Horoscope: ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಸದರಾಗುವುದು ಬೇಡ
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್ 14: ನೀವು ಇಂದು ಯಾವುದನ್ನೂ ಪರಿಸ್ಥಿತಿಯ ಮೇಲೆ ಅಳೆಯಲು ಆಗದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಹಾಗಾದರೆ ಡಿಸೆಂಬರ್ 14ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 50 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:39 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 ರಿಂದ 03:16 ರವರೆಗೆ, ಗುಳಿಕ ಕಾಲ ಸಂಜೆ 06:50 ರಿಂದ 08:15 ರವರೆಗೆ.
ತುಲಾ ರಾಶಿ: ಹಿಡಿತ ಸಾಧಿಸುವುದು ಅಷ್ಟು ಸುಲಭದ್ದಾಗದು. ನಿಮ್ಮ ಮರೆವಿನಿಂದ ಕೆಲವು ಮುಖ್ಯವಾದ ವಸ್ತುವನ್ನೇ ಕಳೆದುಕೊಳ್ಳಬಹುದು. ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಇಂದು ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವಿರಿ. ವ್ಯಕ್ತಿಗತ ಅಭಿಪ್ರಾಯದಿಂದ ನಿಮಗೆ ಯಾವ ನಷ್ಟವೂ ಆಗದು. ಎಲ್ಲರನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವ್ಯರ್ಥ ತಿರುಗಾಟವನ್ನು ಮಾಡುವರು. ಉತ್ತಮ ಭೂಮಿಯ ಖರೀದಿಗೆ ಬಂಧುಗಳ ಸಲಹೆ ಪಡೆಯಿರಿ. ಇಂದು ನಿಮ್ಮ ಶ್ರಮದ ಕಾರ್ಯಗಳು ನಿರರ್ಥಕವಾಗಬಹುದು. ತೊಂದರೆಗಳನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಳ್ಳುವಿರಿ. ನೀವು ಬಿಟ್ಟ ಬಾಣವು ಗುರಿಯ ಕಡಗೆ ಇದೆಯೇ ಎಂದು ತಿಳಿಯಿರಿ.
ವೃಶ್ಚಿಕ ರಾಶಿ: ಹೊಸ ಕಾರ್ಯಗಳಿಗೆ ನಿಮ್ಮನ್ನು ಮುಖಮಾಡಿಕೊಳ್ಳುಬಿರಿ. ಏಕಾಗ್ರತೆಯನ್ನು ನೀವು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಜವಾಬ್ದಾರಿಗಳು ನಿಮಗೆ ಭಾರವೆನಿಸಿ ಅದನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ಉದ್ಯೋಗದ ಸ್ಥಳದಲ್ಲಿ ಮಿತವಾದ ಮಾತುಗಳನ್ನು ಆಡಬೇಕಾದೀತು. ವಾಹನ ಚಾಲನೆಯನ್ನು ಸುರಕ್ಷಿತವಾಗಿ ಮಾಡಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ಸಂಗಾತಿಗೆ ಕಿರಿಕಿರಿ ಉಂಟಾಗುವಂತೆ ಮಾಡುವಿರಿ. ಎಲ್ಲ ತಪ್ಪುಗಳಿಗೂ ನಿಮ್ಮನ್ನೇ ಬೆರಳು ಮಾಡಿ ತೋರಿಸಬಹುದು. ಮಾಧ್ಯಮದ ಉದ್ಯೋಗಿಗಳಿಗೆ ಹೆಚ್ಚು ಒತ್ತಡ ಇರಲಿದೆ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸಲು ವಿಫಲರಾಗುವಿರಿ. ಯಾರದೋ ಮಾತಿಗೆ ಉದ್ವೇಗಕ್ಕೆ ಒಳಗಾಗುವಿರಿ. ನಿಮ್ಮ ನಾಜೂಕಿನ ಕಾರ್ಯಗಳು ಎಲ್ಲರಿಗೂ ಇಷ್ಟವಾಗುವುದು. ಭೂ ವ್ಯವಹಾರದಲ್ಲಿ ಯಶಸ್ಸು ಸಿಗುವುದು.
ಧನು ರಾಶಿ: ಇಂದು ಸೌಹಾರ್ದತೆಗೆ ಗೆಳೆತನವಾಗದು. ನಿಮ್ಮ ದೂರದೃಷ್ಟಿಯಿಂದ ನಿಮ್ಮ ಗುರಿ ಬದಲಾಗುವುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ನಿಮ್ಮ ಭಾವನೆಗಳನ್ನು ಯಾರ ಜೊತೆಯೂ ಪ್ರಕಟಗೊಳಿಸುವುದಿಲ್ಲ. ಅಲ್ಪ ಲಾಭಕ್ಕೆ ನೀವು ತೃಪ್ತಿ ಪಡಬೇಕಾಗುವುದು. ಸ್ತ್ರೀಯರ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರಬೇಕಾಗುವುದು. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ. ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆಗಳು ಆಗಬಹುದು. ಇಂದು ನೀವು ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ. ಅತಿಥಿ ಸತ್ಕಾರವನ್ನು ಮಾಡಲು ಉತ್ಸಾಹವಿರುವುದು. ಉದ್ಯಮಕ್ಕೆ ಸಂಬಂಧಿಸಿದಂತೆ ನಿಮ್ಮ ಯೋಜನೆಯನ್ನು ಯಾರಾದರೂ ಬದಲಿಸಿಯಾರು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು.
ಮಕರ ರಾಶಿ: ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ಸದರಾಗುವುದು ಬೇಡ. ನಿಮ್ಮ ದೃಷ್ಟಿಯು ಬದಲಾದರೆ ಎಲ್ಲವೂ ಬದಲಾಗುವುದು. ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಹಿಳೆಯರು ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುವುದು. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು. ಕುಟುಂಬದ ಜೊತೆ ಬಹಳ ದಿನಗಳ ಅನಂತರ ಸಂಯೋಷದ ಸಮಯವನ್ನು ಕಳೆಯುವಿರಿ. ಸಂಗಾತಿಯನ್ನು ಹೂಡಿಕೆಗೆ ಪ್ರೇರಿಸುವಿರಿ. ವಿದ್ಯಾರ್ಥಿಗಳ ಪ್ರತಿಭೆ ಪುರಸ್ಕಾರವು ಲಭ್ಯವಾಗುವುದು. ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಪ್ರಾಮಾಣಿಕತೆಯು ನಿಮ್ಮನ್ನು ಗೆಲ್ಲಿಸುವುದು. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು.
ಕುಂಭ ರಾಶಿ: ಇಂದು ಗೊತ್ತಿಲ್ಲದ ವ್ಯವಹಾರದಿಂದ ನಿಮಗೆ ಮುಖಭಂಗ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಇಷ್ಟವಾದ ಸ್ಥಳಕ್ಕೆ ನೀವು ಅಕಸ್ಮಾತ್ ಭೇಟಿ. ಸಮಯವನ್ನು ನೀವು ವ್ಯರ್ಥ ಮಾಡಿಕೊಳ್ಳುವಿರಿ. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳಬಹುದು. ಕಛೇರಿಯ ಕೆಲಸಗಳನ್ನು ಮುಗಿಸಲು ಹೆಚ್ಚು ಸಮಯವನ್ನು ತೆಗದುಕೊಳ್ಳುವಿರಿ. ನಿಮ್ಮ ಹಳೆಯ ವಸ್ತುಗಳನ್ನು ಯಾರಿಗಾದರೂ ನಿಶ್ಶುಲ್ಕವಾಗಿ ಕೊಡುವಿರಿ. ನಿಮ್ಮ ವಿವಾಹದ ಬಗ್ಗೆ ಬಿಸಿಬಿಸಿ ಚರ್ಚೆಯು ಮನೆಯಲ್ಲಿ ನಡೆಯುವುದು. ಇಂದು ಯಾರಾದರೂ ನಿಮ್ಮ ಸಹಾಯಕ್ಕೆ ಬರಬಹುದು. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು. ಸಂಗಾತಿಯ ಬಗ್ಗೆ ಪೂರ್ವಾಗ್ರಹವು ಇರುವ ಕಾರಣ ಯಾವ ಇಷ್ಟವಾಗದು.
ಮೀನ ರಾಶಿ: ನೀವು ಇಂದು ಯಾವುದನ್ನೂ ಪರಿಸ್ಥಿತಿಯ ಮೇಲೆ ಅಳೆಯಲು ಆಗದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತೊಂದರೆ ಆದೀತು. ಮನೆಯನ್ನು ಬದಲಿಸಬೇಕಾಗುವುದು. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು. ನಿಮ್ಮದಲ್ಲದ ದ್ರವ್ಯವನ್ನು ನೀವು ಇಟ್ಟುಕೊಳ್ಳಲು ಬಯಸುವುದಿಲ್ಲ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಆಗದು. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸುವಿರಿ. ಯಾರಾದರೂ ನಿಮ್ಮನ್ನು ಕೆರಳಿಸುವಂತೆ ಮಾಡಿಯಾರು. ತಂತ್ರಜ್ಞರಿಗೆ ಸಿಹಿ ಸುದ್ದಿಯು ಕಾದಿರುವುದು. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ.