Horoscope: ಈ ರಾಶಿಯವರು ಪಿತ್ರಾರ್ಜಿತ ಆಸ್ತಿಗಾಗಿ ಆಸೆ ಪಡುವಿರಿ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್​ 12: ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಪ್ರಾಪ್ತವಾಗುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಹಾಗಾದರೆ ಡಿಸೆಂಬರ್​ 12ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರು ಪಿತ್ರಾರ್ಜಿತ ಆಸ್ತಿಗಾಗಿ ಆಸೆ ಪಡುವಿರಿ
ಈ ರಾಶಿಯವರು ಪಿತ್ರಾರ್ಜಿತ ಆಸ್ತಿಗಾಗಿ ಆಸೆ ಪಡುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 12, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಪರಿಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:49 ರಿಂದ 08:14 ರವರೆಗೆ, ಗುಳಿಕ ಕಾಲ 09:38 ರಿಂದ 11:02 ರವರೆಗೆ.

ತುಲಾ ರಾಶಿ: ದಿಕ್ಕು ತೋಚದೇ ಸ್ತಬ್ಧರಾಗುವ ಸ್ಥಿತಿ ಬರಬಹುದು. ಇಂದಿನ ನಿಮ್ಮ ಕಾರ್ಯಗಳಿಗೆ ಜೊತೆಗಾರರು ಸಿಗಬಹುದು. ಮನಃಸ್ಥಿತಿಯು ಸರಿ ಇಲ್ಲದ ಕಾರಣ ನೌಕರರ‌ ಮೇಲೆ ಸಿಟ್ಟಾಗುವಿರಿ. ಸಂಗಾತಿಯ ಮಾತಿಗೆ ಸ್ಪಂದನೆಯೂ ಇರದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು. ಪಿತ್ರಾರ್ಜಿತ ಆಸ್ತಿಗಾಗಿ ನೀವು ಆಸೆ ಪಡುವಿರಿ. ನಿಮ್ಮ ಚರಾಸ್ತಿಯು ನಷ್ಟವಾಗುವುದು. ಉದ್ಯೋಗದ ಸ್ಥಳದಲ್ಲಿ ನೀವು ಹೆಚ್ಚು ಓಡಾಟ ಮಾಡಬೇಕಾದೀತು. ಅಶಿಕ್ಷಿತರ ಜೊತೆ ಸುಮ್ಮನೇ ಕಲಹವಾಡುವಿರಿ. ಅಸಾಧ್ಯ ಎನಿಸಿದ್ದನ್ನು ಸುಮ್ಮನೇ ಮಾಡಲು ಹೋಗುವುದು ಬೇಡ. ಚಿಂತೆಗಳೇ ಇರುವ ಮನಸ್ಸಿನಲ್ಲಿ ದೇವರ ಭಕ್ತಿಯನ್ನು ತುಂಬಿಕೊಂಡು ಸಮಾಧಾನದಿಂದ ಇರಿ. ನಿಮ್ಮ ಶುಷ್ಕ ಮಾತು ಇತರರಿಗೆ ಇಷ್ಟವಾಗದು. ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.

ವೃಶ್ಚಿಕ ರಾಶಿ: ಅದಮ್ಯ ಚೈತನ್ಯವನ್ನು ಹೊರಹಾಕುವ ಕಾಲ ಬರಬಹುದು. ಯಶಸ್ಸಿಗಾಗಿಯೇ ಮಾಡುವ ಕಾರ್ಯದಿಂದ ಅಪಯಶಸ್ಸು ಸಿಗುವುದು. ಸರ್ಕಾರಿ ಉದ್ಯೋಗಿಗಳಿಗೆ ಇನ್ನೊಂದಿಷ್ಟು ಜವಾಬ್ದಾರಿಯು ಬರಬಹುದು. ಉತ್ತಮ‌ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ಇಂದು ನಿಮ್ಮ ಆರ್ಥಿಕತೆಯ ಸ್ಥಿತಿಯು ದರಿಯಾ ಗೊತ್ತಾಗಲಿದೆ. ಆಕಸ್ಮಿಕವಾಗಿ ಬರುವ ಹಣವನ್ನು ಭವಿಷ್ಯಕ್ಕಾಗಿ ಕೂಡಿ ಇಡುವಿರಿ. ಖಾಸಗಿ ಸಂಸ್ಥೆಯಲ್ಲಿ ನಿಮ್ಮ ಸ್ಥಾನವು ಏರಲಿದೆ. ಅಧಿಕಾರ ಇದೆ ಎಂದು ಏನನ್ನಾದರೂ ಹೇಳುವುದು ಬೇಡ. ಉದ್ಯಮದಲ್ಲಿ ಊಹಿಸಲಾಗದ ಸಮಸ್ಯೆಯನ್ನು ತಂದು ಕೊಳ್ಳುವಿರಿ. ತಜ್ಞರಿಂದ ಅದನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಯಾರನ್ನೋ ಅನುಕರಿಸುತ್ತ ನೀವು ಸಂತೋಷವನ್ನು ಪಡುವಿರಿ. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು.

ಧನು ರಾಶಿ: ನಿಮ್ಮ ಪರವಾಗಿ ಯಾರೂ ನಿಲ್ಲದಿರುವುದು ಬೇಸರ ತರಿಸಬಹುದು. ಇತರರ ಕೆಂಗಣ್ಣಿಗೆ ಬೀಳಬಹುದು. ನಿಮ್ಮ ಕಾರ್ಯವು ವಿಳಂಬವಾಗಲು ಕಾರ್ಮಿಕರು ಕಾರಣವಾಗುವರು. ಅವರ ಮೇಲೆ ಸಿಟ್ಟಗುವಿರಿ. ಮಾತಿನ ಮಿತಿಯನ್ನೂ ಮೀರಬಹುದು. ಹೂಡಿಕೆಯ ಚಿಂತನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಪಕ್ಷಪಾತ ಮನಃಸ್ಥಿತಿಯು ನಿಮಗೆ ಶೋಭೆ ತರದು. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಒಂಟಿತನವು ನಿಮಗೆ ಇಷ್ಟವಾಗದು. ಇನ್ನೊಬ್ಬರ ನೋವನ್ನು ಕಂಡೂ ನೀವು ಸುಮ್ಮನಿರುವುದು ಬೇಡ. ಸೇವಾ ಮನೋಭಾವವು ನಿಮ್ಮಲ್ಲಿ ಕಡಿಮೆ ಇರುವುದು. ಮನೆಯ ಜವಾಬ್ದಾರಿಯನ್ನೂ ನಿವು ತೆಗೆದುಕೊಳ್ಳಲು ಇಷ್ಟಪಡಲಾರಿರಿ. ಸ್ನೇಹಿತರು ಹಳೆಯ ಹಣಕಾಸಿನ ವಿಚಾರಕ್ಕೆ ಜಗಳವಾಡುವರು. ಆದಾಯದ ಮೂಲವನ್ನು ನೀವು ಗಟ್ಟಿ ಮಾಡಿಕೊಳ್ಳಿ. ಹೊಸ ವಸ್ತುಗಳನ್ನು ಖರೀದಿಸುವಾಗ ವಂಚನೆಯಾಗುವುದು.

ಮಕರ ರಾಶಿ: ತಪ್ಪಿಗೆ ಹಿರಿಯರ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕಾಗುವುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಎಷ್ಟೇ ಒತ್ತಾಯ ಮಾಡಿದರೂ ಮಾಡಲಾರಿರಿ. ನಿಮಗೆ ಇಂದು ದಣಿವಾಗುವ ಸಾಧ್ಯತೆ ಹೆಚ್ಚಿದೆ. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ಸಾಲ ಕೊಟ್ಟವರು ಏನೂ ಹೇಳದೇ ಇರುವುದರಿಂದ ನಿಮಗೆ ಸ್ವಲ್ಪ ನೆಮ್ಮದಿ ಸಿಗಲಿದೆ. ನೀವು ಇಂದು ಪಕ್ಷಪಾತಕ್ಕೆ ಹೆಸರಾಗಬಹುದು. ದೂರ ಪ್ರಯಾಣವು ನಿಮಗೆ ನೋವನ್ನು ತರಬಹುದು. ಅನಿರೀಕ್ಷಿತ ಸಂಪತ್ತನ್ನು ತಂದೆಯಿಂದ ಪಡೆಯುವಿರಿ. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸಬೇಕಾಗುವುದು. ನಿಮಗೆ ಉಂಟಾದ ಅನುಕೂಲ ಸ್ಥಿತಿಯನ್ನು ನೀವು ಪುಣ್ಯವೆಂದು ತಿಳಿಯುವಿರಿ‌. ಬೇರೆಯವರನ್ನು ಆಶ್ರಯಿಸುವುದು ನಿಮಗೆ ಇಷ್ಟವಾಗದ ವಿಚಾರವಾಗಿದೆ. ನಿಮ್ಮಿಂದ ಆಗದಿರುವುದನ್ನು ಅನ್ಯರು ಮಾಡಿ ತೋರಿಸಿ ಅಪಮಾನ ಮಾಡಬಹುದು.

ಕುಂಭ ರಾಶಿ: ತಾತ್ಕಾಲಿಕ ಉದ್ಯೋಗವನ್ನು ಕೈಬಿಡುವಿರಿ. ಇಂದು ನೀವು ಅತಿಯಾದ ಒತ್ತಡವನ್ನು ತಂದುಕೊಳ್ಳುವ ಅಗತ್ಯ ಇಲ್ಲ. ನೀವು ನೆಪವೊಡ್ಡಿ ಯಾವುದೇ ಕಾರ್ಯದಲ್ಲಿ ತೊಡಗಲಾರಿರಿ. ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ. ಮನೋವ್ಯಥೆಯಿಂದ ನಿಮಗೆ ಬಹಳಷ್ಟು ತೊಂದರೆಗಳು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ. ಸಂಗಾತಿಯ ಮಾತಿನಲ್ಲಿ ನಿಮಗೆ ನಂಬಿಕೆ ಬರದು. ನಿಮ್ಮೊಳಗೇ ಇಟ್ಟುಕೊಂಡ ಅಸಮಾಧಾನವನ್ನು ಹೊರಹಾಕುವಿರಿ. ಕಳೆದು ಹೋದುದರ ಬಗ್ಗೆ ಅತಿಯಾಗಿ ಆಲೋಚಿಸಿ ಫಲವಿಲ್ಲ. ಹಠಮಾರಿ ಸ್ವಭಾವದಿಂದ ಮನೆಯಲ್ಲಿ ತೊಂದರೆ ಆದೀತು. ಕೆಲವು ಸಂಗತಿಗಳನ್ನು ನೀವು ಬಿಡಬೇಕು ಎಂದುಕೊಂಡರೂ ಅದು ಆಗದು. ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಿ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ.

ಮೀನ ರಾಶಿ: ಏನೂ ಇಲ್ಲದೇ ದಿನವನ್ನು ಕಳೆಯುವುದು ಕಷ್ಟವಾಗುವುದು. ನಿಮಗೆ ಇಂದು ವಿಶ್ರಾಂತಿಯನ್ನು ಪಡೆಯುವ ಕಾಲ. ಇಂದು ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ತಾರತಮ್ಯ ಭಾವವನ್ನು ತೋರಿಸಬೇಡಿ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಪ್ರಾಪ್ತವಾಗುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ದೂರವಾಣಿಯ ಬಳಕೆಯನ್ನು ಕಡಿಮೆ‌ ಮಾಡಬೇಕು ಎಂದೆನಿಸುವುದು. ಸಂಗಾತಿಯ ಮಾನಸಿಕತೆಯು ನಿಮಗೆ ಗೊತ್ತಾಗದು. ಬಂಧುಗಳನ್ನು ಭೇಟಿಯಾಗಿ ಸ್ವಲ್ಪ ಹಗುರಾಗುವಿರಿ. ವರ್ತಮಾನದ ಘಟನೆಗಳು ತಿಳಿದಿದ್ದರೂ ಗೊತ್ತಿಲ್ಲದವರಂತೆ ಇರುವಿರಿ. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ