊಂಡು ಮುಂದುವರಿಯಿರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನೀವು ನೀಡಿದ ಸಲಹೆ- ಸೂಚನೆಗಳಿಂದ ಉದ್ಯೋಗ ಸ್ಥಳದಲ್ಲಿ ಬಹಳ ಅನುಕೂಲಗಳು ಆಗಲಿವೆ. ಇದರಿಂದ ಮೇಲಧಿಕಾರಿಗಳು ಬಹಳ ಸಂತುಷ್ಟರಾಗಿ, ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಉತ್ತಮ ಸ್ಥಾನ- ಮಾನ, ವೇತನ ಹೆಚ್ಚಳ ಆಗುವ ಬಗ್ಗೆ ಸೂಚನೆಗಳು ದೊರೆಯಲಿವೆ. ಈ ಹಿಂದೆ ನೀವು ಶ್ರಮ ವಹಿಸಿ ಮಾಡಿದ್ದ ಕೆಲಸಕ್ಕೆ ಆಗ ಪ್ರತಿಫಲ ಸಿಕ್ಕಿಲ್ಲ ಎಂಬ ಬೇಸರ ಇದ್ದಲ್ಲಿ ಅದು ಕರಗಿ ಹೋಗುವಂಥ ಆಫರ್ ನಿಮ್ಮನ್ನು ಹುಡುಕಿಕೊಂಡು ಬರಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಯಾರಿಗೋ ಸಂತೋಷ ಆಗುತ್ತದೆ ಅಂತಲೋ ಅಥವಾ ಮನವೊಲಿಸಬೇಕು ಎಂಬ ಕಾರಣಕ್ಕೋ ನೀವೇನಾದರೂ ಸುಳ್ಳನ್ನು ಹೇಳಿದಲ್ಲಿ ಆ ನಂತರ ಬಹಳ ಪರಿತಪಿಸುವಂತೆ ಆಗಲಿದೆ. ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಗಳ ಮೂಲಕವಾಗಿ ರೆಫರೆನ್ಸ್ ಬರುವ ಯೋಗವಿದೆ. ದಿಢೀರನೇ ಪ್ರಯಾಣಗಳು ನಿಗದಿ ಆದಲ್ಲಿ ನೀವು ಯಾವ ಉದ್ದೇಶಕ್ಕೆ ತೆರಳುತ್ತಿದ್ದೀರಿ ಅದು ಪೂರ್ತಿ ಆಗುತ್ತದೆಯೇ ಎಂಬ ಬಗ್ಗೆ ಒಮ್ಮೆ ಅವಲೋಕನ ಮಾಡಿಕೊಂಡು, ಆ ನಂತರವೇ ಹೊರಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಕ್ಯಾಟರಿಂಗ್ ಅಥವಾ ಅಡುಗೆ ಕಾಂಟ್ರಾಕ್ಟ್ ಅನ್ನು ವೃತ್ತಿಯಾಗಿ ತೆಗೆದುಕೊಂಡು ಇರುವಂಥವರು ಪಾತ್ರೆ- ಅಡುಗೆ ಸಲಕರಣೆಗಳನ್ನು ಖರೀದಿ ಮಾಡುವುದಕ್ಕೆ ದೊಡ್ಡ ಮೊತ್ತವನ್ನು ಮೀಸಲಿಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಇದಕ್ಕಾಗಿ ಸಾಲ ಮಾಡುವ ಸಾಧ್ಯತೆಗಳು ಸಹ ಇವೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವಂಥವರು ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಯದಕ್ಕೆ ವರ್ಗಾವಣೆ ಆಗುವ ಯೋಗ ಇದೆ.
ಲೇಖನ- ಸ್ವಾತಿ ಎನ್.ಕೆ.
