
ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಸುಕರ್ಮ, ಕರಣ : ಭದ್ರ ಸೂರ್ಯೋದಯ – 06 – 57 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:09 – 18:36, ಯಮಘಂಡ ಕಾಲ 12:47 – 14:14, ಗುಳಿಕ ಕಾಲ 15:42 – 17:09.
ತುಲಾ ರಾಶಿ: ನಿಮ್ಮವರ ಅಶಿಸ್ತಿನ ಕೆಲಸವನ್ನು ನೀವು ಸರಿ ಮಾಡಬೇಕಾಗುವುದು. ಕಾಮಗಾರಿಗಳ ವಿಚಾರದಲ್ಲಿ ದೂರು ಬರಬಹುದು. ಬಳಕೆಯಾಗದ ಭೂಮಿಯಿಂದ ಮಾರಾಟ ಮಾಡಿ ಆದಾಯವನ್ನು ಪಡೆಯುವಿರಿ. ಹಣಕ್ಕಾಗಿ ಇನ್ನೊಬ್ಬರಿಗೆ ಮಾನಸಿಕ ಒತ್ತಡವನ್ನೂ ಹಿಂಸೆಯನ್ನೂ ಕೊಡುವಿರಿ. ಆದಾಯದಲ್ಲಿ ಸ್ಥಿರತೆ ಕಾಣಬಹುದು. ವ್ಯವಸ್ಥಿತ ಯೋಜನೆ ರೂಪಿಸಿದರೆ ಭವಿಷ್ಯದಲ್ಲಿ ಲಾಭ. ಮಾತುಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವ ಸಮಯ. ಕೌಟುಂಬಿಕ ಜೀವನದಲ್ಲಿ ಅಹಂಕಾರಕ್ಕೆ ಅವಕಾಶ ನೀಡಬೇಡಿ. ಹೂಡಿಕೆಯ ಕಡೆ ಅಧಿಕ ಆಲೋಚನೆ ಮಾಡುವಿರಿ. ಗೌಪ್ಯವಾಗಿ ನಿಮಗೆ ಹಣವು ಸಿಗಲಿದೆ. ಅದನ್ನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಸಮಯವನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳಿಗೆ ಹೇಳಿ. ಮನೆಯಲ್ಲಿ ಇದ್ದು ಕೆಲಸ ಮಾಡುವವರಿಗೆ ಬಂಧನದಂತೆ ಅನ್ನಿಸಬಹುದು. ದಾನದಿಂದ ನಿಮಗೆ ಪ್ರಶಂಸೆಯು ಸಿಗುವುದು. ಆಭರಣಗಳನ್ನು ಖರೀದಿಸುವ ಇಚ್ಛೆ ಇದ್ದರೆ ಖರೀದಿಸಬಹುದು. ಸಲ್ಲದ ಮಾತುಗಳನ್ನಾಡಿ ಅನಂತರ ಪಶ್ಚಾತ್ತಾಪಪಡುವಿರಿ.
ವೃಶ್ಚಿಕ ರಾಶಿ: ಆದಾಯವು ಕಡಿಮೆ ಇದ್ದರೂ ಖರ್ಚನ್ನು ಮಾಡಲು ಯಾವುದೇ ಹಿಂಜರಿಕೆ ಇರದು. ಹಣವು ಹೆಚ್ಚಾಗುತ್ತದೆ ಎಂಬ ಸ್ಥೈರ್ಯವು ಇರುವುದು. ವೃತ್ತಿ ಜೀವನದಲ್ಲಿ ಹೊಸ ಹೊಣೆಗಾರಿಕೆಗಳನ್ನು ನಿರ್ವಹಣೆ. ಆರ್ಥಿಕವಾಗಿ ಲಾಭದಾಯಕ ದಿನ, ಹಳೆಯ ಸಾಲ ತೀರಿಸುವ ಅವಕಾಶ. ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅಂದುಕೊಂಡ ಕಾರ್ಯವು ಮುಗಿಯುತ್ತ ಇರುವಾಗಲೇ ಯಾರಾದರೂ ಅಡ್ಡಿ ಮಾಡುವರು. ಸ್ನೇಹಿತರ ಸಲಹೆಯ ಆಧಾರದ ಮೇಲೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಿರಿ. ಯಾರನ್ನೋ ಮೆಚ್ಚಿಸಲು ಹೋಗಿ ನಿಮ್ಮ ಸಮಯವು ವ್ಯರ್ಥವಾದೀತು. ಸಂದರ್ಭದಲ್ಲಿ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಆಪ್ತರ ಜೊತೆಗಿನ ಬಿಚ್ಚು ಮನಸ್ಸಿನ ಮಾತುಕತೆಯಿಂದ ನಿಮ್ಮ ಭಾರವಾದ ಮನಸ್ಸು ಹಗುರಾಗುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಬಾರದು. ಇಂದು ಸ್ತ್ರೀಯರಿಂದ ಸುಖವನ್ನು ಅನುಭವಿಸುವಿರಿ. ನಿಮ್ಮ
ಧನು ರಾಶಿ: ಪ್ರಭಾವೀ ವ್ಯಕ್ತಿಗಳ ಕಡೆಯಿಂದ ನಿಮಗೆ ಕೆಲಸವು ಸಿಗಬಹುದು. ಅಪಮಾನವನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಅವಿವಾಹಿತರು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ, ದಿನಚರಿಯಲ್ಲಿ ತಾಳ್ಮೆ ವಹಿಸಿ. ಮನೆಯವರ ಸಹಕಾರದಿಂದ ನಿಮ್ಮ ಸಮಸ್ಯೆ ಪರಿಹಾರ. ನಿಮ್ಮ ಧೈರ್ಯ ಮತ್ತು ದೃಢ ನಿಲುವು ಯಶಸ್ಸಿನ ಮೂಲಮಂತ್ರ. ನೂತನ ವಸ್ತುಗಳನ್ನು ಪಡೆದು ಸಂತೋಷಪಡುವಿರಿ. ಗೌರವಾದಿಗಳು ಸಿಕ್ಕಿ ಸಂತೋಪಡುವಿರಿ. ನೀವು ಅಂದುಕೊಂಡ ಹಾಗೆಯೇ ನಡೆಯದು. ಅಮೂಲ್ಯ ವಸ್ತುಗಳನ್ನು ಎಲ್ಲಿಯೋ ಇಟ್ಟು ಹುಡುಕುವಿರಿ. ಧಾರ್ಮಿಕ ಆಚರಣೆಗಳನ್ನು ಹೆಚ್ಚು ಮಾಡಲು ಮನಸ್ಸಾಗುವುದು. ನಿಮ್ಮ ವಾಹನವನ್ನು ಚಲಾಯಿಸಲು ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಹೆಚ್ಚು ಹೇಳುವರು. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆ ಆಗುವುದು. ಸಾಹಿತ್ಯಸಲ್ಲಿ ಆಸಕ್ತಿ ಇರುವವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು.
ಮಕರ ರಾಶಿ: ಶತ್ರುಗಳ ಕಾಟವು ಇಲ್ಲದಿದ್ದರೂ ಅವರ ಬಗ್ಗೆ ಕುತೂಹಲ, ಅನುಮಾನ ಬರುವುದು. ಮಿತ್ರರ ಭೂಮಿಯ ಖರೀದಿಗೆ ಸಹಾಯ. ಸ್ತ್ರೀಯರು ತಮ್ಮ ಇಷ್ಟದ ಕಾರ್ಯದಲ್ಲಿ ಮುಳುಗುವರು. ಅಪರಿಚಿತರೇ ನಿಮಗೆ ಆಗಿಬರಬಹುದು. ಅನ್ಯೋನ್ಯತೆ ಹುಟ್ಟುವುದು. ಉದ್ವೇಗಕ್ಕೆ ವಶವಾಗದೇ ಬುದ್ದಿವಂತಿಕೆಯಿಂದ ನಿಮ್ಮ ಕಾರ್ಯವನ್ನು ಮುನ್ನಡೆಸಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ, ಹೊಸ ಆದಾಯದ ಅವಕಾಶ ಇರುತ್ತದೆ. ವೃತ್ತಿಯ ಅಭಿವೃದ್ಧಿಗೆ ನೂತನ ಅವಕಾಶಗಳು ಲಭ್ಯ. ತಮ್ಮ ಉದ್ಯಮವನ್ನು ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಜನಪ್ರಿಯ ಗೊಳಿಸಿಕೊಳ್ಳುವರು. ಮಕ್ಕಳನ್ನು ದೂರ ಕಳಿಸುವುದು ನಿಮಗೆ ಇಷ್ಟವಾಗದು. ಎಲ್ಲವನ್ನೂ ನೀವೇ ಮಾಡಬೇಕು ಎನ್ನುವ ಮಾನಸಿಕತೆ ಬೇಡ. ಒಂಟಿತನವು ಇಷ್ಟವಾಗುವುದು. ಕುರುಡು ನಂಬಿಕೆಯಿಂದ ನಿಮಗೆ ಇಷ್ಟವಾಗುವುದು. ಕುಟುಂಬದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಗೌಪ್ಯವಾಗಿ ಇರುವುದು. ಸಿಟ್ಟನ್ನು ಯಾರದೋ ಮೇಲೆ ತೀರಿಸಿಕೊಂಡು ಸಮಾಧಾನಪಡುವಿರಿ. ಹಿರಿಯರ ಮಾತಿನಿಂದ ಪ್ರೇರಣೆ ಸಿಗಲಿದೆ.
ಕುಂಭ ರಾಶಿ: ಇಂದಿನ ಅನಿರೀಕ್ಷಿತ ಖರ್ಚಿನಿಂದ ವಿಚಲಿತರಾಗುವಿರಿ. ಸರಳತೆಯನ್ನು ರೂಢಿಸಿಕೊಳ್ಳಬೇಕು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಲು ಸಂಕಲ್ಪ. ಪ್ರಯತ್ನಿಸಿದರೆ ಹೊಸ ಅವಕಾಶಗಳು ಎದುರಾಗಬಹುದು. ನಿಮ್ಮ ಪರಿಶ್ರಮಕ್ಕೆ ಇಂದು ಫಲಿತಾಂಶ ದೊರೆಯಬಹುದು. ಆರ್ಥಿಕ ಅಭಿವೃದ್ಧಿಗೆ ಹೊಸ ಆಯ್ಕೆಗಳನ್ನು ಅನ್ವೇಷಿಸುವಿರಿ. ಕುಟುಂಬ ಜೊತೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಭೂಮಿಯ ಉತ್ಪನ್ನದಿಂದ ಕೆಲವು ಅದಾಯವು ಸಿಗಬಹುದು. ಬಂಧುಗಳ ಅನಾರೋಗ್ಯದ ಕಾರಣ ನೀವು ಧನಸಹಾಯವನ್ನು ಮಾಡಬೇಕಾದೀತು. ನಿಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವಿರಿ. ಹೊಸ ಸಾಲಕ್ಕೂ ಮೊದಲು ಹಳೆಯದನ್ನು ದೂರಮಾಡಿಕೊಳ್ಳುವುದು ಉತ್ತಮ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯು ಇಲ್ಲವಾಗಬಹುದು. ಮಾತಿನಲ್ಲಿ ಪೇಲವ ಬೇಡ. ದೃಢತೆಯಿಂದ ಮಾತನಾಡಿ. ನೀವೇ ಆಯ್ಕೆ ಮಾಡಿಕೊಂಡ ಕೆಲಸದಲ್ಲಿ ಆಸಕ್ತಿಯು ಕಡಿಮೆ ಇರುವುದು. ನಿಮ್ಮ ನಿರ್ಧಾರಗಳು ಬಲವಾದಂತೆ ಕಾರ್ಯಗಳಲ್ಲಿಯೂ ದೃಢತೆ ಇರಲಿ.
ಮೀನ ರಾಶಿ: ಇಂದು ವಾದದಲ್ಲಿ ಸೋಲನ್ನು ಒಪ್ಪಿಕೊಂಡು ಗೆಲುವಿಗಾಗಿ ಪ್ರಯತ್ನಿಸುವಿರಿ. ಉದ್ಯಮದಲ್ಲಿ ಜಾಣ್ಮೆಯಿಂದ ವ್ಯವಹರಿಸುವಿರಿ. ಉನ್ನತ ವಿದ್ಯಾಭ್ಯಾಸದ ಕಾರಣ ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಇಂದು ಸಂಯಮವನ್ನು ಹೊಂದಿರುವುದು ಅವಶ್ಯಕ. ಹೊಸ ಉತ್ಸಾಹದಿಂದ ಕಾರ್ಯಗಳು ಕೈಗೂಡುವುದು. ಆರ್ಥಿಕವಾಗಿ ನಿರೀಕ್ಷಿತ ಲಾಭ ದೊರಕುವ ಸಾಧ್ಯತೆ ಇದೆ. ಕೌಟುಂಬಿಕ ವಿಚಾರದಲ್ಲಿ ಸಾಮರಸ್ಯ ಹೆಚ್ಚಾಗಬಹುದು. ಹೊಸ ವ್ಯವಹಾರ ಶುರು ಮಾಡಲು ಚಿಂತನೆ. ತಾಯಿಯ ಕಡೆಯಿಂದ ನಿಮಗೆ ಆಸ್ತಿಯು ಲಭಿಸುವುದು. ಅಂದುಕೊಂಡ ಕಾರ್ಯಕ್ಕೆ ಬೆಂಬಲು ಪೂರ್ಣವಾಗಿ ಸಿಗದು. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಕು ಎಂಬುದು ಗೊತ್ತಾಗದು. ಅತಿಥಿ ಸತ್ಕಾರದಿಂದ ಖುಷಿಯಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ ಇರುವುದು. ಪತ್ನಿಯ ಅನವಶ್ಯಕ ಖರ್ಚಿಗೆ ಕಡಿವಾಣವನ್ನು ಹಾಕಬೇಕಾದೀತು. ಇದಕ್ಕಾಗಿ ಕೂಗಾಡಿಕೊಳ್ಳಬಹುದು. ಮಕ್ಕಳ ಬಗ್ಗೆ ನಿಮ್ಮ ಲಕ್ಷ್ಯವು ಇರಲಿ.