ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.
ತಾ.13-09-2021 ರಿಂದ ತಾ.19-09-2021 ಗೆ *** ಮೇಷ: ಆತ್ಮಾಭಿಮಾನ ಜಾಸ್ತಿ, ನನ್ನಿಂದಲೇ, ನಾನು ಹೇಳಿದ್ದೇ ನಡೀಬೇಕು ಅನ್ನೋ ಮನಸ್ಥಿತಿ ನಿಮ್ಮದು. ಅದರಿಂದಲೇ ಸಮಸ್ಯೆ ಜಾಸ್ತಿ. ಆದರೆ ಈ ವಾರ ಕೈ ಹಾಕಿದ ಕೆಲಸಗಳೆಲ್ಲ ಸುಲಭವಾಗಿ ಮುಗಿಯುತ್ತವೆ. ಗೊಂದಲ ಕಡಿಮೆಯಾಗಬೇಕಾದರೆ, ಕೊಂಚ ಸಮಯ ಏಕಾಂತದಲ್ಲಿ ಯೋಚಿಸಿ, ನನಗೀಗ ಏನು ಬೇಕು ಅಂತ ಚಿಂತಿಸಿ ಮುನ್ನಡೆಯಿರಿ. ಶುಭವಾಗುವುದು. ಅದೃಷ್ಟ ಬಣ್ಣ: ಆರೆಂಜ್ ಅದೃಷ್ಟ ಸಂಖ್ಯೆ: 9
ವೃಷಭ: ತುಂಭಾ ಶುಭ ವಾರವಾಗಲಿದೆ. ನಿಮ್ಮನ್ನೀಗ ಹಿಡಿಯುವವರೇ ಇಲ್ಲ. ಕೈ ಹಾಕಿದ್ದರಲ್ಲೆಲ್ಲ ಗೆಲುವು ಗ್ಯಾರಂಟಿ. ಹೆಚ್ಚುಕಮ್ಮಿ ಮೇ ವರೆಗೂ ಈ ಗೆಲುವಿನ ಓಟ ಮುಂದುವರಿಯಬಹುದು. ಹಾಗಾಗಿ ಮಹತ್ವದ ಕಾರ್ಯ ಕೈಗೊಳ್ಳಲು ಸಕಾಲ. ದಾಂಪತ್ಯವೂ ರಸವತ್ತಾಗಿರುತ್ತದೆ. ಹ್ಯಾಪ್ ಮೋರೆ ಹಾಕೋದು ಬಿಟ್ಟು ಹ್ಯಾಪಿಯಾಗಿರಿ. ಅದೃಷ್ಟ ಬಣ್ಣ: ಗುಲಾಬಿ ಅದೃಷ್ಟ ಸಂಖ್ಯೆ: 6
ಮಿಥುನ: ಗುರುವಿನ ಅನುಗ್ರಹವಿದೆ.ಶುಭವಾಗಲಿದೆ. ಪ್ರೇಮ ನಿವೇದನೆ ಮಾಡ್ಬೇಕು ಅಂತ ಅಂದ್ಕೊಂಡ್ರಿದ್ರೆ ಈ ವಾರ ತಕ್ಕುದಲ್ಲ. ಏಳುಬೀಳುಗಳು ಹೆಚ್ಚಿರುವ ವಾರ ಇದು. ಶತ್ರುಗಳ ಹತ್ತಿರವೂ ಸುಳಿಯಬೇಡಿ. ಆರ್ಥಿಕವಾಗಿ ಸ್ಥಿರತೆ ಇರುತ್ತೆ. ಹಾಗಂತ ಸಿಕ್ಕಾಪಟ್ಟೆ ಖರ್ಚಿನ ಬಾಬತ್ತಿಗೆ ಕೈ ಹಾಕೋದೂ ಬೇಡ. ಅದೃಷ್ಟ ಬಣ್ಣ: ಹಸಿರು ಅದೃಷ್ಟ ಸಂಖ್ಯೆ: 5
ಕಟಕ: ಸ್ನೇಹಿತರ ಸಹಾಯ ಸಿಗಲಿದೆ. ಮನಸ್ಸು ಪ್ರವಾಸಕ್ಕೆ ಹಾತೊರೆಯುತ್ತಿರುತ್ತದೆ. ಅನುಕೂಲ ಇದ್ದರೆ ಹೊರಟುಬಿಡಿ. ಇನ್ನು ಮೂರು ವಾರ ಸಿಹಿಯೇ ಹೆಚ್ಚು. ನಿಮ್ಮ ಹವ್ಯಾಸಕ್ಕೆ ನೀರೆರೆಯುವ ಸಮಯ. ಹೊಸ ಪ್ರೀತಿ ಹುಟ್ಟಬಹುದು. ಅವಕಾಶಗಳು ಹೆಚ್ಚಾಗಬಹುದು. ಹೆಚ್ಚು ಆಶಾವಾದಿಗಳಾಗಿರಿ. ಲೈಫು ಚೆನ್ನಾಗಿರುತ್ತೆ. ಅದೃಷ್ಟ ಬಣ್ಣ: ಬಿಳಿ ಅದೃಷ್ಟ ಸಂಖ್ಯೆ: 2
ಸಿಂಹ: ಈ ವಾರ ಸಮಯ ಚನ್ನಾಗಿರಲಿದೆ. ಹಳೆಯದರ ಮೆಲುಕು, ಹೊಸ ಯೋಚನೆಗಳು ಹುಟ್ಟುವ ಸಮಯ. ರಹಸ್ಯಗಳು, ವಿಸ್ಮಯಗಳು ಹೆಚ್ಚು. ನೆನಪಿನಿಂದ ಮರೆಯಾದದ್ದು ಧುತ್ತನೆ ಕಣ್ಣೆದುರು ಬರಬಹುದು. ನಿಮ್ಮ ಸಾಮರ್ಥ್ಯ ಏನು ಅಂತ ಜಗತ್ತಿಗೆ ತಿಳಿಯುತ್ತೆ. ಬೆಂಬಲ, ಪ್ರೋತ್ಸಾಹ ಹೆಚ್ಚಾಗುತ್ತೆ. ಅಂಜಿಕೆ ಬೇಡ, ಮುನ್ನಡೆಯಿರಿ. ಅದೃಷ್ಟ ಬಣ್ಣ: ಕೆಂಪು ಅದೃಷ್ಟ ಸಂಖ್ಯೆ: 1
ಕನ್ಯಾ: ಬುಧ ಉಚ್ಚನಾಗಿದ್ದಾನೆ.ಬುದ್ದಿಯಿಂದ ಲಾಭ. ಆಧ್ಯಾತ್ಮಿಕ ಒಳನೋಟಗಳು ದಕ್ಕುವ ಕಾಲ. ಸೋಮಾರಿತನಕ್ಕೆ ಖಂಡಿತಾ ಬ್ರೇಕ್ ಬೀಳುತ್ತೆ. ಭಾವನೆಗಳು ಕೆರಳಬಹುದು, ಅದನ್ನು ಶಾಂತವಾಗಿಸುವುದು ನಿಮ್ಮ ಕೈಯಲ್ಲೇ ಇದೆ. ಬೇರೆಯವರು ನಿಮ್ಮನ್ನು ಫೂಲ್ ಮಾಡೋ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ಬಗ್ಗೆ ಕಾಳಜಿಯಿಂದಿರಿ. ಅದೃಷ್ಟ ಬಣ್ಣ: ಹಳದಿ ಅದೃಷ್ಟ ಸಂಖ್ಯೆ: 3
ತುಲಾ: ಹೊಸ ವಸ್ತು ಮನೆಗೆ,ಕಛೇರಿಗೆ ಬರಲಿದೆ. ಮೆಶಿನ್‌ಗಳು, ಕಂಪ್ಯೂಟರ್ ಖರೀದಿಸಬೇಕು. ಅಂದುಕೊಂಡಿದ್ದರೆ ಆ ಪ್ಲ್ಯಾನ್ ಮುಂದೂಡಿ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಖುಷಿ ಜಾಸ್ತಿ. ಲೈಫ್ ಇಂಟೆರೆಸ್ಟಿಂಗ್ ಆಗಿ ಕಾಣಬಹುದು. ಕೆಲಸದ ಹೊರೆ ಹೆಚ್ಚು. ತಾಳ್ಮೆ ಇರಲಿ. ಇನ್ನೊಬ್ಬರನ್ನು ಕಾಯೋದಕ್ಕಿಂತ ನಮ್ಮ ಕೆಲಸ ನಾವೇ ಮಾಡೋದು ಒಳ್ಳೆಯದು. ಅದೃಷ್ಟ ಬಣ್ಣ: ಬೂದು ಅದೃಷ್ಟ ಸಂಖ್ಯೆ: 7
ವೃಶ್ಚಿಕ: ಹೊಸ ಹೊಸ ಆಲೋಚನೆಗಳು ಬರಲಿವೆ. ಬದುಕಿನ ಬಗ್ಗೆ ಪ್ರೀತಿ ಹೆಚ್ಚಬಹುದು. ಸಂಬಂಧಗಳು ಹೆಚ್ಚು ತೀವ್ರವಾಗಬಹುದು. ಪ್ರೀತಿ ಫಲ ಕೊಡಬಹುದು. ಕಲಾವಿದರು ಹಾಗೂ ಲೇಖಕರಿಗೆ ಅದ್ಭುತ ಫಲವಿದೆ. ಸಾಹಸ ಚಟುವಟಿಕೆಗಳತ್ತ ಮನಸ್ಸು ಎಳೆಯುತ್ತದೆ. ಪ್ರವಾಸಕ್ಕೆ ಸಕಾಲ. ಸಹೋದ್ಯೋಗಿಗಳ ಸಹಕಾರವಿರುತ್ತೆ. ಅದೃಷ್ಟ ಬಣ್ಣ: ಕಂದು ಅದೃಷ್ಟ ಸಂಖ್ಯೆ: 4
ಧನುಸ್ಸು: ಮಿಶ್ರಫಲವಾಗಿಲಿದೆ.ಹಣದ ವಿಷಯ ಜಾಗ್ರತೆ. ಕಠಿಣ ಪರಿಶ್ರಮ ಅನಿವಾರ್ಯ. ಆದರೆ ಕೆಲಸದಲ್ಲಿ ಖುಷಿ ಸಿಗುತ್ತೆ. ಉಳಿದುಕೊಂಡಿದ್ದ ಕಾರ್ಯಗಳೆಲ್ಲ ಈ ವಾರ ಪೂರ್ಣವಾಗುತ್ತೆ. ಆರ್ಥಿಕ ಸ್ಥಿರತೆ ಇರುತ್ತದೆ. ಸಾಮರ್ಥ್ಯ, ಅರ್ಹತೆ ಇದ್ದರೂ ದೊಡ್ಡವರ ಗಮನಸೆಳೆಯಲು ವಿಫಲವಾಗಬಹುದು. ಅದೃಷ್ಟ ಬಣ್ಣ: ಗುಲಾಬಿ 8ಅದೃಷ್ಟ ಸಂಖ್ಯೆ:
ಮಕರ: ಗುರು ಸಹ ಜೊತೆಯಾಲಿದೆ.ಶುಭ ಫಲ. ನಿಮ್ಮ ಯೋಚನೆಗಳು ಇತರರಿಗೆ ಮನದಟ್ಟಾಗಬಹುದು. ಹಾಗಂತ ಹೆಚ್ಚಿನ ಫಲ ನಿರೀಕ್ಷಿಸುವಂತಿಲ್ಲ. ನಿಮಗಿದು ಪರೀಕ್ಷೆಯ ಕಾಲ. ಪರ್ಫಾಮೆನ್ಸ್ ಹೇಗಿರುತ್ತೆ ಅನ್ನುವುದರ ಮೇಲೆ ಫಲಿತಾಂಶ ನಿಂತಿರುತ್ತದೆ. ಕೆಲಸದ ಬಗ್ಗೆ ಜಾಗ್ರತೆ ಇರಲಿ. ಅದೃಷ್ಟ ಬಣ್ಣ: ಕಪ್ಪು 4ಅದೃಷ್ಟ ಸಂಖ್ಯೆ:
ಕುಂಭ: ವ್ಯಯ ಗುರು ಅಲ್ಪ ಕಂಟಕಗಳಿವೆ. ನಿಮ್ಮಉದ್ದೇಶ, ಗುರಿ ನಿಚ್ಚಳವಾಗಿರಲಿ. ಅದು ಈಡೇರುವ ವಾತಾವರಣ ನಿರ್ಮಾಣವಾಗುತ್ತೆ. ಹೊಸ ಕಾರ್ಯಕ್ಕೆ ಈಗ ಕೈ ಹಾಕಬೇಡಿ. ಮನೆ, ಮಕ್ಕಳು, ಸಂಬಂಧದ ಬಗ್ಗೆ ಕಾಳಜಿ ಮಾಡಿ. ನಿರ್ಲಕ್ಷಿಸಿದರೆ ಪಾಠ ಕಲಿಯಬೇಕಾಗುತ್ತದೆ. ಭಾನುವಾರ ಶುಭ, ಸೋಮವಾರ ಕೊಂಚ ಕಠಿಣ. ಎಚ್ಚರಿಕೆಯಿಂದಿರಿ. ಅದೃಷ್ಟ ಬಣ್ಣ: ನೀಲಿ ಅದೃಷ್ಟ ಸಂಖ್ಯೆ: 9
ಮೀನ: ಈ ವಾರ ಉಡುಗೊರೆಗಳ ಲಾಭವಾಗಲಿದೆ. ನಿಮ್ಮ ಶಕ್ತಿ, ಉತ್ಸಾಹ ಎಲ್ಲ ಇನ್ನು ಮೂರು ವಾರ ಹೆಚ್ಚಿರುತ್ತೆ. ನಾಯಕನ ಸ್ಥಾನದಲ್ಲಿ ನಿಲ್ಲುವ ಅವಕಾಶ. ಹೊಸ ಕಾರ್ಯಕ್ಕೆ ಸಕಾಲವಲ್ಲ. ಕಷ್ಟದಿಂದ ಸ್ವಲ್ಪಮಟ್ಟಿಗೆ ಹಣ ಉಳಿತಾಯ. ವಾರಾಂತ್ಯದಲ್ಲಿ ಸರ್ಪೈಸ್ ಇರುತ್ತೆ. ಮಹಿಳೆಯರಿಗೆ ಶುಭಫಲ ಅದೃಷ್ಟ ಬಣ್ಣ: ಬಿಳಿ ಅದೃಷ್ಟ ಸಂಖ್ಯೆ: 2
ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937