Horoscope Today 12 December 2024: ಈ ರಾಶಿಯವರಿಗೆ ಇಂದು ಆತಂಕದ ದಿನ: ಹುಷಾರಾಗಿರಿ!
12 ಡಿಸೆಂಬರ್ 2024: ಗುರುವಾರದಂದು ದ್ವಾದಶ ರಾಶಿಗಳ ರಾಶಿಫಲ ಹೇಗಿದೆ? ಜಾತಕವನ್ನು ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಮೇಷದಿಂದ ಮೀನ ರಾಶಿಯವರಿಗೆ ಇಂದು ಏನು ಫಲ? ಎನ್ನುವುದನ್ನು ತಿಳಿದುಕೊಳ್ಳಿ. ಹಾಗೇ ನಿತ್ಯಪಂಚಾಂಗದಲ್ಲಿ ಗುಳಿಕ ಕಾಲ, ರಾಹುಕಾಲ ಹಾಗೂ ಯಮಘಂಡ ಕಾಲದ ಬಗ್ಗೆಯೂ ತಿಳಿಯಿರಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಪರಿಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 49 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:51 ರಿಂದ 03:15ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:49 ರಿಂದ 08:14 ರವರೆಗೆ, ಗುಳಿಕ ಕಾಲ 09:38 ರಿಂದ 11:02 ರವರೆಗೆ.
ಮೇಷ ರಾಶಿ: ಬೇಕಾದ ಕಡೆಯಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲಾಗದು. ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ಅಸ್ತವ್ಯಸ್ತವಾದ ವ್ಯವಹಾರವನ್ನು ಸುಸ್ಥಿತಿಗೆ ತರಲು ಪ್ರಯತ್ನಿಸುವಿರಿ. ಯಾರದರೂ ನಿಮಗೆ ಸವಾಲು ಹಾಕಬಹುದು. ದೇಹಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಕಾಣಿಸಿಕೊಳ್ಳುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಯಾವದೇ ಅಪಶಬ್ದಗಳನ್ನು ಆಡಿ ವಾದವನ್ನು ದೊಡ್ಡ ಮಾಡಿಕೊಳ್ಳುವುದು ಬೇಡ. ಅಂದುಕೊಂಡಿದ್ದನ್ನು ಪಡೆಯುವ ತನಕ ತೃಪ್ತಿ ಕಾಣಿಸದು. ಮನೆಯ ಬಗ್ಗೆ ಚಿಂತಿಸಿ ನೀವು ಕಾಲಹರಣ ಮಾಡುವಿರಿ. ಆಗಿಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಸಂಕಟಪಡುವಿರಿ. ಮನಸ್ಸನ್ನು ಕಾರ್ಯದಲ್ಲಿ ನಿಲ್ಲಿಸಲು ಕಷ್ಟವಾದೀತು. ಮನೆಯ ಜವಾಬ್ದಾರಿಯು ನಿಮಗೆ ಅನಿರೀಕ್ಷಿತವಾಗಿ ಬರಬಹುದು. ಹಲವಾರು ವರ್ಷದ ಕನಸಿಗೆ ಗರಿಬಂದಂತೆ ಆಗಬಹುದು.
ವೃಷಭ ರಾಶಿ: ವಿದ್ಯತ್ ನ ಭೀತಿ ಕಾಣಿಸುವುದು. ವಿದ್ಯಾಭ್ಯಾಸವನ್ನು ಮುಂದುವರಿಸುವುದು ಕಷ್ಟವಾಗಬಹುದು. ನಿಮ್ಮ ಸಣ್ಣ ವ್ಯಾಪಾರವನ್ನು ವಿಸ್ತರಿಸಲಿದ್ದೀರಿ. ನಿಮ್ಮನ್ನು ಕೇಳಿಕೊಂಡು ಯಾರಾದರೂ ಅಪರಿಚಿತರು ಬರಬಹುದು. ತೊಂದರೆಯನ್ನು ಎದುರಿಸಿ, ನಿಮ್ಮಷ್ಟಕ್ಕೆ ಸಮಾಧಾನ ತಂದುಕೊಳ್ಳುವಿರಿ. ಯಾರನ್ನಾದರೂ ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮಗೇ ನೆರವು ಬೇಕಾಗಿದ್ದರೂ ಇನ್ನೊಬ್ಬರ ಸಹಾಯಕ್ಕೆ ಹೋಗುವಿರಿ. ನಿಮ್ಮ ವಿರೋಧಿಗಳ ಸಂಖ್ಯೆ ಕಡಿಮೆಯಾಗುವುದು. ನಿಮ್ಮ ಇಂದಿನ ಕಾರ್ಯವು ಕ್ರಮಬದ್ಧವಾಗಿ ಇರಲಿ. ಮಾಡಿದ ತಪ್ಪನ್ನೇ ಮತ್ತೆ ಮಾಡಿ ಮನೆಯಲ್ಲಿ ಬೈಸಿಕೊಳ್ಳುವಿರಿ. ಆರೋಗ್ಯವಾಗಿ ಇರಬೇಕೆಂದು ಹೆಚ್ಚು ನಿದ್ರೆ ಮಾಡುವಿರಿ. ಕಲಿತ ವಿದ್ಯೆಗಳನ್ನು ಎಲ್ಲಿಯಾದರೂ ಬಳಸಲು ನೋಡುವಿರಿ. ನಿಮ್ಮದಾದ ವಾಹನವಿಲ್ಲದೇ ನಿಮಗೆ ಬೇಸರವಾದೀತು. ಬಂಧುಗಳು ನಿಮ್ಮ ಬಗ್ಗೆ ತಪ್ಪು ತಿಳಿಯುವರು. ಮಿತವಾದ ಮಾತು ನಿಮಗೆ ಆಗದು.
ಮಿಥುನ ರಾಶಿ: ಅವಕಾಶಗಳು ನಿಮಗೆ ಬಾಗಿಲು ಹಾಕಿದಂತೆ ಭಾಸವಾಗುವುದು. ದುರಭ್ಯಾಸವು ಜಗಜ್ಜಾಹಿರಾಗಬಹುದು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ನಿಮ್ಮ ಪ್ರೀತಿಗೆ ಇಂದು ಅಧಿಕೃತ ಮುದ್ರೆಯು ಬೀಳಲಿದ್ದು ನಿಮಗೆ ಖುಷಿಯಾಗಲಿದೆ. ನಿಮ್ಮ ವೃತ್ತಿಯ ಕುರಿತು ಯಾರಾದರೂ ಕೇಳಿಯಾರು. ಆದಾಯವನ್ನೂ ಕೇಳಬಹುದು. ಉನ್ನತ ವಿದ್ಯಾಭ್ಯಾಸವು ಯಶಸ್ವಿಯಾಗಿ ಪೂರೈಸುವಿರಿ. ವಿದೇಶದ ವ್ಯವಹಾರವು ನಿಮಗೆ ಸರಿಯಾಗಿ ಆಗಿಬರದು. ಹೊಸ ಉದ್ಯೋಗಕ್ಕೆ ಸೇರಿದ ನಿಮಗೆ ಸಂಕೋಚದಿಂದ ಇರುವಿರಿ. ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆಯು ನಿಮಗೆ ಅಚ್ಚರಿಯನ್ನು ತಂದೀತು. ಆಗದಿರುವವರ ಬಗ್ಗೆ ಗೊಣಗುತ್ತ ಇರುವಿರಿ. ಇದರಿಂದ ಯಾವ ಪ್ರಯೋಜನವೂ ಆಗದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ. ನೂತನ ವಸ್ತುಗಳಿಂದ ಸಂತೋಷವು ಸಿಗುವುದು.
ಕರ್ಕಾಟಕ ರಾಶಿ: ಪುತ್ರಶೋಕವನ್ನು ಪಡೆಯುವ ಹಂತಕ್ಕೆ ಹೋಗುವಿರಿ. ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ಇಂದು ನಿಮ್ಮ ಮನಸ್ಸು ಅದರಲ್ಲಿಯೇ ಮುಳುಗಿ ಇರುವುದು. ಒಂದು ರೀತಿಯಲ್ಲಿ ನಿಮಗೆ ಆತಂಕದ ದಿವಸವೂ ಆಗಬಹುದು. ಸಾಹಿತ್ಯಾಸಕ್ತರು ತಮ್ಮ ಬಳಗದ ಜೊತೆ ಹೆಚ್ಚು ಸಮಯ ಇರುವರು. ಎಲ್ಲರೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲಿದ್ದು ನೀವು ಹತಾಶೆಯ ಭಾವ ಜಾಗೃತವಾಗಿ ಖಿನ್ನತೆಗೂ ಹೋಗಬಹುದು. ಜವಾಬ್ದಾರಿಯನ್ನು ನೀವು ನಿಭಾಯಿಸಲೂ ನಿಮಗೆ ಕಷ್ಟವಾದೀತು. ದೈವದ ಬಗ್ಗೆ ನಿಮಗೆ ಅಪನಂಬಿಕೆ ಬರುವುದು. ಮಕ್ಕಳ ಹಠಸ್ವಭಾವವು ಇಮಗೆ ಇಷ್ಟವಾಗದು. ನೀವು ಸಹನೆಯನ್ನು ಮೀರಿ ವರ್ತಿಸುವಿರಿ. ಹಿತವಾದ ಆಹಾರವನ್ನು ಸ್ವೀಕರಿಸಿ ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಿರಿ. ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಿಕೊಳ್ಳುವಿರಿ. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ.
ಸಿಂಹ ರಾಶಿ: ಯಾರಿಂದಲಾದರೂ ಆಗುವ ಕಾರ್ಯವನ್ನು ಬೆಂಬಿಡದೇ ಮಾಡುವಿರಿ. ಪರಿಮಳವಿರುವ ಹೂವನ್ನೂ ಯಾರೂ ಪರಿಚಯಿಸಬೇಕಿಲ್ಲ. ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವುದು ಕಷ್ಟವಾದೀತು. ಆಡಂಬರಕ್ಕೆ ಹೆಚ್ಚು ಒತ್ತು ನೀಡುವಿರಿ. ಸಾರ್ವಜನಿಕ ಮನ್ನಣೆಯನ್ನು ಗಳಿಸವಿರಿ. ಉದ್ಯಮದ ವಿಸ್ತರಣೆಗೆ ನಿಮ್ಮ ಕ್ರಮವು ಯಶಸ್ವಿಯಾಗುವುದು. ಏಕಾಗ್ರ ಮನಸ್ಸಿನಿಂದ ನೀವು ಇಂದಿನ ಕೆಲಸದಲ್ಲಿ ತೊಡಗುವಿರಿ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಯನ್ನು ಹೆಚ್ಚು ಮಾಡುವುದು. ಜಾಣ್ಮೆಯ ವ್ಯವಹಾರವನ್ನು ಇಂದು ಮಾಡಬೇಕಾದೀತು. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯುವಿರಿ. ಉದ್ಯೋಗದ ಸ್ಥಳದಲ್ಲಿ ಸಿಕ್ಕ ಪ್ರಶಂಸೆಯಿಂದ ಸಂತೋಷವು ಇಮ್ಮಡಿಯಾಗುವುದು. ನಗುತ್ತ ಮಾಡುವ ಕೆಲಸದಿಂದ ನಿಮ್ಮ ಮೇಲೆ ಅನುಮಾನ ಬರಬಹುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯ ಆಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಪಾತ್ರರ ಜೊತೆ ಸಣ್ಣ ಕಲಹವಾಗಬಹುದು.
ಕನ್ಯಾ ರಾಶಿ: ಮರಗೆಲಸದಲ್ಲಿ ನೀವು ಕೌಶಲ್ಯ ತೋರಿಸುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಹರ್ಷ. ನಿಮ್ಮ ಹಳೆಯ ಪ್ರತಿಜ್ಞೆಯನ್ನು ಇಂದು ಪೂರ್ಣ ಮಾಡಿದ ಸಂತೋಷವು ಇರುವುದು. ವಿವಾಹದ ಸುಖದಲ್ಲಿ ನೀವಿರುವಿರಿ. ಸಕಾರಾತ್ಮಕ ಆಲೋಚನೆಯನ್ನು ಪ್ರಯತ್ನಪೂರ್ವಕವಾಗಿ ಮಾಡುವಿರಿ. ಯಾರನ್ನೂ ಸರಿಯಾಗಿ ಅರ್ಥಮಾಡಿಕೊಳ್ಳದೇ ನಿಮ್ಮ ಬಳಿ ಅವರನ್ನು ಬಿಟ್ಟುಕೊಳ್ಳಬೇಡಿ. ವಿದ್ಯುತ್ ಉಪಕರಣಗಳ ಖರೀದಿಯನ್ನು ಮಾಡುವಿರಿ. ವೃತ್ತಿಯಲ್ಲಿ ನಿಮ್ಮ ತಿಳಿವಳಿಕೆಯನ್ನು ಪ್ರದರ್ಶಿಸಿ ನಿಮ್ಮ ಸಾಮರ್ಥ್ಯವನ್ನು ಪರಿಚಯಿಸುವಿರಿ. ಬಹಳ ಕಾಲದ ಹಿಂದೇ ಆಲೋಚಿಸಿದ್ದ ಕಾರ್ಯವು ಇಂದು ಆರಂಭಿಸಬೇಕು ಎಂದೆನಿಸುವುದು. ಯಾರ ಮೇಲೋ ಗೂಬೆ ಕೂರಿಸಿ ನೀವು ಸಂತೋಷಪಡುವುದು ಬೇಡ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.
ತುಲಾ ರಾಶಿ: ದಿಕ್ಕು ತೋಚದೇ ಸ್ತಬ್ಧರಾಗುವ ಸ್ಥಿತಿ ಬರಬಹುದು. ಇಂದಿನ ನಿಮ್ಮ ಕಾರ್ಯಗಳಿಗೆ ಜೊತೆಗಾರರು ಸಿಗಬಹುದು. ಮನಃಸ್ಥಿತಿಯು ಸರಿ ಇಲ್ಲದ ಕಾರಣ ನೌಕರರ ಮೇಲೆ ಸಿಟ್ಟಾಗುವಿರಿ. ಸಂಗಾತಿಯ ಮಾತಿಗೆ ಸ್ಪಂದನೆಯೂ ಇರದು. ನಿಮ್ಮ ಆರ್ಥಿಕತೆಯನ್ನು ಗೌಪ್ಯವಾಗಿ ಇಡಬೇಕು ಎನಿಸುವುದು. ಭೂಮಿಯ ವ್ಯವಹಾರವು ಪೂರ್ಣ ಲಾಭವನ್ನು ತಂದುಕೊಡದು. ಪಿತ್ರಾರ್ಜಿತ ಆಸ್ತಿಗಾಗಿ ನೀವು ಆಸೆ ಪಡುವಿರಿ. ನಿಮ್ಮ ಚರಾಸ್ತಿಯು ನಷ್ಟವಾಗುವುದು. ಉದ್ಯೋಗದ ಸ್ಥಳದಲ್ಲಿ ನೀವು ಹೆಚ್ಚು ಓಡಾಟ ಮಾಡಬೇಕಾದೀತು. ಅಶಿಕ್ಷಿತರ ಜೊತೆ ಸುಮ್ಮನೇ ಕಲಹವಾಡುವಿರಿ. ಅಸಾಧ್ಯ ಎನಿಸಿದ್ದನ್ನು ಸುಮ್ಮನೇ ಮಾಡಲು ಹೋಗುವುದು ಬೇಡ. ಚಿಂತೆಗಳೇ ಇರುವ ಮನಸ್ಸಿನಲ್ಲಿ ದೇವರ ಭಕ್ತಿಯನ್ನು ತುಂಬಿಕೊಂಡು ಸಮಾಧಾನದಿಂದ ಇರಿ. ನಿಮ್ಮ ಶುಷ್ಕ ಮಾತು ಇತರರಿಗೆ ಇಷ್ಟವಾಗದು. ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.
ವೃಶ್ಚಿಕ ರಾಶಿ: ಅದಮ್ಯ ಚೈತನ್ಯವನ್ನು ಹೊರಹಾಕುವ ಕಾಲ ಬರಬಹುದು. ಯಶಸ್ಸಿಗಾಗಿಯೇ ಮಾಡುವ ಕಾರ್ಯದಿಂದ ಅಪಯಶಸ್ಸು ಸಿಗುವುದು. ಸರ್ಕಾರಿ ಉದ್ಯೋಗಿಗಳಿಗೆ ಇನ್ನೊಂದಿಷ್ಟು ಜವಾಬ್ದಾರಿಯು ಬರಬಹುದು. ಉತ್ತಮ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ. ಪ್ರೀತಿಯಲ್ಲಿ ಸಣ್ಣ ಕಲಹವಾಗಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ಇಂದು ನಿಮ್ಮ ಆರ್ಥಿಕತೆಯ ಸ್ಥಿತಿಯು ದರಿಯಾ ಗೊತ್ತಾಗಲಿದೆ. ಆಕಸ್ಮಿಕವಾಗಿ ಬರುವ ಹಣವನ್ನು ಭವಿಷ್ಯಕ್ಕಾಗಿ ಕೂಡಿ ಇಡುವಿರಿ. ಖಾಸಗಿ ಸಂಸ್ಥೆಯಲ್ಲಿ ನಿಮ್ಮ ಸ್ಥಾನವು ಏರಲಿದೆ. ಅಧಿಕಾರ ಇದೆ ಎಂದು ಏನನ್ನಾದರೂ ಹೇಳುವುದು ಬೇಡ. ಉದ್ಯಮದಲ್ಲಿ ಊಹಿಸಲಾಗದ ಸಮಸ್ಯೆಯನ್ನು ತಂದು ಕೊಳ್ಳುವಿರಿ. ತಜ್ಞರಿಂದ ಅದನ್ನು ಸರಿ ಮಾಡಿಕೊಳ್ಳುವುದು ಉತ್ತಮ. ಯಾರನ್ನೋ ಅನುಕರಿಸುತ್ತ ನೀವು ಸಂತೋಷವನ್ನು ಪಡುವಿರಿ. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು.
ಧನು ರಾಶಿ: ನಿಮ್ಮ ಪರವಾಗಿ ಯಾರೂ ನಿಲ್ಲದಿರುವುದು ಬೇಸರ ತರಿಸಬಹುದು. ಇತರರ ಕೆಂಗಣ್ಣಿಗೆ ಬೀಳಬಹುದು. ನಿಮ್ಮ ಕಾರ್ಯವು ವಿಳಂಬವಾಗಲು ಕಾರ್ಮಿಕರು ಕಾರಣವಾಗುವರು. ಅವರ ಮೇಲೆ ಸಿಟ್ಟಗುವಿರಿ. ಮಾತಿನ ಮಿತಿಯನ್ನೂ ಮೀರಬಹುದು. ಹೂಡಿಕೆಯ ಚಿಂತನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಪಕ್ಷಪಾತ ಮನಃಸ್ಥಿತಿಯು ನಿಮಗೆ ಶೋಭೆ ತರದು. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಒಂಟಿತನವು ನಿಮಗೆ ಇಷ್ಟವಾಗದು. ಇನ್ನೊಬ್ಬರ ನೋವನ್ನು ಕಂಡೂ ನೀವು ಸುಮ್ಮನಿರುವುದು ಬೇಡ. ಸೇವಾ ಮನೋಭಾವವು ನಿಮ್ಮಲ್ಲಿ ಕಡಿಮೆ ಇರುವುದು. ಮನೆಯ ಜವಾಬ್ದಾರಿಯನ್ನೂ ನಿವು ತೆಗೆದುಕೊಳ್ಳಲು ಇಷ್ಟಪಡಲಾರಿರಿ. ಸ್ನೇಹಿತರು ಹಳೆಯ ಹಣಕಾಸಿನ ವಿಚಾರಕ್ಕೆ ಜಗಳವಾಡುವರು. ಆದಾಯದ ಮೂಲವನ್ನು ನೀವು ಗಟ್ಟಿ ಮಾಡಿಕೊಳ್ಳಿ. ಹೊಸ ವಸ್ತುಗಳನ್ನು ಖರೀದಿಸುವಾಗ ವಂಚನೆಯಾಗುವುದು.
ಮಕರ ರಾಶಿ: ತಪ್ಪಿಗೆ ಹಿರಿಯರ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕಾಗುವುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಎಷ್ಟೇ ಒತ್ತಾಯ ಮಾಡಿದರೂ ಮಾಡಲಾರಿರಿ. ನಿಮಗೆ ಇಂದು ದಣಿವಾಗುವ ಸಾಧ್ಯತೆ ಹೆಚ್ಚಿದೆ. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ಸಾಲ ಕೊಟ್ಟವರು ಏನೂ ಹೇಳದೇ ಇರುವುದರಿಂದ ನಿಮಗೆ ಸ್ವಲ್ಪ ನೆಮ್ಮದಿ ಸಿಗಲಿದೆ. ನೀವು ಇಂದು ಪಕ್ಷಪಾತಕ್ಕೆ ಹೆಸರಾಗಬಹುದು. ದೂರ ಪ್ರಯಾಣವು ನಿಮಗೆ ನೋವನ್ನು ತರಬಹುದು. ಅನಿರೀಕ್ಷಿತ ಸಂಪತ್ತನ್ನು ತಂದೆಯಿಂದ ಪಡೆಯುವಿರಿ. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸಬೇಕಾಗುವುದು. ನಿಮಗೆ ಉಂಟಾದ ಅನುಕೂಲ ಸ್ಥಿತಿಯನ್ನು ನೀವು ಪುಣ್ಯವೆಂದು ತಿಳಿಯುವಿರಿ. ಬೇರೆಯವರನ್ನು ಆಶ್ರಯಿಸುವುದು ನಿಮಗೆ ಇಷ್ಟವಾಗದ ವಿಚಾರವಾಗಿದೆ. ನಿಮ್ಮಿಂದ ಆಗದಿರುವುದನ್ನು ಅನ್ಯರು ಮಾಡಿ ತೋರಿಸಿ ಅಪಮಾನ ಮಾಡಬಹುದು.
ಕುಂಭ ರಾಶಿ: ತಾತ್ಕಾಲಿಕ ಉದ್ಯೋಗವನ್ನು ಕೈಬಿಡುವಿರಿ. ಇಂದು ನೀವು ಅತಿಯಾದ ಒತ್ತಡವನ್ನು ತಂದುಕೊಳ್ಳುವ ಅಗತ್ಯ ಇಲ್ಲ. ನೀವು ನೆಪವೊಡ್ಡಿ ಯಾವುದೇ ಕಾರ್ಯದಲ್ಲಿ ತೊಡಗಲಾರಿರಿ. ಅವಕಾಶ ಸಿಕ್ಕಾಗ ಮುನ್ನುಗ್ಗಲು ಹಿಂಜರಿಯುವಿರಿ. ಮನೋವ್ಯಥೆಯಿಂದ ನಿಮಗೆ ಬಹಳಷ್ಟು ತೊಂದರೆಗಳು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ. ಸಂಗಾತಿಯ ಮಾತಿನಲ್ಲಿ ನಿಮಗೆ ನಂಬಿಕೆ ಬರದು. ನಿಮ್ಮೊಳಗೇ ಇಟ್ಟುಕೊಂಡ ಅಸಮಾಧಾನವನ್ನು ಹೊರಹಾಕುವಿರಿ. ಕಳೆದು ಹೋದುದರ ಬಗ್ಗೆ ಅತಿಯಾಗಿ ಆಲೋಚಿಸಿ ಫಲವಿಲ್ಲ. ಹಠಮಾರಿ ಸ್ವಭಾವದಿಂದ ಮನೆಯಲ್ಲಿ ತೊಂದರೆ ಆದೀತು. ಕೆಲವು ಸಂಗತಿಗಳನ್ನು ನೀವು ಬಿಡಬೇಕು ಎಂದುಕೊಂಡರೂ ಅದು ಆಗದು. ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಿ. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ.
ಮೀನ ರಾಶಿ; ಏನೂ ಇಲ್ಲದೇ ದಿನವನ್ನು ಕಳೆಯುವುದು ಕಷ್ಟವಾಗುವುದು. ನಿಮಗೆ ಇಂದು ವಿಶ್ರಾಂತಿಯನ್ನು ಪಡೆಯುವ ಕಾಲ. ಇಂದು ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ತಾರತಮ್ಯ ಭಾವವನ್ನು ತೋರಿಸಬೇಡಿ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಪ್ರಾಪ್ತವಾಗುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ದೂರವಾಣಿಯ ಬಳಕೆಯನ್ನು ಕಡಿಮೆ ಮಾಡಬೇಕು ಎಂದೆನಿಸುವುದು. ಸಂಗಾತಿಯ ಮಾನಸಿಕತೆಯು ನಿಮಗೆ ಗೊತ್ತಾಗದು. ಬಂಧುಗಳನ್ನು ಭೇಟಿಯಾಗಿ ಸ್ವಲ್ಪ ಹಗುರಾಗುವಿರಿ. ವರ್ತಮಾನದ ಘಟನೆಗಳು ತಿಳಿದಿದ್ದರೂ ಗೊತ್ತಿಲ್ಲದವರಂತೆ ಇರುವಿರಿ. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.
ಲೋಹಿತ ಹೆಬ್ಬಾರ್ – 8762924271 (what’s app only)