AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯಿಂದ 2 ದಿನ ಪ್ರಧಾನಿ ಮೋದಿ ಗುಜರಾತ್ ಪ್ರವಾಸ; ರಾಷ್ಟ್ರೀಯ ಏಕತಾ ದಿವಸದ ಏಕತಾ ಪೆರೇಡ್​​ನಲ್ಲಿ ಭಾಗಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 30 ಮತ್ತು 31ರಂದು ಗುಜರಾತ್‌ಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಬನಾಸ್‌ಕಾಂತ ಮತ್ತು ಏಕತಾ ನಗರದಲ್ಲಿ 14,400 ಕೋಟಿ ರೂ.ಗೂ ಹೆಚ್ಚಿನ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಿದ್ದಾರೆ. ಹಾಗೇ, 2 ನೂತನ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಹಾಗೂ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಏಕತಾ ನಗರದಲ್ಲಿ ಸಂಸ್ಕೃತಿ ಮತ್ತು ಕಲಾ ಪ್ರದರ್ಶನದ 'ಭಾರತ್ ಪರ್ವ್ 2026' ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ನಾಳೆಯಿಂದ 2 ದಿನ ಪ್ರಧಾನಿ ಮೋದಿ ಗುಜರಾತ್ ಪ್ರವಾಸ; ರಾಷ್ಟ್ರೀಯ ಏಕತಾ ದಿವಸದ ಏಕತಾ ಪೆರೇಡ್​​ನಲ್ಲಿ ಭಾಗಿ
Ekta Nagar
ಸುಷ್ಮಾ ಚಕ್ರೆ
|

Updated on: Oct 29, 2026 | 6:54 PM

Share

ನವದೆಹಲಿ, ಅಕ್ಟೋಬರ್ 29: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜಯಂತಿಯ ಹಿನ್ನೆಲೆಯಲ್ಲಿ ನಾಳೆ (ಅಕ್ಟೋಬರ್ 30) ಗುಜರಾತ್‌ನ ಏಕತಾ ನಗರದಲ್ಲಿ ನಡೆಯಲಿರುವ ಬೃಹತ್ ‘ರಾಷ್ಟ್ರೀಯ ಏಕತಾ ದಿವಸ’ ಆಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 31ರ ಶನಿವಾರ ಸಂಜೆ ಭವ್ಯ ‘ಏಕತಾ ಪೆರೇಡ್’ ಹಾಗೂ ಪ್ರಧಾನಿಯವರ ವಿಶೇಷ ಭಾಷಣ ನೆರವೇರಲಿದ್ದು, ದೇಶಾದ್ಯಂತ ಇದರ ನೇರ ಪ್ರಸಾರ ಲಭ್ಯವಿರಲಿದೆ.

ದೂರದರ್ಶನ, ಪಿಎಂಒ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF), ರಾಜ್ಯ ಪೊಲೀಸ್ ಪಡೆಗಳು ಮತ್ತು ರಾಷ್ಟ್ರೀಯ ಕೆಡೆಟ್ ಪಡೆಗಳಿಂದ (NCC) ಆಕರ್ಷಕ ಪಥಸಂಚಲನ ನಡೆಯಲಿದೆ.

‘ವಂದೇ ಮಾತರಂ’ ಥೀಮ್:

ಈ ಬಾರಿಯ ಏಕತಾ ದಿವಸ ಆಚರಣೆಯನ್ನು ದೇಶಪ್ರೇಮದ ಸಾಂಕೇತಿಕವಾದ ‘ವಂದೇ ಮಾತರಂ’ ಥೀಮ್​ನಡಿ ಆಚರಿಸಲಾಗುತ್ತಿದ್ದು, ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ 5,000ಕ್ಕೂ ಹೆಚ್ಚು ಕಲಾವಿದರ ಪ್ರದರ್ಶನ ಇರಲಿದೆ. ನಕ್ಸಲ್ ಪೀಡಿತ ಪ್ರದೇಶಗಳು ಶಾಂತಿ ಮತ್ತು ಅಭಿವೃದ್ಧಿಯತ್ತ ಸಾಗಿರುವುದನ್ನು ಬಿಂಬಿಸಲು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್​ಸಿಡಿ) ಕಲಾವಿದರಿಂದ ವಿಶೇಷ ನಾಟಕ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ: ಸೋಮನಾಥ ದೇಗುಲ: ಸರ್ದಾರ್ ಪಟೇಲರ ಕನಸು, ಭಾರತದ ಹೆಮ್ಮೆ, ಅಖಂಡತೆಯ ಸಂಕೇತ – ಪಿಎಂ ಮೋದಿ ಲೇಖನ

ಸ್ಟ್ಯಾಚ್ಯೂ ಆಫ್ ಯೂನಿಟಿ ಮುಂಭಾಗದಲ್ಲಿ ನಡೆಯಲಿರುವ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮತ್ತು ರಾಷ್ಟ್ರೀಯ ಒಗ್ಗಟ್ಟಿನ ಸಂದೇಶವನ್ನು ಆಲಿಸಲು ದೇಶಾದ್ಯಂತ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ.

ನಾಳೆ ಸಂಜೆ 7.45ಕ್ಕೆ ಕೋಟ್ಯಂತರ ದೀಪಗಳಿಂದ ಶೃಂಗರಿಸಲ್ಪಟ್ಟ ಬೃಹತ್ ದೀಪೋತ್ಸವ ‘ಏಕತಾ ಪ್ರಕಾಶ್ ಪರ್ವ್’ ಅನ್ನು ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ. ರಾತ್ರಿ 8.15ಕ್ಕೆ ನರ್ಮದಾ ನದಿ ತೀರದಲ್ಲಿ ನಡೆಯುವ ನರ್ಮದಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.

ಅಕ್ಟೋಬರ್ 31ರಂದು ಸರ್ದಾರ್ ಪಟೇಲ್ 151ನೇ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿವಸ ನಡೆಯಲಿದೆ. ಆ ದಿನ ಬೆಳಿಗ್ಗೆ 9ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜಯಂತಿಯ ಶುಭ ಸಂದರ್ಭದಲ್ಲಿ ವಿಶ್ವದ ಅತಿ ಎತ್ತರದ ‘ಸ್ಟ್ಯಾಚು ಆಫ್ ಯೂನಿಟಿ’ ಗೆ ತೆರಳಿ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ಬನಾಸ್‌ಕಾಂತ ಮತ್ತು ಏಕತಾ ನಗರದಲ್ಲಿ 14,400 ಕೋಟಿಗೂ ಹೆಚ್ಚಿನ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ: ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗಲೇ ಸರ್ದಾರ್ ಪಟೇಲರ ಪ್ರತಿಮೆ ನಿರ್ಮಿಸುವ ಕನಸು ಕಂಡಿದ್ದ ಪ್ರಧಾನಿ ಮೋದಿ

ಈ ವೇಳೆ ಪ್ರಧಾನಿ ಮೋದಿ ಏಕತಾ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ‘ರೈನ್‌ಫಾರೆಸ್ಟ್’ ಮತ್ತು ‘ವಾಮನ ವೃಕ್ಷ ವಾಟಿಕಾ’ಗೆ ಭೇಟಿ ನೀಡಲಿದ್ದಾರೆ. ಅದೇ ದಿನ ಸಂಜೆ 5.30ಕ್ಕೆ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ನಡೆಯುವ ಬೃಹತ್ ಪಥಸಂಚಲನ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

PM-KISAN 24ನೇ ಕಂತು ಬಿಡುಗಡೆ:

ದೇಶಾದ್ಯಂತ ರೈತರ ಖಾತೆಗಳಿಗೆ 19,000 ಕೋಟಿ ರೂ. ಹಣವನ್ನು ನೇರವಾಗಿ ತಲುಪಿಸುವ 24ನೇ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಿದ್ದಾರೆ. ಅಹಮದಾಬಾದ್ (ಸಬರಮತಿ)-ವಾರಾಣಸಿ ಎಕ್ಸ್‌ಪ್ರೆಸ್ ಮತ್ತು ಮೆಹ್ಸಾನಾ-ಬೆಚರಾಜಿ-ಸಬರಮತಿ MEMU ರೈಲು ಸೇವೆಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಹಾಲು ಬೆನ್ನಲ್ಲೇ ಬಸ್ ಟಿಕೆಟ್ ದರ ಹೆಚ್ಚಳ:ಬಿಗ್ ಅಪ್ಡೇಟ್ ನೀಡಿದ ಸಚಿವ
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಜೈಲಿನಿಂದ ಕೊಟ್ಟ ಸಂದೇಶಕ್ಕೆ ತಲೆ ಕೆಡಿಸಿಕೊಳ್ಳಬೇಕಿಲ್ಲ: ಧನ್ವೀರ್ ಲಾಯರ್
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಸಿದ್ದರಾಮಯ್ಯ ಈಸ್ ಬ್ಯಾಕ್: ಅಹಿಂದ ಹಳೆ ಅಸ್ತ್ರಕ್ಕೆ ಸಾಣೆ ಹಿಡಿಯಲು ಸಿದ್ದತೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
ಹೆಣ್ಮಕ್ಕಳ ಬಗ್ಗೆ ತೂಕವಾಗಿ ಮಾತಾಡಬೇಕು: ವಿವಾದಕ್ಕೆ ಪ್ರೇಮ್ ಪ್ರತಿಕ್ರಿಯೆ
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
‘ದರ್ಶನ್​​ ಅನ್ನು ಹೊರಗೆ ತರಲು ವಿಜಯಲಕ್ಷ್ಮಿ ಬಹಳ ಕಷ್ಟಪಡುತ್ತಿದ್ದಾರೆ’
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
10 ಕೋಟಿ ರೂಪಾಯಿ ವಿವಾದ; ಎಲ್ಲಾ ತನಿಖೆ ಎದುರಿಸಲು ಧನ್ವೀರ್ ರೆಡಿ ಎಂದ ಲಾಯರ್
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಹಾಸನಾಂಬ ದರ್ಶನೋತ್ಸವ: ವರ್ಷದ ಬಳಿಕ ತೆರೆದ ದೇಗುಲದ ಗರ್ಭಗುಡಿ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ಸ್ಟಿಂಗ್ ಕೇಸ್: ಕೃಪಾ‌ ಆಳ್ವಾ ಬಂಧನ ಭೀತಿಯಿಂದ ವಿದೇಶಕ್ಕೆ ತೆರಳಿರುವ ಶಂಕೆ
ವೈರಲ್ ಆಗಿರುವ ಧನ್ವೀರ್ ಗೌಡ ಆಡಿಯೋಗಳು ಫೇಕ್: ವಕೀಲರ ಆರೋಪ
ವೈರಲ್ ಆಗಿರುವ ಧನ್ವೀರ್ ಗೌಡ ಆಡಿಯೋಗಳು ಫೇಕ್: ವಕೀಲರ ಆರೋಪ
ಹಾಸನಾಂಬೆ ದೇಗುಲಕ್ಕೆ ಕೋಟಿ ಕೋಟಿ ಆದಾಯ
ಹಾಸನಾಂಬೆ ದೇಗುಲಕ್ಕೆ ಕೋಟಿ ಕೋಟಿ ಆದಾಯ